ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಮಾತೊಂದು ಕನ್ನಡದಲ್ಲಿ ಚಾಲ್ತಿಯಲ್ಲಿದೆ, ಆಡಿಗೆ ಎಲ್ಲಾ ರೀತಯ ಸೊಪ್ಪೂ ರುಚಿಸುತ್ತದೆ ಮಾತ್ರವಲ್ಲದೆ ಅಂತಹ ವಿಶೇಷ ಗುಣವನ್ನೂ ಅದು ಹೊಂದಿದೆ.ಬಹುಷ ಸಾಹಿತ್ಯ ಸಾಂಸ್ಕøತಿಕ, ಶೈಕ್ಷಣಿಕ, ಕ್ರೀಡೆ ಮತ್ತು ತರಬೇತಿ ಹೀಗೆ ಕ್ರೀಯಾಶೀಲತೆಯ ಬಹುಮುಖಗಳನ್ನು ತನ್ನೊಬ್ಬನೊಳಗೆ ಹುದುಗಿಸಿಕೊಂಡು ಒತ್ತಡದ ಜೀವನದ ನಡುವೆಯೂ ಪಾದರಸದಂತೆ ಕೆಲಸ ಮಾಡುತ್ತಿರುವ ವ್ಯಕ್ತಿ ನರೇಂದ್ರ ಕುಮಾರ್ ಕೋಟ.
ತಾನು ನಿರ್ವಹಿಸುತ್ತಿರುವ ಶಿಕ್ಷಕ ವೃತ್ತಿಯನ್ನು ವೃತ್ತಿ ಎಂದು ಕೊಂಡು ದುಡಿಯದೆ ಅದು ನನ್ನ ಜೀವನದಲ್ಲಿ ದೇವರು ನೀಡಿದ ಕರ್ತವ್ಯ ಎನ್ನುವ ರೀತಿಯಲ್ಲಿ ನಿರ್ವಹಿಸಿಕೊಂಡು ಬರುತ್ತಿರುವ ನರೇಂದ್ರ ಕುಮಾರ್ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರೂ ಹೌದು ಇದೇ ಕಾರಣದಿಂದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನೂ ಪಡೆದಿರುವ ಶ್ರೀಯುತರು ಬಹುಮುಖ ಪ್ರತಿಭೆಯ ಖನಿ ಎಂದರೂ ತಪ್ಪಾಗಲಾರದು. ಸಾಹಿತ್ಯರಚನೆಯ ಮೂಲಕ ಪ್ರಬುದ್ದತೆಯನ್ನು ಸಾಧಿಸಿ, ಹಲವಾರು ಪತ್ರಿಕೆ, ಸ್ಮರಣ ಸಂಚಿಕೆಗಳಿಗೆ ಲೇಖನ ಬರೆದು, ಅಂಕಣ ಬರಹಗಾರರಾಗಿಯೂ ಗುರುತಿಸಿ, ನಾಟಕ ರಚನೆಕಾರರಾಗಿ ಮೆರೆದು ಸಾಹಿತ್ಯ ಸೇವೆ ಮಾಡಿ, ಶಿಕ್ಷಣ ರಂಗದಲ್ಲಿ ಉತ್ತಮ ಸಾಧನೆ ತೋರಿಸಿ ಶಿಕ್ಷಕ ವೃತ್ತಿಗಿಂತಲೂ ಹೆಚ್ಚಿನ ಮೆಧಾವಿಯಾಗಿ,ವಿವಿಧ ಶಾಲಾ ಕಾಲೇಜು, ಸಂಘ ಸಂಸ್ಥೆಗಳ ಕಾರ್ಯ ಕ್ರಮಗಳಿಗೆ ತರಬೇತಿದಾರರಾಗಿ, ಕಾರ್ಯಕ್ರಮ ನಿರೂಪಕರಾಗಿ ನಟರಾಗಿ, ನಿರ್ದೇಶಕರಾಗಿ, ಇದಕ್ಕಿಂತಲೂ ಮಿಗಿಲಾಗಿ ಸಾಂಸ್ಕøತಿಕ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ತೋರಿ ಸಾಮಾಜಿಕ, ಸಾಹಿತ್ಯ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆಯ ಖನಿ ಶ್ರೀ ನರೇಂದ್ರ ಕುಮಾರ್ ಕೋಟ ಇವರ ಸಮಗ್ರ ಸಾಧನೆಯನ್ನು ಗುರುತಿಸಿ ಯುವವಾಹಿನಿಯ 27ನೇ ವಾರ್ಷಿಕ ಸಮಾವೇಶದಲ್ಲಿ 2014ನೇ ಸಾಲಿನ ಯುವವಾಹಿನಿ ‘ಯುವ ಸಾಧನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲು ಸಂತೋಷ ಪಡುತ್ತಿದ್ದೇವೆ.