ಶ್ರೀಮತಿ ಭಾರತಿ ಹಾಗೂ ಶ್ರೀ ಉಮಾನಾಥ ದಂಪತಿಗಳಿಗೆ ಉತ್ತಮ ಹೆಮ್ಮೆ ಪಡತಕ್ಕೆ ಸಾಧನೆಯ ಕುವರಿ ನಿಧಿಶ್ರೀಯ ಬಗ್ಗೆ ಮತ್ತು ಅವಳ ಸಾಧನೆಯ ಬಗ್ಗೆ ಅರಿವಿರಲಿಕ್ಕಿಲ್ಲ ತಮ್ಮ ಜೀವನದ ಹಾದಿಯಲ್ಲಿ ತಮ್ಮ ಮಗಳು ಒಂದುದಿನ ಸ್ವಪ್ರತಿಭೆಯಿಂದ ಜನ ಮನ್ನಣೆಯನ್ನು ಗಳಿಸಿ ಕೊಡಲಿದ್ದಾಳೆ ಎಂಬ ಅರಿವಿರಲಿಕ್ಕಿಲ್ಲ. ಕಾರಣ ಅವರಿದ್ದದ್ದು 62 ತೋಕೂರು ಜೋಕಟ್ಟೆ ಎಂಬ ಸಣ್ಣ ಊರಿನಲ್ಲಿ.
ಸಾಮಾನ್ಯವಾಗಿ ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ಬೆಳೆದವರಿಗೆ ಬದುಕಿನ ಸೂಕ್ಷತೆಗಳ ಅರಿವಿರುತ್ತದೆ. ಜೀವನದ ಕಷ್ಟ ಕಾರ್ಪಣ್ಯಗಳ ಸರಿಯಾದ ದೃಷ್ಟಿಕೋನ ಇರುತ್ತದೆ ಇವರ ಬಾಳಿನಲ್ಲೂ ನಡೆದದ್ದು ಇದೇ. ತಮ್ಮ ಮಗಳು ನಿಧಿ ಶ್ರೀ ಕಲಿಕೆಯ ನಿಧಿಯಾಗಬಲ್ಲಳೆಂದು ಅರಿತ ಈ ದಂಪತಿಗಳು ಮಗಳ ಮಾನಸಿಕ ಶಕ್ತಿಯ ರೂವಾರಿಗಳಾಗಿದ್ದಾರೆ. ಪರಿಣಾಮ SSLC ಪರೀಕ್ಷೆಯಲ್ಲಿ ನಿಧಿ ಗಳಿಸಿದ್ದು ಬರೋಬ್ಬರಿ 625 ಕ್ಕೆ 615 ಅಂಕ ಅಂದರೆ 98.4 ಶೇಕಡಾ.
ಕುಳ್ಯಾ ವಿದ್ಯಾನಗರದ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ಹೆಮ್ಮೆಯ ಈ ವಿದ್ಯಾರ್ಥಿನಿಗೆ ನಮ್ಮ ಅಭಿನಂದನೆ ’ಅಕ್ಷರ ಪುರಸ್ಕಾರ’ ಅಕೆಯ ಸಾಧನೆ.