ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ದಿನಾಂಕ 10.05.2017 ರಿಂದ ದಿನಾಂಕ 13.05.2017 ರ ವರಗೆ ನಾಲ್ಕು ದಿನಗಳ ಕಾಲ ಮಕ್ಕಳ ಬೇಸಿಗೆ ಶಿಬಿರ ಮಂಗಳೂರಿನ ಕೊಟ್ಟಾರದ ಯುವವಾಹಿನಿ ಕೇಂದ್ರ ಕಛೇರಿಯಲ್ಲಿ ಜರುಗಿತು.
ಖ್ಯಾತ ಮರಳು ಶಿಲ್ಪಿ ಹಾಗೂ ಮಣ್ಣಿನ ಕಲಾಕೃತಿಯ ಕಲಾವಿದ ಹರೀಶ್ ಕೊಡಿಯಾಲಬೈಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮುಖವಾಡ ಹಾಗೂ ಮಣ್ಣಿನ ಕಲಾಕೃತಿ ರಚನೆಯ ಬಗ್ಗೆ ಮಕ್ಕಳಿಗೆ ತರಬೇತಿ ನೀಡಿದರು ಹಾಗೂ ಶ್ರೀಮತಿ ಶುಭಾ ರಾಜೇಂದ್ರ ಸಹಕಾರ ನೀಡಿದರು.
ಮಂಗಳೂರು ಮಹಿಳಾ ಘಟಕದ ಸದಸ್ಯೆಯರಾದ ಉಮಾ ಶ್ರೀಕಾಂತ್ , ಕುಶಾಲಾಕ್ಷಿ ಯಶವಂತ್, ರಶ್ಮಿ, ಶಕಿಲಾ, ವಿದ್ಯಾ ರಾಕೇಶ್ ,ರೇಖಾ,ರವಿಕಲಾ,ಸುನೀತಾ,ಶಶಿ
ಯುವವಾಹಿನಿ ಕೇಂದ್ರ ಸಮಿತಿಯ ಅದ್ಯಕ್ಷ ಪದ್ಮನಾಭ ಮರೋಳಿ ಮಾತನಾಡಿ ಮಕ್ಕಳಲ್ಲಿರುವ ನೈಜ ಪ್ರತಿಭೆ ಬೆಳಕಿಗೆ ಬರಲು ಇಂತಹ ಶಿಬಿರಗಳು ಸಹಕಾರಿಯಾಗಿದೆ,ಎಂದರು
ಯುವವಾಹಿನಿ ಅಂತರ್ ಘಟಕ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಸುಸಂದರ್ಭದಲ್ಲಿ ಕ್ರೀಡಾ ತರಬೇತುದಾರ ಅಮಿತ್ ಹಾಗೂ ಕೀರ್ತನ್ ಇವರನ್ನು ಅಭಿನಂದಿಸಲಾಯಿತು.
ಉಪಾಧ್ಯಕ್ಷ ಯಶವಂತ ಪೂಜಾರಿ, ಸಲಹೆಗಾರರಾದ ಅಶೋಕ್ ಕುಮಾರ್,ಟಿ.ಶಂಕರ ಸುವರ್ಣ, ಮಾಜಿ ಅದ್ಯಕ್ಷರಾದ ಸಾಧು ಪೂಜಾರಿ ,ರವಿಚಂದ್ರ ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷರಾದ ರವೀಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಹರೀಶ್ ಕೆ.ಪೂಜಾರಿ, ರಾಜೇಂದ್ರ ಚಿಲಿಂಬಿ, ಚಂದ್ರಶೇಖರ್ ಮತ್ತಿತರರು ಉಪಸ್ತಿತರಿದ್ದರು
ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿತಾ ಪೂಜಾರಿ ಸ್ವಾಗತಿಸಿದರು ಶ್ರೀಮತಿ ಶುಭಾ ರಾಜೇಂದ್ರ ವಂದಿಸಿದರು.