ಯುವವಾಹಿನಿ (ರಿ) ಉಡುಪಿ ಘಟಕದ ಇದರ ನೇತೃತ್ವದಲ್ಲಿ ವಿದ್ಯಾನಿಧಿ ವಿತರಣಾ ಕಾರ್ಯಕ್ರಮವನ್ನು ತಾ. 17-7-2016 ರಂದು ಶ್ರೀ ಜಗನ್ನಾಥ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜೇಂದ್ರ ಕುಮಾರ್ ಉಪಾಧ್ಯಕ್ಷರು ತಾಲೂಕು ಪಂಚಾಯತ್ ಉಡುಪಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಯುವವಾಹಿನಿ(ರಿ) ಮಂಗಳೂರು ಕೇಂದ್ರ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಮಾರ್, ಯುವ ಉದ್ಯಮಿಗಳಾದ ಜಗನ್ನಾಥ ಪೂಜಾರಿ ಮತ್ತು ಲ|ಶಾಲಿನಿ ಡಿ.ಬಂಗೇರ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಮಾರು 19 ಮಕ್ಕಳಿಗೆ ರೂ. 65000 ದಷ್ಟು ವಿದ್ಯಾನಿಧಿಯನ್ನು ವಿತರಿಸಲಾಯಿತು. ವಿದ್ಯಾನಿಧಿ ಸಂಚಾಲಕರಾದ ರಘುನಾಥ್ ಮಾಬಿಯನ್ ಮತ್ತು ಮಹಿಳಾ ಸಂಚಾಲಕಿಯಾಗಿರುವ ಸುಜಾತ ಪ್ರವೀಣ್ ಅವರು ವೇದಿಕೆಯಲ್ಲಿ ಉಪತ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣೇಶ್ ಕುಮಾರ್ ಅಧ್ಯಕ್ಷರು ಯುವವಾಹಿನಿ(ರಿ) ಉಡುಪಿ ಘಟಕ ಇವರು ವಹಿಸಿಕೊಂಡಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ರಮೇಶ್ ಉದ್ಯಾವರ ನಡೆಸಿಕೊಟ್ಟರು. ಕಾರ್ಯದರ್ಶಿ ಅಶೋಕ್ ಕೋಟಿಯಾನ್ ಧನ್ಯವಾದ ನೀಡಿದರು.