ಉಪ್ಪಿನಂಗಡಿ : ದಿನಾಂಕ 13.11.2024 ರಂದು ಯುವವಾಹಿನಿ (ರಿ) ಉಪ್ಪಿನಂಗಡಿ ಘಟಕದ ವತಿಯಿಂದ ದೀಪಾವಳಿ ಹಬ್ಬದ ಆಚರಣೆಯನ್ನು ಘಟಕದ ಅಧ್ಯಕ್ಷರಾದ ಶ್ರೀ ಸೋಮಸುಂದರ್ ಕೊಡಿಪ್ಪಾನ ಇವರ ಅಧ್ಯಕ್ಷತೆಯಲ್ಲಿ, ಘಟಕದ ಪದಾಧಿಕಾರಿ ಶ್ರೀ ಅಂಕಿತ್ ರವರ ಸೂರಜ್ ಮನೆಯಲ್ಲಿ ನಡೆಸಲಾಯಿತು.
ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದ ಮುಂದೆ ದೀಪ ಬೆಳಗಿಸಿ, ಭಜನಾ ಸೇವೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು, ಉಪ್ಪಿನಂಗಡಿಯ ಖ್ಯಾತ ದಂತ ವೈದ್ಯರಾದ ಡಾ. ರಾಜಾರಾಮ್ ಕೆ.ಬಿ ಯವರು ದೀಪಾವಳಿ ಆಚರಣೆಯ ಬಗ್ಗೆಸವಿವರವಾದ ಮಾಹಿತಿಯನ್ನು ನೀಡಿದರು.
ಯುವ ಉದ್ಯಮಿ ಅಂಕಿತ್.ಎಂ.ಜೆ ಯವರು ಯುವವಾಹಿನಿಯ ಮೂಲಕ ಯುವಕರುಮುಂದೆ ಬರಬೇಕು, ಯುವವಾಹಿನಿ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲು ಕೈಜೋಡಿಸಬೇಕು ಎಂದು ತಿಳಿಸಿದರು
ಗೌರವ ಸಲಹೆಗಾರರಾದ ಶ್ರೀ ವರದರಾಜ್ ಎಂ, ಅಂಕಿತ್ ರವರ ತಾಯಿ ಶ್ರೀಮತಿ ಸರೋಜಿನಿ ಜಗನ್ನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳಾದ ಜಯವಿಕ್ರಮ್, ಅಜಿತ್ ಪಾಲೇರಿ, ಗುಣಕರ್ ಅಗ್ನಾಡಿ, ಗುಣಕರ ಮುಗ್ಗ, ರವೀಂದ್ರ ಬೊಲೊಡಿ, ಜಯಾನಂದ ಕಲ್ಲಾಪು, ಹರೀಶ್ ಪಾಲೆತ್ತಡಿ, ಜನಾರ್ಧನ ಪೂಜಾರಿ ನೂಜ, ಕೃಷ್ಣಪ್ಪ ಪೂಜಾರಿ, ಆಶಿತ್ ಎಂ.ವಿ, ಚಂದ್ರಶೇಖರ್ ಸನಿಲ್, ಮನೋಹರ್ ಕುಮಾರ್, ಕುಶಾಲಪ್ಪ ಹತ್ತು ಕಳಸೆ, ಉಪಾಧ್ಯಕ್ಷರಾದ ಪುನೀತ್ ವಿ.ಡಿ, ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಭಾಗವಹಿಸಿದ್ದರು.
ಕಾರ್ಯಕ್ರಮ ಆಯೋಜಿಸಿದ ಶ್ರೀಮತಿ ಸರೋಜಿನಿ ಜಗನ್ನಾಥ್ ಮತ್ತು ಅವರ ಮಗ ಅಂಕಿತ್ ಎಂ.ಜೆ ಇವರುಗಳನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು.
ಅಧ್ಯಕ್ಷರಾದ ಸೋಮಸುಂದರ್ ಕೊಡಿಪ್ಪಾನ ಸ್ವಾಗತಿಸಿದರು.
ಕಾರ್ಯದರ್ಶಿ ಶ್ರೀಮತಿ ಅನಿತಾ ಸತೀಶ್ ರವರು ಧನ್ಯವಾದ ಸಲ್ಲಿಸಿದರು.
ಮನೋಹರ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.