ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ
ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ ನಾಗೇಶ್ ಅಮೀನ್ ಮುಲ್ಲಕಾಡು, ಅಧ್ಯಕ್ಷೀಯ ಭಾಷಣದಲ್ಲಿ ನನ್ನ ಒಂದು ವರ್ಷದ ಅವಧಿಯಲ್ಲಿ ಅಧ್ಯಕ್ಷನಾಗಿ ಯಶಸ್ಸು ಪಡೆಯಲು ಮೂಲ ಕಾರಣವೇ ಭಜನೆ ಹಾಗೂ ವೈಯಕ್ತಿಕನಲ್ಲಿ ಬದುಕಿನಲ್ಲಿ ಮಾಡಿದ ಹೊಂದಾಣಿಕೆ ಎಂದರು. ಭಜನೆ ನನ್ನ ಜೀವನದ ಅವಿಭಾಜ್ಯ ಅಂಗ, ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಸಾಧಿಸಿದರೆ ಮಾತ್ರ ಯಶಸ್ಸು ಶತಸಿದ್ಧ. ಸಮಾಜ ಸೇವೆಯಲ್ಲಿ ಯಶಸ್ಸು ಪಡೆಯಬೇಕೆಂದರೆ ಕುಟುಂಬದ ಸದಸ್ಯರ ತ್ಯಾಗ ಹಾಗೂ ಬೆಂಬಲವು ಅತೀ ಮುಖ್ಯವಾಗಿದೆ, ನನ್ನ ಒಂದು ವರ್ಷದ ಯಶಸ್ಸಿನಲ್ಲಿ ಯುವವಾಹಿನಿ ಕುಟುಂಬದ ಪ್ರತಿ ಸದಸ್ಯರ ಸಮಪಾಲು ಇದೆ ಎನ್ನುತ್ತಾ ಎಲ್ಲರಿಗೂ ಮನಃಪೂರ್ವಕವಾಗಿ ಧನ್ಯವಾದ ಸಮರ್ಪಣೆ ಮಾಡಿದರು.
ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಧ್ಯಕ್ಷರಾದ ಶ್ರೀ ರವಿ ಪೂಜಾರಿ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ, ಮಂಗಳೂರು ಘಟಕದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಎ.ಕೆ. ನ್ಯೂರೋ ಸೈಕ್ಯಾಟ್ರಿ ಮತ್ತು ಕೌನ್ಸಿಲಿಂಗ್ ಸೆಂಟರ್ ನ ಡಾಕ್ಟರ್ ಕಿರಣ್ ಕುಮಾರ್ ಪಿ.ಕೆ. ಮುಖ್ಯ ಅತಿಥಿಯಾಗಿ ಬಂದಿದ್ದು, ನೂತನ ತಂಡಕ್ಕೆ ಶುಭಾಶಯ ಕೋರಿದರು. ಇದೇ ಸಂದರ್ಭದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ ಅಧ್ಯಕ್ಷರು, ಕೇಂದ್ರ ಸಮಿತಿಯ ಅಧ್ಯಕ್ಷರು, ಉದ್ಘಾಟಕರು ಹಾಗೂ ಮುಖ್ಯ ಅತಿಥಿಯವರನ್ನು ಸನ್ಮಾನ ಮಾಡಿ ಗೌರವಿಸಲಾಯಿತು.
ಅಧ್ಯಕ್ಷರಾದ ಶ್ರೀ ನಾಗೇಶ್ ಅಮೀನ್ ಆರಂಭದಲ್ಲಿ ಎಲ್ಲರಿಗೂ ಸ್ವಾಗತ ಮಾಡಿದರು, ಮಾಜಿ ಅಧ್ಯಕ್ಷರಾದ ಶ್ರೀ ಗಣೇಶ್ ವಿ.ಕೋಡಿಕಲ್ ಪ್ರಸ್ತಾವನೆಗೈದರು, ನಿಕಟಪೂರ್ವ ಅಧ್ಯಕ್ಷರು ಹಾಗೂ ಮುಖ್ಯ ಚುನಾವಣಾಧಿಕಾರಿಯಾದ ಶ್ರೀ ಗಣೇಶ್ ಸುವರ್ಣ ನೂತನ ತಂಡದ ಪರಿಚಯಿಸಿದರು, ಕಾರ್ಯದರ್ಶಿ ಶ್ರೀ ಶ್ರವಣ್ ಎಸ್. ಕೂಳೂರು, ವಾರ್ಷಿಕ ವರದಿ ವಾಚಿಸಿದರು, ಪ್ರಚಾರ ನಿರ್ದೇಶಕರಾದ ಶ್ರೀ ಹರೀಶ್ ಕೆ.ಸುವರ್ಣ ಸನ್ಮಾನ ಪತ್ರ ಓದಿದರು, ನಿಯೋಜಿತ ಕಾರ್ಯದರ್ಶಿ ಶ್ರೀ ಯಶವಂತ ಪೂಜಾರಿ ಉಳಾಯಿಬೆಟ್ಟು ಧನ್ಯವಾದ ಸಮರ್ಪಣೆ ಮಾಡಿದರು, ನಿಯೋಜಿತ ನೂತನ ಅಧ್ಯಕ್ಷರಾದ ಶ್ರೀ ಅಶೋಕ್ ಅಂಚನ್ ಕೋಡಿಕಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಗಳೂರು ಘಟಕದ ಮಹಿಳಾ ಸದಸ್ಯರು ಹಾಗೂ ಗಾನವಾಹಿಣಿ ಕರೋಕೆ ಕ್ಲಬ್ ನ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿಲಾಗಿತ್ತು, ಘಟಕದ ಸದಸ್ಯರಾದ ಸತೀಶ್ ಕೆ ಕಾರ್ಯಕ್ರಮ ನಿರೂಪಿಸಿದರು.ಯುವವಾಹಿನಿ ಇತರ ಘಟಕಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.