ರಕ್ತದಾನ ಅತ್ಯಂತ ಶ್ರೇಷ್ಠ ದಾನ. ರಕ್ತದಾನ ಮೂಲಕ ಅನೇಕರ ಜೀವ ಉಳಿಸುವುದರೊಂದಿಗೆ ದಾನಿಯೂ ಉತ್ತಮ ಆರೋಗ್ಯ ಗಳಿಸಲು ಸಾಧ್ಯ ಎಂದು ಹಳೆಯಂಗಡಿ ಸಿಎಸ್‌ಐ ಅಮ್ಮನ್ ಮೆಮೋರಿಯಲ್ ಚರ್ಚ್ ಸಭಾಪಾಲಕ ಸೆಬೆಸ್ಟಿನ್ ಜತ್ತನ್ ಹೇಳಿದರು.
ಯುವವಾಹಿನಿ(ರಿ) ಹಳೆಯಂಗಡಿ ಘಟಕದ ಆಶ್ರಯದಲ್ಲಿ ಲಿಯೋ ಮತ್ತು ಲಯನ್ಸ್ ಕ್ಲಬ್ ಹಳೆಯಂಗಡಿ, , ಜೋರ್ಜ್ ಎ.ಬೆರ್ನಾಡ್ ಮೆಮೋರಿಯಲ್ ಟ್ರಸ್ಟ್ ಹಳೆಯಂಗಡಿ, ಹೆಲ್ತ್ ಕೇರ್ ಡಯಾಗ್ನಾಸ್ಟಿಕ್ ಸೆಂಟರ್ ಹಾಗೂ ಕೆಎಂಸಿ ಆಸ್ಪತ್ರೆ ಮಂಗಳೂರು , ರೆಡ್ ರಿಬ್ಬನ್ ಕ್ಲಬ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ, ಯುವಕ ಮಂಡಲ ಮತ್ತು ಯುವತಿ ಮಹಿಳಾ ಮಂಡಲ ತೋಕೂರು, ಯುವತಿ ಮತ್ತು ಮಹಿಳಾ ಮಂಡಲ ಹಳೆಯಂಗಡಿ, ಶ್ರೀ ಸುಬ್ರಮಣ್ಯ ಸ್ಪೋರ್ಟ್ಸ್ ಕ್ಲಬ್ ತೋಕೂರು, ಸಿಕ್ಸರ್ ಅಸೋಸಿಯೇಶನ್ ಕದಿಕೆ, ರಿಲಾಯನ್ಸ್ ಅಸೋಸಿಯೇಶನ್ ಬೊಳ್ಳೂರು ಹಳೆಯಂಗಡಿ, ಸಂಗಮ ಮಹಿಳಾ ಮಂಡಲ ಇಂದಿರಾನಗರ, ಆಟೊ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘ ಹಳೆಯಂಗಡಿ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ದಿನಾಂಕ 02.10.2017 ರಂದುಹಳೆಯಂಗಡಿ ಹರಿಓಂ ಅಪಾರ್ಟ್‌ಮೆಂಟ್ ಸಭಾಭವನದಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅನ್ನದಾನ ಜನರ ಹಸಿವು ನೀಗಿಸುತ್ತದೆ. ವಿದ್ಯಾದಾನದಿಂದ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ. ರಕ್ತದಾನ ಜೀವ ಉಳಿಸುವ ಕೆಲಸ ಮಾಡುತ್ತದೆ. ಆದ್ದರಿಂದ ಜೀವ ಉಳಿಸುವ ವ್ಯಕ್ತಿ ದೇವರಿಗೆ ಸಮಾನವಾಗಿರುತ್ತಾನೆ. ಯುವ ಜನತೆ ಇಂತಹ ಕಾರ್ಯಕ್ರಮದಲ್ಲಿ ಕೈ ಜೋಡಿಸಿರುವುದು ಅಭಿನಂದನೀಯ. ಎಂದು ಸಮಾರಂಭದ ಅಧ್ಯಕ್ಷತೆ ಹಳೆಯಂಗಡಿ ಬಿಲ್ಲವ ಸಂಘ ಅಧ್ಯಕ್ಷರಾದ ಚಂದ್ರಶೇಖರ ನಾನಿಲ್ ತಿಳಿಸಿದರು.
ಯುವವಾಹಿನಿ ಹಳೆಯಂಗಡಿ ಘಟಕದ ಅಧ್ಯಕ್ಷರಾದ ಶರತ್ ಕುಮಾರ್, ಕಾರ್ಯದರ್ಶಿ ಚಂದ್ರಿಕಾ ಕೋಟ್ಯಾನ್, ಹಳೆಯಂಗಡಿ ಪಂಚಾಯತ್ ಅಧ್ಯಕ್ಷೆ ಜಲಜ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಜೀವನ್ ಪ್ರಕಾಶ್ ಕಾಮರೊಟ್ಟು, ಜೋರ್ಜ್ ಎ.ಬೆರ್ನಾಡ್ ಮೆಮೋರಿಯಲ್ ಟ್ರಸ್ಟ್‌ನ ಜಾರ್ಜ್ ಬೆರ್ನಾಡ್, ಉದಯ ಬೆರ್ನಾಡ್, ವಿದ್ಯಾವಿನಾಯಕ ಯುವಕ ಮಂಡಲ ಕಟ್ಟಡ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ, ವಿವಿಧ ಸಂಘ ಸಂಸ್ಥೆಗಳ ರತನ್ ಶೆಟ್ಟಿ, ಎಚ್. ಅಮೀನ್, ಸುಜಾತಾ ವಾಸುದೇವ್, ದಿವ್ಯ ಶ್ರೀ, ಜ್ಯೋತಿ, ಶಮೀನ್, ಶರತ್, ಚಂದ್ರಶೇಖರ ಕದಿಕೆ, ಅಜೀಜ್ ಹಳೆಯಂಗಡಿ ಮತ್ತಿತರರು ಉಪಸ್ಥಿತರಿದ್ದರು. ಮುಡಾ ಸದಸ್ಯ ವಸಂತ್ ಬೆರ್ನಾಡ್ ಸ್ವಾಗತಿಸಿದರು. ಹರಿದಾಸ್ ಭಟ್ ವಂದಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ನಿರ್ದೇಶಕರಾದ . ಬ್ರಿಜೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
Wonderful service to the society