ಯಶಸ್ಸು ಗಳಿಸಲು ಐಶ್ವರ್ಯ, ವಿದ್ಯಾರ್ಹತೆ, ಅಥವಾ ವ್ಯಕ್ತಿಯ ಹಿನ್ನಲೆ ಮುಖ್ಯವಾಗುವುದಿಲ್ಲ . ಆತನ ಕನಸು, ಸಾಧಿಸುವ ಛಲ, ಪರಿಶ್ರಮ ಮುಖ್ಯವಾಗುತ್ತದೆ. ಇದರೊಂದಿಗೆ ತಾವು ತೊಡಗಿಸಿಕೊಂಡು ವ್ಯಕ್ತಿಯನ್ನು ಪ್ರೀತಿಸಿ ಅದನ್ನೇ ಪ್ರವೃತ್ತಿಯನ್ನಾಗಿಸಿದಾಗ ಯಶಸ್ಸು ಸಾಧ್ಯ. ಯುವವಾಹಿನಿಯ ರಾಜ್ಯೋತ್ಸವ ಪ್ರಶಸ್ತಿಯ ಹಿಂದೆ ಮೂವತ್ತು ವರುಷಗಳ ಸಾಧನೆಯ ಶ್ರಮವಿದೆ, ಪ್ರತಿಯೊಬ್ಬ ಯುವವಾಹಿನಿ ಸದಸ್ಯನ ಬೆವರ ಹನಿ ಇದೆ. ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ಅಭಿಪ್ರಾಯ ಪಟ್ಟರು.
ಅವರು ದಿನಾಂಕ 01.11.2017 ರಂದು ಯುವವಾಹಿನಿ (ರಿ) ಹೆಜಮಾಡಿ ಘಟಕದ ಆಶ್ರಯದಲ್ಲಿ ಹೆಜಮಾಡಿ ಬಿಲ್ಲವ ಸಂಘದಲ್ಲಿ ಜರುಗಿದ ತುಳುವೆರೆ ತುಡಾರ ಪರ್ಬ ಉದ್ಘಾಟಿಸಿ ಮಾತನಾಡಿದರು.
ಯುವವಾಹಿನಿ (ರಿ) ಹೆಜಮಾಡಿ ಘಟಕದ ಅಧ್ಯಕ್ಷರಾದ ಮಹೇಂದ್ರ ಸಾಲ್ಯಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಜಿನರಾಜ ಬಂಗೇರ, ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಹರಿಭಟ್, ಕಣ್ಣಂಗಾರ್ ಜಮಲೀಯ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಹಮೀದ್, ಯುವವಾಹಿನಿ (ರಿ) ಮುಲ್ಕಿ ಘಟಕದ ಅಧ್ಯಕ್ಷರಾದ ರಕ್ಷಿತಾ ಯೋಗೀಶ್ ಕೋಟ್ಯಾನ್, ನ್ಯಾಯವಾದಿ ಮತ್ತು ಪಡುಬಿದ್ರೆ ಲಯನೆಸ್ ಕ್ಲಬ್ ಅದ್ಯಕ್ಷರಾದ ಶಾರ್ಲೆಟ್ ಪುರ್ಟಾಡೋ, ಯುವವಾಹಿನಿ (ರಿ) ಹೆಜಮಾಡಿ ಘಟಕದ ಸಲಹೆಗಾರರಾದ ಕಿಶೋರ್ ಕೆ.ಬಿಜೈ, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಕಿರಣ್ ಕುಮಾರ್ ಹಾಗೂ ಪ್ರತಿಮಾ ಉಪಸ್ಥಿತರಿದ್ದರು. ಶಿವರಾಮ್ ಜಿ.ಅಮೀನ್ ಸ್ವಾಗತಿಸಿದರು, ವಿಕೇಶ್ ಗುಡ್ಡೆಯಂಗಡಿ ಪ್ರಾಸ್ತಾವಿಕ ಮಾತನಾಡಿದರು, ಕಾರ್ಯದರ್ಶಿ ಚಂದ್ರಾವತಿ ಧನ್ಯವಾದ ನೀಡಿದರು, ಧೀರಜ್ ಮತ್ತು ಮನೋಹರ್ ಕಾರ್ಯಕ್ರಮ ನಿರ್ವಹಿಸಿದರು.