ಬಿ.ಎ. ಪದವೀಧರ, ನವ ಮಂಗಳೂರು ಬಂದರು ಮಂಡಳಿಯಲ್ಲಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿ ಸಹಾಯಕ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿದವರು. ಲಯನ್ಸ್, ಜೇಸೀ ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ. ನವ ಮಂಗಳೂರು ಬಂದರು ಸಾರ್ವಜನಿಕ ಗಣೇಶೋತ್ಸವ ಮತ್ತು ನಾಗಬನ ಜೀರ್ಣೋದ್ಧಾರ ಸಮಿತಿಗಳಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಅಪಾರ ಅನುಭವ ಗಳಿಸಿರುವರು.
1994-95 ರ ಸಾಲಿನ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವರು. 1994 ರ ಆಗಸ್ಟ್ ತಿಂಗಳಲ್ಲಿ ಮಂಗಳೂರು ಶ್ರೀ ಕ್ಷೇತ್ರ ಕುದ್ರೋಳಿಯಿಂದ ಉಡುಪಿ ಬನ್ನಂಜೆಯವರೆಗೆ ಶ್ರೀ ಗುರು ಸಂದೇಶ ಯಾತ್ರೆಯನ್ನು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಅದ್ವಿತೀಯವಾಗಿ ನಡೆಸಿರುವರು. ಶ್ರೀ ಗುರು ಸಂದೇಶ ಯಾತ್ರೆಯು ಸರ್ವಧರ್ಮ ಸಮ್ಮೇಳನದೊಂದಿಗೆ ಸಮಾರೋಪ ಗೊಂಡದ್ದು ಅಂದಿನ ವಿಶೇಷವಾಗಿತ್ತು. ನಮ್ಮ ಸಮಾಜದ ಮಹಿಳೆಯರಿಗೆ ಉತ್ತಮ ಸ್ಥಾನಮಾನ ದೊರೆಯಬೇಕೆಂಬ ಮಹತ್ತರ ಆಶೋತ್ತರವನ್ನಿಟ್ಟುಕೊಂಡು ಪಣಂಬೂರು ಘಟಕದ ಸಹಯೋಗದೊಂದಿಗೆ ಮಹಿಳಾ- ಘಟಕವನ್ನು ತಮ್ಮ ಅಧಿಕಾರ ಅವಧಿಯಲ್ಲಿ ಸ್ಥಾಪಿಸಿ ಒಂದು ವಿಚಾರ ಕಮ್ಮಟವನ್ನು ಏರ್ಪಡಿಸಿದ್ದರು. ಅಲ್ಲದೆ ಯುವವಾಹಿನಿಯ ಸಂಪರ್ಕದ ಕೊಂಡಿಯನ್ನು ಬೆಳೆಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲದೆ, ಮೈಸೂರು ಜಿಲ್ಲೆಯ ಬೋಗಾದಿಯಲ್ಲಿ ದಿನಾಂಕ ೧೫.೫.೯೪ರಂದು ಒಂದು ಘಟಕವನ್ನು ಪ್ರಾರಂಭಿಸುವಲ್ಲಿ ಯಶಸ್ವಿಯಾಗಿದ್ದರು.
ಮಡದಿ ಅಂಬಿಕಾ, ವಿಶಾಲ್ ಹಾಗೂ ವಿನೋದ್ ಇಬ್ಬರು ಗಂಡು ಮಕ್ಕಳು ಹಾಗೂ ಅಶ್ವಿನಿ ಎಂಬ ಹೆಣ್ಣು ಮಗಳು, ಸೊಸೆಯಂದಿರಾದ ಶಕುಂತಲಾ, ರೂಪಿಕಾ, ಅಳಿಯ ಕೃಷ್ಣದಾಸ್, ಮೊಮ್ಮಕ್ಕಳಾದ ವಿನ್ಯಾಸ್ ಹಾಗೂ ಲಿಕಿಶಾ ವರವನ್ನೊಳಗೊಂಡ ಸುಖಿ ಸಂಸಾರ ಇವರದ್ದು.
ವಿಳಾಸ: ಶಿವಾಂಗಿ, ಶಿವಗಿರಿ ನಗರ, ಹೊಸಬೆಟ್ಟು, ಮಂಗಳೂರು- 575001
ಮೊಬೈಲ್: 9980900533