Yuvavahini

ಘಟಕಗಳು

ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮತೋಲನಕ್ಕೆ ಯೋಗ ಸಹಕಾರಿ – ಶಾಂಭವಿ ಅಂಚನ್

ಕಂಕನಾಡಿ :- ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ದಿನಾಂಕ 23 ಜೂನ್ 2022 ರಂದು ಘಟಕದ ನೂತನ ಕಚೇರಿಯ ಸಭಾಂಗಣದಲ್ಲಿ “ವಿಶ್ವ ಯೋಗ ದಿನಾಚರಣೆ”ಯನ್ನು ಆಚರಿಸಲಾಯಿತು. ಶಾಂಭವಿ ಅಂಚನ್ ರವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಭಾರತ ವಿಶ್ವಕ್ಕೆ ಕೊಟ್ಟ ಕೊಡುಗೆಯೇ ಯೋಗ , ಯೋಗದಿಂದ ನಮ್ಮ ಜೀವನಶೈಲಿಯಲ್ಲಿ ಆಗುವ ಬದಲಾವಣೆಯನ್ನು ಉದಾಹರಣೆ ಸಹಿತ ವಿವರಿಸಿ ದಿನ ನಿತ್ಯ ನಾವು ಒಂದು ಗಂಟೆಯಾದರೂ ನಮ್ಮ ಆರೋಗ್ಯಕ್ಕಾಗಿ ಯೋಗ ಮಾಡಬೇಕು ಎಂದು ತಿಳಿಸಿ, ಕೆಲವು ಆಸನಗಳನ್ನು ಸದಸ್ಯರಿಂದ ಮಾಡಿಸಿದರು. […]

Read More

ಶಾಲಾ ಕೈ ತೋಟ ನಿರ್ಮಾಣ

ಯಡ್ತಾಡಿ :- ಯುವವಾಹಿನಿ (ರಿ.) ಯಡ್ತಾಡಿ ಘಟಕ ಹಾಗೂ ಸ. ಹಿ. ಪ್ರಾ. ಶಾಲೆ ಯಡ್ತಾಡಿ ಜಂಟಿಯಾಗಿ ಶಾಲಾ ಮಕ್ಕಳ ಬಿಸಿಯೂಟಕ್ಕೆ ತರಕಾರಿಗಳನ್ನು ಶಾಲಾ ವಠಾರದಲ್ಲಿ ಬೆಳೆಯುವ ವಿನೂತನ ಕಾರ್ಯಕ್ರಮವನ್ನು ದಿನಾಂಕ 19 ಜೂನ್ 2022ರ ರವಿವಾರದಂದು ಸ. ಹಿ. ಪ್ರಾ. ಶಾಲೆ ಯಡ್ತಾಡಿಯಲ್ಲಿ ನಡೆಸಲಾಯಿತು.ಘಟಕದ ಅಧ್ಯಕ್ಷರಾದ ಸೋಮಪ್ಪ ಪೂಜಾರಿಯವರು ಹಾಗೂ ಕಾರ್ಯದರ್ಶಿ ಸುಶಾಂತ್ ಪೂಜಾರಿಯವರು ತರಕಾರಿ ಬೀಜಗಳನ್ನು ಮಣ್ಣಿನ ದಿಬ್ಬಗಳಲ್ಲಿ ಬಿತ್ತುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯುವವಾಹಿನಿ(ರಿ.) ಯಡ್ತಾಡಿ ಘಟಕದ ಸದಸ್ಯರು ಹಾಗೂ ಶಾಲಾ […]

Read More

ಮುಗ್ದ ಮನಸ್ಸಿನ ಸಮ್ಮಿಲನ

ಕೂಳೂರು:- ದಿನಾಂಕ 19 ಜೂನ್ 2022 ರಂದು ಯುವವಾಹಿನಿ ಕೂಳೂರು ಘಟಕದ ವತಿಯಿಂದ “ಮುಗ್ದ ಮನಸ್ಸಿನ ಸಮ್ಮಿಲನ” ಕಾರ್ಯಕ್ರಮವು ಸರಕಾರಿ ಬಾಲಕರ ಬಾಲ ಮಂದಿರ ಬೊಂದೆಲ್ ಇಲ್ಲಿ ನಡೆಯಿತು. ಕಾರ್ಯಕ್ರಮವನ್ನು ಹೂವಿನ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷರಾದ ರಾಜೇಶ್ ಬಂಟ್ವಾಳ್ ಮಕ್ಕಳ ಮನಸ್ಸು ಆವೆ ಮಣ್ಣಿನ ತರಹ ಅದಕ್ಕೆ ನಾವು ಯಾವ ರೀತಿ ಆಕಾರ ನೀಡುತ್ತೆವೋ ಅದೇ ರೂಪ ಪಡೆಯುತ್ತದೆ,ಮುಗ್ದ ಮನಸ್ಸಿನ ಮಕ್ಕಳ ಜೊತೆ ಒಂದು ದಿನ […]

Read More

ಒಂದು ದಿನದ ಕರ ಸೇವೆ

ಸುರತ್ಕಲ್ :- ದಿನಾಂಕ 19 ಜೂನ್ 2022 ರಂದು ಯುವವಾಹಿನಿ (ರಿ.) ಸುರತ್ಕಲ್ ಘಟಕದ ವತಿಯಿಂದ ತೋಕೂರು ಸುಬ್ರಮಣ್ಯ ದೇವಸ್ಥಾನದ ಜೀರ್ಣೋದ್ದಾರದ ಪ್ರಯುಕ್ತ ಒಂದು ದಿನದ ಕರ ಸೇವೆಯನ್ನು ನೆರವೇರಿಸಲಾಯಿತು. ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರು ಸೇರಿ ಒಟ್ಟು 18 ಮಂದಿ ಈ ಸೇವೆಯಲ್ಲಿ ಪಾಲ್ಗೊಂಡು ಸೇವೆಯನ್ನು ಸಲ್ಲಿಸಲಾಯಿತು.

Read More

ಪರಿಸರವನ್ನು ಉಳಿಸುವುದು ಮತ್ತು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ” : ರಾಧಾಕೃಷ್ಣ ಬಿ.ಜಿ

ಮಾಣಿ :- ಜಗತ್ತಿನ ಕೆಲವೊಂದು ಬದಲಾವಣೆಗೆ ಪರಿಸರವು ಕಾರಣವಾಗುತ್ತದೆ.ಇಂದೆಲ್ಲ ಪರಿಸರವನ್ನು ನಾಶಗೊಳಿಸಿ ಕಟ್ಟಡಗಳು ತಲೆ ಎತ್ತುತ್ತಿವೆ.ಇದು ಮುಂದಿನ ಪೀಳಿಗೆಗೆ ಅಪಾಯಕಾರಿಯಾಗಿದೆ, ಹಾಗಾಗಿ ಪರಿಸರವನ್ನು ಉಳಿಸುವುದು ಮತ್ತು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ” ಎಂದು ಪುತ್ತೂರು ಪೋಲೀಸ್ ಇಲಾಖೆಯ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ರಾಧಾಕೃಷ್ಣ ಬಿ.ಜಿ ರವರು ತಿಳಿಸಿದರು. ಅವರು ದಿನಾಂಕ 19 ಜೂನ್ 2022 ರ ಆದಿತ್ಯವಾರದಂದು ದ.ಕ.ಜಿ.ಪಂ.ಹಿ. ಪ್ರಾಥಮಿಕ ಶಾಲೆ,ಮಲ್ಲಡ್ಕ,ಪೆರ್ನೆ ಇಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆದ “ಹಸಿರೇ-ಉಸಿರು” ಕಾರ್ಯಕ್ರಮದಲ್ಲಿ ಮುಖ್ಯ […]

Read More

ಗುರು ಸ್ಫೂರ್ತಿ ಕಾರ್ಯಕ್ರಮ-2022

ಕಡಬ :- ದಿನಾಂಕ 19 ಜೂನ್ 2022 ರಂದು ಯುವವಾಹಿನಿ (ರಿ.) ಕಡಬ ಘಟಕದ ವತಿಯಿಂದ ”ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎನ್ನುವ ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವದ ಸತ್ವ ನಮಗೆಲ್ಲರಿಗೂ ಆದರ್ಶ , ಅವರ ಪ್ರತಿಯೊಂದು ಸಂದೇಶ ಮನುಕುಲಕ್ಕೆ ಒಳಿತು ನೀಡುತ್ತ ಬಂದಿದೆ. ಆದ್ದರಿಂದ ನಾರಾಯಣ ಗುರು ತತ್ವ ಪ್ರತಿಯೊಬ್ಬನಿಗೂ ತಿಳಿಯಬೇಕು, ಪ್ರತಿ ಮನೆಗೂ ತಲುಪಬೇಕು ಎನ್ನುವ ದೃಷ್ಟಿಯಿಂದ “ಗುರು ಸ್ಫೂರ್ತಿ – 2022” ಎನ್ನುವ ಕಾರ್ಯಕ್ರಮವನ್ನು ಕಡಬ ತಾಲೂಕಿನ ಕೊಂಬಾರು […]

Read More

ವೈದ್ಯಕೀಯ ನೆರವು

ವೇಣೂರು:- ಯುವವಾಹಿನಿ ವೇಣೂರು ಘಟಕದ ವತಿಯಿಂದ ಗರ್ಡಾಡಿ ಗ್ರಾಮದ ಕುಂಡದಬೆಟ್ಟು ರನ್ನಾಡಿ ಪಲ್ಕೆ ನಿವಾಸಿ ಕೃಷ್ಣಪ್ಪ ಗುರು ಸ್ವಾಮಿ ತೀವ್ರ ಅನಾರೋಗ್ಯದಿಂದ ಇದ್ದು, ಸರಳ ಸಜ್ಜನ ವ್ಯಕ್ತಿಯಾದ ಇವರು ಶ್ರೀ ಅಯ್ಯಪ್ಪ ಸ್ವಾಮಿಯ ಆರಾಧಕರಾಗಿ ಗುರುಸ್ವಾಮಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದು, ಇದೀಗ ತೀರಾ ಅಸೌಖ್ಯದಿಂದಾಗಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದು ಇವರಿಗೆ ಯುವವಾಹಿನಿ(ರಿ.) ವೇಣೂರು ಘಟಕವು ನಡೆಸಿಕೊಂಡು ಬರುತ್ತಿರುವ “ಆಸರೆ ಸೇವಾ ಯೋಜನೆ” ಯ ಮೂಲಕ ರೂಪಾಯಿ 5000/- ಚೆಕ್ ನ್ನು ದಿನಾಂಕ 14-06-2022ನೇ ಮಂಗಳವಾರದಂದು ಕೃಷ್ಣಪ್ಪ ಪೂಜಾರಿಯವರ ಮನೆಗೆ […]

Read More

ತಲೆಗೊಂದು ಸೂರು ನೆರವಿನ ಸಹಾಯ ಹಸ್ತ

ಉಡುಪಿ :- ದಿನಾಂಕ 14 ಜೂನ್ 2022 ರಂದು ಉಡುಪಿ ಘಟಕದ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಒಂದಾದ ತಲೆಗೊಂದು ಸೂರು ಕಾರ್ಯಕ್ರಮದಡಿಯಲ್ಲಿ ಈ ಬಾರಿ ತೀರ ಅವಶ್ಯಕತೆ ಇರುವ ಒಂದು ಬಡ ಕುಟುಂಬದ ಮನೆಯ ಮೇಲ್ಚಾವಣಿಯ ದುರಸ್ತಿ ಕಾರ್ಯ ಹಾಗೂ ವಿದ್ಯುತ್ ಪುನರ್ ನವೀಕರಣ ಹಾಗೂ ಪೇಂಟಿಂಗ್ ಕಾರ್ಯಕ್ರಮವು ಪೂರ್ಣಗೊಂಡಿದ್ದು ದಿನಾಂಕ 14 ಜುನ್ 2022 ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರು ,ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Read More

ಮನೆ ಮನೆಗೆ ಗುರುತತ್ವ ಸಂಚಾರ

ಮಾಣಿ :- ಯುವವಾಹಿನಿ (ರಿ.) ಮಾಣಿ ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ(ರಿ.) ಮಾಣಿ ಇದರ ಸಹಕಾರದೊಂದಿಗೆ ಹದಿನಾರನೇ ಹೆಜ್ಜೆಯಾಗಿ “ಮನೆ ಮನೆಗೆ ಗುರುತತ್ವ ಸಂಚಾರ” ಕಾರ್ಯಕ್ರಮವು ದಿನಾಂಕ 12 ಜೂನ್ 2022ರಂದು ಘಟಕದ ಸದಸ್ಯರಾದ ಬಾಲಕೃಷ್ಣ ಅನಂತಾಡಿ ಇವರ ಮನೆಯಲ್ಲಿ ನಡೆಯಿತು. “ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎನ್ನುವ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದ ಸತ್ವ ನಮಗೆಲ್ಲರಿಗೂ ಆದರ್ಶ, ಅವರ ಪ್ರತಿಯೊಂದು ಸಂದೇಶ ಮನುಕುಲಕ್ಕೆ ಒಳಿತು ನೀಡುತ್ತ ಬಂದಿದೆ. ಆದ್ದರಿಂದ ನಾರಾಯಣ […]

Read More

ವಿಶೇಷ ಮಕ್ಕಳ ಸಂವಾದ – 2022

ಯುವವಾಹಿನಿ(ರಿ) ಕಡಬ ಘಟಕ ಹಾಗೂ ವಿದ್ಯಾ ಚೇತನ ವಿಶೇಷ ಮಕ್ಕಳ ಶಾಲೆ ರಾಮಕುಂಜ ಇದರ ಸಹಯೋಗದಲ್ಲಿ ವಿಶೇಷ ಮಕ್ಕಳ ಸಂವಾದ ಕಾರ್ಯಕ್ರಮವು 06 ಜೂನ್ 2022 ನೇ ಸೋಮವಾರ ವಿದ್ಯಾ ಚೇತನ ವಿಶೇಷ ಮಕ್ಕಳ ಶಾಲೆ ರಾಮಕುಂಜ ಇಲ್ಲಿ ನಡೆಯಿತು. ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶರವೂರು ಇದರ ವ್ಯವಸ್ಥಾಪನ ಸಮಿತಿ ಸದಸ್ಯರಾದ ಮಂಜುಳಾ ಕೆ, ಸಿ ಎಂಡೋಪೀಡಿತ ಮಕ್ಕಳನ್ನು ನೋಡಿಕೊಳ್ಳಲು ಸರಕಾರವು ಐದು ಎಕರೆ ಜಮೀನನ್ನು ಆಲಂಕಾರ್ ನಲ್ಲಿ ನಿಗದಿಪಡಿಸಿದೆ, ನಿಗದಿಪಡಿಸಿದ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026, ಮಾರ್ಚ್ 14
ಸ್ಥಳ : ಮಂಗಳೂರು ಪುರಭವನ

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ, “ಸಖೀ ಸಂವಾದ”ಕಾರ್ಯಾಗಾರ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
error: Content is protected !!