ದಿ. 16-9-2016 ರ ಗುರುಜಯಂತಿಯಂದು ಹಳೆಯಂಗಡಿ ಘಟಕದ ವತಿಯಿಂದ ಹಳೆಯಂಗಡಿ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಹಳೆಯಂಗಡಿ ಪರಿಸರದ ಹಳೆಯಂಗಡಿ-ಕೊಪ್ಪಳ ಸಂಪರ್ಕ ರಸ್ತೆಯನ್ನು ಅಧಿಕೃತವಾಗಿ ಬ್ರಹ್ಮಶ್ರೀ ನಾರಾಯಣ ಗುರು ರಸ್ತೆ ಎಂಬ ನಾಮಕರಣದಲ್ಲಿ ಶಾಸಕ ಅಭಯಚಂದ್ರ ಜೈನ್‌ರವರಿಂದ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ಘಟಕದ ಹೆಚ್ಚಿನ ಸದಸ್ಯರು ಭಾಗವಹಿಸಿ, ಹಳೆಯಂಗಡಿ ಪರಿಸರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಹೆಸರು ಸದಾ ರಾರಾಜಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿರುತ್ತೇವೆ.