ಸುದೀರ್ಘ 30 ವರ್ಷಗಳ ಕಾಲ ವಿದ್ಯೆಗೆ ಪ್ರೋತ್ಸಾಹ ನೀಡುತ್ತಿರುವ ಯುವವಾಹಿನಿಯ ಅಧ್ಬುತ ಸಾಧನೆ ಶ್ಲಾಘನೀಯವಾದುದು, ಈ ನಿಟ್ಟಿನಲ್ಲಿ ಯುವವಾಹಿನಿ ಎಲ್ಲರಿಗೂ ಪ್ರೇರಕ ಶಕ್ತಿ .ನಮ್ಮ ಸಂಪಾದನೆಯ ಒಂದಂಶವನ್ನು ಸಮಾಜಕ್ಕೆ ನೀಡಬೇಕು ಎನ್ನುವ ಭಾವನೆ ನಮ್ಮಲ್ಲಿರಬೇಕು, ಪರಸ್ಪರ ಸಹಕಾರದಿಂದ ಸದೃಢ ಸಮಾಜದ ನಿರ್ಮಾಣ ಮಾಡೋಣ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ತಿಳಿಸಿದರು. ಅವರು ಯುವವಾಹಿನಿ (ರಿ) ಮಂಗಳೂರು ಘಟಕದ ಆಶ್ರಯದಲ್ಲಿ ಮಂಗಳೂರು ಮಂಗಳಾ ಮ್ಯೂಸಿಕ್ ಕ್ಲಬ್ ಹಾಗೂ ಕನ್ನಡ ಹಾಗೂ ಸಂಸ್ಕ್ರತಿ ಇಲಾಖೆಯ ಸಹಯೋಗದೊಂದಿಗೆ ಯುವವಾಹಿನಿ ಶೈಕ್ಷಣಿಕ ದತ್ತು ಸ್ವೀಕಾರ ನಿಧಿ ಸಹಾಯಾರ್ಥವಾಗಿ ದಿನಾಂಕ 07.09.2017 ರಂದು ಮಂಗಳೂರು ಪುರಭವನದಲ್ಲಿ ಜರುಗಿದ ಯುವವಾಹಿನಿ ಕಲಾ ಸಂಭ್ರಮ 2017 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಕ್ಷಲೋಕದ ಚಾರ್ಲಿ ಚಾಪ್ಲಿನ್ ಎಂದೇ ಪ್ರಸಿದ್ದಿ ಪಡೆದಿರುವ ಸೀತಾರಾಮ ಕಟೀಲ್ ಇವರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿದ ಅವರು ಎಲೆ ಮರೆ ಕಾಯಿಯಂತೆ ಇರುವ ಪ್ರತಿಭೆಗಳನ್ನು ಗುರುತಿಸಿ ಯುವವಾಹಿನಿಯಂತಹ ಸಂಘಟನೆ ಪ್ರೋತ್ಸಾಹಿಸಬೇಕು,ಶಿಕ್ಷಣ ಪಡೆಯಲು ಆಸಕ್ತಿ ಇರುವವರಿಗೆ
ಇಂದು ಸಾಕಷ್ಟು ಪ್ರೋತ್ಸಾಹ, ನೆರವು ದೊರೆಯುತ್ತದೆ, ಶಿಕ್ಷಣ ಜೊತೆಗೆ ವಿದ್ಯಾರ್ಥಿಗಳು ಯಕ್ಷಗಾನ ಕಲೆ ಕಲಿತು ಬೆಳೆಸುವ ಮನಸ್ಸು ಮಾಡಬೇಕಾಗಿದೆ ಎಂದು ತಿಳಿಸಿದರು. ಯುವವಾಹಿನಿ (ರಿ) ಮಂಗಳೂರು ಘಟಕದ ಅಧ್ಯಕ್ಷರಾದ ರವೀಶ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಮಂಗಳಾ ಮ್ಯುಸಿಕ್ ಕ್ಲಬ್ ಅಧ್ಯಕ್ಷರಾದ ವಿಮಲ್ ಕೀರ್ತಿ ಜೈನ್ ಹಾಗೂ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಯುವವಾಹಿನಿ (ರಿ) ಮಂಗಳೂರು ಘಟಕದ ಕಾರ್ಯದರ್ಶಿ ಪ್ರವೀಣ್ ಸಾಲ್ಯಾನ್ ಕಿರೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವವಾಹಿನಿ (ರಿ) ಮಂಗಳೂರು ಘಟಕದ ಕಲೆ ಮತ್ತು ಸಾಂಸ್ಕೃತಿಕ ನಿರ್ದೇಶಕರಾದ ಕದ್ರಿ ಮನೋಹರ್ ಸ್ವಾಗತಿಸಿದರು, ಸತೀಶ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು,ಮಂಗಳೂರು ಯುವವಾಹಿನಿ ಮಾಜಿ ಅಧ್ಯಕ್ಷರಾದ ರಾಕೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು