ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಉಪಸಮಿತಿ “ವಿದ್ಯಾನಿಧಿ” ಸಮಿತಿಯು ಮೂಲಧ್ಯೇಯಕ್ಕೆ ಅನುಗುಣವಾಗಿ, ನಮ್ಮ ಸಮಾಜದಲ್ಲಿ ಆರ್ಥಿಕವಾಗಿ ಬಡತನದ ಕಾರಣದಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲಾಗದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಆರ್ಥಿಕ ಸಹಾಯವನ್ನು ನೀಡುವುದರ ಜೊತೆಗೆ ಅವರ ವ್ಯಕ್ತಿತ್ವ ವಿಕಸನ, ಶೈಕ್ಷಣಿಕ ಮಾಹಿತಿಗೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಇದಲ್ಲದೆ ಈ ವಿದ್ಯಾರ್ಥಿಗಳ ಪೋಷಕರಿಗೂ ಉಪಯುಕ್ತವಾದ ಮಾಹಿತಿ ಶಿಬಿರಗಳನ್ನು ನಡೆಸುತ್ತಾ ಬಂದಿದೆ. ಈ ಹಿನ್ನೆಲೆಯೊಂದಿಗೆ ಯುವವಾಹಿನಿ (ರಿ) ವಿದ್ಯಾನಿಧಿ ಉಪಸಮಿತಿಯ 2012-13ನೇ ಸಾಲಿನ ಕಾರ್ಯಕ್ರಮಗಳ ಸಂಕ್ಷಿಪ್ತ ವಿವರ ಈ ಕೆಳಗಿನಂತಿದೆ:
ವಿದ್ಯಾನಿಧಿ ಸಮಿತಿಯು ಈ ಸಾಲಿನಲ್ಲಿ ಸುಮಾರು 72 ವಿದ್ಯಾರ್ಥಿಗಳಿಗೆ ಎರಡು ಲಕ್ಷ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನವನ್ನು ಎರಡು ಹಂತಗಳಲ್ಲಿ ವಿತರಿಸಿದೆ. ಮೊದಲನೆಯ “ವಿದ್ಯಾರ್ಥಿ ವೇತನ ವಿತರಣೆ ಹಾಗೂ ಪ್ರೇರಣಾ ಶಿಬಿರ”ವು ಕಳೆದ ದಿನಾಂಕ 29.07.2012ನೇ ರವಿವಾರದಂದು ಪೂರ್ವಾಹ್ನ ಯುವವಾಹಿನಿಯ ಕೇಂದ್ರ ಕಛೇರಿಯಲ್ಲಿ ಜರಗಿತ್ತು. ಈ ಶಿಬಿರವನ್ನು ಶ್ರೀಯುತ ಕಿರಣ್ ಕುಮಾರ್, ಅಧ್ಯಕ್ಷರು ಉಡುಪಿ ನಗರ ಸಭೆ ಇವರು ಉದ್ಘಾಟಿಸಿದರು. ಶ್ರೀ ಪದ್ಮರಾಜ್, ವಕೀಲರು ಹಾಗೂ ನೋಟರಿ ಮತ್ತು ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ, ಮಂಗಳೂರು ಇದರ ಟ್ರಸ್ಟಿ, ಜೇಸಿ ಸಂಪತ್ ಬಿ. ಸುವರ್ಣ, ಪೂರ್ವ ವಲಯಾಧ್ಯಕ್ಷರು, ವಲಯ ಭಾರತೀಯ ಜೇಸೀಸ್ ಸಂಸ್ಥೆ, ಶ್ರೀ ಅಕ್ಷಯ ಎನ್. ಬಂಗೇರ, ಮಾಲಕರು – ಅಕ್ಷಯ ಡೆವಲಪರ್ಸ್ ಸುರತ್ಕಲ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಕಿಶೋರ್ ಕೆ. ಬಿಜೈಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಭಾರತೀಯ ಜೇಸೀಸ್ ಸಂಸ್ಥೆಯ ರಾಷ್ಟ್ರೀಯ ತರಬೇತುದಾರರಾದ ಜೇಸಿ ಕೆ. ರಾಜೇಂದ್ರ ಭಟ್ ಇವರು ಅಂದು ತರಬೇತುದಾರರಾಗಿ ಭಾಗವಹಿಸಿದ್ದರು.
ಎರಡನೆಯ ಹಂತದ “ವಿದ್ಯಾರ್ಥಿ ವೇತನ ಹಾಗೂ ಪ್ರೇರಣಾ ಶಿಬಿರ ವು ಕಳೆದ ದಿನಾಂಕ 27.01.2013ನೇ ರವಿವಾರದಂದು ಪೂರ್ವಾಹ್ನ ಯುವವಾಹಿನಿಯ ಕೇಂದ್ರ ಸಮಿತಿಯ ಕಛೇರಿಯಲ್ಲಿ ಜರಗಿತು. ಶ್ರೀ ದಯಾನಂದ ಮುಂಬೈ ಇವರು ಅಂದಿನ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಡಾ. ಉಮ್ಮಪ್ಪ ಪೂಜಾರಿ ಪಿ, ಎಸೋಸಿಯೇಟ್ ಪ್ರೊಫೆಸರ್- ಶ್ರೀ ಗೋಕರ್ಣನಾಥ ಕಾಲೇಜು, ಮಂಗಳೂರು, ಶ್ರೀ ಬಿ. ತಮ್ಮಯ್ಯ ಸಲಹೆಗಾರರೂ, ಯುವವಾಹಿನಿ (ರಿ) ಕೇಂದ್ರ ಸಮಿತಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ವಿಜಯ ಕುಮಾರ್ ಕುಬೆವೂರು ಇವರು ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳ ಪ್ರಗತಿಯನ್ನು ಪರಿಶೀಲಿಸುವರೇ “ವಿದ್ಯಾರ್ಥಿಗಳ ಸಂವಹನ” ಕಾರ್ಯಕ್ರಮವನ್ನು ನಡೆಸಿ ಮುಂದೆ ಶ್ರೀಮತಿ ಗುಣವತಿ ರಮೇಶ್, ಶ್ರೀಮತಿ ತಾರಾ ಅಣ್ಣು ಪೂಜಾರಿ ಮತ್ತು ಶ್ರೀ ಟಿ. ಶಂಕರ ಸುವರ್ಣ ಇವರುಗಳಾದ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಉಪಯೋಗವಾಗಬಲ್ಲ ಪ್ರೇರಣಾ ಶಿಬಿರವನ್ನು ನಡೆಸಲಾಯಿತು.
ಕಳೆದ 20 ವರುಷಗಳಿಂದ ವಿತರಿಸಲಾದ ವಿದ್ಯಾರ್ಥಿ ವೇತನದ ವಿವರ ಈ ರೀತಿ ಇದೆ.
ವರ್ಷ ವಿದ್ಯಾರ್ಥಿಗಳು ಮೊತ್ತ (ರೂ.)
1993-2005. 428. 1,88,100-00
2005-2006. 8. 25,000-00
2006-2007. 38. 1,00,000-00
2007-2008. 71. 2,00,000-00
2008-2009. 64. 1,30,000-00
2009-2010. 59. 1,50,000-00
2010-2011. 40. 80,000-00
2011-2012. 48. 1,30,000-00
2012-2013. 72. 2,00,000-00
ಯುವವಾಹಿನಿ ಕೇಂದ್ರ ಸಮಿತಿಯ ವತಿಯಿಂದ ಅಲ್ಲದೆ ನಮ್ಮ ಈ ಧ್ಯೇಯವನ್ನು ಯುವವಾಹಿನಿಯ ಹೆಚ್ಚಿನ ಎಲ್ಲ ಘಟಕಗಳೂ ತಮ್ಮಿಂದಾದಷ್ಟು ಮಟ್ಟಿಗೆ ನಡೆಸುತ್ತಾ ಬಂದಿದೆ. ಅವೆಲ್ಲವೂ ಘಟಕದ ಮುಂದಾಳತ್ವ ದಲ್ಲಿ ಕೇಂದ್ರ ಸಮಿತಿಯ ಮಾರ್ಗದರ್ಶನದಲ್ಲಿ ನಡೆದಿದೆ. ಇದಲ್ಲದೆ ಯುವವಾಹಿನಿಯ ಇತರ ಘಟಕಗಳಿಂದಲೂ ಪುಸ್ತಕ ವಿತರಣೆ, ಪ್ರೇರಣಾಶಿಬಿರ ಹಾಗೂ ಮಾಹಿತಿ ಶಿಬಿರಗಳು ನಡೆದಿವೆ.
ಈ ವರ್ಷದ ವಿದ್ಯಾನಿಧಿ ಸಮಿತಿಯಲ್ಲಿ ಶ್ರೀ ಕಿಶೋರ್ ಕೆ. ಬಿಜೈ ಅಧ್ಯಕ್ಷರಾಗಿ, ಡಾ| ಸದಾನಂದ ಕುಂದರ್ ಸಂಚಾಲಕರಾಗಿ, ಶ್ರೀ ಹರೀಂದ್ರ ಸುವರ್ಣ ಮೂಲ್ಕಿ, ಶ್ರೀ ಗಂಗಾಧರ ಪೂಜಾರಿ ಸುರತ್ಕಲ್, ಶ್ರೀ ಭಾಸ್ಕರ ಸುವರ್ಣ ಉಡುಪಿ ಸದಸ್ಯರಾಗಿ ಶ್ರೀ ಸುಜಿತ್‍ರಾಜ್ ಸುರತ್ಕಲ್ ಆಂತರಿಕ ಲೆಕ್ಕ ಪರಿಶೋಧಕರಾಗಿದ್ದಾರೆ.
ಮುಂದೆಯೂ ಯುವವಾಹಿನಿ (ರಿ) ವಿದ್ಯಾನಿಧಿ ಸಮಿತಿಯು ತನ್ನ ಮೂಲಧ್ಯೇಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಉಪಯೋಗವಾಗಬಲ್ಲ ಕಾರ್ಯಕ್ರಮಗಳನ್ನು ಸಂಯೋಜಿಸುವುದರ ಜೊತೆಗೆ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಇನ್ನೂ ಮುಂದುವರಿಸುವುದೆಂದು ಈ ಮೂಲಕ ತಿಳಿಸಲಿಚ್ಚಿಸು ತ್ತೇವೆ. ಈ ವಿದ್ಯಾನಿಧಿಯಿಂದ ಸಹಾಯ ಪಡೆದು ವಿದ್ಯಾ ರ್ಜನೆ ಮುಗಿಸಿ ಉದ್ಯೋಗ ಪಡೆದುಕೊಂಡ ವಿದ್ಯಾರ್ಥಿ ಗಳಿಂದ “ವಿದ್ಯಾನಿಧಿ”ಯು ಸಾಧ್ಯತೆ ಮಿತಿಯಲ್ಲಿ ಸಹಕಾರ ವನ್ನು ಯಾಚಿಸುತ್ತದೆ. ನಮ್ಮ ಸಮಾಜದ ಕೊಡುಗೈ ದಾನಿಗಳ ಸಹಕಾರವನ್ನು ಮುಂದೆಯೂ ನಿರೀಕ್ಷಿಸುವ,