ಕೂಳೂರು : ಯುವವಾಹಿನಿ( ರಿ) ಕೂಳೂರು ಘಟಕದ ‘ಮಕ್ಕಳ ದಿನಾಚರಣೆ’ ೨೦೧೭ ಮುಗ್ಧ ಮನಸ್ಸಿನ ಸಮ್ಮಿಲನ ಕಾರ್ಯಕ್ರಮ ದಿನಾಂಕ 14.11.2017 ರಂದು ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಮಂದಿರ ಕೂಳೂರು ಇಲ್ಲಿ ಏರ್ಪಡಿಸಲಾಯಿತು. ಮೊದಲಿಗೆ ,ಬಾಲ ಪ್ರತಿಭೆ ಕುಮಾರಿ ಶ್ರೀಕ ಆರ್ ಸಾಲಿಯಾನ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ನಂತರ ೩ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಛದ್ಮವೇಷ ಸ್ವರ್ಧೆ,ಅಭಿನಯ ಗೀತೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು ಛಧ್ಮವೇಷ ಹಾಗೂ ಅಭಿನಯ ಗೀತೆ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಯುವವಾಹಿನಿ (ರಿ) ಕೇಂದ್ರಯ ಪ್ರಚಾರ ನಿರ್ದೇಶಕರಾದ ಮಾಧವ ಕೋಟ್ಯಾನ್ ಹಾಗೂ ಬಲೆ ತೆಲಿಪಾಲೆ ಖ್ಯಾತಿಯ ಶಿವಕುಮಾರ್ ಸಹಕರಿಸಿದರು . ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಮಂದಿರದ ಸಭಾಂಗಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ aqvaguard ಕೊಡುಗೆಯಾಗಿ ಜಿಲ್ಲಾ ಪಂಚಾಯತ್ ಮಕ್ಕಳ ಹಾಗೂ ಮಹಿಳಾ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಸುಂದರ ಪೂಜಾರಿ aqvaguard ಉದ್ಘಾಟನೆ ಮಾಡಿದರು ,ಯುವವಾಹಿನಿ( ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ, ಯುವವಾಹಿನಿ (ರಿ) ಕೂಳೂರು ಘಟಕದ ಸಲಹೆಗಾರರಾದ ನೇಮಿರಾಜ್ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಮಂದಿರದ ಅಧ್ಯಕ್ಷರಾದ ಜಯಾನಂದ ಅಮೀನ್, ಗೋಪಾಲ ಕೃಷ್ಣ ಭಜನಾ ಮಂದಿರಾದ ಅಧ್ಯಕ್ಷರಾದ ಗಿರಿಧರ ಸನಿಲ್ ,ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಸಂಜೀವ ಪೂಜಾರಿ , ಯುವವಾಹಿನಿ (ರಿ) ಕೂಳೂರು ಘಟಕದ ಅಧ್ಯಕ್ಷರಾದ ಪುಷ್ಪರಾಜ್,ಕಾರ್ಯದರ್ಶಿ ವಿನೀತ್ ಕುಮಾರ್ ಉಪಸ್ಥಿತರಿದ್ದರು . ಮಕ್ಕಳ ದಿನಾಚರಣೆಯ ಪ್ರಯುಕ್ತ ಬಾಲ ಪ್ರತಿಭೆಗಳಾದ ಇಬ್ಬರು ಮಕ್ಕಳಿಗೆ ಅಭಿನಂದಿಸುವ ಕಾರ್ಯಕ್ರಮವೂ ಜರಗಿತು ನಾಟ್ಯರಂಗದಲ್ಲಿ ಸಾಧನೆ ಮಾಡಿರುವ ಬಾಲ ಪ್ರತಿಭೆ ಅಥಿತಿ ಕರ್ಕೇರ ಹಾಗೂ ಕರಾಟೆ ಪಟು ಶ್ರೀಕ ಆರ್ ಸಾಲ್ಯಾನ್ ಇವರನ್ನು ,ಇವರು ಸಾಧನೆಯನ್ನು ಗುರುತಿಸಿ ಅಭಿನಂದಿಸಲಾಯಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಸುಂದರ ಪೂಜಾರಿ ಮಕ್ಕಳ ದಿನಾಚರಣೆಯ ಬಗ್ಗೆ ಸಭೆಯನ್ನು ಉದ್ದೇಶಿಸಿ ಮಾತಾಡಿದರು . ಮಧುಶ್ರೀ ಪ್ರಂಶಾತ್ ಕಾರ್ಯಕ್ರಮ ನಿರೂಪಿಸಿದರು, ಕಾರ್ಯಕ್ರಮದ ಸಂಚಾಲಕರಾದ ಶ್ರೀಮತಿ ನಯನ ರಮೇಶ್ ಧನ್ಯವಾದ ನೀಡಿದರು .ನಂತರ ಮಕ್ಕಳಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು ಮಕ್ಕಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು…