ಪಡುಮಲೆಯ ದೇಯಿ ಬೈದೇತಿಯ ಔಷದ ವನದಲ್ಲಿ ದುಷ್ಕರ್ಮಿಯೊಬ್ಬ ಅಶ್ಲೀಲಕರವಾಗಿ ಚಿತ್ರೀಕರಿಸಿ ವಿಕೃತಿ ಮೆರೆದಿದ್ದಾನೆ ಮತ್ತು ಆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ತುಳುನಾಡಿನ ಆರಾಧ್ಯ ದೈವ ದೇಯಿ ಬೈದೇತಿಯ ಭಕ್ತರ ಹಾಗೂ ಅಖಂಡ ಹಿಂದೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುತ್ತಾರೆ. ಈ ರೀತಿ ಧಕ್ಕೆ ತಂದಿರುವ ದುಷ್ಕರ್ಮಿ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಯುವವಾಹಿನಿ(ರಿ) ಸುಳ್ಯ ಘಟಕದ ವತಿಯಿಂದ ಸುಳ್ಯ ಪೋಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ ಸುಳ್ಯ ಘಟಕದ ಅದ್ಯಕ್ಷ ಶಿವಪ್ರಸಾದ್. ಕೆ.ವಿ, ಕಾರ್ಯದರ್ಶಿ ರವೀಂದ್ರ, ಕೋಶಾಧಿಕಾರಿ ರವಿಕುಮಾರ್, ಬಿಲ್ಲವ ಸಂಘದ ಉಪಾಧ್ಯಕ್ಷ ಸೋಮನಾಥ ಪೂಜಾರಿ, ರಂಜಿತ್ ಪೂಜಾರಿ, ದಿನೇಶ್ ಕೋಟ್ಯನ್, ಶೇಖರ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.