ಇವರ ವ್ಯಕ್ತತ್ವವೇ ವಿಶೇಷ, ತಾನೇನು?, ತನ್ನ ಪ್ರತಿಭೆ ಎಂತಹುದು ಎನ್ನುವ ಯಾವ ಸುಳಿವನ್ನೂ ನೀಡದೆ, ರಾಜ್ಯ ಮತ್ತು ರಾಷ್ಟ್ರ ಮನ್ನಣೆಯೊಂದಿಗೆ ಬೆಳ್ಳಿ ಪದಕವನ್ನು ತನ್ನ ನಿಷ್ಕಾಮ ಸೇವೆಯ ಗೃಹರಕ್ಷಕ ದಳದ ಪ್ರಥಮ ಚಿಕಿತ್ಸೆ ತರಬೇತಿಗಾಗಿ ಪಡೆದವರು. ಅಲ್ಲದೆ ತನ್ನ ನಾಯಕತ್ವದ ತಂಡವು ಇಲಾಖೆಯ ವಿವಿಧ ಚಟುವಟಿಕೆಗಳ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಕಂಚಿನ ಪದಕವನ್ನು ಪಡೆದಿರುತ್ತದೆ. ಯುವವಾಹಿನಿಯ ಜೊತೆಗೆ ಹದಿನೈದಕ್ಕೂ ಅಧಿಕ ವರುಷದ ಸೇವೆಯನ್ನು ಯಾವುದೇ ಕುಂದು ಇರದ ರೀತಿಯಲ್ಲಿ ನೀಡುತ್ತಾ ಬಂದರೂ, ತಾನು ಪಡೆದ ಪುರಸ್ಕಾರಗಳ ಬಗ್ಗೆ ಪ್ರಚಾರವನ್ನೇ ನೀಡದೆ, ಪುರಸ್ಕಾರಗಳು ಹೆಗಲ ಮೇಲೆ ಬೀಳುವ ಜವಬ್ದಾರಿ ಎನ್ನುವ ರೀತಿಯಲ್ಲಿ ಕೆಲಸ ಮಾಡಿಕೊಂಡು ಬಂದಿರುವ ಸಾಧಕಿ ಕು| ಲೀಲಾ ಎಸ್. ಕುಕ್ಯಾನ್ ಅವರು. ಸಣ್ಣ ಬಹುಮಾನ ಪಡೆದರೂ ಅಬ್ಬರದ ಪ್ರಚಾರ ಪಡೆಯುವ ಜನರ ನಡುವೆ ರಾಜ್ಯ ಮಟ್ಟದ ಪುರಸ್ಕಾರ ದೊರೆತರೂ ಹೇಳಿಕೊಳ್ಳದೆ ಬರೇ ನಗುವಿನ ಮೂಲಕವೇ ಸಂತೃಪ್ತಿ ಸೂಸುವ ಲೀಲಾ ಎಸ್. ಕುಕ್ಯಾನ್ ಯುವವಾಹಿನಿಯ ಆಸ್ತಿ ಎಂದರೂ ತಪ್ಪಾಗಲಾರದು. ಗೌರವಾನ್ವಿತ ಸೇವಾ ಸಂಸ್ಥೆ ಗೃಹ ರಕ್ಷಕ ದಳದಲ್ಲಿ ಎರಡು ದಶಕದಿಂದ ಸೇವೆ ಸಲ್ಲಿಸಿ, ಸಂಚಾರ ನಿಯಂತ್ರಣ, ಕಾನೂನು ಸುವ್ಯವಸ್ಥೆ ಮತ್ತು ಪ್ರಥಮ ಚಿಕಿತ್ಸಾ ವಿಭಾಗದಲ್ಲಿ ತರಬೇತಿ ಪಡೆದು, ಕಾರ್ಯನಿರ್ವಹಿಸುತ್ತಾ ಇಲಾಖೆಯಿಂದ ಪ್ರಶಂಸೆಯನ್ನೂ ಪಡೆದಿದ್ದಾರೆ. ತನ್ನ ಸ್ವಂತ ಕೆಲಸದ ನಡುವೆ ಗೃಹ ರಕ್ಷಕ ಬಳಗದಿಂದ ಕರೆ ಬಂದಾಗ ತನ್ನ ಎಲ್ಲಾ ಕೆಲಸವನ್ನೂ ಬದಿಗೊತ್ತಿ ಬರುವ ಲೀಲಾ ಎಸ್.ಕುಕ್ಯಾನ್ ಮಳೆ, ಗಾಳಿ, ಬಿಸಿಲು ಎನ್ನದೆ ರಸ್ತೆ ಬದಿ ನಿಂತು ಸಂಚಾರ ಸುಗಮ ಕೆಲಸವನ್ನು ಯಾವುದೇ ನೋವಿಲ್ಲದೆ ನಡೆಸಿದ್ದಾರೆ. ಮೆರವಣಿಗೆ, ಜಾತ್ರೆ, ಹಬ್ಬಗಳ ಸಮಯದಲ್ಲೂ ತನ್ನೆಲ್ಲ ಸಂಭ್ರಮವನ್ನು ಬದಿಗಿರಿಸಿ ಸಾಮಾಜಿಕ ಸೇವೆ ನಡೆಸುತ್ತಿರುವ ಲೀಲಾ ಎಸ್.ಕುಕ್ಯಾನ್ ವಿವಿಧ ಪೊಲೀಸ್ ಠಾಣೆಗಳಲ್ಲೂ ಕೆಲಸ ನಿರ್ವಹಿಸಿದ್ದಾರೆ. ಇದಲ್ಲದೆ ಗೃಹರಕ್ಷಕಿಯಾಗಿ ಮಂಗಳೂರು ಸಬ್ ಜೈಲಿನಲ್ಲಿ ಖೈದಿಗಳ ನಡುವೆಯೂ ಕೆಲಸ ಮಾಡಿರುವ ಇವರು ಖೈದಿಗಳ ನೋವಿಗೂ ಸ್ಪಂದಿಸಿದವರಾಗಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಕಾರ್ಯ (ಐಚಿಜಜeಡಿ ಅheಛಿಞiಟಿg)ವನ್ನು ನಿರ್ವಹಿಸಿರುತ್ತಾರೆ. ತುರ್ತು ಸಂದರ್ಭದಲಿ,್ಲ ಅವಘಡಗಳು ನಡೆದ ವೇಳೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸುವ ಕೆಲಸವನ್ನೂ ನಡೆಸಿದ್ದಾರೆ. ಯುವವಾಹಿನಿಗರ ನಡುವೆ ನೆಚ್ಚಿನ ಸಹೋದರಿಯಾಗಿ, ಸಾಂಸ್ಕøತಿಕ ರಂಗದಲ್ಲಿನ ವಿಶಿಷ್ಟ ಪ್ರತಿಭೆಯಾಗಿ, ಕ್ರೀಡಾ ರಂಗದಲ್ಲೂ ಹೆಸರು ಮಾಡಿರುವ ಲೀಲಾ ಎಸ್.ಕುಕ್ಯಾನ್ ಇವರ ಸಾಧನೆಯನ್ನು ಗುರುತಿಸಿ ಯುವವಾಹಿನಿಯ 27ನೇ ವಾರ್ಷಿಕ ಸಮಾವೇಶದಲ್ಲಿ 2014 ನೇ ಸಾಲಿನ ಯುವವಾಹಿನಿ ‘ಯುವ ಸಾಧನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲು ಯುವವಾಹಿನಿಯು ಸಂತೋಷ ಪಡುತ್ತಿದೆ.