1992-93 ರ ಸಾಲಿನ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕನಾಥ ಆರ್. ಸನಿಲ್‌ರವರ ಅಧಿಕಾರವಧಿಯಲ್ಲಿ BSRB ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ತರಬೇತಿ ಶಿಬಿರ ಉಚಿತವಾಗಿ ನಡೆಸಲಾಗಿದೆ. ಸಮಾಜದ ಬಂಧುಗಳಿಗೆ ಕನ್ನಡ ಹಾಗೂ ತುಳುವಿನಲ್ಲಿ ಪ್ರಬಂಧ ಮತ್ತು ಆಶುಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಕಳದಲ್ಲಿ ಯುವವಾಹಿನಿಯ ನೂತನ ಘಟಕವನ್ನು ಪ್ರಾರಂಭಿಸಲಾಯಿತು. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುವ ಸಲುವಾಗಿ ವಿದ್ಯಾನಿಧಿಯನ್ನು ಸ್ಥಾಪಿಸಲಾಯಿತು.
ಹಳೆಯಂಗಡಿಯಲ್ಲಿ ಸನಿಲ್ಸ್ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ (ಬಳಿಕ ಸನಿಲ್ಸ್ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಶನ್) ಎಂಬ ಟೈಪ್‌ರೈಟಿಂಗ್ ಇನ್ಸಿಟ್ಯೂಟನ್ನು ನಡೆಸುತ್ತಿದ್ದ ಸನಿಲ್‌ರವರು ಚೇಳ್ಯಾರು ನಿವಾಸಿಯಾಗಿದ್ದರು. ಮಡದಿ ಶ್ರೀಮತಿ ಅನಸೂಯ, ಮಕ್ಕಳಾದ ಅಶ್ವಿತ್ ಮತ್ತು ಅಸ್ಮಿತಾರನ್ನೊಳಗೊಂಡ ಚಿಕ್ಕ ಸಂಸಾರಿಯಾಗಿದ್ದರು. ಕಾಮರ್ಸ್ ಅಸೋಸಿಯೇಶನ್‌ನ ಸಕ್ರಿಯ ಸದಸ್ಯರಾಗಿದ್ದ ಇವರು ಹಳೆಯಂಗಡಿ ಜೂನಿಯರ್ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಯಾಗಿದ್ದು ಹಲವು ವರ್ಷಗಳಷ್ಟು ಸೇವೆ ಸಲ್ಲಿಸಿದ್ದಾರೆ. ಇದೀಗ ಇವರ ಕುಟುಂಬ ಚೇಳ್ಯಾರುನಲ್ಲಿ ವಾಸವಾಗಿದೆ.
ದಿನಾಂಕ 28-2-2011 ರಂದು ಶ್ರೀಯುತರು ದೈವಾಧೀನರಾಗಿರುವರು.