2005-06 ಯುವವಾಹಿನಿಯ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ವರ್ಷ. ಯುವವಾಹಿನಿ ಬಹುದಿನಗಳಿಂದ ಕಂಡ ಕನಸು ನನಸಾದ ಸಮಯ. ಬ್ರಹ್ಮಶ್ರೀ ನಾರಾಯಣ ಗುರುಗಳ 150 ನೇ ಜಯಂತಿಯ ವರ್ಷಾ ಚಾರಣೆಯ ಸಂಭ್ರಮದಲ್ಲಿ ಅವರ ಬದುಕನ್ನು ಸಾಕ್ಷ್ಯ ಚಿತ್ರದ ಮೂಲಕ ಸಮಾಜಕ್ಕರ್ಪಿಸಿದ ವರ್ಷ. ದಿನಾಂಕ 4-9-2005 ರಂದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರನ ದಿವ್ಯ ಸನ್ನಿಧಿಯಲ್ಲಿ, ಅಧ್ಯಕ್ಷ ಕೊರಗಪ್ಪ ಸಭಾಭವನದಲ್ಲಿ ಕನ್ನಡ ಚಲನ ಚಿತ್ರರಂಗದ ದಿಗ್ಗಜ ಶ್ರೀ ಗಿರೀಶ್ ಕಾಸರವಳ್ಳಿಯವರ ಅಮೃತ ಹಸ್ತದಲ್ಲಿ, ಶ್ರೀ ಜಯ ಸಿ.ಸುವರ್ಣರವರ ಅಧ್ಯಕ್ಷತೆಯಲ್ಲಿ ಖ್ಯಾತ ನಿರ್ದೇಶಕರಾದ ಶ್ರೀ ಸದಾನಂದ ಸುವರ್ಣರವರ ಉಪಸ್ಥಿತಿ ಯಲ್ಲಿ ಈ ಸಾಕ್ಷ್ಯಚಿತ್ರದ ಸಿ.ಡಿ.ಯನ್ನು ಬಿಡುಗಡೆಗೊಳಿಸಲಾಯಿತು.
ಯುವವಾಹಿನಿಯ ವತಿಯಿಂದ ನೀಡುವ ವಿದ್ಯಾರ್ಥಿ ವೇತನ ನಮ್ಮ ಸಮಾಜದ ಅರ್ಹ ಬಡ ವಿದ್ಯಾರ್ಥಿಗಳಿಗೆ ಸಿಗಬೇಕು ಹಾಗೂ ಆ ವಿದ್ಯಾರ್ಥಿಗಳ ಸಂಪೂರ್ಣ ಖರ್ಚನ್ನು ವಿದ್ಯಾದಾನಿಗಳ ನೆರವಿನಿಂದ ಯುವವಾಹಿನಿ ಭರಿಸುವುದೆಂದು ತೀರ್ಮಾನಿಸಿ ವಿದ್ಯಾನಿಧಿ ಸಮಿತಿಯೊಂದನ್ನು ರಚಿಸಲಾಗಿದೆ.
ಯುವವಾಹಿನಿಯ ಕಾರ್ಯಕ್ರಮಗಳನ್ನು ಸಮಾಜದ ಜನರಿಗೆ ತಿಳಿಸುವುದಕ್ಕೋಸ್ಕರ ಸಂಪೂರ್ಣ ವಿವರಗಳನ್ನು ಒಳಗೊಂಡ ಒಂದು ಮಾಹಿತಿ ಕೇಂದ್ರ(Web Site)ವನ್ನು ಬಿಡುಗಡೆ ಗೊಳಿಸಲಾಯಿತು.
ಕೇಂದ್ರ ಸಮಿತಿಯ ಸದಸ್ಯರುಗಳು ಹಾಗೂ ಕುಟುಂಬಿಕರಿಗೆ ಉಡುಪಿ ಘಟಕದ ಸಹಯೋಗದೊಂದಿಗೆ ಸೈಂಟ್ ಮೇರಿಸ್‌ಗೆ ನಡೆಸಿದ ಪ್ರವಾಸ ಯಶಸ್ವಿಯಾಗಿ ಮೂಡಿ ಬಂದಿದೆ.
ಮುಲ್ಕಿ ಘಟಕದ ವತಿಯಿಂದ ಯುವ ವೈಭವ 2005, ಉಡುಪಿ ಘಟಕ ವತಿಯಿಂದ ಯುವವಾಹಿನಿ ಟ್ರೋಫಿ 2005 ಕಬಡ್ಡಿ ಕ್ರೀಡಾ ಕೂಟ, ಅವಿಭಜಿತ ದ.ಕ.ಜಿಲ್ಲಾ ಮಟ್ಟದ ಪ್ರಾಥಮಿಕ, ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಮಂಗಳೂರು ಘಟಕವು ಕೇಂದ್ರ ಸಮಿತಿಯ ಸಹಯೋಗದೊಂದಿಗೆ ನಡೆಸಿತ್ತು.
ಯಚ್. ಭುಜಂಗ ಮತ್ತು ಯಚ್.ಬಿ.ರಾಜೀವಿರವರ ಸುಪುತ್ರ, ಪತ್ನಿ-ಸವಿತಾ ತಾರಾನಾಥ, ಮಕ್ಕಳು-ಸ್ಪರ್ಶ ತಾರಾನಾಥ ಮತ್ತು ಸವಿಕ್ಷಾ ತಾರಾನಾಥ ಸಿತಾರಾ ಕನ್‌ಸ್ಟ್ರಕ್ಷನ್‌ನ ಮಾಲಕರಾಗಿರುವ ಇವರು ಸಿವಿಲ್ ಇಂಜಿನಿಯರ್. SCDCC Bank Ltd, ಶ್ರೀ ಗೋಕರ್ಣನಾಥ ಕೋ.ಅಪರೇಟಿವ್ ಬ್ಯಾಂಕ್ ಮತ್ತು Mahalakshmi co-op Bankನ Panel Valuer, ಸ್ವರ್ಣ ಸೌಹಾರ್ದ ಕೋ ಅಪರೇಟಿವ್ (ರಿ) ಇದರ ನಿರ್ದೇಶಕರು ಹಾಗೂ ಯುವವಾಹಿನಿ(ರಿ) ಹೆಜಮಾಡಿ ಘಟಕದ ಸದಸ್ಯ, ಅಧ್ಯಕ್ಷರಾಗಿ, ಕೇಂದ್ರ ಸಮಿತಿಯ ವಿವಿಧ ಹುದ್ದೆಗಳನ್ನು ನಿಭಾಯಿಸಿ 2005-06 ರ ಸಾಲಿನ ಅಧ್ಯಕ್ಷ ಪ್ರಸ್ತುತ ವಿದ್ಯಾನಿಧಿ ಸಮಿತಿಯ ಕಾರ್ಯದರ್ಶಿ.
ವಿಳಾಸ : ಸಿತಾರಾ ಕನ್‌ಸ್ಟ್ರಕ್ಷನ್, ಕೋಟೆ ಕಾಂಪ್ಲೆಕ್ಸ್, ಹೆಜಮಾಡಿ, ಉಡುಪಿ ಜಿಲ್ಲೆ – 574 103
ಮೊಬೈಲ್: 9845010239