ಪರಸ್ಪರ ದೀಪಗಳಿಂದ ಬೆಸೆದುಕೊಂಡು ಕತ್ತಲೆಯಿಂದ ಬೆಳಕಿನೆಡೆಗೆ ಒಂದು ಅಲೌಕಿಕ ಬೆಳಕಿನ ಚಿತ್ತಾರವನ್ನು ಪೂರ್ತಿ ಬಿಡಿಸಿದಂತೆ ಕಾಣುವ ಅಥವಾ ಅದನ್ನು ಅನುಭವಿಸುವ ಅವಕಾಶವಿರುವುದು ದೀಪಗಳ ಹಬ್ಬಕ್ಕೆ ಮಾತ್ರ, ತುಳುನಾಡಿನಲ್ಲಿ ತುಡಾರ ಪರ್ಬಕ್ಕೆ ವಿಶೇಷ ಮಹತ್ವ ಇದೆ. ಕುಟುಂಬದಲ್ಲಿ ಬಾಂಧವ್ಯವನ್ನು ಗಟ್ಟಿಗೊಳಿಸುವ ಶಕ್ತಿ ಹಬ್ಬಗಳಿಗಿದೆ. ಎಂದು ಯುವವಾಹಿನಿ ಕೇಂದ್ರ ಸಮಿತಿಯ ಸಲಹೆಗಾರರಾದ ಬಿ.ತಮ್ಮಯ ತಿಳಿಸಿದರು.
ಅವರು ದಿನಾಂಕ 18.10.2017 ರಂದು ಉಪ್ಪಿನಂಗಡಿ ರಾಜ್ ಮಹಲ್ ಪೆದಮ್ಮಲೆ ( ವರದ್ರಾಜ್ ನಿವಾಸ) ಇಲ್ಲಿ ಯುವವಾಹಿನಿ ಉಪ್ಪಿನಂಗಡಿ ಘಟಕದ ಆಶ್ರಯದಲ್ಲಿ ಜರುಗಿದ ತುಡಾರ ಪರ್ಬ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ದೀಪಾವಳಿ ಹಬ್ಬವು ತುಳುನಾಡಿನ ಸಂಸ್ಕತಿಯನ್ನು ಬಿಂಬಿಸುವ ಹಬ್ಬವಾಗಿದ್ದು,ಇದರಲ್ಲಿ ತುಳುವರ ಆನೇಕ ಆಚಾರ ವಿಚಾರಗಳು ಅಡಕವಾಗಿದ್ದು ಇದನ್ನು ಉಳಿಸಿ ಬೆಳೆಸುವ ಯುವವಾಹಿನಿಯ ಕಾರ್ಯ ಶ್ಲಾಘನೀಯ ಎಂದು ಹಿರಿಯ ನಿವ್ರತ್ತ ಶಿಕ್ಷಕರಾದ ಶ್ರೀ ಎಂ.ಕೆ ಸಾಲಿಯಾನ್ ಪೆದಮ್ಮಲೆ ಕಾರ್ಯಕ್ರಮ ಉದ್ಘಾಟಿಸಿ ತಿಳಿಸಿದರು. ಜಾಗತೀಕರಣ ಭರಾಟೆಯಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯಗಳು ನಶಿಸಿಹೊಗುತ್ತಿದ್ದು, ಇಂತಹ ಕಾರ್ಯಕ್ರಮ ಯುವಜನತೆಗೆ ಅನಿವಾರ್ಯ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಜಯಂತ ನಡುಬೈಲು ತಿಳಿಸಿದರು. ಯುವವಾಹಿನಿ ಉಪ್ಪಿನಂಗಡಿ ಘಟಕದ ಅದ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಸಭೆಯ ಅಧ್ಯಕ್ಷತೆ ವಹಿಸಿದ್ದರು
ಬೆಳ್ತಂಗಡಿ ಗುರುದೇವ ಕಾಲೇಜಿನ ಪ್ರಾಂಶುಪಾಲರಾದ ಕ್ರಷ್ಣಪ್ಪ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಬಂಟ್ವಾಳ, ಘಟಕದ ಗೌರವ ಸಲಹೆಗಾರರಾದ ವರದ್ರಾಜ್ ಎಂ ಮತ್ತು ಕರುಣಾಕರ ಸುವರ್ಣ, ತಣ್ಣೀರುಪಂಥ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯವಿಕ್ರಮ ಕಲ್ಲಾಪು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.. ಬಲೀಯೇಂದ್ರ ಪೂಜೆಯ ವಿಧಿ ವಿಧಾನಗಳನ್ನು ಹಿರಿಯರಾದ ಶೇಖರ ಪೂಜಾರಿ ಶಿಬಾರ್ಲ ನಡೆಸಿಕೊಟ್ಟರು.
ತುಡರ್ ಪರ್ಬದ ಆತಿಥ್ಯವನ್ನು ವಹಿಸಿದ ಎಂ.ವರದ್ರಾಜ್, ವಿಮಲವರದ್ರಾಜ್ ದಂಪತಿ ಮತ್ತು ಡಾ.ಅಶಿತ್, ಡಾ.ಶ್ವೇತಾಅಶಿತ್ ಹಾಗು ಅನ್ಸೂಲ್ ರಾಜ್ ಇವರನ್ನು ಘಟಕದ ವತಿಯಿಂದ ಗೌರವಿಸಲಾಯಿತು. ಘಟಕದ ಕಾರ್ಯದರ್ಶಿ ಮನೋಜ್ ಎನ್ ಸಾಲ್ಯಾನ್ ಸ್ವಾಗತಿಸಿ, ಉಪಾಧ್ಯಕ್ಷರಾದ ಅಜಿತ್ ಕುಮಾರ್ ಪಾಲೇರಿ ವಂದಿಸಿದರು. ಹಣತೆಯನ್ನು ಹಚ್ಚಿ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲಾಯಿತು.
Nice programme