ಯುವವಾಹಿನಿಯು ಕೇವಲ ಸಾಮಾಜಿಕ ಸಂಘಟನೆಯಲ್ಲ ಪ್ರೀತಿ,ವಿಶ್ವಾಸ, ಮಾನವೀಯತೆಯನ್ನು ಪರಸ್ಪರ ಬೆಸೆಯುವ ಸಂಸ್ಥೆ, ಯುವವಾಹಿನಿಯು ನಾಯಕತ್ವ, ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ
ರೂಪಿಸಿ ಬಿಲ್ಲವ ಸಮಾಜದಲ್ಲಿ ಆದರ್ಶ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅದ್ಯಕ್ಷ ಸಂಪತ್ ಬಿ.ಸುವರ್ಣ ತಿಳಿಸಿದರು
ದಿನಾಂಕ 30.04.2017 ಆದಿತ್ಯವಾರ ಸುಳ್ಯ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಯುವವಾಹಿನಿ (ರಿ) ಸುಳ್ಯ ಘಟಕದ
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಗಿ ಭಾಗವಹಿಸಿ ಮಾತನಾಡಿದರು
ಸುಳ್ಯ ತಾಲೂಕು ಬ್ರಹ್ಮಶ್ರೀ ಗುರುನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷರಾದ ಬಿ.ಶೀನ ಪೂಜಾರಿಯವರು ಯುವವಾಹಿನಿಯ 25ನೇ ಘಟಕ ಯುವವಾಹಿನಿ (ರಿ) ಸುಳ್ಯ ಘಟಕವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.
ತತ್ವ,ನಿಷ್ಠೆ, ಪ್ರೀತಿ,ವಿಶ್ವಾಸ ಇದ್ದಾಗ ಮಾತ್ರ ಸಂಘಟನೆ ಬೆಳೆಯಲು ಸಾಧ್ಯ ಎಂದು ಸಮಾರಂಭದ ಅದ್ಯಕ್ಷತೆ ವಹಿಸಿದ್ದ
ಯುವವಾಹಿನಿ ಕೇಂದ್ರ ಸಮಿತಿಯ ಅದ್ಯಕ್ಷರಾದ ಪದ್ಮನಾಭ ಮರೋಳಿ
ಅಭಿಪ್ರಾಯ ಪಟ್ಟರು.ಮತ್ತು ಪದಪ್ರದಾನ ನೆರವೇರಿಸಿದರು
ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಅಚ್ಚುತ ಪೂಜಾರಿ.ಕೆ, ಸುಳ್ಯ ಬಿಲ್ಲವ ಮಹಿಳಾ ಘಟಕದ ಅದ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸುಳ್ಯ ತಾಲೂಕು ಸಂಘಟನಾ ಕಾರ್ಯದರ್ಶಿ ಮಹೇಶ್ಚಂದ್ರ ಬಿ.ಟಿ. ಸುಳ್ಯ ಯುವವಾಹಿನಿಯ 2017-18 ನೇ ಸಾಲಿನ ಪದಾದಿಕಾರಿಗಳ ಆಯ್ಕೆ ಪ್ರಕಟಿಸಿದರು.
ಶಿವಪ್ರಸಾದ್.ಕೆ.ವಿ. ನೇತ್ರತ್ವದ ತಂಡವು ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸುವ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಗುರು ಹಿರಿಯರ ಸಲಹೆ ಸಹರಾರದೊಂದಿಗೆ ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸುವುದಾಗಿ ನೂತನ ಅದ್ಯಕ್ಷ ಶಿವಪ್ರಸಾದ್ ತಿಳಿಸಿದರು.
ಈ ಸಂದರ್ಭದಲ್ಲಿ ಸುಳ್ಯ ಎಪಿಎಂಸಿ ಗೆ ನಿರ್ದೇಶಕರಾಗಿ ಆಯ್ಕೆಗೊಂಡ ಸುಳ್ಯ ಯುವವಾಹಿನಿಯ ನೂತನ ಉಪಾಧ್ಯಕ್ಷ ನವೀನ್ ಕುಮಾರ್ ಸಾರಕೆರೆ ಇವರನ್ನು ಅಭಿನಂದಿಸಲಾಯಿತು.
ಯುವವಾಹಿನಿ ಪುತ್ತೂರು, ಉಪ್ಪಿನಂಗಡಿ, ಬಂಟ್ವಾಳ, ಕಂಕನಾಡಿ, ಪಣಂಬೂರು,ಕೂಳೂರು, ಮಂಗಳೂರು ಘಟಕಗಳ ಪದಾದಿಕಾರಿಗಳು ಶುಭ ಹಾರೈಕೆ ಮಾಡಿದರು
ಯುವವಾಹಿನಿ ಕೇಂದ್ರ ಸಮಿತಿಯ ಜತೆ ಕಾರ್ಯದರ್ಶಿ ಶಶಿಧರ ಕಿನ್ನಿಮಜಲು ಪ್ರಸ್ತಾವಿತ ಮಾತನಾಡಿದರು .
ಸುಳ್ಯ ತಾಲೂಕು ಬಿಲ್ಲವ ಸಂಘದ ಕಾರ್ಯದರ್ಶಿ ಸೋಮನಾಥ ಪೂಜಾರಿ ಸ್ವಾಗತಿಸಿದರು. ಯುವವಾಹಿನಿಯ ನೂತನ ಕಾರ್ಯದರ್ಶಿ ರವೀಂದ್ರ ಎಚ್ ವಂದಿಸಿದರು
ಚಂದ್ರಶೇಖರ ಎಚ್,ಶಶಿಧರ ಕಿನ್ನಿಮಜಲು ಕಾರ್ಯಕ್ರಮ ನಿರೂಪಿಸಿದರು