ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ(ರಿ) ಉಪ್ಪಿನಂಗಡಿ ಇದರ ಅತಿಥ್ಯದಲ್ಲಿ ಯುವವಾಹಿನಿ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ ಉಬಾರ ತುಡರ್ ಉಪ್ಪಿನಂಗಡಿ ನೇತ್ರಾವತಿ ನದಿ ಕಿನಾರೆಯ ಮುಗ್ಗ ಗುತ್ತು ಸೂರಪ್ಪ ಪೂಜಾರಿ ವೇದಿಕೆಯಲ್ಲಿ ಜರಗಿತು
ಯುವವಾಹಿನಿ(ರಿ) ಮೂಲ್ಕಿ ಘಟಕ ಪ್ರಥಮ, ಯುವವಾಹಿನಿ(ರಿ) ಸಸಿಹಿತ್ಲು ಘಟಕ ದ್ವಿತೀಯ ಹಾಗೂ ಯುವವಾಹಿನಿ(ರಿ) ಬಂಟ್ವಾಳ ತಾಲೂಕು ಘಟಕ ತೃತೀಯ ಪ್ರಶಸ್ತಿ ಗಳಿಸಿತು.
ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅದ್ಯಕ್ಷರಾದ ಜಯರಾಮ ಕಾರಂದೂರು ಸಮಾರೋಪ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು
ಮಾಜಿ ಸಂಸದರಾದ ವಿನಯ ಕುಮಾರ್ ಸೊರಕೆ, ಎನ್ ಕೌಂಟರ್ ಖ್ಯಾತಿಯ ಪೊಲೀಸ್ ಅಧಿಕಾರಿ ದಯಾನಾಯಕ್ ಚಲನಚಿತ್ರ ನಟ ಶ್ರೀ ಮೋಕ್ಷ, ಚಲನಚಿತ್ರ ನಟ ನಿರ್ಮಾಪಕ ಸಚಿನ್ ಸುವರ್ಣ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜಗನ್ನಾಥ ಸಾಲ್ಯಾನ್, ಬೆಳ್ತಂಗಡಿ ಬಿಲ್ಲವ ಸಂಘದ ಅದ್ಯಕ್ಷರಾದ ಪೀತಾಂಬರ ಹೆರಾಜೆ, ಭಾರತೀಯ ಜೇಸಿಸ್ ವಲಯ 15ರ ನಿಕಟಪೂರ್ವ ಅಧ್ಯಕ್ಷರಾದ ಸಂಪರ್ಕ ಬಿ. ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು
ಯುವವಾಹಿನಿ ಉಪ್ಪಿನಂಗಡಿ ಅಧ್ಯಕ್ಷರಾದ ಡೀಕಯ್ಯ ಗೌಂಡತ್ತಿಗೆ, ಉಬಾರ ತುಡರ್ ಕಾರ್ಯಕ್ರಮದ ಸಂಚಾಲಕರಾದ ಸದಾನಂದ ದಾಸರಮೂಲೆ, ಸಾಂಸ್ಕೃತಿಕ ನಿರ್ದೇಶಕರಾದ ಕಿಶೋರ್ ಕೆ ಬಿಜೈ ಉಪಸ್ಥಿತರಿದ್ದರು.