ಶೈಕ್ಷಣಿಕ ಸಾಧಕಿಯಾಗಿ, ಉಪನ್ಯಾಸಕಿಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ ತನ್ನ ಚಾತುರ್ಯವನ್ನು ಮರೆದಿರುವ ಮತ್ತು ಪ್ರಸ್ತುತ ಸಂಶೋಧನಾ ವಿಭಾಗದಲ್ಲಿ PhD(ಡಾಕ್ಟರೇಟ್) ಪದವಿಯನ್ನು ಪಡೆದಿರುವ ಡಾ| ಮಮತಾ ಬಾಲಚಂದ್ರ ಇವರ ಶೈಕ್ಷಣಿಕ ಸಾಧನೆ ಅಪೂರ್ವವಾದುದು. ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಿಸಿ ಮಣಿಪಾಲ್ ಇನ್ಸಿಟ್ಯೂಟ್ ಆಫ್ ಟೆಕ್ನೋಲಜಿ ಸಂಸ್ಥೆಯಲ್ಲಿ ಕಳೆದ ಹದಿನಾಲ್ಕು ವರುಷದಿಂದ ದುಡಿಯುತ್ತಿರುವ ಮಮತಾ ಬಾಲಚಂದ್ರ ಅವರು ಅನುಭವದ ಗನಿ ಎಂದರೂ ತಪ್ಪಾಗಲಾರದು. ಪ್ರಸ್ತುತ ಇಲ್ಲಿ (MIT) ಅಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲ್ಲಿಸುತ್ತಿರುವ ಇವರು ಉಪ್ಪೂರು ನಿವಾಸಿ ಶ್ರೀ ಆನಂದ ಪೂಜಾರಿ ಮತ್ತು ಮೀರಾ ದಂಪತಿಗಳ ಪುತ್ರಿ. ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಉತ್ತಮ ಸಾಧನೆ ತೋರುತ್ತಾ ಬಂದಿರುವ ಮಮತಾ ಅವರು ಎಂದಿಗೂ ಮತ್ತೊಬ್ಬರು ತನ್ನನ್ನು ಹಿಂದಿಕ್ಕಲು ಅವಕಾಶವನ್ನೇ ಮಾಡಿಕೊಟ್ಟಿರಲಿಲ್ಲ. ಹೀಗಾಗಿ ಕಂಪ್ಯೂಟರ್ ವಿಜ್ಞಾನ ಎನ್ನುವ ಕಬ್ಬಿಣದ ಕಡಲೆಕಾಯಿಯಂತಹ ವಿಷಯವನ್ನೇ ಅರಗಿಸಿಕೊಂಡು ಈ ವಿಭಾಗದಲ್ಲಿ ಜಗ ಸೋಜಿಗ ಪಡುವಂತಹ ಸಾಧನೆ ತೋರಿದ್ದಾರೆ.
ಇವರ ಈ ಸಾಧನೆಯನ್ನು ಗುರುತಿಸಿದ ಮಣಿಪಾಲ ವಿದ್ಯಾಸಂಸ್ಥೆ ಪದೊನ್ನತಿಯನ್ನೂ ನೀಡಿದೆ, ಮಾತ್ರವಲ್ಲದೆ ವಿಶ್ವದ ಬೇರೆ ಬೇರೆ ಭಾಗದಲ್ಲಿ ನಡೆದಿರುವ ಕಂಪ್ಯೂಟರ್ ವಿಜ್ಞಾನದ ವಿಚಾರ ಗೋಷ್ಠಿ, ಸೆಮಿನಾರ್‍ಗಳಲ್ಲಿ ಇವರು ಭಾಗವಹಿಸಿ ಪ್ರಬಂಧ ಮಂಡನೆಯನ್ನು ನಡೆಸಿರುತ್ತಾರೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ನಡೆದಿರುವ ಸೆಮಿನಾರ್‍ಗಳಲ್ಲೂ ವಿಚಾರ ಮಂಡನೆ ನಡೆಸಿದ್ದಾರೆ.
ಇವರ ಈ ಸಾಧನೆಯನ್ನು ಗುರುತಿಸಿ ಸಂಶೋಧನಾ ಕ್ಷೇತ್ರದಲ್ಲಿ Phಆ (ಡಾಕ್ಟರೇಟ್) ಪದವಿ ಪಡೆದ ಈ ಸಂದರ್ಭದಲ್ಲಿ ಯುವವಾಹಿನಿಯ 27ನೇ ವಾರ್ಷಿಕ ಸಮಾವೇಶದಲ್ಲಿ ಅವರಿಗೆ ಗೌರವ ಅಭಿನಂದನೆ ಸಲ್ಲಿಸಲು ಯುವವಾಹಿನಿಯು ಸಂತೋಷ ಪಡುತ್ತಿದೆ.