ಶಿಕ್ಷಣದ ಮೂಲಕ ಸಮಾನತೆ ಸಾರಿದ ಗುರುವರ್ಯರ ಸಂದೇಶ ಇಂದು ಪ್ರಸ್ತುತವಾಗಿದೆ. ಅವರ ಸಂದೇಶವನ್ನು ನಮ್ಮ ಜೀವನದಲ್ಲಿ ನಾವು ಅಳವಡಿಸಿಕೊಳ್ಳಬೇಕಾಗಿದೆ ಎಂದು ಬಂಟ್ವಾಳ ನ್ಯೂಸ್ ಸಂಪಾದಕ ಹರೀಶ್ ಮಾಂಬಾಡಿ ತಿಳಿಸಿದರು.ಅವರು ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ದಿನಾಂಕ 06.09.2017 ನೇ ಬುಧವಾರದಂದು ಬಿ.ಸಿ.ರೋಡಿನ ಸಮಾಜ ಕಲ್ಯಾಣ ಇಲಾಖಾ ವಸತಿ ಶಾಲೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರುವರ್ಯರ 163 ನೇ ಜನ್ಮ ದಿನಾಚರಣೆಯನ್ನು ದೀಪ ಬೆಳಗುವುದರ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಲೋಕೇಶ್ ಸುವರ್ಣ ಅಲೆತ್ತೂರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮಹಾ ಮಾನವತಾವಾದದ ಸಂದೇಶ ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣಗುರುಗಳು ಸಮಸ್ತ ಮಾನವ ಜನಾಂಗಕ್ಕೆ ಹೊಸ ಹಾದಿ ತೋರಿದವರು, ಅವರ ಸಂದೇಶದ ಅನುಷ್ಠಾನದ ಜತೆಗೆ ಅವರು ತೋರಿದ ಹಾದಿಯಲ್ಲಿ ಸಂಘಟಿತ ಸಮಾಜ ನಿರ್ಮಾಣವಾಗಬೇಕು ಎಂದು ಯುವವಾಹಿನಿ ಸಲಹೆಗಾರರಾದ ಬಿ.ತಮ್ಮಯ ತಿಳಿಸಿದರು. ವಸತಿ ಶಾಲೆಯ ಮೆಲ್ವಿಚಾರಕರಾದ ಪ್ರಸಾದ್, ಶ್ರೀಮತಿ ಸವಿತಾ, ಯುವವಾಹಿನಿ ಸಲಹೆಗಾರರಾದ ಅಣ್ಣು ಪೂಜಾರಿ, ಕೋಶಾಧಿಕಾರಿ ಲೋಕೇಶ್ ಪೂಜಾರಿ ಪಿ.ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಸತಿ ಶಾಲಾ ಮಕ್ಕಳಿಗೆ ಹಣ್ಣು ಹಂಪಲು,ಸಿಹಿ ತಿಂಡಿ, ಶಾಲಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಯುವವಾಹಿನಿ ನಿಕಟ ಪೂರ್ವ ಅಧ್ಯಕ್ಷರಾದ ಅರುಣ್ ಕುಮಾರ್, ಮಾಜಿ ಅಧ್ಯಕ್ಷರಾದ.ಹರೀಶ್ ಕೋಟ್ಯಾನ್,ನಾಗೇಶ್ ಪೊನ್ನೋಡಿ, ಸಂಘಟನಾ ಕಾರ್ಯದರ್ಶಿ ಸತೀಶ್ ಪೂಜಾರಿ ಬಾಯಿಲ, ಪ್ರಸಾದ್ ಬಾಯಿಲ, ಗಣೇಶ್ ಕುಮಾರ್, ನಿರ್ದೇಶಕರಾದ ಹರೀಶ್ ಕೋಟ್ಯಾನ್ ಕುದನೆ,ಶ್ರೀಮತಿ ಜಯಶ್ರೀ ಕರ್ಕೇರಾ, ಜಯಂತಿ. ವಿ.ಪೂಜಾರಿ ಉಪಸ್ಥಿತರಿದ್ದರು.ಉಪಾಧ್ಯಕ್ಷರಾದ ಗಣೇಶ್ ಪೂಂಜರೆಕೋಡಿ ಸ್ವಾಗತಿಸಿದರು, ಮಾಜಿ ಅದ್ಯಕ್ಷರಾದ ಪ್ರೇಮನಾಥ್ ಕೆ ವಂದಿಸಿದರು, ಮಾಜಿ ಅಧ್ಯಕ್ಷರಾದ ರಾಜೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು