20-08-2019, 5:36 PM
ದಿನಾಂಕ 20.08.2019 ರಂದು ಯುವವಾಹಿನಿ ಸಭಾಂಗಣ ದಲ್ಲಿ ನಮ್ಮ ಘಟಕದಿಂದ ಕರ್ನಾಟಕ ರಾಜ್ಯದ ಪ್ರಸಿದ್ಧ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ರವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. 20.08.1815 ರಂದು ಜನಿಸಿ ಮೈಸೂರು ಮಹಾರಾಜರ ಆಸ್ಥಾನದಲ್ಲಿ ಅಧಿಕಾರಿಯಾಗಿ, ನಿಜಲಿಂಗಪ್ಪನವರ ಸಂಪುಟದಲ್ಲಿ ಸಚಿವರಾಗಿ, ಸಿನಿಮಾ ನಟನಾಗಿ, ಎಂಟು ವರ್ಷಗಳ ತನ್ನ ಕಾಲಾವಧಿಯಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿರುವ ಕರ್ನಾಟಕದ ಪ್ರಸಿದ್ಧ ಮುಖ್ಯಮಂತ್ರಿಯಾಗಿರುವ ದೇವರಾಜ್ ಅರಸು ರವರ ಭಾವಚಿತ್ರಕ್ಕೆ ಘಟಕದ ಮಾಜಿ ಸಲಹೆಗಾರರಾದ ಶ್ರೀಯುತ ಪರಮೇಶ್ವರ ಪೂಜಾರಿಯವರು ಹಾರ ಹಾಕಿ ಪುಷ್ಪ ಸಮರ್ಪಿಸುವುದರ ಮೂಲಕ […]
Read More
15-08-2019, 4:26 AM
ಮಂಗಳೂರು : ಯುವವಾಹಿನಿ ಸಭಾಂಗಣದಲ್ಲಿ ಪ್ರಪ್ರಥಮ ಬಾರಿಗೆ ಯುವವಾಹಿನಿ ಘಟಕದ ಸದಸ್ಯರಿಂದ 73ನೇ ಸ್ವಾತಂತ್ರೋತ್ಸವ ಆಚರಿಸಲಾಯಿತು. ಘಟಕದ ಅಧ್ಯಕ್ಷರಾದ ಕೆ.ಆರ್. ಲಕ್ಷ್ಮೀನಾರಾಯಣರವರು ಧ್ವಜಾರೋಹಣ ಮಾಡಿದರು. ಮಾಜಿ ಅಧ್ಯಕ್ಷರಾದ ಶ್ರೀಧರ ಪೂಜಾರಿ, ಕಾರ್ಯದರ್ಶಿ ಗಣೇಶ್ ವಿ. ಕೋಡಿಕಲ್ ಹಾಗೂ ರಾಜೇಶ್ ಅಮೀನ್ ರವರು ಉಪಸ್ಥಿತರಿದ್ದರು. ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಘಟಕದ ಸದಸ್ಯರು ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರಗೀತೆಯ ನಂತರ ಎಲ್ಲರಿಗೂ ಸಿಹಿತಿಂಡಿ ಹಂಚಲಾಯಿತು. ಅನಾಥ ಮಹಿಳೆಯರ ಸೇವಾಶ್ರಮ ಬೆಲ್ಮಕ್ಕೆ ತೆರಳಿದ ಘಟಕದ ಸದಸ್ಯರು, ಆಶ್ರಮದ ಸದಸ್ಯರೊಂದಿಗೆ ಸಿಹಿ ಹಂಚಿ […]
Read More
13-08-2019, 6:34 AM
ಮಂಗಳೂರು : ದಿನಾಂಕ 13.08.2019 ರಂದು ನಡೆದ ಘಟಕದ ಸಾಪ್ತಾಹಿಕ ಸಭೆಯಲ್ಲಿ ಜೆಸಿಐ ಸ್ಮಿತಾ ಪಿ. ಹೊಳ್ಳರವರು ಲಿಂಗ ಸಮಾನತೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಹುಟ್ಟು ಮತ್ತು ಸಾವು ಭಗವಂತನ ನಿರ್ಣಯಗಳು. ಅದರ ನಡುವಿನ ಜೀವನ ನಮ್ಮದು. ಭಗವಂತನು ನಮಗೆ ನೀಡಿರುವ ಅತ್ಯುತ್ತಮವಾದ ಜೀವನವನ್ನು ಯಾವುದೇ ಬೇದ ಭಾವ ತೋರದೆ, ಸಮಚಿತ್ತದಿಂದ, ತಾರತಮ್ಯವಿಲ್ಲದೆ, ಸಹಬಾಳ್ವೆಯನ್ನು ನಡೆಸುವುದೇ ಜೀವನದ ಬಲು ದೊಡ್ಡ ಸಾಧನೆ ಎಂದರು. ಸ್ಮಿತಾರವರನ್ನು ಮಾಜಿ ಅಧ್ಯಕ್ಷರಾದ ಜಯರಾಮ್ ಕಾರಂದೂರುರವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು […]
Read More
28-07-2019, 4:53 PM
ಮಂಗಳೂರು : ದಿನಾಂಕ 28.07.2019 ರಂದು ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿಕಲ್ ನಲ್ಲಿ ಉಚಿತ ಬ್ರಹತ್ ವೈದ್ಯಕೀಯ ಶಿಬಿರ ಹಾಗೂ ಕ್ಯಾನ್ಸರ್ ಅರಿವು ,ಮಾಹಿತಿ ಮತ್ತು ತಪಾಸನಾ ಶಿಬಿರ ನಡೆಯಿತು. ಈ ಕಾರ್ಯಕ್ರಮವೂ ಲಯನ್ಸ್ ಕ್ಲಬ್ ಮಂಗಳೂರು ಕುಡ್ಲ ಹಾಗೂ ಸ್ವಾತಿ ಹೋಮಿಯೋಪತಿ ಕ್ಲಿನಿಕ್ ಇದರ ಸಹಯೋಗದಲ್ಲಿ ನಡೆದಿದ್ದು, ಓಂಕಾಲಜಿ ವಿಭಾಗ, ಯನೊಪೋಯ ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾಲಯ ದೇರಳಕಟ್ಟೆ ಹಾಗೂ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಸಮುದಾಯ ದಂತ ವಿಭಾಗ, ಯನೊಪೋಯ […]
Read More
23-07-2019, 3:40 PM
ಮಂಗಳೂರು : ಯುವವಾಹಿನಿ ಸಭಾಂಗಣ ಮಂಗಳೂರು ಘಟಕದಲ್ಲಿ ದಿನಾಂಕ 23.07.2019ರಂದು ಸಂಜೆ ಆಟಿದ ತಮ್ಮನ ಕಾರ್ಯಕ್ರಮ ನಡೆಸಲಾಯಿತು. ಘಟಕದ ಎಲ್ಲಾ ಸದಸ್ಯರು ಮತ್ತು ಮಂಗಳೂರು ಮಹಿಳಾ ಘಟಕದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಮೊದಲು ಏರ್ಪಡಿಸಿರುವ ಭಜನೆಯಲ್ಲಿ ಎಲ್ಲಾ ಸದಸ್ಯರು ಪಾಲ್ಗೊಂಡರು. ಅಧ್ಯಕ್ಷರಾದ ಕೆ. ಆರ್. ಲಕ್ಷ್ಮೀ ನಾರಾಯಣರವರು ಸ್ವಾಗತಿಸಿದರು ಮತ್ತು ಕಾರ್ಯದರ್ಶಿ ಗಣೇಶ್ ವಿ. ಕೋಡಿಕಲ್ ರವರು ಗತಸಭೆಯ ವರದಿಯನ್ನು ವಾಚಿಸಿದರು. ದಿನಾಂಕ 28.07.2019ರಂದು ಭಾನುವಾರ ನಡೆಯಲಿರುವ ಬ್ರಹತ್ ವ್ಯೆದ್ಯಕೀಯ ಶಿಬಿರ ದ ಆಮಂತ್ರಣ […]
Read More
16-07-2019, 2:32 PM
ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಘಟಕದ ಆಶ್ರಯದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಗುರು ವಂದನಾ ಮತ್ತು ಶ್ರೀ ಗುರು ಚಿಂತನ ಮಂಥನ ಕಾರ್ಯಕ್ರಮ ದಿನಾಂಕ 16.07.2019 ರಂದು ಯುವವಾಹಿನಿ ಸಭಾಂಗಣದಲ್ಲಿ ನಡೆಯಿತು. ಮೊದಲಾಗಿ ಘಟಕದ ಎಲ್ಲಾ ಸದಸ್ಯರು ಮತ್ತು ಮಹಿಳಾ ಘಟಕದ ಸದಸ್ಯರು 5.30ರಿಂದ 7.00 ಗಂಟೆಯವರೆಗೆ ಶುಶ್ರಾವ್ಯಯವಾಗಿ ಭಜನೆ ಹಾಡಿದರು. ನಂತರ ನಡೆದ ಸಾಪ್ತಾಹಿಕ ಸಭೆಯಲ್ಲಿ ರಾಮಚಂದ್ರ ಪೂಜಾರಿಯವರು ಗುರುಪೂರ್ಣಿಮೆಯ ಮಹತ್ವ, ಆಚರಣೆಗಳು ಮತ್ತು ಶಿವಗಿರಿ ತೀರ್ಥಟನೆ ಬಗ್ಗೆ ಮಾಹಿತಿ ನೀಡಿದರು. ಶ್ರೀ ಗುರು […]
Read More
09-07-2019, 1:35 PM
ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಘಟಕದಿಂದ ಶೈಕ್ಷಣಿಕ ದತ್ತು ಸ್ವೀಕಾರ ನಿಧಿಯ ವತಿಯಿಂದ, ದತ್ತು ವಿದ್ಯಾರ್ಥಿಗಳಿಗೆ, 2019 – 20 ನೇ ಸಾಲಿನ ಶೈಕ್ಷಣಿಕ ವೆಚ್ಚವನ್ನು ದಿನಾಂಕ 09/07/2019ರ ಸಾಪ್ತಾಹಿಕ ಸಭೆಯಲ್ಲಿ ದತ್ತುನಿಧಿಯ ದಾನಿಗಳ ಮೂಲಕ ವಿತರಿಸಲಾಯಿತು. ಕೆಪಿಟಿಯಲ್ಲಿ ಸಿವಿಲ್ ಇಂಜಿನಿಯರಿಂಗ್ 5th ಸೆಮಿಸ್ಟರ್ ನಲ್ಲಿರುವ ನಿಖಿಲ್, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಎರಡನೇ ವರ್ಷದ ವಿದ್ಯಾರ್ಥಿನಿ ಕುಮಾರಿ ಪೂಜಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಿಯುತ್ತಿರುವ ಕುಮಾರಿ ಜಯಲಕ್ಷ್ಮಿ, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ದ್ವಿತಿಯ ವರ್ಷದ […]
Read More
07-07-2019, 8:01 AM
ಮಂಗಳೂರು : ಯುವವಾಹಿನಿ (ರಿ) ಸುರತ್ಕಲ್ ಘಟಕವು ದಿನಾಂಕ 07.07.2019 ರಂದು ಆಯೋಜಿಸಿರುವ ಯುವವಾಹಿನಿ ಅಂತರ್ ಘಟಕ ಏರ್ ಬಿರ್ಸೆರ್ ನಳ ಪರಿವಾರೊಡ್ ಅಡುಗೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಯುವವಾಹಿನಿ ( ರಿ) ಮಂಗಳೂರು ಘಟಕವು ಪ್ರಥಮ ಸ್ಥಾನ ಪಡೆದಿರುತ್ತದೆ. ಘಟಕದ ತಂಡದಲ್ಲಿ 8 ಜನರಿದ್ದು, ಉತ್ತಮ ವಸ್ತ್ರವಿನ್ಯಾಸದೊಂದಿಗೆ ಎಲ್ಲಾರ ಮನಸೂರೆಗೊಂಡಿತ್ತು. ಸುಮಾರು 50 ವಿವಿಧ ರೀತಿಯ ತಿಂಡಿಗಳನ್ನು ತಯಾರಿಸಿದ್ದು, ಅಧ್ಯಕ್ಷರಾದ ಕೆ. ಆರ್. ಲಕ್ಷ್ಮೀ ನಾರಾಯಣ ಎಲ್ಲಾ ತಿಂಡಿಗಳ ಬಗ್ಗೆ ಸೂಕ್ತ ವಿವರ ನೀಡಿದರು. ಸಹಕಾರ ನೀಡಿದ […]
Read More
16-06-2019, 2:37 PM
ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಘಟಕದಿಂದ ದಿನಾಂಕ 16.06.2019 ರ ಭಾನುವಾರ ಶ್ರೃಂಗೇರಿ, ಹೊರನಾಡು, ಕಲಶ ಮತ್ತು ಕುದುರೆಮುಖ ಬೆಟ್ಟಗಳಿಗೆ ಪ್ರವಾಸ ಏರ್ಪಡಿಸಲಾಗಿತ್ತು. ಸುಮಾರು 100 ಜನರನ್ನು ಒಳಗೊಂಡ ಪ್ರವಾಸಿ ತಂಡವು ಎರಡು ಬಸ್ಸುಗಳಲ್ಲಿ ಬೆಳಿಗ್ಗೆ 6.00 ಗಂಟೆಗೆ ಸರಿಯಾಗಿ ಯುವವಾಹಿನಿ ಸಭಾಂಗಣದಿಂದ ಹೊರಟ್ಟಿತ್ತು. ಬಜಗೋಳಿಯಲ್ಲಿ ಬೆಳಗ್ಗಿನ ಉಪಾಹಾರ ಮುಗಿಸಿದ ನಂತರ ಕಳಸ, ಹೊರನಾಡು, ಶೃಂಗೇರಿ ಮತ್ತು ಕುದುರೆ ಮುಖ ಬೆಟ್ಟಗಳ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ರಾತ್ರಿ 8.00 ಗಂಟೆಗೆ ವಾಪಸು ಬಂದಿದ್ದೇವೆ. ದಿನವಿಡೀ ಹಾಡು, […]
Read More
25-05-2019, 12:32 PM
ಮಂಗಳೂರು : ಯುವವಾಹಿನಿ(ರಿ) ಮಂಗಳೂರು ಘಟಕದ ವತಿಯಿಂದ ವಿನೂತನ ವಾಗಿ ಜರಗಿದ ಮಾತೆಯರ ದಿನಾಚರಣೆಯ ಬಗ್ಗೆ ವಿಶೇಷ ಉಪನ್ಯಾಸ ವನ್ನು ಭಗವತಿ ಆರಾಧನೆಯ ಬಗ್ಗೆ ಪಿ.ಎಚ್.ಡಿ. ಮಾಡುತ್ತಿರುವ ಉಪನ್ಯಾಸಕ ಅರುಣ್ ಉಳ್ಳಾಲ್ ನೀಡಿದರು. ಹೆಣ್ಣು ಕ್ರಿಯಾಶೀಲ ಶಕ್ತಿ, ಪ್ರಕೃತಿ ಪುರುಷ ಜೊತೆ ಜೊತೆ ಯಾಗಿರುವ ದ್ರಾವಿಡ ಸಂಸ್ಕೃತಿಯಲ್ಲಿ ಪ್ರಾಚೀನ ಸಿಂಧೂ ಬಯಲಿನ ನಾಗರಿಕತೆಯ ಕಾಲದಿಂದಲೂ ಹೆಣ್ಣಿಗೆ ವಿಶೇಷ ಪ್ರಾಮುಖ್ಯತೆ ಯನ್ನು ನೀಡುತ್ತಿದ್ದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಸಂಧರ್ಭದಲ್ಲಿ ಪ್ರತಿಷ್ಠಾಪಿಸಲ್ಪಡುವ ನವದುರ್ಗೆಯರು ಆಧ್ಯಾತ್ಮಿಕತೆಯ ಜೊತೆಗೆ ಹೆಣ್ಣಿನ […]
Read More