ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು, ಮುಡಾರು ಗ್ರಾಮದಲ್ಲಿ 08-05-1961 ರಂದು ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಜೆಗೋಳಿ, ಪ್ರೌಢ ಶಿಕ್ಷಣವನ್ನು ಸರಕಾರಿ ಜೂನಿಯರ್ ಕಾಲೇಜು, ಕಾರ್ಕಳ, ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಕಾಲೇಜು ಮಂಗಳೂರು ಹಾಗೂ ಡಿಪ್ಲೋಮ ಇನ್ ಕೆಮಿಕಲ್ ಇಂಜಿನೀಯರಿಂಗ್ ಶಿಕ್ಷಣವನ್ನು ಸರಕಾರಿ ಪಾಲಿಟೆಕ್ನಿಕ್, ಮಂಗಳೂರು ಇಲ್ಲಿ ಪ್ರಥಮ ಶ್ರೇಣಿಯಲ್ಲಿ ಪಡೆದರು.
1983 ರಲ್ಲಿ ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆಯಲ್ಲಿ ಉದ್ಯೋಗವನ್ನು ಪಡೆದು, ಇಲ್ಲಿ ಪ್ರಸಕ್ತ ಉತ್ಪಾದನಾ ವಿಭಾಗದಲ್ಲಿ ಶಿಪ್ಟ್ ಇಂಜಿನೀಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1987 ರಲ್ಲಿ ಸ್ಥಾಪಿತವಾದ ಯುವವಾಹಿನಿಯ ಸ್ಥಾಪಕ ಸದಸ್ಯನಾಗಿದ್ದು 1992 ರಲ್ಲಿ ಮಂಗಳೂರು ಘಟಕದ ಅಧ್ಯಕ್ಷರಾಗಿ, 1998 ರಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾಗಿ, 1998-99 ಹಾಗೂ 1999-2000 ಈ ಎರಡು ವರ್ಷಗಳಲ್ಲಿ ’ಸಿಂಚನ’ ಮಾಸ ಪತ್ರಿಕೆಯ ಸಂಪಾದಕರಾಗಿ, 2000-2001 ನೇ ಸಾಲಿನಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ, 2010-2012 ನೇ ಸಾಲಿನಲ್ಲಿ “ವಿಶುಕುಮಾರ್ ದತ್ತಿನಿಧಿ”ಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತ, “ಸಿಂಚನ” ಮಾಸಿಕ ಮತ್ತು ವಿಶೇಷಾಂಕಗಳಿಗೆ ನಿರಂತರ ದುಡಿಯುತ್ತಾ, ಸಾಹಿತ್ಯಾಭಿಮಾನಿಯಾಗಿ, ಸಾಹಿತ್ಯ ಪೋಷಕರಾಗಿ ಸ್ಥಳೀಯ ಸಾಹಿತಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ತಮ್ಮ ನೆರವನ್ನು ನೀಡಿರುತ್ತಾರೆ. ಸಾಹಿತ್ಯ ರಚನೆ ಹಾಗೂ ಓದುವಿಕೆಯ ಹವ್ಯಾಸದೊಂದಿಗೆ, ನಾಟಕದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿರುವುದು ಇವರ ಪ್ರೌಢಿಮೆಗೆ ಒಂದು ಉದಾಹರಣೆ.
ಮಡದಿ ಶ್ರೀಮತಿ ಶಾಂತ ಎಸ್. ಪೂಜಾರಿ ಹಾಗೂ ತನ್ನ ಇಬ್ಬರು ಮಕ್ಕಳಾದ ಸುಸ್ಮಿತಾ ಹಾಗೂ ಸಂಹಿತಾ (ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು)ರನ್ನೊಳಗೊಂಡ ಸಂತೃಪ್ತ ಕುಟುಂಬ ಇವರದ್ದು.
ಕೇಂದ್ರ ಸಮಿತಿಯ ಅಧ್ಯಕ್ಷರಾಗಿದ್ದಾಗ ಆಧ್ಯಾತ್ಮಿಕತೆಯ ಒಂದು ಅಂಗವಾದ ವೈದಿಕ ವಿಧಿ ವಿಧಾನಗಳ ಅನುಷ್ಠಾನದಲ್ಲಿ ನಿರತರಾದ ಬಿಲ್ಲವ ಸಮಾಜದ ಶಾಂತಿಗಳನ್ನು ಸಂಪರ್ಕಿಸಿ, ಸಮಾವೇಶ ಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬ್ರಹ್ಮಶ್ರೀ ನಾರಾಯಣ ಗುರುವರ್ಯರ 146 ನೇ ಜಯಂತಿಯ ಅಂಗವಾಗಿ ದಿನಾಂಕ 13-08-2000 ನೇ ಆದಿತ್ಯವಾರ ಯುವವಾಹಿನಿ ಕೇಂದ್ರ ಸಮಿತಿಯ ಸುರತ್ಕಲ್ ಘಟಕದ ಸಹಯೋಗದೊಂದಿಗೆ ಮುಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ರುಕ್ಕರಾಮ ಸಾಲ್ಯಾನ್ ಸಭಾಗ್ರಹದಲ್ಲಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಬಿಲ್ಲವ ಸಮಾಜದಲ್ಲಿ ಒಂದು ರೀತಿಯಲ್ಲಿ ಸಂಚಲನ ಮೂಡಿಸಿದ ’ಶಾಂತಿಗಳ ಸಮಾವೇಶ’ ಅತ್ಯಂತ ಯಶಸ್ವಿಯಾಗಿತ್ತು.
2000 ರಲ್ಲಿ ಯುವವಾಹಿನಿಯ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣಾ ನೀತಿಸಂಹಿತೆಯನ್ನು ರಚಿಸಲಾಯಿತು. ಬೈಲಾ ತಿದ್ದುಪಡಿಗೆ ಚಾಲನೆ ನೀಡಲಾಯಿತು. ಹಾಗೂ ತಿದ್ದುಪಡಿಯಾದ ಬೈಲಾವನ್ನು ಅಂಗೀಕರಿಸಲಾಯಿತು ಕಟಪಾಡಿ ಘಟಕದ ಸಹಯೋಗದೊಂದಿಗೆ (5-11-2000 ರಂದು) ’ವಿಶ್ವ ವೈಭವ’ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ, ಪುತ್ತೂರಿನಲ್ಲಿ ಕೋಟಿ- ಚೆನ್ನಯ ಕ್ರೀಡಾಕೂಟ, ಮಂಗಳೂರಿನಲ್ಲಿ ’ಸುಗ್ಗಿ 2001’ ಜಾನಪದ ಸ್ಪರ್ಧಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಗಿತ್ತು.
’ಬಾಂಧವ್ಯ-2000’ ಅಂತರ್‌ಘಟಕ ಕ್ರೀಡಾ ಕೂಟ ಹೆಜಮಾಡಿ ಘಟಕದ ಸಹಯೋಗದಲ್ಲಿ ನಡೆಸಲಾಗಿತ್ತು. (3-2-2000) ಯುವವಾಹಿನಿಯ ಆಯ್ದ ಸದಸ್ಯರನ್ನು ಸಂಪನ್ಮೂಲ ವ್ಯಕ್ತಿಗಳ ತರಬೇತಿಗಾಗಿ AIM Insight ಗೆ ಕಳಿಸಲಾಗಿದ್ದು ಪ್ರೊ| ಸನ್ನಿ ತೆರಪ್ಪನ್‌ರಿಂದ ತರಗತಿಯನ್ನು ನಡೆಸಲಾಗಿತ್ತು.
ಕೇಂದ್ರ ಸಮಿತಿಯ ನಿರ್ದೆಶನವನ್ನು ಮೀರಿ ನಿಯಮ ಬಾಹಿರವಾಗಿ ಚಟುವಟಿಕೆಗಳಲ್ಲಿ ತೊಡಗಿದ್ದ ಬಂಟ್ವಾಳ ತಾಲೂಕು ಘಟಕದ ಕಾರ್ಯಕಾರಿ ಸಮಿತಿಯನ್ನು ವಜಾಗೊಳಿಸಿ ಕೇಂದ್ರ ಸಮಿತಿಯು ನೇರವಾಗಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಿದ್ದು ಮುಂದೆ ಈ ಘಟಕವು ಕೇಂದ್ರ ಸಮಿತಿಯೊಂದಿಗೆ ಉತ್ತಮ ಬಾಂಧವ್ಯವನ್ನು ಇರಿಸಿಕೊಂಡು ಸಕ್ರಿಯ ಘಟಕಗಳಲ್ಲಿ ಒಂದಾಗಿದೆ.
ಹೊಸ್ಮಾರು ಬಲ್ಯೊಟ್ಟುವಿನ ವೈದಿಕ ವಿದ್ಯಾಪೀಠಕ್ಕೆ ಸಣ್ಣ ಮಟ್ಟಿನ ದೇಣಿಗೆಯನ್ನು ನೀಡಿ ಪ್ರೋತ್ಸಾಹಿಸಲಾಗಿದೆ.
ಕೋಣಾಜೆ ಗ್ರಾಮ ಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಮಂಗಳೂರಿನಿಂದ ಕೋಣಾಜೆಗೆ ಶೋಭಾಯಾತ್ರೆಯಲ್ಲಿ ಸಾಗಿದಾಗ ಈ ಶೋಭಾಯಾತ್ರೆಯ ನೇತೃತ್ವವನ್ನು ಯುವವಾಹಿನಿ ವಹಿಸಿಕೊಂಡು ಯಶಸ್ವಿಯಾಗಿ ನಡೆಸಿಕೊಟ್ಟಿತ್ತು. ಶ್ರೀ ಕ್ಷೇತ್ರ ಕೊಂಚಾಡಿಯ ಶ್ರೀ ದುರ್ಗಾ ಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನ, ಮಾಲೆಮಾರ್, ಶ್ರೀ ನವ ದುರ್ಗಾಂಬಿಕಾ ದೇವಸ್ಥಾನ ಇವುಗಳ ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದೆ.
ವಿಳಾಸ: ಸಿ-140, ಎಂ.ಸಿ.ಎಫ್. ಕಾಲನಿ, ಕುಂಜತ್ತಬೈಲ್, ಮಂಗಳೂರು- 575015 Ph: 9448549899
E-mail: sadhupoojary1961@yahoo.co.in