ಕೆ. ರಾಜೀವ ಪೂಜಾರಿ ಇವರು ಯುವವಾಹಿನಿ (ರಿ) ಕೇಂದ್ರ ಸಮಿತಿಯಲ್ಲಿ 1999-2000 ನೇ ಸಾಲಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವರು. ಇವರು ಅಧ್ಯಕ್ಷರಾಗಿದ್ದ ವರ್ಷದಲ್ಲಿ ಯುವವಾಹಿನಿಯ ನೂತನ ಘಟಕವು ಉಡುಪಿಯಲ್ಲಿ ಆರಂಭವಾಯಿತು. 1999 ರ ಆಗಸ್ಟ್ ತಿಂಗಳಲ್ಲಿ ಶ್ರೀ ಗುರು ಜಯಂತಿಯ ಪ್ರಯುಕ್ತ ಶ್ರೀ ಗುರು ಸಂದೇಶ ಯಾತ್ರೆಯನ್ನು ನಡೆಸಲಾಗಿತ್ತು. ಅವಿಭಜಿತ ದ.ಕ. ಜಿಲ್ಲೆಯಾದ್ಯಂತ 8 ಕಡೆಗಳಿಂದ ಹೊರಟು ಬಂದ ಗುರು ಸಂದೇಶ ಯಾತ್ರೆಯು ಬ್ರಹ್ಮಶ್ರೀ ನಾರಾಯಣ ಗುರುವರ್ಯರು ಪ್ರದಿಪಾದಿಸಿದ ತತ್ವಾದರ್ಶಗಳನ್ನು ಸಮಾಜದಲ್ಲಿ ಬಿತ್ತರಿಸುತ್ತಾ ಬಂಟ್ವಾಳ-ಬಿ.ಸಿ.ರೋಡಿನಲ್ಲಿ ಒಟ್ಟು ಸೇರಿ ಬೃಹತ್ ಯಾತ್ರೆ ನಡೆಸಿ ಬಿ.ಸಿ. ರೋಡಿನ ಜೋಡು ಮಾರ್ಗದಲ್ಲಿರುವ ಬಿಲ್ಲವ ಸಂಘದಲ್ಲಿ ಸಮಾಪನಗೊಂಡಿತು. ಅತ್ಯಂತ ಯಶಸ್ವಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 5000 ಕ್ಕೂ ಮಿಕ್ಕಿ ಸಮಾಜ ಬಾಂಧವರು ಸೇರಿದ್ದರು.
ದಿನಾಂಕ 19-10-1999 ರಿಂದ 21-10-1999 ರ ವರೆಗೆ ಮೂರು ದಿನಗಳ ಕಾಲ ಯುವವಾಹಿನಿ (ರಿ) ಕಟಪಾಡಿ ಘಟಕದ ವತಿಯಿಂದ ನಡೆದ ವಿದ್ಯಾರ್ಥಿ ಶಿಬಿರವು ಯುವವಾಹಿನಿಯಲ್ಲಿ ನವ ಚರಿತ್ರೆಯನ್ನೇ ನಿರ್ಮಿಸಿತು. ಸತತ ಮೂರು ದಿನಗಳವರೆಗೆ ಕೇಂದ್ರ ಸಮಿತಿಯ ಅಧ್ಯಕ್ಷರು ಶಿಬಿರದಲ್ಲಿಯೇ ಇದ್ದು ಶಿಬಿರದ ಯಶಸ್ಸಿನಲ್ಲಿ ಮುತುವರ್ಜಿ ವಹಿಸಿದ್ದರು.
2000 ನೇ ಫೆಬ್ರವರಿ ತಿಂಗಳಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬಿಲ್ಲವ ಸಮಾಜದ ಮಹಿಳಾ ಸಮಾವೇಶವು ನಡೆದಿತ್ತು. ಈ ಸಮಾವೇಶದಲ್ಲಿ ಸ್ವ-ಉದ್ಯೋಗದೊಂದಿಗೆ ಸ್ವಾವಲಂಬನದೆಡೆಗೆ ಎನ್ನುವ ಮೂಲಧ್ಯೇಯಕ್ಕೆ ಒತ್ತು ನೀಡಿ ಮಹಿಳೆಯರಿಗೆ ಸಹಾಯಕವಾಗ ಬಲ್ಲ ಅನೇಕ ವಿಚಾರಗಳು ಮಂಡನೆಯಾಗಿದ್ದವು.
ಕೆ. ರಾಜೀವ ಪೂಜಾರಿಯವರು ಎಂ.ಕಾಂ. ಸ್ನಾತಕೋತ್ತರ ಪದವೀಧರರು. ನವಮಂಗಳೂರು ಬಂದರು ಮಂಡಳಿಯಲ್ಲಿ ಹಿರಿಯ ಲೆಕ್ಕಾಧಿಕಾರಿಯಾಗಿ 36 ವರ್ಷಗಳ ಸೇವೆ ಸಲ್ಲಿಸಿ ಪ್ರಸಕ್ತ ನಿವೃತ್ತರಾಗಿದ್ದಾರೆ. ಇವರ ಮಡದಿ ಶ್ರೀಮತಿ ಲಲಿತಾ ಕೆ. ಇವರು ನವಮಂಗಳೂರು ಬಂದರು ಮಂಡಳಿಯಲ್ಲಿ ಉದ್ಯೋಗಿಯಾಗಿದ್ದಾರೆ. ಈ ದಂಪತಿಗಳ ಮಗ ಸಂದೇಶ್ ಮೆಕ್ಯಾನಿಕಲ್ ಇಂಜಿನಿಯರಾಗಿದ್ದು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿ ದ್ದಾರೆ. ಮಗಳು ಕು. ಚೈತ್ರಾ ಎಂ.ಬಿ.ಎ. ವಿದ್ಯಾರ್ಥಿನಿ.
ವಿಳಾಸ : ಸಂದೇಶ, ಬಂದರು ಮಂಡಳಿ ನೌಕರರ ವಸತಿ ಕಾಲೊನಿಯ ಹಿಂಬದಿ,
ಹೊಸಬೆಟ್ಟು, ಮಂಗಳೂರು -575 006
ಮೊಬೈಲ್: 9482042763