Yuvavahini

ಸಮಾಜ ಸೇವೆ

ಶ್ರೀ ಧರಣೇಂದ್ರ ಕುಮಾರ್ ಇವರಿಗೆ ಯುವವಾಹಿನಿ ಯುವ ಸಾಧನಾ ಪುರಸ್ಕಾರ -2017

    ಸಾಮಾಜಿಕ ಕ್ಷೇತ್ರದ ಸಾಧಕ ಶ್ರೀ ಧರಣೇಂದ್ರ ಕುಮಾರ್ ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಬಜೆ ಮನೆತನದ ದಿ. ಬಾಬು ಪೂಜಾರಿ ಮತ್ತು ಶ್ರೀಮತಿ ಸಿರಿಯಮ್ಮ ದಂಪತಿಯರ ಸುಪುತ್ರನಾಗಿ ಜನನ. ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಿಂಜೆಯಲ್ಲಿ ಹಾಗೂ ಪ್ರೌಢಶಿಕ್ಷಣ ಹಾಗೂ ಪದವಿ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ಮತ್ತು ಪದವಿ ಕಾಲೇಜು ಸಿದ್ಧಕಟ್ಟೆಯಲ್ಲಿ ಮುಗಿಸಿ ವೃತ್ತಿ ಜೀವನವನ್ನು ಕೃಷಿಯಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿ ಜೀವನದಲ್ಲಿಯೇ ಸಮಾಜಸೇವೆಯನ್ನು ಮೈಗೂಡಿಸಿಕೊಂಡು ಫ್ರೆಂಡ್ಸ್ ಕ್ಲಬ್ (ರಿ.) ಹೊಸಂಗಡಿ […]

Read More

ಮೃತ ಯೋಗೀಶ್ ಪೂಜಾರಿ ಕುಟುಂಬಕ್ಕೆ ಸಾಂತ್ವನ

ಇತ್ತೀಚೆಗೆ ಬಡಗಬೆಳ್ಳೂರು ನಿವಾಸಿ ಯೋಗೀಶ್ ಪೂಜಾರಿ ವಿದ್ಯುತ್ ತಂತಿ ತಗುಲಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ ಈ ಸಾವಿನಿಂದಾಗಿ ಅವರ ಹೆಂಡತಿ ಹಾಗೂ ಸಣ್ಣ ನಾಲ್ಕು ಮಕ್ಕಳ ಬಡ ಸಂಸಾರ ಅನಾಥವಾಗಿದೆ.ಮೃತ ಯೋಗೀಶ್ ಪೂಜಾರಿಯವರ ಮನೆಗೆ ದಿನಾಂಕ 10.07/2017ರಂದು ಯುವವಾಹಿನಿ ಬಂಟ್ವಾಳ ಘಟಕದ ಸದಸ್ಯರು ಬೇಟಿ ನೀಡಿ ರೂ 10,000/- ಸಾಂತ್ವನ ನಿಧಿ ನೀಡಲಾಯಿತು. ಹಾಗೂ ಮೂರು ಮಕ್ಕಳ ವಿದ್ಯಾಭ್ಯಾಸದ ವೆಚ್ಚ ಭರಿಸಲು ನಿರ್ಧರಿಸಲಾಯಿತು ಈ ಸಂಧರ್ಭದಲ್ಲಿ ಯುವವಾಹಿನಿ ಅಧ್ಯಕ್ಷರಾದ ಅರುಣ್ ಕುಮಾರ್, ಮಾಜಿ ಅಧ್ಯಕ್ಷರಾದ […]

Read More

ಸ್ವಚ್ಚತಾ ಅಭಿಯಾನ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ದಿನಾಂಕ 18.06.2017 ರಂದು ಅಮ್ರತಾನಂದಮಯಿ ಟ್ರಸ್ಟ್ ಇದರ ಸಹಯೋಗದೊಂದಿಗೆ ಮಂಗಳೂರಿನ ಉರ್ವಾಸ್ಟೊರ್, ಕೊಟ್ಟಾರ ಪರಿಸರದಲ್ಲಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸುಪ್ರೀತಾ ಪೂಜಾರಿ,ಕಾರ್ಯದರ್ಶಿ ಸುನೀತಾ,ಉಪಾಧ್ಯಕ್ಷರಾದ ರಶ್ಮಿ ಚಂದ್ರಶೇಖರ್,, ವಸಂತಿ, ಶರ್ಮಿಳಾ, ಕುಶಲಾ ಯಶವಂತ್, ಸುರೇಖಾ,ಶುಭಾ ರಾಜೇಂದ್ರ, ಕಾರ್ಯಕ್ರಮದ ಸಂಚಾಲಕರಾದ ಶ್ರೀಮತಿ ಉಮಾಶ್ರೀಕಾಂತ್ ಮತ್ತಿತರರು ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿದ್ದರು

Read More

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡುವ ಕಾರ್ಯ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಯುವವಾಹಿನಿ(ರಿ) ಸುಳ್ಯ ಘಟಕದ ವತಿಯಿಂದ ದಿನಾಂಕ 10/06/2017ನೇ ಶನಿವಾರದಂದು ಸುಳ್ಯ ಶ್ರೀ ಕೋಟಿ ಚೆನ್ನಯ ಬ್ರಹ್ಮ ಬೈದರ್ಕಳ ಗರಡಿ ಶೇಣಿ’ಯಲ್ಲಿ ಸಸಿ ನೆಡುವ ಕಾರ್ಯಕ್ರಮವು ನೆರವೇರಿತು. ಶೇಣಿ ಗರಡಿಯ ಅನುವಂಶಿಕ ಆಡಳಿತದಾರರಾದ  ಬಿ.ಕೆ.ಧರ್ಮಪಾಲ ಶೇಣಿ ಇವರು ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.   ಸುಳ್ಯ ಯುವವಾಹಿನಿಯ  ಅಧ್ಯಕ್ಷರಾದ ಶಿವಪ್ರಸಾದ್. ಕೆ.ವಿ ಸ್ವಾಗತಿಸಿದರು ಕಾರ್ಯದರ್ಶಿ ರವೀಂದ್ರ. ಎಚ್ ವಂದಿಸಿದರು ಈ ಸಂದರ್ಭದಲ್ಲಿ ಯುವವಾಹಿನಿ ಪದಾದಿಕಾರಿಗಳಾದ ರವಿಕುಮಾರ್, ರವಿಕಿರಣ್, ಲೋಹಿತ್,ಪ್ರವೀಣ್ ನೆಟ್ಟಾರ್,ಹೊನ್ನಪ್ಪ ಪೂಜಾರಿ ,ಸದಾನಂದ […]

Read More

ತಿಮ್ಮಪ್ಪ ಪೂಜಾರಿ ಕೊಲೆ ಪ್ರಕರಣ : ಸಮಗ್ರ ತನಿಖೆಗೆ ಯುವವಾಹಿನಿ ಒತ್ತಾಯ

ಜೂನ್ 2 ರಂದು ಬೆಳ್ತಂಗಡಿ ಸಂತೆಕಟ್ಟೆ ಸಮೀಪದ ತಿಮ್ಮಪ್ಪ ಪೂಜಾರಿಯನ್ನು ಸ್ಥಳೀಯ ನಿವಾಸಿ ಕಾಲೇಜು ವಿದ್ಯಾರ್ಥಿ ಚಂದ್ರಶೇಖರ ಬೀಕರವಾಗಿ ಕೊಲೆಗೈದಿದ್ದಾನೆ. ಯುವಜನರು ಗಾಂಜ ಸೇರಿದಂತೆ ಮಾದಕ ವ್ಯಸನಗಳಿಗೆ ಬಲಿಯಾಗಿ ಅಡ್ಡ ದಾರಿ ಹಿಡಿಯುತ್ತಿದ್ದಾರೆ. ಕೊಲೆ ಅತ್ಯಾಚಾರದಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಸಣ್ಣ ಪುಟ್ಟ ವಿಚಾರಗಳಿಗೂ ಕೊಲೆ ಮಾಡುತ್ತಿರುವುದು ಅತ್ಯಂತ ಆತಂಕಕಾರಿ. ಕೊಲೆಯಾದ ತಿಮ್ಮಪ್ಪ ಪೂಜಾರಿಯವರ ಪತ್ನಿ ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕು.ಪತ್ನಿಗೆ ಸರಕಾರಿ ಉದ್ಯೋಗದ ಜತೆಗೆ ಮಕ್ಜಳ ಶಿಕ್ಷಣಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಬೆಳ್ತಂಗಡಿ […]

Read More

ನೊಂದ ಎಳೆ ಮನಸ್ಸುಗಳಿಗೆ ಯುವವಾಹಿನಿ ಮಾತೆಯರ ಸಾಂತ್ವನ

ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದ ಸದಸ್ಯೆಯರು ಎಚ್ ಐ ವಿ ಜತೆ ಬದುಕುವ ಮಕ್ಕಳ ಆಶ್ರಯ ತಾಣ ಸಂವೇದನಾಗೆ 03.06.2017 ರಂದು ಭೇಟಿ ನೀಡಿದರು ಆಶ್ರಯತಾಣದ ಮಕ್ಕಳೊಂದಿಗೆ ಬೆರೆತು ಅವರ ಯೋಗ ಕ್ಷೇಮ ವಿಚಾರಿಸಿದರು. ಮಕ್ಕಳಿಗೆ ಉಪಹಾರ,ಸಿಹಿತಿಂಡಿ, ದಿನಸಿ ಸಾಮಗ್ರಿ ಹಾಗೂ ರೂ.2500/- ಮಹಿಳಾ ಘಟಕದ ವತಿಯಿಂದ ನೀಡಲಾಯಿತು. ಯುವವಾಹಿನಿ ಮಂಗಳೂರು ಮ ಹಿಳಾ ಘಟಕದ ಅಧ್ಯಕ್ಷೆ ಸುಪ್ರೀತ ಪೂಜಾರಿ, ಕಾರ್ಯದರ್ಶಿ ಸುನೀತಾ, ಉಪಾದ್ಯಕ್ಷೆ ರಶ್ಮಿ ಚಂದ್ರಶೇಖರ್ , ವಸಂತಿ ಬಿ,ಶುಭ ರಾಜೇಂದ್ರ, ಸುರೇಖ,ಕುಶಲಾಕ್ಷಿ ಯಶವಂತ್, ಶರ್ಮಿಳ […]

Read More

ದಿ.ಚಂದ್ರಹಾಸ್ ಕುಟುಂಬಕ್ಕೆ ರೂ50,000/- ಸಹಾಯಹಸ್ತ

ಯುವವಾಹಿನಿ(ರಿ)ಬೆಳ್ತಂಗಡಿ ಘಟಕದ ವತಿಯಿಂದ ಇತ್ತೀಚಿಗೆ  ರಸ್ತೆ ಅಪಘಾತದಲ್ಲಿ ನಮ್ಮನಗಲಿದ ಯುವವಾಹಿನಿಯ ಸಕ್ರೀಯ ಸದಸ್ಯರಾದ ಚಂದ್ರಹಾಸ ಮೇಲಂತಬೆಟ್ಟು ಅವರಿಗೆ  ಸಾಂತ್ವನ ನಿಧಿ  50,000/-  ರೂಪಾಯಿಗಳ ಚೆಕ್ಕುನ್ನು  ಕೇಂದ್ರ ಸಮಿತಿಯ ಅದ್ಯಕ್ಪರಾದ ಪದ್ಮನಾಭ ಮರೋಳಿ ಯವರು ಚಂದ್ರಹಾಸರವರ ತಾಯಿಗೆ ನೀಡಿದರು ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ    ಹರೀಶ್ ಬೈಲಬರಿ, ರಾಕೇಶ್ ಮೂಡುಕೋಡಿ,ಘಟಕದ ಕಾರ್ಯದರ್ಶಿ ಪ್ರಶಾಂತ್ ಮಚ್ಚಿನ ಹಾಗೂ ಆತ್ಮೀಯ ಯವಕ ಮಂಡಲದ ಗೌರವ ಅದ್ಯಕ್ಪರಾದ ಸಚಿನ್ ಕುಮಾರ್ ನೂಜೋಡಿ ಹಾಗೂ ಘಟಕದ  ನಿರ್ದೇಶಕರದ ಯಶೋದರ ಚಾರ್ಮಾಡಿ ಸ್ಮೀತೆಶ್ ಎಸ್ […]

Read More

ಮೂಲ್ಕಿ ಯುವವಾಹಿನಿಯಿಂದ ಧಾರ್ಮಿಕ ಸೇವಾ ಕಾರ್ಯ

ದಿನಾಂಕ 30.04.2017 ರಿಂದ 05.05.2017 ರವರಗೆ ಮೂಲ್ಕಿ ಬಪ್ಪನಾಡು ದೇವಸ್ಥಾನದಲ್ಲಿ ಲೋಕಕಲ್ಯಾಣರ್ಥವಾಗಿ ಜರುಗಿದ ಶ್ರೀ ಶತಚಂಡಿಕಾದ್ವರದಲ್ಲಿ ಹೊರೆ ಕಾಣಿಕೆಯನ್ನು ಮೂಲ್ಕಿ ಯುವವಾಹಿನಿ ವತಿಯಿಂದ ಸಮರ್ಪಿಸಲಾಯಿತು. ಹಾಗೂ ಆರು ದಿನಗಳ ಕಾಲ ಜರುಗಿದ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮ ಯಶಸ್ವಿಯಾಗಲು ಯುವವಾಹಿನಿ ಸದಸ್ಯರು ಸಹಕಾರ ನೀಡಿದರು ಮೂಲ್ಕಿ ಯುವವಾಹಿನಿ ಅದ್ಯಕ್ಷ ಚೇತನ್ ಕುಮಾರ್, ಪದಾದಿಕಾರಿಗಳು,ಮಾಜಿ ಅಧ್ಯಕ್ಷರುಗಳು ಸದಸ್ಯರು ಉಪಸ್ಥಿತರಿದ್ದರು

Read More

ನಮ್ಮ ಮನೆ :- ಬಡ ಕುಟುಂಬಕ್ಕೆ ಮನೆ ಹಸ್ತಾಂತರ

ಯುವವಾಹಿನಿ (ರಿ) ಹೆಜಮಾಡಿ ಘಟಕದ ಆಶ್ರಯದಲ್ಲಿ ತೀರಾ ಬಡ ಕುಟುಂಬ ಪೋಂಕ್ರ ಪೂಜಾರಿ  ಇವರಿಗೆ ಸುಮಾರು ರೂಪಾಯಿ ಮೂರುವರೆ ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ಹಸ್ತಾಂತರಿಸಲಾಯಿತು. ಹೆಜಮಾಡಿ ಯುವವಾಹಿನಿಯ ಯಶಸ್ವೀ ಸಮಾಜಮುಖಿ ಕಾರ್ಯ ಮನೆ ನಿರ್ಮಾಣ ಯೋಜನೆ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಕೇವಲ ಮೂರು ತಿಂಗಳ ಅವಧಿಯಲ್ಲಿ ದಾನಿಗಳ ಸಹಾಯ ಹಾಗೂ ಹೆಜಮಾಡಿ ಯುವವಾಹಿನಿ ಸದಸ್ಯರ ಶ್ರಮದ ಫಲವಾಗಿ ನಮ್ಮ ಮನೆ ನಿರ್ಮಾಣ ಯೋಜನೆ ಯಶಸ್ವಿಯಾಗಿದೆ ಎಂದು ಹೆಜಮಾಡಿ ಯುವವಾಹಿನಿ ಅಧ್ಯಕ್ಷರಾದ ಲೋಕೇಶ್ ಅಮೀನ್ ತಿಳಿಸಿದರು. […]

Read More

ಉಡುಪಿ ಯುವವಾಹಿನಿಯಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ

ತಲೆಗೊಂದು ಸೂರು – ಇದು ಯುವವಾಹಿನಿ (ರಿ) ಉಡುಪಿ ಘಟಕದ ಶಾಶ್ವತ ಯಶಸ್ವೀ ಯೋಜನೆ – ವರುಷಕ್ಕೊಂದು ತೀರಾ ಬಡ ಕುಟುಂಬವನ್ನು ಆಯ್ಕೆ ಮಾಡಿ ಅವರಿಗೆ ಮನೆ ನಿರ್ಮಾಣ ಮಾಡಿ ಕೊಡುವುದು ಉಡುಪಿ ಯುವವಾಹಿನಿಯ ಜನಪ್ರಿಯ ಸಮಾಜಮುಖಿ ಕಾರ್ಯಕ್ರಮ. ಈ ವರ್ಷದ ತಲೆಗೊಂದು ಸೂರು ಕಾರ್ಯಕ್ರಮದಲ್ಲಿ ದಿನಾಂಕ 23.04.2017ನೇ ಆದಿತ್ಯವಾರ ಶ್ರೀಮತಿ ಇಂದಿರಾ ಎಂಬ ಬಡ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿ ಹಸ್ತಾಂತರಿಸಲಾಗಿದೆ. ರಾಜ್ಯ ಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಸಾಂಕೇತಿಕವಾಗಿ  ಶ್ರೀಮತಿ ಇಂದಿರಾ ಕುಟುಂಬಕ್ಕೆ ಮನೆ ಹಸ್ತಾಂತರಿಸಿದರು. ಮಾಜಿ ಸಚಿವ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!