ಶ್ರೀಯುತರ ಅಧ್ಯಕ್ಷ ಅವಧಿಯಲ್ಲಿ ಕಾಸರಗೋಡಿನ ಚಿಪ್ಪಾರು ಘಟಕದಿಂದ ಶೀರೂರಿನ ಘಟಕದವರೆಗೆ ಘಟಕ ಭೇಟಿಯನ್ನು ಮಾಡಿದ ಸಾಧನೆ ಅವಿಸ್ಮರಣೀಯ. ಇವರ ಅಧಿಕಾರ ಅವಧಿಯಲ್ಲಿ ವಿದ್ಯಾನಿಧಿಯಿಂದ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಾಯ ನೀಡಲಾಗಿತ್ತು.
ಪುತ್ತೂರಿನ ಓರ್ವ ವಿದ್ಯಾರ್ಥಿ ಶ್ರೀ ಪ್ರವೀಣ್ ಕುಮಾರ್ ಇವರ ಆಥ್ಲೆಟಿಕ್ಸ್‌ನ ತರಬೇತಿ ಸಮಯದಲ್ಲಿ ಪೌಷ್ಠಿಕ ಆಹಾರ ಅವಶ್ಯಕತೆಗೆ ಮಾಸಿಕ 150/-ರಂತೆ ಧನ ಸಹಾಯ ನೀಡಲಾಗಿತ್ತು.
ಕು. ಪ್ರಮೀಳಾರ ಪಿಯುಸಿ ವ್ಯಾಸಂಗದ ಸಂಪೂರ್ಣ ಖರ್ಚಿನ ಜವಾಬ್ದಾರಿಯನ್ನು ತಮ್ಮ ಸಮಾಜದ ದಾನಿಯಾದ ಕೆ.ಎ. ಜಯಚಂದ್ರರವರಿಂದ ಭರಿಸುವಂತೆ ಸಹಕರಿಸಲಾಗಿತ್ತು.
11-10-98 ರಂದು ನಮ್ಮ ಸಮಾಜದ ಶಿಕ್ಷಕರ ಸಮಾವೇಶವನ್ನು ಮಂಗಳೂರಿನ ಕುದ್ರೋಳಿಯ ಶ್ರೀ ಅಧ್ಯಕ್ಷ ಕೊರಗಪ್ಪ ಸಭಾಭವನದಲ್ಲಿ ನಡೆಸಲಾಗಿತ್ತು. ಪಣಂಬೂರಿನಲ್ಲಿ ಅಂತರ್ ಘಟಕ ಕ್ರಿಕೆಟ್ ಪಂದ್ಯಾಟ ನಡೆಸಲಾಗಿತ್ತು.
ಪತ್ನಿ ಶ್ರೀಮತಿ ಮಿತ್ರ ಚೆನ್ನಕೇಶವ, ಮತ್ತು ನಿಶಿತ್ ಹಾಗೂ ನಿಕಿತ್ ಎರಡು ಗಂಡು ಮಕ್ಕಳನ್ನೊಳಗೊಂಡ ಸುಖ ಸಂಸಾರ ಇವರದ್ದು.
ಕಿನ್ನಿಗೋಳಿ Jc ಸ್ಥಾಪಕ ಅಧ್ಯಕ್ಷರಾದ ಇವರು ತನ್ನ ವೃತ್ತಿ ನಿಮಿತ್ತ ಸುರತ್ಕಲ್‌ಗೆ ಸ್ಥಳಾಂತರಗೊಂಡು ಬಳಿಕ JcI ಬೆಳೆಸುವಲ್ಲಿ ತನ್ನ ಉತ್ಕೃಷ್ಠ ಸೇವೆಯನ್ನು ನೀಡಿರುತ್ತಾರೆ.
ವಲಯಾಧಿಕಾರಿಯಾಗಿ ದುಡಿದ ಇವರು ರಾಷ್ಟ್ರೀಯ ಮಟ್ಟದಲ್ಲಿ ಎಛಿ ಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಎಛಿಯ ಉನ್ನತ ಶ್ರೇಣಿಯ ಸೆನೆಟರ್ ಆಗಿ ವಲಯ 15 ರಲ್ಲಿ ಅಂತರ್‌ರಾಷ್ಟ್ರೀಯ ಸಮ್ಮೇಳನಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಪ್ರವಾಸ ಇವರ ಒಂದು ಹವ್ಯಾಸ. ಮಿತ್ರರೊಂದಿಗೆ, ಅನೇಕ ವೇಳೆ ಏಕಾಂಗಿಯಾಗಿ ದೇಶಾದ್ಯಂತ ಸಂಚರಿಸುವ ಇವರು ಉತ್ತಮ ಚಾರಣಿಗರು ಕೂಡ. ಇತ್ತೀಚೆಗೆ ಎವರೆಸ್ಟ್ ಬೇಸ್ ಕ್ಯಾಂಪ್‌ವರೆಗೆ ಚಾರಣ ಮಾಡಿ ಯಶಸ್ವಿಯಾಗಿ ಹಿಂದಿರುಗಿದ್ದಾರೆ. ವಿದೇಶ ಪ್ರವಾಸದಲ್ಲಿ ಹಲವಾರು ದೇಶಗಳನ್ನು ಸುತ್ತಿ ಅನುಭವಗಳಿಸಿರುವ ಇವರು ಮಿತಭಾಷಿ.
ವಿಳಾಸ: ಕೋಸ್ಟಲ್ ಟಯರ್‍ಸ್
ಶ್ರೀ ಗೋವಿಂದಾದಾಸ ಕಾಲೇಜಿನ ಎದುರುಗಡೆ
ಸುರತ್ಕಲ್, ಮಂಗಳೂರು-575014
ಮೊಬೈಲ್: 9901895434