ಯುವವಾಹಿನಿ ಕೇಂದ್ರ ಸಮಿತಿಯ 2008-09 ನೇ ಸಾಲಿನ ಅಧ್ಯಕ್ಷರಾಗಿರುವ ಇವರು ಪ್ರಸಕ್ತ ಮೂಲ್ಕಿ ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿಯಾಗಿ, ಬಪ್ಪನಾಡು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿದ್ದು ಮೂಲ್ಕಿ ದಿ ಯೂನಿಯನ್ ಕ್ಲಬ್‌ನ ಖಜಾಂಚಿಯಾಗಿ, ಮೂಲ್ಕಿ ಮೂರ್ತೆದಾರರ ಸೇವಾ ಸೊಸೈಟಿಯ ನಿರ್ದೇಶಕರಾಗಿರುತ್ತಾರೆ. ಹಾಗೂ ಮೂಲ್ಕಿ ಯುವವಾಹಿನಿ(ರಿ) ಘಟಕದ ಮಾಜಿ ಅಧ್ಯಕ್ಷರಾಗಿರುತ್ತಾರೆ.
ಮೂಲ್ಕಿ ಚೆನ್ನಪ್ಪ ಸುವರ್ಣ ಮತ್ತು ಲಲಿತ ಸಿ. ಸುವರ್ಣರ ಸುಪುತ್ರನಾಗಿ 2-8-1960 ರಂದು ಜನಿಸಿದರು. ಪತ್ನಿ- ಚಿತ್ರಾ ಸಿ. ಸುವರ್ಣ, ಮಕ್ಕಳು – ಗಗನ್ ಸುವರ್ಣ, ದೀಕ್ಷಾ ಸುವರ್ಣ
ಕಲಾ ಪ್ರದರ್ಶನ:
ಮಂಗಳೂರು ದಸರಕ್ಕೆ 30 ವರುಷಗಳಿಂದ ಶೃಂಗಾರಕರಾಗಿರುತ್ತಾರೆ.
ಕರ್ನಾಟಕ, ಮುಂಬಯಿ, ಅಹಮದಾಬಾದ್, ಕೇರಳ ರಾಜ್ಯಗಳಲ್ಲಿ ನಡೆಯುವ ಮದುವೆ ಸಮಾರಂಭಗಳಿಗೆ ರಂಗ ವಿನ್ಯಾಸ ಮಾಡಿ ಮೆರುಗು ನೀಡಿರುತ್ತಾರೆ. ಯಕ್ಷಗಾನ ಮತ್ತು ನಾಟಕಗಳಿಗೆ ರಂಗ ವ್ಯವಸ್ಥೆ, ವರ್ಣ ಅಲಂಕಾರ, ವಸ್ತ್ರ ಅಲಂಕಾರ, ಕೇಶ ಅಲಂಕಾರಗಳನ್ನು ನೀಡಿರುತ್ತಾರೆ.
ಸಿನಿಮಾ ರಂಗದಲ್ಲಿ ಕಲಾ ನಿರ್ದೇಶಕನಾಗಿದ್ದು ಇವರ ಕಲಾ ನಿರ್ದೇಶನ ಮತ್ತು ವಸ್ತ್ರ ವಿನ್ಯಾಸ ನೀಡಿರುವ ’ಕೋಟಿ ಚೆನ್ನಯ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿರುತ್ತದೆ. ಹಾಗೂ ’ದೇವು ಪೂಂಜಾ’ ಚಿತ್ರದ ಕಲಾ ನಿರ್ದೇಶಕರಾಗಿರುತ್ತಾರೆ.
ಮೂಲ್ಕಿ ಯುವವಾಹಿನಿಯ ಮೂಲಕ ’ತುಳುನಾಡ ವೈಭವ’ ಎಂಬ ನೃತ್ಯ ರೂಪಕವನ್ನು ರಚಿಸಿ ನಿರ್ದೇಶಿಸಿ ಸುಮಾರು 70 ಜನರ ತಂಡದೊಂದಿಗೆ ಹಲವಾರು ಪ್ರದರ್ಶನಗಳನ್ನು ನೀಡಿರುತ್ತಾರೆ.
2008 ರಲ್ಲಿ ಮುಂಬೈಯಲ್ಲಿ ನಡೆದಿರುವ ’ಬೊಂಬಾಯಿಡ್ ತುಳುನಾಡ್’ ಕಾರ್ಯಕ್ರಮದಲ್ಲಿ ತುಳುನಾಡನ್ನು ನಿರ್ಮಿಸಿ, ತುಳುನಾಡ ವೈಭವ ಕಾರ್ಯಕ್ರಮವನ್ನು ನೀಡಿ ಮುಂಬೈಯಲ್ಲಿಯೂ ಯುವವಾಹಿನಿಯ ಹೆಸರನ್ನು ಮೆರೆಸಿರುತ್ತಾರೆ. ಕರ್ನಾಟಕದಾದ್ಯಂತ ಮತ್ತು ಹೊರ ರಾಜ್ಯ ಹೊರ ದೇಶದಲ್ಲಿ ತುಳನಾಡ ವೈಭವ ಕಾರ್ಯಕ್ರಮವನ್ನು ನೀಡಿ ಜನಮೆಚ್ಚುಗೆ ಪಡೆದಿರುತ್ತಾರೆ.
ಕಾಡ ಗಿಳಿ, ಸಂಶಯದ ಸುಳಿ, ನಾಡ್‌ರ್ದ್ ಕಾಡುಗ್ ಎಂಬ ನಾಟಕಗಳ ರಚನೆ ಮಾಡಿರುತ್ತಾರೆ. ರಂಗ ಕಲಾವಿದನಾಗಿ ಹಾಗೂ ನಾಟಕದ ನಿರ್ದೇಶಕನೂ ಆಗಿರುತ್ತಾರೆ.
ಈಗ ಎಲ್ಲಾ ಸಂಘ ಸಂಸ್ಥೆಗಳಿಂದ ಆಚರಿಸಲ್ಪಡುವ ’ಆಟಿದ ಒಂಜಿ ದಿನ’ ಮತ್ತು ’ತುಳುವೆರೆ ತುಡರ್ ಪರ್ಬ’ವನ್ನು ಪ್ರಪ್ರಥಮವಾಗಿ ಆಚರಣೆಗೆ ತಂದ ಕೀರ್ತಿ ಸುವರ್ಣರದ್ದು.
ಪ್ರಮುಖ ಪ್ರಶಸ್ತಿ ಹಾಗೂ ಸನ್ಮಾನಗಳು:
1998 ರಂದು ಯಕ್ಷ ಕೌಮುದಿ, ಉಡುಪಿ ಮತ್ತು ಅಭಿನಯ ಸಾಂಸ್ಕೃತಿಕ ಕೇಂದ್ರ, ಮೂಲ್ಕಿ
2000 ಲ್ಲಿ ಯಕ್ಷ ಕಲಾ ಪ್ರೇಮಿಲು, ಮೂಲ್ಕಿ
2001 ರಲ್ಲಿ ರಂಗ ಸುದರ್ಶನ, ಸಾಹಿತ್ಯಿಕ, ಸಾಂಸ್ಕೃತಿಕ ಕಲಾ ವೇದಿಕೆ, ಸಸಿಹಿತ್ಲು- ಇವರಿಂದ
2002 ರಲ್ಲಿ ಕನ್ನಡ ಸಾಹಿತ್ಯ ಪರಿಷತ್, ದ.ಕ.ಜಿಲ್ಲೆ, ಮಂಗಳೂರು ಇವರಿಂದ,
9 ನೇ ಸಾಹಿತ್ಯ ಸಮ್ಮೇಳನದಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಇವರಿಂದ
2003 ರಲ್ಲಿ ರಾಜ್ಯದ ಪ್ರಪ್ರಥಮ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನದಂದು ಶ್ರೀ ಪಾಟೀಲ್ ಪುಟ್ಟಪ್ಪನವರಿಂದ
2004 ರಲ್ಲಿ ಗಣೇಶೋತ್ಸವ ಸಂದರ್ಭ ಉಡುಪಿಯಲ್ಲಿ, ಉಡುಪಿ ಮಠಾಧೀಶರಿಂದ.
ದಿ. ತಾಳಿಪಾಡಿ ದಾಮೋದರ ಶೆಟ್ಟಿಗಾರ್ ಇವರ ಐದನೇ ವರುಷದ ಸಂಸ್ಮರನ ಕಾರ್ಯಕ್ರಮದಂದು,
ಮಾನ್ಯ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಅವರಿಂದ ಕುದ್ರೋಳಿ ದಸರಾ ಸಂದರ್ಭದಲ್ಲಿ ಚಿನ್ನದ ಪದಕ,
ಭಾರತೀಯ ಜೇಸೀ ಸಪ್ತಾಹದ ಸಂದರ್ಭ,
ಕರ್ನಾಟಕ ರಾಜ್ಯೋತ್ಸವದಂದು ’ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’,
ವಿಜಯ ಕಲಾವಿದರು ಕಿನ್ನಿಗೋಳಿ ಇವರಿಂದ,
ಯುವವಾಹಿನಿ(ರಿ) ಸುರತ್ಕಲ್ ಘಟಕದವರಿಂದ
2005ರಲ್ಲಿ ’ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’,
ಪಾವಂಜೆ ಅಗೋಲಿ ಮಂಜಣ್ಣ ಜಾನಪದ ಕೇಂದ್ರದವರಿಂದ
2006ರಲ್ಲಿ ಬೆಂಗಳೂರು ಬಿಲ್ಲವರ ಅಸೋಸಿಯೇಶನ್ ಅವರಿಂದ ಬೆಂಗಳೂರಿನಲ್ಲಿ ಸನ್ಮಾನ
2007ರಲ್ಲಿ ಮಂಗಳೂರಿನಲ್ಲಿ ಕರ್ನಾಟಕದ ರಾಜ್ಯಪಾಲ ರಾಮೇಶ್ವರ ಠಾಕೂರು ಅವರಿಂದ
2008ರಲ್ಲಿ ಕಲಾ ಜಗತ್ತು ಬೊಂಬಾಯಿ ಅವರಿಂದ ’ತುಳುನಾಡು ಪ್ರಶಸ್ತಿ’,
ಬಹೆರಿನ್ ಬಿಲ್ಲವಾಸ್ ಇವರಿಂದ ಬಹೆರಿನ್‌ನಲ್ಲಿ ಸನ್ಮಾನ
ಬಹೆರಿನ್ ಕನ್ನಡ ಸಂಘದಿಂದ ಬಹೆರಿನ್‌ನಲ್ಲಿ ಸನ್ಮಾನ
ವಿಳಾಸ: ಸುವರ್ಣ ಆರ್ಟ್ಸ್
ವಿಜಯ ಕಾಲೇಜು ರಸ್ತೆ, ಮುಲ್ಕಿ
ಮೊಬೈಲ್: 9845083479