ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ರಜತ ಸಂಭ್ರಮದ ಪ್ರಯುಕ್ತ ದಿನಾಂಕ 19.01.2014ನೇ ಆದಿತ್ಯವಾರ ಬಿ.ಸಿ.ರೋಡಿನ ಪೊಳಲಿ ದ್ವಾರದಿಂದ ಬ್ರಹ್ಮಶ್ರೀ ನಾರಾಯಣಗುರುವರ್ಯರ ತತ್ವ ಸಂದೇಶಗಳನ್ನು ಸಾರುವ ಸಹಸ್ರಾರು ಜನರು ಭಾಗವಹಿಸಿದ ಭವ್ಯ ಮೆರವಣಿಗೆಯು ಬಿ.ಸಿ.ರೋಡಿನ ಗಾಣದಪಡ್ಪು ನಾರಾಯಣಗುರು ನಗರಕ್ಕೆ ಆಗಮಿಸಿತು.
ಯುವವಾಹಿನಿಯ 18 ಘಟಕಗಳು, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ, ಹಾಗೂ ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳ ಬಿಲ್ಲವ ಸಂಘಟನೆಗಳಿಂದ ಆಗಮಿಸಿದ ಗುರುಸಂದೇಶ ಯಾತ್ರೆಯು ಬಿ.ಸಿ.ರೋಡಿನ ಪೊಳಲಿ ದ್ವಾರದಲ್ಲಿ ಒಟ್ಟು ಸೇರಿದವು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ.ಸೇಸಪ್ಪ ಕೋಟ್ಯಾನ್ ಗುರು ಸಂದೇಶ ಯಾತ್ರೆಯನ್ನು ಉದ್ಘಾಟಿಸಿದರು.
ನೃತ್ಯ, ಭಜನೆ, ಚೆಂಡೆ ವಾದನದ ವೈವಿಧ್ಯ, ಕಲ್ಲಡ್ಕ ಶಿಲ್ಪಾ ಬೊಂಬೆ ಬಳಗದ ಬಣ್ಣದ ವೇಷಗಳು, ರಂಗಿನ ಕೊಡೆಗಳು, ಗುರುಸಂದೇಶ ಸಾರುವ ವೈವಿಧ್ಯಮಯ ಟ್ಯಾಬ್ಲೋಗಳು, ಹಳದಿ ಧ್ವಜಗಳು ಗುರುಸಂದೇಶ ಯಾತ್ರೆಯ ಆಕರ್ಷಣೆಯ ಕೇಂದ್ರವಾಯಿತು.
ಯುವವಾಹಿನಿ ಬಂಟ್ವಾಳ ಘಟಕದ ಅದ್ಯಕ್ಷರಾದ ಭುವನೇಶ್ ಪಚ್ಚಿನಡ್ಕ, ಗುರುಸಂದೇಶ ಯಾತ್ರೆಯ ಸಂಚಾಲಕರಾದ ಟಿ.ಶಂಕರ ಸುವರ್ಣ, ರಜತ ಸಂಭ್ರಮದ ಸಂಚಾಲಕರಾದ ಜಿತೇಂದ್ರ ಜೆ.ಸುವರ್ಣ, ಪ್ರಕಾಶ್ ಅಂಚನ್, ಯುವವಾಹಿನಿ ಉಪಾಧ್ಯಕ್ಷ ರಾಜೇಶ್ ಸುವರ್ಣ, ಕಾರ್ಯದರ್ಶಿ ನಾಗೇಶ್ ಪೂಜಾರಿ ಏಲಬೆ, ಕೋಶಾಧಿಕಾರಿ ಗಣೇಶ್ ಪೂಂಜರೆಕೋಡಿ, ಜತೆಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್, ಹಾಗೂ ಬಂಟ್ವಾಳ ಯುವವಾಹಿನಿಯ ಮಾಜಿ ಅದ್ಯಕ್ಷರುಗಳು ಗುರುಸಂದೇಶ ಯಾತ್ರೆಯ ನೇತೃತ್ವ ವಹಿಸಿದ್ದರು.
Good