ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮಂಗಳೂರು, ಮಣಿಪಾಲ ಯುನಿವರ್ಸಿಟಿ ಇಲ್ಲಿ ಪಿಸಿಯೋಲಜಿ ವಿಭಾಗದಲ್ಲಿ ಉಪನ್ಯಾಸಕಿಯಾಗಿರುವ ಇವರು ಮಂಡಿಸಿದ ಮಹಾಪ್ರಬಂಧ ‘‘Role of Nucleus Akumbence & Retaled Subcortical Center’s in Alcohol Addiction in male vistor Albino rots’ ‘ರೋಲ್ ಆಫ್ ನ್ಯೂಕ್ಲಿಯಸ್ ಆಕುಂಬೆನ್ಸ್ ಆಂಡ್ ರಿಲೇಟೆಡ್ ಸಬ್‍ಕಾರ್ಟಿಕಲ್ ಸೆಂಟರ್ಸ್ ಇನ್ ಆಲ್ಕೋಹಾಲ್ ಆಡಿಕ್ಷನ್ ಇನ್ ಮೇಲ್ ವಿಸ್ಟಾರ್ ಆಲ್ಬಿನೊ ರಾಟ್ಸ್’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಣಿಪಾಲ ವಿಶ್ವವಿದ್ಯಾನಿಲಯವು 2016 ಆಗಸ್ಟ್‍ನಲ್ಲಿ ಡಾಕ್ಟರೇಟ್ (ಪಿಎಚ್‍ಡಿ) ಪದವಿಯನ್ನು ನೀಡಿದೆ. ಕೆ.ಎಂ.ಸಿ.ಯ ಅಡಿಶನಲ್ ಪ್ರೊಫೆಸರ್ ಡಾ| ಗಣರಾಜ ಬಿ. ಇವರ ಮಾರ್ಗದರ್ಶನದಲ್ಲಿ ನಡೆದ ಈ ಸಂಶೋಧನೆ ಡಿಬಿಟಿ, ಭಾರತ ಸರಕಾರದಿಂದ 32 ಲಕ್ಷ ಅನುದಾನ ದೊರಕಿರುತ್ತದೆ. ಇವರ ಇಪ್ಪತ್ತಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವೈಜ್ಞಾನಿಕ ನಿಯತ ಕಾಲಿಕದಲ್ಲಿ ಪ್ರಕಟವಾಗಿದೆ. ಅಲ್ಲದೆ ಸಿಂಗಾಪುರ, ಮಲೇಶ್ಯಾ, ನೇಪಾಳ ಮತ್ತು ಲಂಡನ್‍ನ ಅಂತರಾಷ್ಟ್ರೀಯ ವೈದ್ಯಕೀಯ ಸಮ್ಮೇಳನಗಳಲ್ಲಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುತ್ತಾರೆ. 2016 ನವೆಂಬರ್‍ನಲ್ಲಿ ನೇಪಾಳದಲ್ಲಿ ನಡೆದ ವೈಜ್ಞಾನಿಕ ಸಮ್ಮೇಳನದಲ್ಲಿ ಭಾಗವಹಿಸಲು ಭಾರತ ಸರಕಾರದಿಂದ ‘ಟ್ರಾವೆಲ್ ಸ್ಕಾಲರ್‍ಶಿಪ್’ ದೊರಕಿರುತ್ತದೆ. ಹಾಗೂ ನೇಪಾಳದ ವೈದ್ಯಕೀಯ ಸಮ್ಮೇಳನದಲ್ಲಿ ಇವರು ಮಂಡಿಸಿದ ಪ್ರಬಂಧಕ್ಕೆ “ಅತ್ಯುತ್ತಮ ವೈದ್ಯಕೀಯ ಸಂಶೋಧನಾ ಪ್ರಬಂಧ” ಎಂಬ ಪುರಸ್ಕಾರ ದೊರಕಿರುತ್ತದೆ. ಮುಂದಿನ ಸಪ್ಟೆಂಬರ್‍ನಲ್ಲಿ “ಯುರೋಪ್‍ನ ಹಂಗೇರಿಯ ನ್ಯೂರೊ ಸೈಯನ್ಸ್ ಮೀಟಿಂಗ್‍ನಲ್ಲಿ ತಮ್ಮ ಸಂಶೋಧನೆಗಳನ್ನು ಮಂಡಿಸಲಿದ್ದಾರೆ. ಇದಕ್ಕೆ ಯುರೋಪ್ ನ್ಯೂರೋ ಸಯನ್ಸ್ ಸೊಸೈಟಿಯಿಂದ ‘ಟ್ರಾವೆಲ್ಸ್ ಸ್ಕಾಲರ್ ಶಿಪ್’ ದೊರಕಿರುತ್ತದೆ.
ಸಾಹಿತ್ಯದ ಅಭಿರುಚಿಯಿರುವ ಇವರು ಪಡುಬಿದ್ರೆಯ ಶಿವಪೂಜಾರಿ ಕಾಪು ಹಾಗೂ ಬೇಬಿ ಎಸ್. ಪೂಜಾರಿಯವರ ಪುತ್ರಿಯಾಗಿದ್ದು ಡಾ| ಧರ್ಣಪ್ಪ ಪೂಜಾರಿಯವರ ಪತ್ನಿಯಾಗಿರುತ್ತಾರೆ. ಇವರು ಪಡುಬಿದ್ರೆ ಗಣಪತಿ ಪೌಢಶಾಲೆ, ಅದಮಾರು ಪೂರ್ಣಪ್ರಜ್ಞ ಕಾಲೇಜು, ಮೂಲ್ಕಿ ವಿಜಯಾ ಕಾಲೇಜ್ ಮತ್ತು ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಮಣಿಪಾಲದ ಹಳೆವಿದ್ಯಾರ್ಥಿ, ಅಡುಗೆ ಇವರ ಹವ್ಯಾಸ. ಇವರಿಗೆ ತಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತಾ ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಉಪ್ಪಿನಂಗಡಿ ಘಟಕದ ಆತಿಥ್ಯದಲ್ಲಿ ದಿನಾಂಕ 06.08.2017 ರಂದು ಉಪ್ಪಿನಂಗಡಿಯ ಎಚ್ ಎಮ್.ಆಡಿಟೋರಿಯಂ ಇಲ್ಲಿ ಜರುಗಿದ ಯುವವಾಹಿನಿಯ 30ನೇ ವಾರ್ಷಿಕ ಸಮಾವೇಶದ ಸುಸಂದರ್ಭದಲ್ಲಿ ತಮಗೆ ಯುವವಾಹಿನಿ ಗೌರವ ಅಭಿನಂದನೆ-2017 ನೀಡಿ ಗೌರವಿಸುತ್ತಿದೆ
ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಕೆ.ವಸಂತ ಬಂಗೇರ, ಐ ಎಪ್ ಎಸ್ ಅಧಿಕಾರಿ ಶ್ರೀ ದಾಮೋದರ ಎ.ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಶಯನಾ ಜಯಾನಂದ ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಜಯಂತ ನಡುಬೈಲು, ಕಾಸರಗೋಡು ಸರಕಾರಿ ಕಾಲೇಜು ಸಹ ಪ್ರಾಧ್ಯಾಪಕರಾದ ಡಾ.ರಾಜೇಶ್ ಬೆಜ್ಜಂಗಳ,ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ, ಸಮಾವೇಶ ನಿರ್ದೇಶಕರಾದ ಡಾ.ಸದಾನಂದ ಕುಂದರ್, ಕಾರ್ಯದರ್ಶಿ ನಿತೇಶ್ ಜೆ.ಕರ್ಕೇರಾ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ.ರಾಜಾರಾಮ್, ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಉಪಸ್ಥಿತರಿದ್ದರು
Heartfelt congratulations Dr.Rashmi K.S on your achievement.You not only made your parents,husband and family members proud but also made Dakshina Kannada,Udupi district’s people proud.God bless you to accomplish all your dreams.I along with my family wish you all the best in your future endeavours.From:Mrs&Mr.Shekar Moily Padebettu.Gampa House
Congratulations Dr.Rashmi. Everyone have dreams, but you are the one who achieved it. Great. I feel myself proud to be one of your classmates and friend. All the best for your future.
Congrats Rashmi….it’s really happy to hear about ur achievements and proud to be ur friend ….. good luck dr…..