ಭಗವಂತನನ್ನು ಪೂಜಿಸಿದರೆ
ಅಮ್ಮ ಬರುವುದಿಲ್ಲ ಆದರೆ
ಅಮ್ಮನನ್ನು ಪೂಜಿಸಿದರೆ
ಭಗವಂತ ಖಂಡಿತಾ ಬರುತ್ತಾನೆ.
ಜೀವನದಲ್ಲಿ ಎಲ್ಲಾವನ್ನು
ಶಾಶ್ವತವಾಗಿ ಪಡೆಯಲು
ಬಯಸುತ್ತೇವೆ
ಆದರೆ
ಜೀವನವೇ ಶಾಶ್ವತವಲ್ಲ ಎಂಬುದನ್ನು ಮರೆಯುತ್ತೇವೆ.
ನೀವೂ ಇನ್ನೊಬ್ಬರ ಕೆಲಸಗಳ ಬಗ್ಗೆ ಚುಚ್ಚಿ
ಮಾತನಾಡುವ ಬದಲು
ಇನ್ನೊಬ್ಬರು ನಿಮ್ಮನ್ನು ಮೆಚ್ಚಿ
ಮಾತನಾಡುವಂತಹ ಕೆಲಸ ಮಾಡಿ.
ಹುಟ್ಟಿದವರು ಒಂದು ದಿನ ಸಾಯಲೇಬೇಕು
ಹಾಗಂತ ದಿನವು ಸತ್ತು ಬದುಕುವುದಲ್ಲ ಬದುಕು,
ಸಾಧ್ಯವಾದರೆ ಆಗಬೇಕು ನಮ್ಮ ಬದುಕು
ಮತ್ತೊಬ್ಬರ ಬಾಳಿನ ಬೆಳಕು
ಬೆಳಕಾಗದಿದ್ದರೂ ಅಡ್ಡಿಯಿಲ್ಲ
ನಮ್ಮಿಂದ ಇನ್ನೊಬ್ಬರ ಬಾಳು
ಕತ್ತಲಾಗದಿದ್ದರೆ ಸಾಕು.
ಜೇನು ಹುಳ ಕೂಡಿಟ್ಟ ತುಪ್ಪ,
ಇರುವೆ ಕೂಡಿಟ್ಟ ಸಕ್ಕರೆ,
ಜಿಪುಣ ಕೂಡಿಟ್ಟ ಹಣ
ಇವು ಯಾವತ್ತೂ ಪರರ ಪಾಲಾಗುತ್ತದೆ.
ನಂಬಿಕೆಗಿಂತ ಸಂದೇಹ ಹೆಚ್ಚಾದರೆ
ಯಾವ ಸಂಬಂಧವೂ ಉಳಿಯಲ್ಲ.
ಸಂದೇಹದ ನಡುವೆ ನಂಬಿಕೆ ಗಟ್ಟಿ ಇದ್ದರೆ
ಯಾವ ಮನುಷ್ಯ ಮುರಿಯಲ್ಲ.
ಒಂದು ಹೂವು ಮತ್ತೊಂದು ಹೂವಿನೊಂದಿಗೆ
ಸ್ಪರ್ಧೆಗಿಳಿಯುವುದಿಲ್ಲ, ಸುಂದರವಾಗಿ ಅರಳುವುದಷ್ಟೇ
ಅವುಗಳ ಕೆಲಸ. ನಮ್ಮ ವ್ಯಕ್ತಿತ್ವವು ಕೂಡ ಹೀಗೆ
ಇರಲಿ. ಆಗ ಮಾತ್ರ ಸಮಾಜದಲ್ಲಿ
ಗೌರವದಿಂದ ಬಾಳಬಹುದು.
ಹಣವಿರುವವನು
ಹಣವಿರುವವರಿಗಷ್ಟೇ ಶ್ರೀಮಂತ
ಆದರೆ ಗುಣವಿರುವವನು ಸದಾ ಶ್ರೀಮಂತನಾಗಿರುತ್ತಾನೆ
ಸಾಧನೆಯ ಹಾದಿಯಲ್ಲಿ
ಸವಾಲು, ಕಷ್ಟಗಳು ನಿಶ್ಚಿತ ಅವನ್ನೆಲ್ಲ
ಎದುರಿಸಿ ಯಶಸ್ಸಿನ ಪತಾಕೆ ಹಾರಿಸುವವನೇ ಧೀರ.
ಶತ್ರುವೊಬ್ಬ ಮುಂದುವರಿದರೂ
ಪರವಾಗಿಲ್ಲ, ಆದರೆ ಗೆಳೆಯನೊಬ್ಬ
ಹಿಂದುಳಿಯಬಾರದು ಸುತ್ತುತ್ತಿರುವ
ಈ ಭೂಮಿಯಲ್ಲಿ
ಸತ್ತು ಹೋಗುವವರು ನಾವೆಲ್ಲ…
ಹೊತ್ತು ತಂದಿಲ್ಲ ಏನನ್ನು
ಒಯ್ಯುವುದಿಲ್ಲ ಯಾವುದನ್ನೂ…
ಇದ್ದಷ್ಟು ದಿನ ಗಳಿಸಬೇಕು
ಸಾವಿಲ್ಲದ ಸ್ನೇಹವನ್ನು…
ಮರದಿಂದ ಕೆಳ ಬಿದ್ದ ಹೂ ಮತ್ತೆ
ಅರಳುವುದಿಲ್ಲ… ಆದರೆ
ಬೇರುಗಳು ಗಟ್ಟಿಯಾಗಿದ್ದರೆ
ಮತ್ತೆ ಹೊಸ ಹೂಗಳು ಹುಟ್ಟುತ್ತವೆ…
ಹಾಗೆಯೆ ನಮ್ಮ ಜೀವನದಲ್ಲಿ
ಈವರೆಗೆ ಏನನ್ನು ಕಳೆದುಕೊಂಡಿದ್ದೇವೆ
ಎಂಬುದಕ್ಕಿಂತ, ಇನ್ನೂ ಜೀವನದಲ್ಲಿ
ಮುಂದೆ ಎಷ್ಟೊಂದು ಬೆಳೆಯಬೇಕಿದೆ, ಗುರಿ
ಮುಟ್ಟಬೇಕಿದೆ ಎಂಬುದು ಮುಖ್ಯ…