ಬ್ರಹ್ಮಶ್ರೀ ನಾರಾಯಣ ಗುರುವರ್ಯರ “ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ” ಎಂಬ ಅಮರವಾಣಿಯ ಅನುಸಾರ ‘ವಿದ್ಯೆ-ಉದ್ಯೋಗ-ಸಂಪರ್ಕ’ ಎಂಬ ಮೂರು ಮುಖ್ಯ ಧ್ಯೇಯಗಳನ್ನಿಟ್ಟುಕೊಂಡು ಸಮಾಜ ಅಭ್ಯುದಯದ ಕೈಂಕರ್ಯಕ್ಕಾಗಿ ಬಿಲ್ಲವ ಸಮಾಜದ ಸಮಾನ ಮನಸ್ಕ ಯುವಜನರ ಸಂಘಟನೆಯಾಗಿ 1987ರಲ್ಲಿ ಯುವವಾಹಿನಿಯು ರೂಪುಗೊಂಡಿತು.
ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಔದ್ಯೋಗಿಕವಾಗಿ ಹಾಗೂ ಮುಖ್ಯವಾಗಿ ಶೈಕ್ಷಣಿಕವಾಗಿ ಸಮಾಜದಲ್ಲಿ ಬಿಲ್ಲವರು ಬಲಿಷ್ಠರಾಗಬೇಕು ಎಂಬ ಸಂಕಲ್ಪದೊಂದಿಗೆ ಯುವವಾಹಿನಿ ಕಾರ್ಯನಿರ್ವಹಿಸುತ್ತಾ ಬಂದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಂಗಳೂರು, ಸುರತ್ಕಲ್, ಬಂಟ್ವಾಳ, ಪುತ್ತೂರು, ಪಣಂಬೂರು, ಹಳೆಯಂಗಡಿ, ಹೆಜಮಾಡಿ, ಪಡುಬಿದ್ರೆ, ಸಸಿಹಿತ್ಲು, ಕಾಪು, ಕಟಪಾಡಿ, ಉಪ್ಪಿನಂಗಡಿ, ಮಂಗಳೂರು ಮಹಿಳಾ, ಉಡುಪಿ, ಮುಲ್ಕಿ, ನಿಡ್ಡೋಡಿ, ಯಡ್ತಾಡಿ, ಅಡ್ವೆ, ಬಜ್ಪೆ, ಬೆಳುವಾಯಿ, ಬೆಳ್ತಂಗಡಿ, ಕಂಕನಾಡಿ ಘಟಕಗಳಿದ್ದು, ಕುಳೂರು, ಕೊಲ್ಯ, ಸುಳ್ಯ ಘಟಕವು ಈ ವರ್ಷ ಪ್ರಾರಂಭಗೊಂಡು, ಪ್ರಸ್ತುತ 25 ಘಟಕಗಳು ಸಕ್ರಿಯವಾಗಿವೆ.
ವಾರ್ಷಿಕ ಮಹಾಸಭೆ: ವರದಿ ವರ್ಷದ ಮಹಾಸಭೆಯು ದಿನಾಂಕ 26-06-2016ರಂದು ಜರಗಿತು. 2016-17ನೇ ಸಾಲಿಗೆ ಅಧ್ಯಕ್ಷ ಶ್ರೀ ಪದ್ಮನಾಭ ಮರೋಳಿ, ಪಣಂಬೂರು, ಉಪಾಧ್ಯಕ್ಷ ಶ್ರೀ ಯಶವಂತ ಪೂಜಾರಿ, ಮಂಗಳೂರು, ಕಾರ್ಯದರ್ಶಿ ಶ್ರೀ ನಿತೇಶ್ ಕರ್ಕೇರ, ಅಡ್ವೆ, ಜೊತೆ ಕಾರ್ಯದರ್ಶಿ ಶ್ರೀ ಶಶಿಧರ್ ಕಿನ್ನಿಮಜಲು, ಪುತ್ತೂರು, ಕೋಶಾಧಿಕಾರಿ ಶ್ರೀ ದಯಾನಂದ ಎಮ್. ಪೂಜಾರಿ, ಉಡುಪಿ, ಅಲ್ಲದೆ ವಿವಿಧ ನಿರ್ದೇಶಕರುಗಳನ್ನು ಹಾಗೂ ಸಂಘಟನಾ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಯಿತು.
ವಾರ್ಷಿಕ ಸಮಾವೇಶ: 2015-16ನೇ ಸಾಲಿನ ವಾರ್ಷಿಕ ಸಮಾವೇಶವು ದಿನಾಂಕ 31-07-2016 ರಂದು ಯುವವಾಹಿನಿ ಉಡುಪಿ ಘಟಕದ ಆತಿಥ್ಯದಲ್ಲಿ “ಆರೂರು ಲಕ್ಷ್ಮೀ ನಾರಾಯಣ ರಾವ್ ಸಭಾಂಗಣ(ಪುರಭವನ) ಅಜ್ಜರ ಕಾಡು, ಉಡುಪಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉಡುಪಿ ನಗರ ಸಭೆ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಮಾಧವ ಬನ್ನಂಜೆಯವರು ಉದ್ಘಾಟಿಸಿದರು, ಕಾಪು ಕ್ಷೇತ್ರದ ಶಾಸಕರಾದ ಶ್ರೀ ವಿನಯಕುಮಾರ್ ಸೊರಕೆ, ವಿಧಾನ ಪರಿಷತ್ ಸಧಸ್ಯರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಶ್ರೀ ಸಂತೋಷ್ ಕೋಟ್ಯಾನ್, ಶ್ರೀ ಎನ್.ಕೆ. ಬಿಲ್ಲವ ಮತ್ತು ಡಾ|| ನವೀನ್ ಕುಮಾರ್ ಮರಿಕೆ ಇವರುಗಳು ಮುಖ್ಯ ಅತಿಥಿಗಳಾಗಿದ್ದರು. ಸಮಾರಂಭದಲ್ಲಿ ‘ಸಿಂಚನ ವಿಶೇಷಾಂಕ’ವನ್ನು ಬಿಡುಗಡೆ ಮಾಡಲಾಯಿತು. ಯುವವಾಹಿನಿಯು ನೀಡುವ ‘ಅಕ್ಷರ ಪುರಸ್ಕಾರ’, ‘ಪ್ರತಿಭಾ ಪುರಸ್ಕಾರ’, ‘ಗೌರವ ಅಭಿನಂದನೆ’, ‘ಯುವ ಸಾಧನಾ ಪುರಸ್ಕಾರ’, `ಸಾಧನಾ ಶ್ರೀ ಪ್ರಶಸಿ’್ತ, ‘ಸಾಧನಾ ಶ್ರೇಷ್ಠ’ ಪ್ರಶಸ್ತಿಗಳನ್ನು ಸಮಾಜದ ವಿವಿಧ ಸಾಧಕರಿಗೆ ನೀಡಿ ಗೌರವಿಸಲಾಯಿತು. ನೂತನ ಸಾಲಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋದಿಸಲಾಯಿತು.
ವಿಶುಕುಮಾರ್ ದತ್ತಿನಿಧಿ ಮತ್ತು ವಿಶುಕುಮಾರ್ ಪ್ರಶಸ್ತಿ: ಸಮಾಜದಲ್ಲಿ ಸಾಹಿತ್ಯಿಕ ಅಭಿರುಚಿ ಬೆಳೆಸುವರೇ “ವಿಶುಕುಮಾರ್ ಪ್ರಶಸ್ತಿ”ಯನ್ನು ಪ್ರತಿವರ್ಷ ಸಾಹಿತ್ಯ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಸಾಧನೆಗೈದ ಗಣ್ಯರಿಗೆ ನೀಡುತ್ತಾ ಬಂದಿದೆ. ಇದಕ್ಕಾಗಿ ‘ದತ್ತಿನಿಧಿ’ಯೊಂದನ್ನು ಸ್ಥಾಪಿಸಲಾಗಿದೆ. ದಿನಾಂಕ 31-07-2016ರಂದು ಉಡುಪಿಯಲ್ಲಿ ಜರುಗಿದ “ವಿಶುಕುಮಾರ್ ಪ್ರಶಸ್ತಿ ಪ್ರದಾನ” ಸಮಾರಂಭದಲ್ಲಿ, ತುಳು ಕನ್ನಡದ ಹಿರಿಯ ಸಾಹಿತಿ ಶ್ರೀಮತಿ ಎಂ. ಜಾನಕಿ ಬ್ರಹ್ಮಾವರ ಇವರಿಗೆ ‘ವಿಶುಕುಮಾರ್ ಪ್ರಶಸ್ತಿ’ಯನ್ನು ಹಿರಿಯ ಜಾನಪದ ವಿದ್ವಾಂಸರಾದ ಶ್ರೀ ಬನ್ನಂಜೆ ಬಾಬು ಅಮೀನ್ ರವರು ಪ್ರಧಾನ ಮಾಡಿದರು. ಶ್ರೀ ನೀಲಾವರ ಸುರೇಂಧ್ರ ಆಡಿಗ ರವರು ಅಧ್ಯಕ್ಷತೆ ವಹಿಸಿದ್ದರು. ಡಾ|| ಮಾಧವಿ ಭಂಡಾರಿ ಮತ್ತು ಶ್ರೀ ಸಂಪತ್ ಬಿ. ಸುವರ್ಣ ಮುಖ್ಯ ಅತಿಥಿಗಳಾಗಿದ್ದರು. ಕುಮಾರಿ ರಮ್ಯಾ ಸುಜೀರ್‍ರವರಿಗೆ ‘ಪ್ರಭಾಕರ ನೀರುಮಾರ್ಗ ಯುವಸಾಹಿತಿ ಪ್ರಶಸ್ತಿ’ ನೀಡಲಾಯಿತು.
ವಿದ್ಯೆ : “ವಿದ್ಯೆಯಿಂದ ಸ್ವತಂತ್ರರಾಗಿರಿ” ಎಂಬ ಶ್ರೀ ಗುರುಗಳ ಅಮೃತವಾಣಿಯಿಂದ ಪ್ರೇರಿತವಾದ ಸಂಸ್ಥೆಯು “ವಿದ್ಯೆ” ಎಂಬ ಧ್ಯೇಯವನ್ನು ಸಾಕಾರಗೊಳಿಸುವರೇ ನಮ್ಮ ಸಮಾಜದ ಬಡ ಅರ್ಹ ವಿದ್ಯಾರ್ಥಿಗಳ ವಿದ್ಯೆಗೆ ಸಹಕರಿಸಲು “ವಿದ್ಯಾನಿಧಿ”ಯನ್ನು ಸ್ಥಾಪಿಸಿರುತ್ತದೆ. ನಾವು ನೀಡುವ ಸಹಾಯ ಅವರ ಬಾಳನ್ನು ಬೆಳಗಲು ದಾರಿದೀಪವಷ್ಟೆ. ನಮ್ಮ ಸಹಕಾರದಿಂದ ಅವರ ಬಾಳು ಬೆಳಗಿ, ಮುಂದೆ ಅವರು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಲು ಸಹಕಾರವಾಗುತ್ತದೆ. ವಿದ್ಯಾನಿಧಿಯನ್ನು ಉಳಿಸಿ ಬೆಳೆಸುವಲ್ಲಿನೆರವಾಗುವರೇ “ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್”ನ್ನು ನೋಂದಣಿ ಮಾಡಲಾಗಿದ್ದು, ದಿನಾಂಕ 08-01-2017ರಂದು, ಪ್ರೇರಣಾ ಶಿಬಿರ, ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಹಾಗೂ 7 ಮಂದಿ ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಮಾಡಲಾಗಿದೆ. ಅಲ್ಲದೆ ಸುಮಾರು ರೂ.2,60,000 ವಿದ್ಯಾರ್ಥಿ ವೇತನ ನೀಡಲಾಗಿದೆ. ವಿಧ್ಯಾನಿಧಿ ಟ್ರಸ್ಟ್ ವಿವಿಧ ಘಟಕಗಳು ಧನ ಸಹಾಯ ನೀಡಿರುತ್ತವೆ. ಯುವವಾಹಿನಿಯ ಹೆಚ್ಚಿನ ಘಟಕಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ದತ್ತು ಸ್ವೀಕಾರ, ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ ಹಾಗು ವಿವಿಧ ತರಬೇತಿ ಕಾರ್ಯಕ್ರಮಗಳನ್ನು ನೀಡಿರುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳು.ಯುವವಾಹಿನಿ ಮಂಗಳೂರು ಘಟಕವು 14 ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿದ್ದು, ಅವರ ಶೈಕ್ಷಣಿಕ ವೆಚ್ಚಗಳನ್ನು ಭರಿಸುತ್ತಿದೆ. ವಿದ್ಯಾರ್ಥಿಗಳಿಗೆ ನಾಯಕತ್ವ ಶಿಬಿರ, UPSC,IAS,IPS ಬಗ್ಗೆ ಮಾಹಿತಿ ಶಿಬಿರ ಇತ್ಯಾದಿ ತರಬೇತಿ ಶಿಬಿರಗಳನ್ನು ನಡೆಸಲಾಗಿದೆ. ಕಂಕನಾಡಿ ಘಟಕದಿಂದ ವಿದ್ಯಾರ್ಥಿಗಳಿಗೆ ಪ್ರೇರಣ ಶಿಬಿರ ನಡೆದಿರುತ್ತದೆ. ಉಪ್ಪಿನಂಗಡಿ ಘಟಕವು ಸುಮಾರು 45 ವಿದ್ಯಾರ್ಥಿಗಳಿಗೆ ರೂ. 59,000/- ಸಹಾಯ ಧನ ನೀಡಿರುತ್ತದೆ. ಪಣಂಬೂರು ಘಟಕದಿಂದ ಒಂದು ಬಡ ವಿದ್ಯಾರ್ಥಿಗೆ ರೂ. 20,000/- ಧನ ಸಹಾಯ ನೀಡಲಾಗಿದೆ. ಹೆಜಮಾಡಿ ಘಟಕದಿಂದ ಬಡ ವಿದ್ಯಾರ್ಥಿಗೆ ರೂ. 10,000/- ಧನ ಸಹಾಯ ನೀಡಲಾಗಿದೆ. ಕೂಳೂರು ಘಟಕದಿಂದ “ವಿದ್ಯಾರ್ಥಿಗಳಲ್ಲಿ ಸಭ್ಯತೆ ಹಾಗು ಸಂಸ್ಕಾರದಲ್ಲಿ ಹೆತ್ತವರು” ಎಂಬ ಮಾಹಿತಿ ಶಿಬಿರ ಏರ್ಪಡಿಸಲಾಗಿತ್ತು. ಅಡ್ವೆ ಘಟಕದ ವತಿಯಿಂದ ಸ್ಥಳೀಯ ಶಾಲೆಯಲ್ಲಿ, ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಲಾಗಿದೆ. ದಿನಾಂಕ 27-11-2016ರಂದು ಪಡುಬಿದ್ರಿ ಘಟಕದಿಂದ “ಮಕ್ಕಳ ಹಬ್ಬ” ಎಂಬ ಮಕ್ಕಳ ಸ್ಪರ್ಧಾ ಕಾರ್ಯಕ್ರಮವನ್ನು ಸ್ಥಳೀಯ ಪ್ರೌಢ ಶಾಲೆಯಲ್ಲಿ ನಡೆಸಲಾಗಿದೆ. ದಿನಾಂಕ 25-12-2016ರಂದು ಬಂಟ್ವಾಳ ಘಟಕದಿಂದ “ಅನ್ವೇಷಣಾ-2016” ಎಂಬ ವಿದ್ಯಾರ್ಥಿ ಶಿಬಿರ ಕಾರ್ಯಕ್ರಮ ನಡೆದಿರುತ್ತದೆ. ಸುಮಾರು 372 ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ. ಸಸಿಹಿತ್ಲು ಘಟಕವು ಸರಕಾರಿ ಶಾಲಾ ಮಕ್ಕಳ ತಾಲ್ಲೂಕು ಮಟ್ಟದ ಪ್ರತಿಭಾ ಸ್ಪರ್ಧೆಯ ಬಹುಮಾನ ವೆಚ್ಚವನ್ನು ಭರಿಸಿರುತ್ತದೆ. ಉಡುಪಿ ಘಟಕದಿಂದ ವಿದ್ಯಾರ್ಥಿಗಳಿಗೆ ರೂ.75,000/- ವಿದ್ಯಾರ್ಥಿ ವೇತನ ನೀಡಲಾಗಿದೆ. ವಿವಿಧ ಘಟಕಗಳಿಂದ ಪದಗ್ರಹಣದಂದು, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಗಿದೆ.
ಉದ್ಯೋಗ : ಉದ್ಯೋಗ ಹಾಗೂ ಭವಿಷ್ಯ ನಿರ್ಮಾಣ ನೆಲೆಯಲ್ಲಿ ಹೆಚ್ಚಿನ ಘಟಕಗಳಿಂದ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಶಿಬಿರ ನಡೆಸಲಾಗಿದೆ. ಅಲ್ಲದೆ ವಿವಿದ ಉದ್ಯೋಗಗಳ ಮಾಹಿತಿಗಳನ್ನು ನೀಡಲಾಗಿದೆ. ಘಟಕಗಳು ನಡೆಸಿರುವ ಕೆಲವೊಂದು ಕಾರ್ಯಕ್ರಮಗಳು ಹೀಗಿವೆ…..
ದಿನಾಂಕ 28-01-2017 ರಂದು ಹಳೆಯಂಗಡಿ ಘಟಕದಿಂದ, ಲಯನ್ಸ್ ಕ್ಲಬ್ ಹಾಗೂ ಬಿಲ್ಲವ ಸಂಘದ ಜಂಟಿ ಆಶ್ರಯದಲ್ಲಿ ಸ್ವ-ಉದ್ಯೋಗ ತರಬೇತಿ ಶಿಬಿರ ನಡೆಸಲಾಗಿದೆ. ದಿನಾಂಕ 06-03-2017ರಂದು ವiಹಿಳಾ ಘಟಕದ ವತಿಯಿಂದ ಮಹಿಳೆಯರಿಗೆ 4 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಾಗಾರ ನಡೆದಿರುತ್ತದೆ. ಅಲ್ಲದೆ ವಿವಿಧ ಕರಕುಶಲ ವಸ್ತುಗಳ ತಯಾರಿ, ಸೌಂದರ್ಯ ಮತ್ತು ಇತರ ಚಟುವಟಿಕಾ ಆಧಾರಿತ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿದೆ. ಕಂಕನಾಡಿ ಘಟಕದ ವತಿಯಿಂದ ಮಹಿಳೆಯರಿಗೆ ಒಂದು ತಿಂಗಳ ಬ್ಯೂಟೀಷಿಯನ್ ತರಬೇತಿ ಕಾರ್ಯಕ್ರಮ ನಡೆದಿರುತ್ತದೆ. ಬೆಳ್ತಂಗಡಿ ಘಟಕದಿಂದ ವೃತ್ತಿ ಮಾರ್ಗದರ್ಶನ ಶಿಬಿರ ನಡೆಸಲಾಗಿದೆ.
ಸಂಪರ್ಕ: ಯುವವಾಹಿನಿಯ ಸದಸ್ಯರಲ್ಲಿ ಉತ್ತಮ ಸಂಪರ್ಕ ಬೆಳೆಸುವ ನಿಟ್ಟಿನಲ್ಲಿ ಘಟಕಗಳು ಹಲವಾರು ಪ್ರವಾಸಗಳನ್ನು, ಸ್ನೇಹಮಿಲನ, ಕುಟುಂಬ ಮಿಲನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತವೆ. ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಜನ್ಮಸ್ಥಳ ಚೆಂಬಳಂತಿ ಹಾಗೂ ಶಿವಗಿರಿಗೆ ಮಂಗಳೂರು, ಮಂಗಳೂರು ಮಹಿಳಾ, ಕಂಕನಾಡಿ, ಪಡುಬಿದ್ರೆ, ಅಡ್ವೆ ಹಾಗೂ ಪಣಂಬೂರು ಘಟಕಗಳು ಯಾತ್ರೆಯನ್ನು ಹಮ್ಮಿಕೊಂಡಿರುತ್ತವೆ. ಬೆಳ್ವಾಯಿ ಘಟಕದಿಂದ ಐತಿಹಾಸಿಕ ಸ್ಥಳ ಬೇಲೂರು ಹಳೆಬೀಡಿಗೆ ಪ್ರವಾಸ ಕೈಗೊಳ್ಳಲಾಗಿದೆ. ಕಣ್ಣೂರಿನ ಸಾದೂ ಮೆರ್ರಿ ಕಿಂಗ್‍ಡಮ್‍ಗೆ ಹೆಜಮಾಡಿ, ಮಂಗಳೂರು ಘಟಕಗಳು ಕಿರುಪ್ರವಾಸ ಹಮ್ಮಿಕೊಂಡಿರುತ್ತವೆ. ಹಳೆಯಂಗಡಿ ಘಟಕದ ಸದಸ್ಯರು ಕಮಲಶಿಲೆಗೆ ಹಾಗೂ ಮುರ್ಡೇಶ್ವರಕ್ಕೆ ಪ್ರವಾಸ ಕೈಗೊಂಡಿರುತ್ತಾರೆ. ಹಾಗೆಯೇ ಪಡುಬಿದ್ರಿ, ಮಹಿಳಾ ಘಟಕಗಳು ತಮ್ಮ ತಮ್ಮ ಸದಸ್ಯರಿಗೆ ಒಂದು ದಿನದ ಕಿರು ಪ್ರವಾಸಗಳನ್ನು ನಡೆಸಿರುತ್ತಾರೆ. ಮಂಗಳೂರು ಮಹಿಳಾ ಹಾಗೂ ಕಂಕನಾಡಿ ಘಟಕದ ಸದಸ್ಯರು ಕೊಲ್ಲೂರು,ಕಮಲಶಿಲೆಗೆ ಕಿರು ಪ್ರವಾ¸ ಕೈಗೊಂಡಿರುತ್ತಾರೆ.
ಕೋಟಿಚೆನ್ನಯರ ಜನ್ಮಸ್ಥಳ ಪಡುಮಲೆ, ಗೆಜ್ಜೆಗಿರಿ ಹಾಗೂ ಎಣ್ಮೂರಿಗೆ ಮುಲ್ಕಿ ಘಟಕವು ಕಿರು ಪ್ರವಾಸ ಕೈಗೊಂಡಿರುತ್ತದೆ. ಮಂಗಳೂರು ಘಟಕದ ಸದಸ್ಯರು ಥೈಲಾಂಡ್‍ಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ.
ಪುತ್ತೂರು ಘಟಕವು ಮೈಸೂರಿನಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಸಿರುತ್ತದೆ. ಅಲ್ಲದೆ ಮಂಗಳೂರು, ಮಂಗಳೂರು ಮಹಿಳಾ, ಸುರತ್ಕಲ್, ಕೂಳೂರು, ಮುಲ್ಕಿ, ಸಸಿಹಿತ್ಲು ಘಟಕಗಳು ಸ್ನೇಹ ಸಮ್ಮಿಲನ, ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಸಿರುತ್ತವೆ. ಕೂಳೂರು ಘಟಕವು “ತಮ್ಮನ 2017” ಎಂಬ ವಿಶೇಷ ಕಾರ್ಯಕ್ರಮ ನಡೆಸಿದೆ.
ಶ್ರೀ ಗುರುಜಯಂತಿ ಹಾಗೂ ನಾರಾಯಣ ಗುರುತತ್ತ್ವ ಪ್ರಚಾರ: ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಎಲ್ಲಾ ಘಟಕಗಳು ಅತ್ಯಂತ ಶ್ರದ್ಧೆಯಿಂದ ಭಕ್ತಿಪೂರ್ವಕವಾಗಿ ಆಚರಿಸಿದವು ಎನ್ನಲು ಸಂತೋಷಪಡುತ್ತೇವೆ. ಗುರುಜಯಂತಿಯ ದಿನ ಸರಕಾರದ ವತಿಯಿಂದ ನಡೆದ ಆಚರಣೆ ಸಲುವಾಗಿ ವಾಹನ ಜಾಥಾದ ಮೂಲಕ ಮಂಗಳೂರು, ಕಂಕನಾಡಿ, ಕೂಳೂರು ಘಟಕಗಳು ಹೆಚ್ಚಿನ ಮೆರುಗನ್ನು ನೀಡಿವೆ. ಅಲ್ಲದೆ
ಅಂದು ಮಹಿಳಾ ಘಟಕದ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಪುತ್ತೂರು ಘಟಕದಿಂದ ಶ್ರೀ ನಾರಾಯಣ ಗುರು ಜಯಂತಿಯ ಅಂಗವಾಗಿ ಸರಕಾರಿ ಆಸ್ಪತ್ರೆಗೆ 6 ಫ್ಯಾನ್‍ಗಳನ್ನು ನೀಡಲಾಗಿದೆ. ಬಂಟ್ವಾಳ ಘಟಕದಿಂದ ಗುರುಪೂಜೆ ನಡೆಸಲಾಗಿದೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಡೆದಿರುತ್ತದೆ.
ಅಡ್ವೆ ಘಟಕದಿಂದ ನಾರಾಯಣ ಗುರು ಜಯಂತಿ ಪ್ರಯುಕ್ತ “ಹೆತ್ತವರೊಂದಿಗೆ ಈ ದಿನ” ಎಂಬ ವಿಶೇಷ ಕಾರ್ಯಕ್ರಮ ನಡೆಸಿ ಹೆತ್ತವರಿಗೆ ಅಭಿನಂದಿಸಲಾಯಿತು.
ಸುರತ್ಕಲ್ ಘಟಕದಿಂದ ಗುರುಸ್ಮರಣೆ ಕಾರ್ಯಕ್ರಮ ನಡೆಸಲಾಯಿತು. ಕಂಕನಾಡಿ ಘಟಕದಿಂದ ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ಮಹಿಳಾ ಘಟಕದಿಂದ ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ ಹಾಗೂ ಕಂಕನಾಡಿ ಘಟಕದ ಜತೆ ಜಂಟಿಯಾಗಿ ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಯ ರೋಗಿಗಳ ಸಹಾಯಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಸುರತ್ಕಲ್, ಕೂಳೂರು ಹಾಗೂ ಪಣಂಬೂರು ಘಟಕಗಳ ಜಂಟಿ ಸಹಯೋಗದಲ್ಲಿ “ನಾರಾಯಣ ಗುರು ತತ್ವ ಅನುಷ್ಠಾನದಲ್ಲಿ ನಮ್ಮ ಸಮಾಜ” ಎಂಬ ಕಾರ್ಯಕ್ರಮ ನಡೆಸಲಾಯಿತು.
21-09-2016ರಂದು ಪಡುಬಿದ್ರಿ ಘಟಕದಿಂದ ಶ್ರೀ ನಾರಾಯಣ ಗುರುಗಳ ಪುಣ್ಯ ತಿಥಿಯಂದು “ಕೊಡಿಯಡಿತ ಸತ್ಯೊಲು” ಎಂಬ ವಿಚಾರಗೋಷ್ಠಿ ನಡೆಸಲಾಯಿತು.
ಬೆಳ್ತಂಗಡಿ ಘಟಕದಿಂದ ದಿನಾಂಕ 15-02-2017ರಂದು ಆಳದಂಗಡಿಯಲ್ಲಿ ನಾರಾಯಣ ಗುರು ತತ್ವ ಪ್ರಚಾರ ಕಾರ್ಯಕ್ರಮ ನಡೆಯಿತು ಹಾಗೂ ದಿನಾಂಕ 12-03-2017ರಂದು ನಾರಾಯಣಗುರು, ಕೋಟಿಚೆನ್ನಯ ಹಾಗೂ ನಾಗಬ್ರಹ್ಮರ ಭಾವಚಿತ್ರ ವಿತರಣೆ ಮಾಡಲಾಯಿತು.
ಯುವಸಿಂಚನ ಪತ್ರಿಕೆ ಹಾಗೂ ವೆಬ್‍ಸೈಟ್: ಯುವವಾಹಿನಿಯ ವಿವಿಧ ಕಾರ್ಯಚಟುವಟಿಕೆಗಳನ್ನು ಸಮಾಜದ ವಿವಿಧೆಡೆ ತಲಪಿಸಲು ಯುವವಾಹಿನಿಯ ಮುಖವಾಣಿ “ಯುವ ಸಿಂಚನ” ಮಾಸಪತ್ರಿಕೆಯು ಪ್ರತೀ ತಿಂಗಳು ಬಿಡುಗಡೆಯಾಗುತ್ತಿದ್ದು, ಪ್ರತೀ ಸದಸ್ಯರ ಕೈ ಸೇರುತ್ತಿದೆ. ಪತ್ರಿಕೆಯಲ್ಲಿ ಯುವವಾಹಿನಿಯ ಚಟುವಟಿಕೆಗಳೇ ಅಲ್ಲದೆ ವಿವಿಧ ಲೇಖನಗಳು, ಕಥೆಗಳು, ಬರಹಗಳು, ಸಾಧಕರ ವಿವರಗಳು ಪ್ರಕಟವಾಗುತ್ತಿದೆ. ಅಲ್ಲದೆ ಯುವವಾಹಿನಿಯ ಕಾರ್ಯಚಟುವಟಿಕೆಗಳು ಪ್ರಪಂಚದೆಲ್ಲೆಡೆ ಪಸರಿಸುವಂತಾಗಲು ಈ ವರ್ಷದಿಂದ ಯುವವಾಹಿನಿಯ ವೆಬ್‍ಸೈಟ್‍ನ್ನು ರಚಿಸಲಾಗಿದ್ದು, ಅದರಲ್ಲಿ ಯುವವಾಹಿನಿಯ ಸಂಪೂರ್ಣ ಮಾಹಿತಿಗಳು ಲಭ್ಯವಾಗುತ್ತಿವೆ. ವೆಬ್‍ಸೈಟ್‍ನ ವಿಳಾಸ ಈ ರೀತಿ ಇದೆ:-yuvavahini.in
ಕ್ರೀಡೆ: ಸುರತ್ಕಲ್ ಘಟಕದಿಂದ ಸದಸ್ಯರಿಗೆ “ಕ್ರೀಡೋತ್ಸವ” ಕಾರ್ಯಕ್ರಮ ಜರುಗಿರುತ್ತದೆ. ಬೆಳ್ತಂಗಡಿ, ನಿಡ್ಡೋಡಿ ಹಾಗೂ ಬೆಳ್ವಾಯಿ ಘಟಕಗಳು ತಮ್ಮ ಊರುಗಳಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜನೆ ಮಾಡಿರುತ್ತದೆ. ಅಲ್ಲದೆ ಸ್ಥಳೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿರುತ್ತದೆ. ಹೆಜಮಾಡಿ ಘಟಕದಿಂದ ನಾಲ್ಕು ಕರೆಯ ಗ್ರಾಮಸ್ಥರಿಗೆ ಕ್ರೀಡಾಕೂಟ ಜರುಗಿರುತ್ತದೆ. ಮಂಗಳೂರು ಮಹಿಳಾ ಘಟಕದಿಂದ ದಿನಾಂಕ 05-03-2017 ರಂದು ಅಂತರ್ ಘಟಕ “ದೇಯಿ ಬೈದೆತಿ” ಕ್ರೀಡಾಕೂಟ ಜರುಗಿರುತ್ತದೆ.
ದಿನಾಂಕ 07-05-2017 ರಂದು ಯುವಜನತೆಯನ್ನು ಕ್ರೀಡೆಯ ಮೂಲಕ ಒಗ್ಗೂಡಿಸುವ ಸಲುವಾಗಿ ಕೇಂದ್ರ ಸಮಿತಿ ಆಶ್ರಯದಲ್ಲಿ ಉಡುಪಿ ಘಟಕದ ಆತಿಥ್ಯದಲ್ಲಿ ನಡೆದ “ಯುವ ಕ್ರೀಡಾಸಂಗಮ-2017” ಅಂತರ್ ಘಟಕ ಪುರುಷರ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆ ಅತ್ಯಂತ ಮೆಚ್ಚುಗೆ ಗಳಿಸಿತು. ಕೂಳೂರು ಘಟಕದಿಂದ ದಿನಾಂಕ 17-05-2017 ರಂದು ಒಂದು ದಿನದ ಕ್ರೀಡಾಕೂಟ ನಡೆಸಲಾಗಿದೆ.
ಆರೋಗ್ಯ: “ಆರೋಗ್ಯವೇ ಭಾಗ್ಯ” ಎಂಬ ನಾಣ್ಣುಡಿಗೆ ಯುವವಾಹಿನಿಯ ಎಲ್ಲಾ ಘಟಕಗಳು, ಸದಸ್ಯರುಗಳು, ಉತ್ತಮವಾಗಿ ಸ್ಪಂದಿಸಿರುತ್ತಾರೆ.ದಿನಾಂಕ 04-01-2017 ರಂದು ಕೂಳೂರು ಘಟಕದಿಂದ “ಸುವರ್ಣ ಆರೋಗ್ಯಕ್ಕೆ ಸುರಕ್ಷಾ ಯೋಜನೆಗಳು” ಎಂಬ ಮಾಹಿತಿ ಶಿಬಿರ ನಡೆದಿರುತ್ತದೆ. ಮಂಗಳೂರು ಘಟಕದಿಂದ ಕಿಡ್ನಿ ಕಲ್ಲಿನ ಬಗ್ಗೆ ಮಾಹಿತಿ ಹಾಗೂ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ಶಿಬಿರ ನಡೆದಿರುತ್ತದೆ. ದಿನಾಂಕ 03-04-2017 ರಂದು ಪಣಂಬೂರು ಘಟಕದಿಂದ ಆರೋಗ್ಯ ಶಿಬಿರ ನಡೆದಿರುತ್ತದೆ. ಪುತ್ತೂರು, ಮುಲ್ಕಿ ಘಟಕಗಳಿಂದ ವೈದ್ಯಕೀಯ ಶಿಬಿರ ನಡೆದಿರುತ್ತವೆ. ಸುರತ್ಕಲ್ ಘಟಕದಿಂದ ಯೋಗ ಮಾಹಿತಿ ಶಿಬಿರ ನಡೆದಿರುತ್ತದೆ. ಮಹಿಳಾ ಘಟಕದಿಂದ ಮಹಿಳಾ ಆರೋಗ್ಯ ಹಾಗೂ ಸ್ತನ ರೋಗಗಳ ಮಾಹಿತಿ ಶಿಬಿರ ನಡೆದಿರುತ್ತದೆ. ಬೆಳ್ವಾಯಿ, ಮುಲ್ಕಿ, ಪುತ್ತೂರು ಘಟಕಗಳಿಂದ ರಕ್ತದಾನ ಶಿಬಿರ ನಡೆದಿರುತ್ತದೆ. ಬಂಟ್ವಾಳ ಘಟಕದಿಂದ ಉಚಿತ ಕಣ್ಣಿನ ಪರೀಕ್ಷಾ ಶಿಬಿರ, ಬಜ್ಪೆ ಘಟಕದಿಂದ ಉಚಿತ ದಂತ ಚಿಕಿತ್ಸಾ ಶಿಬಿರ ನಡೆದಿರುತ್ತದೆ. ಅಡ್ವೆ ಘಟಕದಿಂದ ಪಶುಗಳಿಗೆ ಉಚಿತ ಕಾಲು ಬಾಯಿ ಲಸಿಕಾ ಶಿಬಿರಕ್ಕೆ ಸಹಕಾರ ನೀಡಲಾಗಿದೆ. ನಿಡ್ಡೋಡಿ ಘಟಕದಿಂದ ಒಟ್ಟು 3 ಬಡ ಕುಟುಂಬಗಳ ವ್ಯಕ್ತಿಗಳಿಗೆ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ ನೀಡಲಾಗಿದೆ. ಬೆಳ್ತಂಗಡಿ ಘಟಕದಿಂದ ಕ್ಯಾನ್ಸರ್ ರೋಗಿಗೆ ರೂ. 10000/- ಧನ ಸಹಾಯ ಹಾಗೂ ಕಿಡ್ನಿ ರೋಗಿಗೆ ಸಹಾಯಧನ ನೀಡಲಾಗಿದೆ. ಹೆಜಮಾಡಿ ಘಟಕದಿಂದ ಬಡ ವಿದ್ಯಾರ್ಥಿಯ ಚಿಕಿತ್ಸೆಗೆ ರೂ. 10,000/- ನೀಡಲಾಗಿದೆ.
ವ್ಯಕ್ತಿತ್ವ ವಿಕಸನ: ಯುವವಾಹಿನಿ ಸದಸ್ಯರಲ್ಲಿ ಉತ್ತಮ ನಡವಳಿಕೆ, ಶಿಸ್ತು, ನಾಯಕತ್ವ ಗುಣಗಳು ಅಲ್ಲದೆ ವೃತ್ತಿ ಕೌಶಲ್ಯಗಳು ಬೆಳೆಯಬೇಕೆಂಬ ಆಶಯದಲ್ಲಿ ವ್ಯಕ್ತಿತ್ವ ವಿಕಸನದಡಿಯಲ್ಲಿ ಅನೇಕ ತರಬೇತಿ ಕಾರ್ಯಾಗಾರಗಳು ಹಾಗೂ ಮಾಹಿತಿ ಶಿಬಿರಗಳು ನಡೆದಿರುತ್ತವೆ. ಅವುಗಳೆಂದರೆ, ಮಂಗಳೂರು ಘಟಕದಿಂದ ನಾಯಕತ್ವ ತರಬೇತಿ ಶಿಬಿರ ನಡೆದಿರುತ್ತದೆ. ಬಂಟ್ವಾಳ ಘಟಕದಿಂದ ನಾಯಕತ್ವ ಹಾಗೂ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಶಿಬಿರ ನಡೆದಿರುತ್ತದೆ. ಉಪ್ಪಿನಂಗಡಿ ಘಟಕದಿಂದ ಸದಸ್ಯರಿಗೆ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ನಡೆದಿರುತ್ತದೆ. ಬಜ್ಪೆ ಘಟಕದಿಂದ ಸಭಾಕಂಪನ ಮತ್ತು ಭಾಷಣ ಕಲೆ ತರಬೇತಿ ಕಾರ್ಯಾಗಾರ ನಡೆದಿರುತ್ತದೆ. ಮಹಿಳಾ ಘಟಕದಿಂದ, ವಿವಿಧ ವೃತ್ತಿ ಕೌಶಲ್ಯ ತರಬೇತಿಗಳು ವಿವಿಧ ಹಂತದಲ್ಲಿ ಸದಸ್ಯರಿಗಾಗಿ ನಡೆದಿರುತ್ತದೆ.
ಮಂಗಳೂರು ಘಟಕದಿಂದ ಸಾಮಾನ್ಯ ಸಭೆಗಳಂದು ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಶಿಬಿರಗಳು ನಡೆದಿರುತ್ತದೆ. ಕೂಳೂರು ಘಟಕದಿಂದ ವ್ಯಕ್ತಿತ್ವ ವಿಕಸನ, ಕಾನೂನು ಮಾಹಿತಿ, ಕಸ್ಟಮ್ಸ್ ಮಾಹಿತಿ, ಗಸ್ತು ವ್ಯವಸ್ಥೆಗಳ ಬಗ್ಗೆ ಮಾಹಿತಿ ಶಿಬಿರಗಳು ನಡೆದಿರುತ್ತದೆ ,ಸುರತ್ಕಲ್ ಸಸಿಹಿತ್ಲು ಮಂಗಳೂರು, ಮಂಗಳೂರು ಮಹಿಳಾ ಘಟPಗಳಿಂದ ಸಂಚಾರಿ ಮಾಹಿತಿ ಕಾರ್ಯಾಗಾರ ನಡೆದಿರುತ್ತದೆ. ಉಡುಪಿ ಘಟಕದಿಂದ ಮಹಿಳಾ ಸೌಂದರ್ಯ ವೃದ್ಧಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಾಗಾರ ನಡೆಯಿತು.
ಮಹಿಳಾ ಸಮಾಗಮ: ಮಹಿಳಾ ದಿನಾಚರಣೆಯ ಅಂಗವಾಗಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ದಿನಾಂಕ 19-03-2017 ರಂದು “ಆಂತರ್ಯ” ಎಂಬ ಸಂವೇದನಾಶೀಲಾ ಕಾರ್ಯ, ಸಾಧನಾಶೀಲಾ ಮಹಿಳೆಯರ ಸಂವಾದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಾಧನಶೀಲ ಮಹಿಳೆಯರನ್ನು ಸನ್ಮಾನಿಸಲಾಯಿತು. ಕೂಳೂರು ಘಟಕದಿಂದ ಮಹಿಳಾ ದಿನಾಚರಣೆಯ ಅಂಗವಾಗಿ “ಅಭಿವ್ಯಕ್ತಿ” ಎಂಬ ಕಾರ್ಯಕ್ರಮ ನಡೆದಿರುತ್ತದೆ. ಕಂಕನಾಡಿ ಘಟಕವು ಮಹಿಳಾ ದಿನಾಚರಣೆ ಆಚರಿಸಿರುತ್ತದೆ. ಅಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಮಹಿಳೆಯರು ಹಾಗೂ ಯುವ ಪ್ರತಿಭೆಗಳನ್ನು ಗೌರವಿಸಲಾಯಿತು. “ಪ್ರಸ್ತುತ ಸಮಾಜದಲ್ಲಿ ಮಹಿಳೆಯ ಪಾತ್ರ” ಎಂಬ ಕಾರ್ಯಕ್ರಮಕ್ಕೆ ಪಡುಬಿದ್ರಿ ಘಟಕವು ಸಹಕಾರ ನೀಡಿರುತ್ತದೆ.
ಸಂಸ್ಕ್ರತಿ; ನವಂಬರ್ 20-2016ರಂದು, ಬೆಳ್ತಂಗಡಿ ಆಶಾ ಸಾಲಿಯನ್ ಕಲ್ಯಾಣ ಮಂಟಪದ ದಿ| ಶ್ರೀಮತಿ ಮುತ್ತಕ್ಕೆ ಮತ್ತು ದಿ| ಕೋಟ್ಯಪ್ಪ ಪೂಜಾರಿ ವರ್ಪಾಳ ಸಭಾ ವೇದಿಕೆಯಲ್ಲಿ ಕೇಂದ್ರ ಸಮಿತಿ ಆಶ್ರಯದಲ್ಲಿ ಹಾಗೂ ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ವರ್ಷದ ಪ್ರತಿಷ್ಠಿತ ಅಂತರ್ ಘಟಕಗಳ ಸಾಂಸ್ಕøತಿಕ ಕಾರ್ಯಕ್ರಮ “ಡೆನ್ನಾನ-ಡೆನ್ನಾನ” ಜರುಗಿತು. ಅಂದು ವಿವಿಧ ಘಟಕಗಳ ಕಲಾವಿದರು ತಮ್ಮ ಕಲಾ ಪ್ರತಿಭೆಯನ್ನು ಮೆರೆದು ಮೆಚ್ಚುಗೆ ಪಡೆದರು. ಅಲ್ಲದೆ ಅಂದು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಯುವ ಪ್ರತಿಭೆಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.ಮಂಗಳೂರು ಘಟಕದ ವತಿಯಿಂದ ಯುವವಾಹಿನಿಯ ಹೊಸ ಕಛೇರಿ ಉದ್ಘಾಟನಾ ಸಮಾರಂಭದ ಅಂಗವಾಗಿ ದಿನಾಂಕ 30-04-2017ರಂದು “ಯುವ ಕಲೋತ್ಸವ-17” ಅಂತರ್ ಘಟಕದ ಸಾಂಸ್ಕøತಿಕ ಸ್ಪರ್ಧೆ ನಡೆದಿರುತ್ತದೆ.
ಮುಲ್ಕಿ ಘಟಕದ ಸದಸ್ಯರು “ತುಳುನಾಡ ವೈಭವ” ಕಾರ್ಯಕ್ರಮವನ್ನು ಹಲವಾರು ಕಡೆ ಪ್ರದರ್ಶಿಸಿ ಮೆಚ್ಚುಗೆ ಪಡೆದಿರುತ್ತಾರೆ.“ಆಟಿ” ತಿಂಗಳ ಮಹತ್ವವನ್ನು ಸಾರುವ ಸಲುವಾಗಿ ಮುಲ್ಕಿ, ಹಳೆಯಂಗಡಿ, ಅಡ್ವೆ, ಬಜ್ಪೆ, ಬಂಟ್ವಾಳ ಘಟಕಗಳು ಕಾರ್ಯಕ್ರಮಗಳನ್ನು ನಡೆಸಿರುತ್ತವೆ. ಮಂಗಳೂರು ಮಹಿಳಾ ಘಟಕದಿಂದ “ಸೋಣ ಸಂಭ್ರಮ” ಎಂಬ ಕಾರ್ಯಕ್ರಮ ನಡೆದಿರುತ್ತದೆ. ಮುಲ್ಕಿ ಘಟಕವು “ತುಳುವೆರೆ ತುಡಾರ್ ಪರ್ಬ”, ಹೆಜಮಾಡಿ ಘಟಕವು “ತುಳುವೆರೆ ತುಳಸಿ ಪರ್ಬ”ವನ್ನು ವಿಜೃಂಭಣೆಯಿಂದ ಆಚರಿಸಿರುತ್ತದೆ.
ಸೌರಮಾನ ಯುಗಾದಿ ದಿನ ಬಜ್ಪೆ ಘಟಕದ ವತಿಯಿಂದ “ಬಿಸು ಪರ್ಬ-2017” ಎಂಬ ಕಾಂiÀರ್iಕ್ರಮ ನಡೆಸಲಾಗಿದೆ. ಯಡ್ತಾಡಿ ಘಟಕದಿಂದ ಕೋಟ ಹೋಬಳಿ ಮಟ್ಟದ ಬಿಲ್ಲವರ ಸಾಹಿತ್ಯಿಕ-ಸಾಂಸ್ಕøತಿಕ ಸಮ್ಮೇಳನ ಕಾರ್ಯಕ್ರಮ ನಡೆದಿರುತ್ತದೆ.
ಹೆಜಮಾಡಿ ಘಟಕದಿಂದ ಸಾರ್ವಜನಿಕ ಶನಿ ಪೂಜೆ, ಅಡ್ವೆ ಘಟಕದಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆದಿರುತ್ತದೆ. ಕೂಳೂರು ಘಟಕದಿಂದ ದೀಪಾವಳಿ ಹಬ್ಬದ ಪ್ರಯುಕ್ತ “ನಮ್ಮ ಮನೆ ಹಬ್ಬ ದೀಪಾವಳಿ” ಎಂಬ ವಿನೂತನ ಕಾರ್ಯಕ್ರಮ ನಡೆಸಲಾಗಿದೆ.
ಪುತ್ತೂರು ಘಟಕದಿಂದ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ನಡೆದಿರುತ್ತದೆ. ಉಡುಪಿ, ಮುಲ್ಕಿ, ಹೆಜಮಾಡಿ, ಬಜ್ಪೆ, ಕೂಳೂರು ಘಟಕಗಳು ನಾಟಕ ಪ್ರದರ್ಶನವನ್ನು ಮಾಡಿರುತ್ತವೆ. ಕಂಕನಾಡಿ ಘಟಕದಿಂದ ಸದಸ್ಯರು ವಿವಿಧ ಕಡೆಗಳಲ್ಲಿ ಗೂಡು ದೀಪ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ.
ಸಮಾಜ ಸೇವೆ : ‘ಸಮಾಜ ಸೇವೆ ನಮ್ಮ ಋಣ ಭಾರ ಕಡಿಮೆ ಮಾಡುವ ಪ್ರಯತ್ನ’ ಎಂಬಂತೆ ಯುವವಾಹಿನಿಯ ಎಲ್ಲಾ ಸದಸ್ಯರು ಸಮಾಜಸೇವೆಯಲ್ಲಿ ಮುಖ್ಯ ಪಾತ್ರಗಳನ್ನು ವಹಿಸಿರುತ್ತಾರೆ. ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಬ್ರಹ್ಮಕಲಶ, ನವರಾತ್ರಿ ಪೂಜೆ, ಮಂಗಳೂರು ದಸರಾ ಮೆರವಣಿಗೆ ಹಾಗೂ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಯುವವಾಹಿನಿಯ ಸದಸ್ಯರು ಸ್ವಯಂಸೇವಕರಾಗಿ ಭಾಗವಹಿಸಿರುತ್ತೇವೆ. ಹಾಗೂ ಅನ್ನದಾನಕ್ಕೆ ರೂ. 25,000/-ವನ್ನು ನೀಡಿರುತ್ತೇವೆ. ಮುಲ್ಕಿ ಘಟಕಕದಿಂದ ಗೆಜ್ಜೆಗಿರಿ ನಂದನ ಬಿತ್ತಿಲ್‍ನ ಶಿಲಾನ್ಯಾಸ ಕಾರ್ಯಕ್ರಮದ ವೇದಿಕೆ ಜವಾಬ್ದಾರಿ ಹಾಗೂ ವಿವಿಧ ಘಟಕಗಳ ಸದಸ್ಯರುÀ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿರುತ್ತಾರೆ, ಅಲ್ಲದೆ ಕ್ಷೇತ್ರದ ನಿರ್ಮಾಣ ಕಾರ್ಯದಲ್ಲಿ ಕರಸೇವೆಯಲ್ಲಿ ಭಾಗವಹಿಸಿರುತ್ತಾರೆ.
ಶಿವಗಿರಿಯ ತೀರ್ಥಾಟನಂ ಕಾರ್ಯಕ್ರಮದಲ್ಲಿ ಮಂಗಳೂರು ಘಟಕದ ಸದಸ್ಯರು ಮೂರು ದಿನ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿರುತ್ತಾರೆ.“ವರುಷಕ್ಕೊಂದು ಮನೆ ಹರುಷಕ್ಕೊಂದು ನೆಲೆ” ಎಂಬ ನೆಲೆಯಲ್ಲಿ ಹೆಜಮಾಡಿ, ಉಡುಪಿ, ಬಂಟ್ವಾಳ ಘಟಕಗಳಿಂದ ಸಮಾಜದ ಕಡು ಬಡ ಕುಟುಂಬಗಳಿಗೆ ಮನೆ ನಿರ್ಮಾಣದ ಕಾರ್ಯಗಳು ನಡೆದಿವೆ. ದಿನಾಂಕ 24-12-2016 ರಂದು ಕಂಕನಾಡಿ ಘಟಕದಿಂದ ಶ್ರೀ ಮಹಾಂಕಾಳಿ ದೈವಸ್ಥಾನಕ್ಕೆ 50 ಆಸನಗಳ ಕೊಡುಗೆ ನೀಡಲಾಗಿದೆ.ದಿನಾಂಕ 18-12-2016 ರಂದು ಮಹಿಳಾ ಘಟಕದಿಂದ ಸಾಮಾಜಿಕ ಕಳಕಳಿಯ, ಅಪೂರ್ವವಾದ “ವಧೂ-ವರರ ಸಮಾವೇಶ” ಅಭೂತಪೂರ್ವ ಕಾರ್ಯಕ್ರಮ ನಡೆದಿರುತ್ತದೆ. ಈ ಕಾರ್ಯಕ್ರಮದಲ್ಲಿ ಸುಮಾರು 450 ಮಂದಿ ನೋಂದಣಿ ಮಾಡಿಸಿರುತ್ತಾರೆ. ಉಪ್ಪಿನಂಗಡಿ ಘಟಕದಿಂದ ಬಡ ಕುಟುಂಬದ ಮನೆ ನಿರ್ಮಾಣಕ್ಕೆ ರೂ.10,000/- ಧನ ಸಹಾಯ ನೀಡಲಾಗಿರುತ್ತದೆ. ಅಡ್ವೆ ಘಟಕದಿಂದ ಬಡ ಕುಟುಂಬದ ಮನೆ ರಿಪೇರಿಗೆ ರೂ.10,000/- ನೀಡಲಾಗಿದೆ. ವಿವಿಧ ಸಂಘಟಣೆಗಳೊಂದಿಗೆ ಕೂಡಿ ಮುಲ್ಕಿ ಘಟಕವು ಸ್ವಚ್ಚತಾ ಅಭಿಯಾನ ಕಾರ್ಯಕ್ರಮವನ್ನು ನಡೆಸಿರುತ್ತದೆ.
ಸಸಿಹಿತ್ಲು ಘಟಕದಿಂದ ಬಡ ಕುಡುಂಬದ ಮನೆ ನಿರ್ಮಾಣಕ್ಕೆ ಧನ ಸಹಾಯ ನೀಡಲಾಗಿದೆ. ಅಡ್ವೆ ಘಟಕದಿಂದ ಅಂತರ್ ಜಲ ವೃದ್ಧಿಗಾಗಿ ಹೊಳೆಗೆ ಕಟ್ಟೆ ಕಟ್ಟುವ ಕೆಲಸ ನಡೆಸಲಾಗಿದೆ.
ಸುಳ್ಯ ಘಟಕದಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮ ನಡೆಸಲಾಗಿದೆ. ಬೆಳ್ತಂಗಡಿ ಘಟಕದಿಂದ ಅಫಘಾತದಲ್ಲಿ ಮೃತಪಟ್ಟ ಘಟಕದ ಸದಸ್ಯನ ಕುಟುಂಬಕ್ಕೆ ರೂ. 50,000/- ನೀಡಲಾಗಿದೆ. ಮಂಗಳೂರು ಮಹಿಳಾ ಘಟಕದಿಂದ ಸ್ವಚ್ಚತಾ ಕಾರ್ಯಕ್ರಮ ನಡೆದಿರುತ್ತದೆ .ಬಜ್ಪೆ ಘಟಕದಿಂದ ನಿರಂತರವಾಗಿ ವಿವಿಧ ಶ್ರದ್ಧಾ ಕೇಂದ್ರ ಗಳನ್ನು ಸ್ವಚ್ಚಗೊಳಿಸುವ ಕಾರ್ಯಗಳು ನಡೆಯುತ್ತಿವೆ. ಮಂಗಳೂರು ಮಹಿಳಾ ಘಟಕದ ಸದಸ್ಯೆಯರು ಊ.I.ಗಿ ಪೀಡಿತ ಮಕ್ಕಳ ಆಶ್ರಯ ತಾಣ “ಸಂವೇದನಾ”ಗೆ ಭೇಟಿ ನೀಡಿ ಮಕ್ಕಳಿಗೆ ವಿವಿಧ ಸಮಾಗ್ರಿಗಳು ಹಾಗೂ ಧನಸಹಾಯ ನೀಡಿದ್ದಾರೆ. ಸುಳ್ಯ ಘಟಕದಿಂದ ಶ್ರೀ ಕೋಟಿ ಚೆನ್ನಯ ಗರಡಿ, ಶೇಣಿಯಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿರುತ್ತಾರೆ.ಇತರ ಕಾರ್ಯಕ್ರಮಗಳು: ಮಂಗಳೂರು ಘಟಕವು, ಮಂಗಳೂರು ದಸರಾ ಶೋಭಾಯಾತ್ರೆಯಲ್ಲಿ ಉಚಿತ ತಂಪು ಪಾನೀಯದ ವ್ಯವಸ್ಥೆಯನ್ನು ಮಾಡಿರುವುದಲ್ಲದೇ ಡಾ|| ಬಿ.ಆರ್.ಅಂಬೇಡ್ಕರ್ ಜಯಂತಿ, ಬಸವ ಜಯಂತಿ, ಗುರು ಪೂರ್ಣಿಮ, ದೇವರಾಜ ಅರಸುರವರ ಜನ್ಮ ದಿನಾಚರಣೆ, ಯೋಗ ದಿನಾಚರಣೆ ಮುಂತಾದ ವಿಶೇಷ ದಿನಗಳನ್ನು ಆಚರಿಸುತ್ತಿದೆ. ಮುಲ್ಕಿ ಘಟಕವು ಶಿಕ್ಷಕರ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿರುತ್ತದೆ. ಯಡ್ತಾಡಿ ಹಾಗೂ ಮಂಗಳೂರು ಮಹಿಳಾ ಘಟಕಗಳು ಮಕ್ಕಳ ಬೇಸಿಗೆ ಶಿಬಿರವನ್ನು ನಡೆಸಿರುತ್ತದೆ. ಗೆಜ್ಜೆಗಿರಿ ನಂದನ ಬಿತ್ತಿಲ್ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಎಲ್ಲಾ ಘಟಕಗಳು ಪಾಲ್ಗೊಂಡಿದ್ದವು. ಅಲ್ಲದೆ ಕೆಲ ಘಟಕಗಳು ವಾಹನ ಜಾಥಾದಲ್ಲೂ ಪಾಲ್ಗೊಂಡಿರುತ್ತವೆ.ಹಳೆಯಂಗಡಿ ಘಟಕದಿಂದ ಹಳೆಯಂಗಡಿ-ಕೊಪ್ಪಳ ರಸ್ತೆಗೆ “ಬ್ರಹ್ಮಶ್ರೀ ನಾರಾಯಣಗುರು ರಸ್ತೆ” ಎಂದು ನಾಮಕರಣ ಮಾಡುವಲ್ಲಿ ಸಹಕಾರ ನೀಡಲಾಗಿದೆ. ಹೆಜಮಾಡಿ ಘಟಕದಿಂದ ದಕ್ಷ ಪೊಲೀಸ್ ಅಧಿಕಾರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಗಿದೆ. ಮಂಗಳೂರು ಮಹಿಳಾ ಘಟಕದಿಂದ ರಂಗೋಲಿ ಬಿಡಿಸುವ ಸ್ಪರ್ಧೆ ನಡೆದಿರುತ್ತದೆ. ಅಡ್ವೆ ಘಟಕದಿಂದ ಶ್ರೀ ಗಣೇಶ ಚತುರ್ಥಿಯ ಅಂಗವಾಗಿ ಗ್ರಾಮಸ್ಥರಿಗೆ ವಿವಿಧ ಮನೋರಂಜನೆ ಸ್ಪರ್ಧೆ ಏರ್ಪಡಿಸಲಾಗಿತ್ತು.ಮಂಗಳೂರು ಘಟಕದಿಂದ ತಾಲೂಕು ಯುವಜನ ಮೇಳ ಇದರೊಂದಿಗೆ ಜಂಟಿಯಾಗಿ “ಯುವೋಲ್ಲಾಸ” ಎಂಬ ಕಾರ್ಯಕ್ರಮ ನಡೆದಿರುತ್ತದೆ.ಮಂಗಳೂರು ಮಹಿಳಾ ಘಟಕದ ವತಿಯಿಂದ ಗೃಹರಕ್ಷಣ ದಳ ಮತ್ತು ಅಗ್ನಿಶಾಮಕ ದಳ ಇವರಿಂದ ಅಣಕು ಪ್ರದರ್ಶನ ನಡೆಸಲಾಯಿತು. ಇಷ್ಟೇ ಅಲ್ಲದೆ ಘಟಕಗಳು ತಮ್ಮ ತಮ್ಮ ವಿವಿಧ ಕಾರ್ಯಕ್ರಮಗಳಲ್ಲಿ ವಿವಿಧ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿದೆ.
ಯುವವಾಹಿನಿಯು ನಿಂತ ನೀರಾಗದೆ ಸದಾ ಹರಿಯುತ್ತಿದ್ದು ಕಳೆದ 30 ವರ್ಷಗಳಲ್ಲಿ ತಾನು ಸಾಕಷ್ಟು ಬೆಳೆದು ನಿಂತು ಸಮಾಜಕ್ಕೂ ತನ್ನಿಂದಾದ ಕೊಡುಗೆ ನೀಡುತ್ತಾ ಬಂದಿದೆ. ಇದೀಗ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸುವ ಸಲುವಾಗಿ ಹೊಸದಾದ ಹಾಗೂ ವಿಶಾಲವಾದ ಸಭಾಂಗಣ ಮತ್ತು ಕಛೇರಿಯನ್ನು ಸ್ಥಾಪಿಸಿದೆ. ಸಮಾಜದ ಏಳ್ಗೆಗಾಗಿ ಸದಾ ಚಿಂತಿಸುತ್ತಿರುವ ಯುವವಾಹಿನಿಗೆ ಸಮಾಜದ ಹಿರಿಯರ ಸಲಹೆ, ಮಾರ್ಗದರ್ಶನ, ನಿಸ್ವಾರ್ಥ ಸೇವೆ ಮಾಡುತ್ತಿರುವ ಸದಸ್ಯರ ಶ್ರಮ ಇವುಗಳೇ ಸಾಧನೆಯ ಹಿಂದಿನ ಶಕ್ತಿಯಾಗಿದೆ.
ನಮ್ಮನ್ನು ಸದಾ ಪ್ರೋಸ್ತಾಹಿಸುತ್ತಿರುವ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮತ್ತು ಕಟಪಾಡಿ ವಿಶ್ವನಾಥ ಕ್ಷೇತ್ರದ ಆಡಳಿತ ಮಂಡಳಿಗೆ, ಎಲ್ಲಾ ಬಿಲ್ಲವ ಸಮಾಜ ಸೇವಾ ಸಂಘಗಳಿಗೆ, ನಮ್ಮ ಆರ್ಥಿಕ ಭಾರವನ್ನು ಕಡಿಮೆಗೊಳಿಸಲು ಸಹಕರಿಸಿದ ನಮ್ಮ ಸಿಂಚನ ವಿಶೇಷಾಂಕದ ಎಲ್ಲಾ ಜಾಹೀರಾತುದಾರರಿಗೆ, ವಿದ್ಯಾನಿಧಿಗೆ ದೇಣಿಗೆ ನೀಡಿ ಸಹಕರಿಸಿದ ದಾನಿಗಳಿಗೆ, ಹಿತಚಿಂತಕರಿಗೆ, ವಿಶುಕುಮಾರ್ ದತ್ತಿನಿಧಿಗೆ ದೇಣಿಗೆ ನೀಡಿದ ದಾನಿಗಳಿಗೆ, ಸದಾ ಸಲಹೆ ಸೂಚನೆಗಳನ್ನು ನೀಡುತ್ತಿರುವ ನಮ್ಮ ಸಲಹೆಗಾರರಿಗೆ, ಈ ಹಿಂದೆ ಸಂಘಟನೆಯನ್ನು ಮುನ್ನೆಡೆಸಿ ಇಂದಿಗೂ ನಮ್ಮೊಂದಿಗೆ ಇದ್ದು ಪ್ರೋಸ್ತಾಹಿಸುತ್ತಿರುವ ಎಲ್ಲಾ ಮಾಜಿ ಅಧ್ಯಕ್ಷರುಗಳಿಗೆ, ಕೇಂದ್ರ ಸಮಿತಿಯ ಸದಸ್ಯರುಗಳಿಗೆ ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಅಲ್ಲದೆ ನಮ್ಮ ಎಲ್ಲಾ ಸಾಧನೆಗಳ ಯಶಸ್ಸಿನ ಹಿಂದೆ ಇರುವ ಎಲ್ಲರಿಗೂ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸುತ್ತಿರುವ ಎಲ್ಲಾ ಸಮಾಜ ಬಾಂಧವರಿಗೆ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಯುವವಾಹಿನಿಯ ಮುಂದೆ ಸಾಕಷ್ಟು ಕನಸುಗಳಿವೆ. ಅವುಗಳಿಗಾಗಿ ಮಿಡಿಯುವ ಮನಸ್ಸುಗಳಿವೆ, ಶ್ರಮಿಸುವ ಕೈಗಳಿವೆ. ಹರಸುವ ನೀವುಗಳಿದ್ದರೆ ನಮ್ಮ ಕನಸು ಸಾರ್ಥಕವಾದೀತು ಎಂಬ ಆಶಾಭಾವನೆಯೊಂದಿಗೆ ಎಲ್ಲರಿಗೂ ನಮ್ಮ ಕುಲದೇವರಾದ ಕುದ್ರೋಳಿ ಶ್ರೀ ಗೋಕರ್ಣನಾಥ, ಕೋಟಿ-ಚೆನ್ನಯ ಶಕ್ತಿಗಳು ಹಾಗೂ ಪರಮಪೂಜ್ಯ ಬ್ರಹ್ಮಶ್ರೀ ನಾರಾಯಣ ಗುರುಗಳು ಉತ್ತಮ ಭವಿಷ್ಯವನ್ನು ಕರುಣಿಸಲೆಂದು ಪ್ರಾರ್ಥಿಸುತ್ತಾ ವರದಿಯನ್ನು ಮುಕ್ತಾಯಗೊಳಿಸುತ್ತೇನೆ.
ಜೈ ಯುವವಾಹಿನಿ
ನಿತೇಶ್ ಜೆ .ಕರ್ಕೇರಾ,
ಪ್ರಧಾನ ಕಾರ್ಯದರ್ಶಿ,ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು