2003-04 ನೇ ಸಾಲಿನಲ್ಲಿ ಯುವವಾಹಿನಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು 4-5-2003 ರಂದು ಜರಗಿದ ಜಂಟಿ ಸಭೆಯಲ್ಲಿ ಶ್ರೀ ಲಕ್ಷ್ಮಣ ಸಾಲಿಯಾನ್ ವಹಿಸಿಕೊಂಡರು.
ವಿದ್ಯೆ: 2003-04ರ ಸಾಲಿನಲ್ಲಿ ಘಟಕಗಳಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುವ ಆಶಯದಲ್ಲಿ ಕೇಂದ್ರ ಸಮಿತಿಯು ಹೆಚ್ಚಿನ ಕಾರ್‍ಯಕ್ರಮಗಳನ್ನು ಈ ವರ್ಷ ಹಮ್ಮಿಕೊಳ್ಳಲಿಲ್ಲ. ತಾ. 14-12-2003 ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ 55 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯಧನವನ್ನು ವಿತರಿಸಲಾಯಿತು. ಉಪ್ಪಿನಂಗಡಿ ಘಟಕದ ವತಿಯಿಂದ ಸುಮಾರು 180 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಸುಮಾರು 60 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಸುರತ್ಕಲ್ ಘಟಕದ ವತಿಯಿಂದ ಸುಮಾರು 66 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಯನ್ನು ನಡೆಲಾಯಿತು. ಅಲ್ಲದೆ, ಸುರತ್ಕಲ್ ಮತ್ತು ಸಸಿಹಿತ್ಲು ಘಟಕಗಳ ನೆರವಿನಿಂದ ವಿದ್ಯಾರ್ಥಿಗಳಿಗೆ ಬೇಸಿಗೆ ರಜಾಶಿಬಿರವನ್ನು ನಡೆಸಲಾಯಿತು. ಮುಲ್ಕಿ ಘಟಕದ ವತಿಯಿಂದ ಪರೀಕ್ಷಾ ಪೂರ್ವ ತರಬೇತಿ ಶಿಬಿರ ನಡೆಸಲಾಗಿದೆ.
ಉದ್ಯೋಗ: ಉದ್ಯೋಗದ ಬಗ್ಗೆ ಮಾಹಿತಿ ಕಾರ್‍ಯಕ್ರಮಗಳನ್ನು ನಡೆಸಲಾಗಿದೆ. ಬಂಟ್ವಾಳ ಘಟಕದ ಆಶ್ರಯದಲ್ಲಿ ಸಿದ್ಧಕಟ್ಟೆ ಮತ್ತು ವಿಟ್ಲದಲ್ಲಿ ಉದ್ಯೋಗ ನೋಂದಣಿ ಮತ್ತು ವೃತ್ತಿ ಮಾರ್ಗದರ್ಶನ ಶಿಬಿರವನ್ನು ನಡೆಸಲಾಗಿದೆ. ಉಡುಪಿ ಘಟಕದ ಆಶ್ರಯದಲ್ಲಿ ಉದ್ಯಾವರ ಬಿಲ್ಲವರ ಮಹಾಜನ ಸಂಘದಲ್ಲಿ ಶ್ರೀಯುತ ಮಧ್ವರಾಜ ಸುವರ್ಣರವರಿಂದ ಉದ್ಯೋಗ ಮಾಹಿತಿ ಮತ್ತು ಸ್ವ ಉದ್ಯೋಗದ ಬಗ್ಗೆ ಪ್ರಾತ್ಯಕ್ಷಿಕ ಶಿಬಿರವನ್ನು ನಡೆಸಲಾಗಿದೆ.
ಸಂಪರ್ಕ : ಸಂಪರ್ಕದ ನೆಲೆಯಲ್ಲಿ ಉಡುಪಿ ಘಟಕದ ವತಿಯಿಂದ ನೂತನ ವಧೂವರರಿಗೆ ಅಭಿನಂದನೆ, ಮಂಗಳೂರು ಘಟಕದ ವತಿಯಿಂದ ನಾಯಕತ್ವ ತರಬೇತಿ ಶಿಬಿರ, ಸ್ವಾತಂತ್ರ್ಯೋತ್ಸವ ಸಂಬಂಧ ವಿಶೇಷ ಕಾರ್ಯಕ್ರಮ, ದಿ| ದೇವರಾಜ ಅರಸು ಸಂಸ್ಮರಣೆ ಕಾರ್‍ಯಕ್ರಮ ನಡೆಲಾಯಿತು. ಮುಲ್ಕಿ ಘಟಕದ ವತಿಯಿಂದ ಜಾನಪದ ನೃತ್ಯ ಸ್ಪರ್ಧೆ ಯುವ ಸೌರಭ ಆಯುರ್ವೇದ ಗಿಡಮೂಲಿಕೆಗಳ ಪ್ರಾತ್ಯಕ್ಷಿಕೆ ಅಲ್ಲದೆ ಈಗ ಬಹು ಜನಪ್ರಿಯವಾಗಿರುವ ಆಟಿಡೊಂಜಿ ದಿನ ಕಾರ್‍ಯಕ್ರಮವನ್ನು ಪ್ರಥಮವಾಗಿ 3-8-2003 ರಲ್ಲಿ ಮುಲ್ಕಿ ಘಟಕವು ನಡೆಸಿರುತ್ತದೆ. ಅಲ್ಲದೆ ತುಳುನಾಡ ತುಡಾರ್ ಪರ್ಬಯನ್ನು ನಡೆಸಿರುತ್ತದೆ. ಸುರತ್ಕಲ್ ಘಟಕದ ವತಿಯಿಂದ ಯುವವಾಹಿನಿಯ ಸದಸ್ಯರಿಗಾಗಿ ಹಮ್ಮಿಕೊಂಡ ಪ್ರತಿಭಾ ಪ್ರದರ್ಶನ ಕಾರ್‍ಯಕ್ರಮ ನವೋಲ್ಲಾಸ 2003 ಅತ್ಯಂತ ಯಶಸ್ವಿಯಾಗಿ ನಡೆದಿರುತ್ತದೆ.
ಪುತ್ತೂರು ಘಟಕದ ವತಿಯಿಂದ ವ್ಯಕ್ತಿತ್ವ ವಿಕಸನ ಮತ್ತು ಮಾನವೀಯ ಸಂಬಂಧಗಳ ಬಗ್ಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಂಟ್ವಾಳ ಘಟಕದ ವತಿಯಿಂದ 4 ಕಡೆಗಳಲ್ಲಿ ಉಚಿತ ವೈದ್ಯಕೀಯ ಮತ್ತು ಕಣ್ಣು ಪರೀಕ್ಷಾ ಶಿಬಿರಗಳನ್ನು ನಡೆಸಲಾಯಿತು.
ಉಪ್ಪಿನಂಗಡಿ ಮತ್ತು ಸುಳ್ಯ ಘಟಕಗಳಲ್ಲಿ ವ್ಯಕ್ತಿತ್ವ ವಿಕಸನ ಶಿಬಿರಗಳು ನಡೆದಿರುತ್ತದೆ. ಹೆಜಮಾಡಿ ಮತ್ತು ಪುತ್ತೂರು ಘಟಕಗಳಲ್ಲಿ ವೈದ್ಯಕೀಯ ಮತ್ತು ರಕ್ತದಾನ ಶಿಬಿರ ನಡೆದಿರುತ್ತದೆ.
ಪುತ್ತೂರು, ಬಂಟ್ವಾಳ ಮತ್ತು ಸುಳ್ಯ ಘಟಕಗಳಲ್ಲಿ ಕ್ರೀಡಾಕೂಟವು ಜರಗಿರುತ್ತದೆ. 28-9-2003 ರಂದು ವಿಶುಕುಮಾರ್ ದತ್ತಿನಿಧಿಯನ್ನು ಸ್ಥಾಪಿಸಲಾಯಿತು. 13-12-2003 ರಂದು ಪಲಿಮಾರಿನಲ್ಲಿ ಯುವವಾಹಿನಿ ಘಟಕವನ್ನು ಸ್ಥಾಪಿಸಲಾಗಿದೆ. ಬೈಕಂಪಾಡಿಯ ಆಶಾ ಪೂಜಾರ್‍ತಿಯವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ರೂ. 11,776/-ನ್ನು ನೀಡಿ ಸಹಕರಿಸಲಾಗಿದೆ. ಅಲ್ಲದೆ ಪಣಂಬೂರು, ಸಸಿಹಿತ್ಲು, ಹಳೆಯಂಗಡಿ, ಕಟಪಾಡಿ ಘಟಕಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು.
ದಿ.ಬಾಬು ಬಂಗೇರ ಮತ್ತು ನಾಗಮ್ಮ ದಂಪತಿಗಳ ಮಗನಾಗಿ 13-11-1951 ರಲ್ಲಿ ಸುರತ್ಕಲ್ ಇಡ್ಡ್ಯಾದಲ್ಲಿ ಜನನ. ಬಿ.ಕಾಮ್ ಪದವೀಧರರಾಗಿ ಯಕ್ಷಗಾನ ಬಯಲಾಟ, ನಾಟಕಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿಕೆ. ಬಿಲ್ಲವ ಸಮಾಜ ಸೇವಾ ಸಂಘ (ರಿ) ಇಡ್ಡ್ಯಾ, ಸುರತ್ಕಲ್ ಕಾರ್ಯದರ್ಶಿಯಾಗಿ, ಅಧ್ಯಕ್ಷನಾಗಿ ಐದು ವರುಷ ಸೇವೆ. ಈಗ ಅಮೃತಮಹೋತ್ಸವ ಸಮಿತಿಯಲ್ಲಿ ಗೌರವಾಧ್ಯಕ್ಷ.
ಬಿಲ್ಲವರ ಮಹಾ ಮಂಡಲ ಮುಲ್ಕಿ, ಸಾರ್ವಜನಿಕ ಶಾರದೋ ತ್ಸವ ಸಮಿತಿ ಸುರತ್ಕಲ್ ಸದಸ್ಯನಾಗಿ, ಇಡ್ಡ್ಯಾ ಮಹಾಲಿಂಗೇಶ್ವರ ಎಜುಕೇಶನ್ ಟ್ರಸ್ಟ್ ಇದರ ಪ್ರಸ್ತುತ ಕಾರ್ಯಕಾರಿ ಸಮಿತಿ ಸದಸ್ಯ, ಯುವವಾಹಿನಿ (ರಿ) ಸುರತ್ಕಲ್ ಘಟಕದ, ಯುವವಾಹಿನಿ (ರಿ) ಕೇಂದ್ರ ಸಮಿತಿಯ ನಾರಾಯಣ ಗುರು ತತ್ವಾದರ್ಶ ಪ್ರಚಾರ ನಿರ್ದೇಶಕನಾಗಿ, 03-04 ರ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ ಅನುಭವ. ಪತ್ನಿ ಪ್ರೇಮ ಸಾಲ್ಯಾನ್, ಮಕ್ಕಳು – ಅವಿನಾಶ್ ಮತ್ತು ಅರ್ಚನ. ಮಂಗಳೂರಿನ ಸೋನಾರ್ ಇಂಪೆಕ್ಸ್, ಗ್ರಾನೈಟ್ ಕಲ್ಲು ರಪ್ತು ಸಂಸ್ಥೆಯಲ್ಲಿ ಲೆಕ್ಕಾಧಿಕಾರಿಯಾಗಿ ಉದ್ಯೋಗ.
ವಿಳಾಸ : ಇಡ್ಯಾ ಬಿಲ್ಲವ ಸಮಾಜ ಸೇವಾ ಸಂಘದ ಬಳಿ, ಇಡ್ಯಾ, ಸುರತ್ಕಲ್ -575 014. ಮೊಬೈಲ್: 9945912023