ಕೂಳೂರು: ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ 17-11-2024ರ ಆದಿತ್ಯವಾರದಂದು ಬೆಳಗ್ಗೆ 5.30 ಗಂಟೆಗೆ ಸರಿಯಾಗಿ ಕುಟುಂಬ ಸಂಪರ್ಕ ನಿರ್ದೇಶಕರಾದ ಶ್ರೀಮತಿ ಸುಮಾ ಶಿವು ಇವರ ಸಂಚಾಲಕತ್ವದಲ್ಲಿ ನಿಗದಿ ಪಡಿಸಿದ ಬಸ್ಸಿನ ಮುಂದೆ ಮಾರ್ಗದರ್ಶಕರಾದ ಚಂದಪ್ಪ ಸನಿಲ್ ಪ್ರಾರ್ಥನೆ ಸಲ್ಲಿಸಿ ತೆಂಗಿನಕಾಯಿ ಒಡೆಯುವ ಮೂಲಕ ಕ್ಷೇತ್ರ ದರ್ಶನಕ್ಕೆ ಚಾಲನೆ ನೀಡಿದರು.
ಸುಮಾರು 87 ಜನರನ್ನು ಒಳಗೊಂಡ 2 ಬಸ್ ಬೆಳಗ್ಗಿನ ಜಾವ 5.30 ಗಂಟೆಗೆ ಸರಿಯಾಗಿ ಕುಳೂರಿನಿಂದ ಹೊರಟು 6.15 ಕ್ಕೆ ತಲಪಾಡಿ ತಲುಪಿತು.
ಅಲ್ಲಿ ನಿಗದಿ ಪಡಿಸಿದ ಕೇರಳ ಬಸ್ಸ್ ಹತ್ತಿ 7.00 ಗಂಟೆಗೆ ಸರಿಯಾಗಿ ಅನಂತಪುರ ತಲುಪಿ, ದೇವರ ದರ್ಶನ ಮುಗಿಸಿ ಬೆಳಗ್ಗಿನ ಉಪಾಹಾರ ಮಾಡಿ, ಅಲ್ಲಿಂದ ಪಯಣ ಮಧೂರು ಮಹಾಗಣಪತಿ ಹಾಗೂ ಮಲ್ಲ ದುರ್ಗಾ ಪರಮೇಶ್ವರಿ ಕ್ಷೇತ್ರಕ್ಕೆ.
ಅಲ್ಲಿಂದ 9.30 ಗಂಟೆಗೆ ಹೊರಟು 11.30 ಗಂಟೆಗೆ ಮಡಾಯಿಕಾವು ತಲುಪಿ, ಅಲ್ಲಿ ಎಲ್ಲರೂ ದೇವರ ದರ್ಶನ ಪಡೆದು ಪೂಜೆ ಮುಗಿಸಿ, ಅಲ್ಲೇ ಮಧ್ಯಾಹ್ನದ ಅನ್ನ ಪ್ರಸಾದ ಸ್ವೀಕರಿಸಿ ಸ್ವಲ್ಪ ಹೊತ್ತು ಸಮಯ ಕಳೆದು 2.00 ಗಂಟೆಗೆ ಸರಿಯಾಗಿ ಪರಸಿನ ಗಡವು ಕ್ಷೇತ್ರಕ್ಕೆ ಪಯಣ ಬೆಳೆಸಿ, ಸುಮಾರು 3.00 ಗಂಟೆ ಹೊತ್ತಿಗೆ ಅಲ್ಲಿ ತಲುಪಿದರು.
ಮಳೆಯ ಕಾರಣ ಅಲ್ಲೇ ಹೆಚ್ಚು ಹೊತ್ತು ಎಲ್ಲರೂ ಸುತ್ತಾಡಿ 4.00 ಗಂಟೆಗೆ ಸಂಜೆ ಚಹಾ ಸೇವನೆ ಮಾಡಿ, 8.00 ಗಂಟೆಗೆ ತಲಪಾಡಿ ತಲುಪಿ, ಅಲ್ಲಿಂದ ಮಂಗಳೂರಿಗೆ ನಿಗದಿ ಪಡಿಸಿದ ಬಸ್ ಹತ್ತಿ 8.30ಕ್ಕೆ ಗಂಟೆಗೆ ಕೂಳೂರು ತಲುಪಿದರು.
ಒಂದು ದಿವಸದ ಕ್ಷೇತ್ರ ದರ್ಶನದಲ್ಲಿ ಘಟಕದ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಸುರೇಶ್, ಮಾಜಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಶ್ರೀಮತಿ ನಯನ ರಮೇಶ್, ದೀಕ್ಷಿತ್ ಸಿ ಎಸ್, ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಕಾರ್ಯದರ್ಶಿ ಶ್ರೀಮತಿ ನಯನ ಕೋಟ್ಯಾನ್, ಕೋಶಾಧಿಕಾರಿ ವಿಘ್ನೇಶ್, ಪದಾಧಿಕಾರಿಗಳು, ಸದಸ್ಯರು ಮತ್ತು ಸದಸ್ಯರ ಕುಟುಂಬದವರು ಪಾಲ್ಗೊಂಡಿದ್ದರು.