ಮಂಗಳೂರು : ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ (ರಿ), ಮಂಗಳೂರು- ಇದರ ವತಿಯಿಂದ ವಿದ್ಯಾರ್ಥಿಗಳ ಯುವ ಪ್ರೇರಣಾ -೨೦೧೭ ಎಂಬ ಕಾರ್ಯಕ್ರಮವು ದಿನಾಂಕ 26.11.2017 ನೇ ರವಿವಾರದಂದು ಬೆಳಿಗ್ಗೆ 09.30 ರಿಂದ ಮಧ್ಯಾಹ್ನ 11.30 ರ ವರೆಗೆ ಯುವವಾಹಿನಿ (ರಿ) ಕೇಂದ್ರ ಸಮಿತಿ, ರಘು ಬಿಲ್ಡಿಂಗ್, ಉರ್ವಸ್ಟೋರ್, ಮಂಗಳೂರು ಇಲ್ಲಿ ಜರಗಿತು. ಪ್ರಸ್ತುತ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿರುವ, ವಿದ್ಯಾಭ್ಯಾಸವನ್ನು ಮುಗಿಸಿ ಉದ್ಯೋಗವನ್ನು ಪಡೆದುಕೊಂಡವರು ಒಟ್ಟು ಸುಮಾರು ೨೫ ವಿದ್ಯಾರ್ಥಿಗಳು ಈ ಸಂವಹನವನ್ನು ಒಳಗೊಂಡ ಯುವಪ್ರೇರಣಾ-2017 ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಯುವವಾಹಿನಿ (ರಿ) ವಿದ್ಯಾನಿಧಿ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಶ್ರೀ ಪದ್ಮನಾಭ ಮರೋಳಿ, ಪ್ರಾರಂಭಿಕ ಟ್ರಸ್ಟಿ ಶ್ರೀ ಸಂಜೀವ ಪೂಜಾರಿ ಹಾಗೂ ಯುವವಾಹಿನಿ (ರಿ) ಕೇಂದ್ರ ಸಮಿತಿ ಇದರ ಅಧ್ಯಕ್ಷರಾದ ಶ್ರೀ ಯಶವಂತ ಪೂಜಾರಿ – ಇವರುಗಳು ಜಂಟಿಯಾಗಿ ದೀಪ ಬೆಳಗಿಸುವ ಮುಖೇನ ಕಾರ್ಯಕ್ರಮದ ಉದ್ಘಾಟನೆ ನಡೆಸಿದರು. ಕುಮಾರಿ ಯಶ್ಮಿತರವರ ಪ್ರಾರ್ಥನೆ, ಶ್ರೀ ಪ್ರೇಮನಾಥ್ ಗೌರವ ಟ್ರಸ್ಟಿ ಇವರ ಪ್ರಾಸ್ತಾವಿಕ ಮಾತಿನೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಕೆ. ರಾಜೀವ ಪೂಜಾರಿ ಮತ್ತು ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ನರೇಶ್‌ಕುಮಾರ್ ಸಸಿಹಿತ್ಲು ಜಂಟಿಯಾಗಿ ಈ ಶಿಬಿರವನ್ನು ನಡೆಸಿದರು. ಯುವವಾಹಿನಿ ವಿದ್ಯಾನಿಧಿಯಿಂದ ಆರ್ಥಿಕ ಸಹಕಾರವನ್ನು ಪಡೆದು ಇಂಜಿನಿಯರಿಂಗ್ ಪದವಿ ಪಡೆದು ಪ್ರಸ್ತುತ ಉದ್ಯೋಗದಲ್ಲಿರುವ ಕುಮಾರಿ ಯಶ್ಮಿತಯವರು ತಮ್ಮ ಅಭಿಪ್ರಾಯ, ಅನುಭವವನ್ನು ವ್ಯಕ್ತ ಪಡಿಸಿದರು. ಮುಂದೆ ಒಂದು ಕಿರು ಕ್ರೀಡೆ ನಡೆಸಲಾಯಿತು. ಶ್ರೀ ನರೇಶ್ ಕುಮಾರ್‌ರವರು ಇದನ್ನು ನಡೆಸಿದರು. ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಮುಂದೆ ಬಂದು ತಮ್ಮ ತಮ್ಮ ಅಭಿಪ್ರಾಯ, ತಮ್ಮ ಜೀವನದ ಅನುಭವ, ನೋವನ್ನು ಸಭೆಯಲ್ಲಿ ಹಂಚಿಕೊಂಡರು.
ವಿದ್ಯಾನಿಧಿಯ ಗೌರವ ಟ್ರಸ್ಟಿಗಳಲ್ಲೋರ್ವರಾದ ಚಂದ್ರಶೇಖರ್‌ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರೆ ಇನ್ನೋರ್ವ ಟ್ರಸ್ಟಿ ಶ್ರೀ ಸೂರ್ಯಪ್ರಕಾಶ್‌ರವರು ಪ್ರೋತ್ಸಾಹಿಸಿ ವಿದ್ಯಾರ್ಥಿಗಳು ಮುಂದಿನ ಬದುಕಿನಲ್ಲಿ ಎಲ್ಲ ಬೆಳವಣಿಗೆಯನ್ನು ಸವಾಲಾಗಿ ಸ್ವೀಕರಿಸಿ ಯಶಸ್ಸಿನೆಡೆಗೆ ಸಾಗಬೇಕೆಂದು ಕಿವಿಮಾತು ಹೇಳಿದರು. ಹಿತಚಿಂತಕರಾಗಿ ಆಗಮಿಸಿದ ಶ್ರೀ ರೋಹಿನಾಥ್ ಪಾದೆ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಹಾಗೆಯೇ ವಾಸು ಪೂಜಾರಿ, ಟ್ರಸ್ಟಿಯವರು ಕೂಡಾ ಶುಭ ಹಾರೈಸಿದರು. ಅಭಿವೃದ್ಧಿ ಪರಿಶೀಲನೆ ಟ್ರಸ್ಟಿಯಾದ ತಾರನಾಥರವರು ಧನ್ಯವಾದ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.