ಕೊಲ್ಯ : ಯುವವಾಹಿನಿ (ರಿ) ಕೊಲ್ಯ ಘಟಕದ ಆಶ್ರಯದಲ್ಲಿ, ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯದ ಸಹಯೋಗದಲ್ಲಿ ಮಕ್ಕಳ ದಿನಾಚರಣೆ, ಆನ್ಲೈನ್ ಶ್ಲೋಕ ಪಠಣಾ ಸ್ಫರ್ಧೆ, ಆಟೋಟ ವಿನೋದಾವಳಿ, ಬಹುಮಾನ ವಿತರಣೆ.
ಮಕ್ಕಳ ಮನಸ್ಸು ಹೂವಿನಂತೆ. ಬಾಲ್ಯದಲ್ಲಿನ ಮಕ್ಕಳ ಮುಗ್ಧತೆ, ಸರಳತೆ ನಮ್ಮನ್ನು ಸೆಳೆಯುತ್ತದೆ. ನಾವು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು, ಕಲೆತು ಮುಗ್ಧ ಮನಸ್ಸಿನೊಳಗೆ ಉತ್ತಮ ಸಂಸ್ಕಾರ, ಸಂಸ್ಕೃತಿಯ ಬೀಜವನ್ನು ಬಿತ್ತಬೇಕು ಎಂದು ಬ್ರಹ್ಮಶ್ರೀ ನಾರಾಯಣಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯದ ಮುಖ್ಯ ಧರ್ಮ ಗುರುಗಳಾದ ಡಾ.ಅರುಣ್ ಉಳ್ಳಾಲ್ ತಿಳಿಸಿದರು.
ಯುವವಾಹಿನಿ (ರಿ) ಕೊಲ್ಯ ಘಟಕ ಇದರ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯ ಇದರ ಸಹಯೋಗದಲ್ಲಿ, ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಆನ್ಲೈನ್ ಶ್ಲೋಕ ಪಠಣಾ ಸ್ಫರ್ಧೆಗಳಿಗೆ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ಧರ್ಮ ಶಿಕ್ಷಣ ಕೇಂದ್ರದ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ದಿನಾಂಕ 19.11.2024 ರಂದು ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಇದರ ಒಳಾಂಗಣ ಸಭಾಂಗಣದಲ್ಲಿ ನಡೆಸಲಾಯಿತು.
ಯುವವಾಹಿನಿ (ರಿ) ಕೊಲ್ಯ ಘಟಕದ ವಿದ್ಯಾರ್ಥಿ ಸಂಘಟನೆ ನಿರ್ದೇಶಕರಾದ ಶ್ರೀ ಪ್ರಶಾಂತ್ ನೆಲ್ಲಿಸ್ಥಳ ಪ್ರಸ್ತಾವನೆಯ ಮಾತುಗಳನ್ನಾಡಿ, ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಆನ್ಲೈನ್ ಶ್ಲೋಕ ಪಠಣಾ ಸ್ಫರ್ಧೆಯಲ್ಲಿ ಮಕ್ಕಳ ಭಾಗವಹಿಸುವಿಕೆಯ ಕುರಿತು ಸಂತಸ ವ್ಯಕ್ತಪಡಿಸಿದರು.
ಯುವವಾಹಿನಿ (ರಿ) ಕೊಲ್ಯ ಘಟಕದ ದ್ವಿತೀಯ ಉಪಾಧ್ಯಕ್ಷರಾದ ಶ್ರೀ ಜೀವನ್ ಕೊಲ್ಯ ಮಕ್ಕಳಿಗಾಗಿ ವಿವಿಧ ರೀತಿಯ ಆಟೋಟ ಸ್ಪರ್ಧೆ, ವಿನೋದಾವಳಿಗಳನ್ನು ಆಯೋಜಿಸಿದರು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಕೊಲ್ಯ ಘಟಕದ ಪ್ರಥಮ ಉಪಾಧ್ಯಕ್ಷರು ಶ್ರೀ ನಿತಿನ್ ಕರ್ಕೆರ ಸರ್ವರನ್ನೂ ಸ್ವಾಗತಿಸಿ, ಈ ಮಣ್ಣಿನ ಸಂಸ್ಕಾರ, ಸಂಸ್ಕೃತಿಯ ಜ್ಞಾನವನ್ನು ನೀಡುವ ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯದಲ್ಲಿ ಮಕ್ಕಳ ಸಹಿತ ಹೆತ್ತವರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆಯಬೇಕೆಂದು ವಿನಂತಿಸಿದರು.
ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಆನ್ಲೈನ್ ಶ್ಲೋಕ ಪಠಣಾ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಹಿರಿಯರ ವಿಭಾಗದಲ್ಲಿ ಉನ್ನತಿ ಪ್ರಥಮ, ಜೈವಿಕ್ ಉಳ್ಳಾಲ್ ದ್ವಿತೀಯ ಹಾಗೂ ಭೂಮಿಕಾ ತೃತೀಯ ಬಹುಮಾನ ಪಡೆದರು. ರಿಷಿತಾ, ತನ್ವಿ ಸಮಾಧಾನಕರ ಬಹುಮಾನ ಪಡೆದರು.
ಕಿರಿಯರ ವಿಭಾಗದಲ್ಲಿ ಸಾಯೀಶ್ ಪ್ರಥಮ, ಹಂಸಿಕಾ ದ್ವಿತೀಯ ಹಾಗೂ ತನಿಷ್ಕಾ ತೃತೀಯ ಬಹುಮಾನ ಪಡೆದರು. ಮನಿತ್ ಪ್ರಸಾದ್ ಮತ್ತು ಹೃದ್ವಿ ರಾಜೇಶ್ ಸಮಾಧಾನಕರ ಬಹುಮಾನ ಪಡೆದುಕೊಂಡರು.
ಸಭೆಯಲ್ಲಿ ಉಪಸ್ಥಿತರಿದ್ದ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯ ಇದರ ಹಿರಿಯ ಸದಸ್ಯರು ಮಕ್ಕಳ ದಿನಾಚರಣೆಯ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಬಿಲ್ಲವ ಸೇವಾ ಸಮಾಜ (ರಿ )ಕೊಲ್ಯ ಇದರ ಕಾರ್ಯದರ್ಶಿ ಶ್ರೀ ಯತೀಶ್ ವೆಂಕಹಿತ್ಲು ಉಪಸ್ಥಿತರಿದ್ದರು. ಧರ್ಮ ಶಿಕ್ಷಣ ಕೇಂದ್ರದ ಮಕ್ಕಳು ಪ್ರಾರ್ಥನೆ ನೆರವೇರಿಸಿದರು. ಯುವವಾಹಿನಿ (ರಿ) ಕೊಲ್ಯ ಘಟಕದ ಕಾರ್ಯದರ್ಶಿ ಹಾಗೂ ಭಜನಾ ಸಂಚಾಲಕರಾದ ಶ್ರೀ ಜಗಜೀವನ್ ಕೊಲ್ಯ ಧನ್ಯವಾದ ಸಮರ್ಪಿಸಿದರು.
ಯುವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.