Yuvavahini

ಸಮಾಜ ಸೇವೆ

ಗಾಂಧಿ ಜಯಂತಿ ಆಚರಣೆ ಹಾಗೂ ಸ್ವಚ್ಛತಾ ಅಭಿಯಾನ

ಕೂಳೂರು : ಯುವವಾಹಿನಿ(ರಿ) ಕೂಳೂರು ಘಟಕ ಮತ್ತು ಕೂಳೂರು ಪ್ರೌಢಶಾಲೆ ಇವರ ಜಂಟಿ ಸಹಯೋಗದಲ್ಲಿ ಗಾಂಧಿ ಜಯಂತಿ ಆಚರಣೆ ಹಾಗೂ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ದಿನಾಂಕ 02/10/2018 ರಂದು ಕೂಳೂರು ಪ್ರೌಢಶಾಲೆ ಇಲ್ಲಿ ಬೆಳಗ್ಗೆ 9.30 ಕ್ಕೆ ಸರಿಯಾಗಿ ಹಮ್ಮಿಕೊಳ್ಳಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕೂಳೂರು ಚರ್ಚಿನ ಫಾ.ವಿನ್ಸೆಂಟ್ ಡಿಸೋಜಾ ಇವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಯುವವಾಹಿನಿ(ರಿ) ಕೂಳೂರು ಘಟಕದ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಕೂಳೂರು ಘಟಕದ ಸಲಹೆಗಾರರು ಹಾಗೂ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಮಾಜಿ […]

Read More

ಯುವವಾಹಿನಿ(ರಿ) ಸಸಿಹಿತ್ಲು ಘಟಕದ ಆಶ್ರಯದಲ್ಲಿ ಸ್ವಚ್ಛತಾ ಕಾರ್ಯ

ಸಸಿಹಿತ್ಲು : ಯುವವಾಹಿನಿ(ರಿ) ಸಸಿಹಿತ್ಲು ಘಟಕದ ಆಶ್ರಯದಲ್ಲಿ ದಿನಾಂಕ 30.09.2018ರಂದು ಬೆಳಿಗ್ಗೆ 9ರಿಂದ 12ಗಂಟೆಯವರೆಗೆ  ಸ್ವಚ್ಛತಾ ಕಾರ್ಯವು ಬ್ರಹ್ಮಶ್ರೀ ನಾರಯಾಣಗುರು ಸೇವಾ ಸಂಘ ಅಗ್ಗಿದಕಳಿಯ ಸಸಿಹಿತ್ಲು ವಠಾರದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು, ಶೈಲೇಶ್ ಕುಮಾರ್ ಸಸಿಹಿತ್ಲು, ಕಾರ್ಯದರ್ಶಿ ವೀಣಾ ಅಮೀನ್ ಹಾಗೂ ಘಟಕದ ಸದಸ್ಯರು ಭಾಗವಹಿಸಿದ್ದರು.

Read More

ಯುವವಾಹಿನಿ ಸೇವಾ ಯೋಜನೆಗೆ ಚಾಲನೆ

ವೇಣೂರು : ಪ್ರತೀ ತಿಂಗಳು ಅಶಕ್ತ ಕುಟುಂಬದ ನೆರವಿಗಾಗಿ ರೂಪಿಸಿರುವ ಘಟಕದ ಕನಸಿನ ಯೋಜನೆಯಾದ ಯುವವಾಹಿನಿ ಸೇವಾ ಯೋಜನೆ ವೇಣೂರು ಇದರ ಚಾಲನೆಯು ದಿನಾಂಕ 23-09-18 ನೇ ಆದಿತ್ಯವಾರದಂದು ವೇಣೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯಿತು. ಕ್ಷೇತ್ರದ ದೇವರಿಗೆ ಯೋಜನೆ ಯಶಸ್ವಿಗಾಗಿ ಪ್ರಾರ್ಥನೆ ಸಲ್ಲಿಸಿ ,ನಂತರ ದೇವಾಲಯದ ಸಭಾಂಗಣದಲ್ಲಿ ಘಟಕದ ಮಾಸಿಕ ಸಭೆಯನ್ನು ಘಟಕದ ಅಧ್ಯಕ್ಷರಾದ ನಿತೀಶ್ ಎಚ್ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು, ಘಟಕದ ಕಾರ್ಯದರ್ಶಿ ಸತೀಶ್ ಪಿ ಎನ್ ಸ್ವಾಗತಿಸಿದರು, ಅಧ್ಯಕ್ಷತೆ ವಹಿಸಿದ್ದ ನಿತೀಶ್ ಎಚ್ ಸೇವಾ […]

Read More

ಯುವವಾಹಿನಿ(ರಿ)ಕುಪ್ಪೆಪದವು ಘಟಕದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಕುಪ್ಪೆಪದವು : ಯುವವಾಹಿನಿ(ರಿ) ಕುಪ್ಪೆಪದವು ಘಟಕದ ವತಿಯಿಂದ ತಾ23.09.2018 ರಂದು ಬೆಳಿಗ್ಗೆ 8.ರಿಂದ 10 ರ ತನಕ ಬ್ರಹ್ಮಶ್ರೀ ನಾರಾಯಣಗುರು ಮಂದಿರದಿಂದ ಕಾಡಕೇರಿ ಕ್ರಾಸ್ ತನಕ ಸ್ವಚ್ಛತಾ ಕಾರ್ಯಕ್ರಮವು .ಘಟಕ ಅಧ್ಯಕ್ಷರಾದ ಅರುಣ್ ಕುಮಾರ್ ನೇತೃತ್ವದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು ಸೇರಿದಂತೆ ಒಟ್ಟು 52 ಸದಸ್ಯರು ಕೈಜೋಡಿಸಿ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ಸುಗೊಳಿಸಿದರು…

Read More

ಸ್ವಚ್ಚತಾ ಅಭಿಯಾನದಲ್ಲಿ ಯುವವಾಹಿನಿ (ರಿ.) ಬಜ್ಪೆ ಘಟಕದ ಸದಸ್ಯರು.

ಬಜ್ಪೆ : ಕೇಂದ್ರ ಸರಕಾರದ ಸಲಹೆಯ ಪ್ರಕಾರ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ದೇಶಾದ್ಯಂತ ಕೈಗೊಂಡಿರುವ “ಸ್ವಚ್ಚತಾ ಸೇವಾ” ಕಾರ್ಯಕ್ರಮದನ್ವಯ MRPL, ರೋಟರಿ ಕ್ಲಬ್ ಬಜ್ಪೆ ಮತ್ತು ಯುವವಾಹಿನಿ(ರಿ.) ಬಜ್ಪೆ ಘಟಕದ ಆಶ್ರಯದಲ್ಲಿ ದಿನಾಂಕ 23/09/2018ರಂದು ಬಜ್ಪೆ ಪೇಟೆಯ ಪರಿಸರದಲ್ಲಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸ್ಥಳೀಯ ಸಂಘ ಸಂಸ್ಥೆಗಳೊಂದಿಗೆ ಸೇರಿ ನಡೆಸಿದ ಈ ಕಾರ್ಯಕ್ರಮದಲ್ಲಿ 350 ಹೆಚ್ಚು ಜನರು ಸಕ್ರೀಯವಾಗಿ ಭಾಗವಹಿಸಿದರು. MRPL ಸಂಸ್ಥೆ ಭಾಗವಹಿಸಿದ ಎಲ್ಲರಿಗೂ ಟೀ-ಶರ್ಟ್ ಹಾಗೂ ಉಪಹಾರದ […]

Read More

ಯುವವಾಹಿನಿ (ರಿ) ಬೆಳುವಾಯಿ ಘಟಕದ ವತಿಯಿಂದ ರಸ್ತೆ ದುರಸ್ತಿ

ಬೆಳುವಾಯಿ : ಬೆಳುವಾಯಿ ಪೇಟೆಯಲ್ಲಿ ಮಳೆಗಾಲದಲ್ಲಿ ನೀರು ರಸ್ತೆಗೆ ಹರಿದು ರಸ್ತೆಯ ಬದಿಯಲ್ಲಿ ಕೆಲವು ಕಡೆ ಎರಡು ಅಡಿಯಷ್ಟು ದೊಡ್ಡ ಹೊಂಡ ಸೃಷ್ಟಿಯಾಗಿತ್ತು. ಇದರಿಂದ ಸಾರ್ವಜನಿಕರು., ವಾಹನ ಚಾಲಕರು ತೀರಾ ತೊಂದರೆ ಅನುಭವಿಸುತ್ತಿದ್ದರು. ಯುವವಾಹಿನಿ (ರಿ) ಬೆಳುವಾಯಿ ಘಟಕದ ವತಿಯಿಂದ ಜೆಸಿಬಿ ಮೂಲಕ ಈ ಹೊಂಡಗಳನ್ನು ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಬೆಳುವಾಯಿ ಘಟಕದ ಈ ಸಮಾಜಮುಖಿ ಕಾಳಜಿಗೆ ಸಾರ್ವಜನಿಕರಿಂದ ಮುಕ್ತ ಕಂಠದ ಶ್ಲಾಘನೆ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಬೆಳುವಾಯಿ ಘಟಕದ […]

Read More

ಯುವವಾಹಿನಿ (ರಿ) ಕಂಕನಾಡಿ ಘಟಕದಿಂದ ವೈದ್ಯಕೀಯ ನೆರವು

ಕಂಕನಾಡಿ : ಇತ್ತೀಚೆಗೆ ಮಂಗಳಾದೇವಿ ದೇವಸ್ಥಾನದಲ್ಲಿ ಮರ ಬಿದ್ದು ಗಾಯಗೊಂಡ ಸುರೇಖಾ ಕೋಟ್ಯಾನ್ ಆರೋಗ್ಯವನ್ನು ವಿಚಾರಿಸಿ ₹.10000/- ವೈದ್ಯಕೀಯ ನೆರವು ನೀಡಲಾಯಿತು.ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಕಂಕನಾಡಿ ಘಟಕದ ಅಧ್ಯಕ್ಷ ಭವಿತ್ ರಾಜ್ ಕಾರ್ಯದರ್ಶಿ ಸುಮಾ ವಸಂತ್ , ಮಾಜಿ ಅಧ್ಯಕ್ಷ ಹರೀಶ್. ಕೆ. ಸನಿಲ್ ಮತ್ತಿತರರು ಉಪಸ್ಥಿತರಿದ್ದರು.

Read More

ಯುವವಾಹಿನಿ (ರಿ) ಕುಪ್ಪೆಪದವು ಘಟಕದಿಂದ ವೈದ್ಯಕೀಯ ನೆರವು

ಕುಪ್ಪೆಪದವು :ಯುವವಾಹಿನಿ (ರಿ) ಕುಪ್ಪೆಪದವು ಘಟಕದಿಂದ ಇಲ್ಲಿನ ಸ್ಥಳೀಯ ನಿವಾಸಿ ಬಡ ಕುಟುಂಬದ ಶೇಖರ್ ಪೂಜಾರಿ ದುರ್ಗಕೊಡಿ ಇವರ ಮಗುವಿನ ಅನಾರೋಗ್ಯದ ನಿಮಿತ್ತ ದಿನಾಂಕ 13/09/2018 ರಂದು ವೈದ್ಯಕೀಯ ನೆರವು ನೀಡಲಾಯಿತು . ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಅರುಣ್ ಕುಮಾರ್ ,ಉಪಾಧ್ಯಕ್ಷರಾದ ಅಜಯ್ ಅಮೀನ್.ಕಾರ್ಯದರ್ಶಿ ರಿತೇಶ್ ನೆಲ್ಲಚಿಲ್ ಹಾಗೂ ಘಟಕದ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು

Read More

ಶ್ರೀ ಗುರು ಪ್ರಸಾದಾಲಯ ಲೋಕಾರ್ಪಣೆ

ಹಳೆಯಂಗಡಿ : ಯುವವಾಹಿನಿ (ರಿ.) ಹಳೆಯಂಗಡಿ ಘಟಕವು ಕಳೆದ 2 ದಶಕಗಳಿಂದ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಹಳೆಯಂಗಡಿಯ ಪ್ರಗತಿಯೊಂದಿಗೆ ಹಾಗು ಶೈಕ್ಷಣಿಕ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಸಾಮಾಜಮುಖಿ ಚಿಂತನೆಯೊಂದಿಗೆ ನಾಯಕತ್ವವನ್ನು ರೂಪಿಸಿ ಬೆಳೆಸುವ ಯುವ ಸಂಘಟನೆಯಾಗಿ ಬೆಳೆಯುತ್ತಿದೆ. ಕಳೆದ 20 ವರ್ಷಗಳಿಂದ ಸಂಘದ ಜೊತೆ-ಜೊತೆಯಾಗಿ ಹತ್ತು ಹಲವಾರು ಕಾರ್ಯಕ್ರಮಗಳ ಯಶಸ್ಸಿನ ರೂವಾರಿಯಾಗಿ ಈಗಾಗಲೇ ಸಂಘದ ನೂತನ ಕಟ್ಟಡ ನಿಧಿಗೆ ರೂಪಾಯಿ 7.5 ಲಕ್ಷ ಧನಸಹಾಯದ ಭರವಸೆಯನ್ನು ನೀಡಿದೆ. ಮಾತ್ರವಲ್ಲದೆ […]

Read More

ವಿಶೇಷ ಚೇತನ ಮಕ್ಕಳ ಜತೆ ಗುರುಜಯಂತಿ ಆಚರಣೆ

ಪುತ್ತೂರು : ಯುವವಾಹಿನಿ (ರಿ) ಪುತ್ತೂರು ಘಟಕ ಇದರ ವತಿಯಿಂದ 27/08/2018 ರಂದು ಪ್ರಜ್ಞಾ ಸಲಹಾ ಆಶ್ರಮ ಬನ್ನೂರು ಪುತ್ತೂರು ಇಲ್ಲಿ ಬ್ರಹ್ಮಶ್ರಿ ನಾರಾಯಣ ಗುರುಗಳ 164ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ವಿಶೇಷ ಚೇತನ ಮಕ್ಕಳ ಆಶ್ರಮಕ್ಕೆ ಘಟಕದ ವತಿಯಿಂದ ಎರಡು ಟೇಬಲ್ ಮತ್ತು 25 kg ಅಕ್ಕಿಯನ್ನು ಘಟಕದ ಅಧ್ಯಕ್ಷರಾದ ಹರೀಶ ಶಾಂತಿ ಪುತ್ತೂರು ಇವರ ನೇತ್ರತ್ವದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲು ವಿತರಿಸಿದರು. ಕಾರ್ಯಕ್ರಮ ನೆರವೇರಿಸಿ ಜಯಂತ ನಡುಬೈಲು ಮಾತನಾಡಿ ಅಸ್ಪ್ರಶ್ಯತೆ ಶೋಷಣೆಯ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಜುಲೈ 21 ಬೆಳಗ್ಗೆ ಗಂಟೆ 10.30ರಿಂದ
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಗಾಣದಪಡ್ಪು, ಬಿ.ಸಿ.ರೋಡ್

ಯುವವಾಹಿನಿ (ರಿ) ಬಂಟ್ವಾಳ ಘಟಕ

ದಿನಾಂಕ : 2026ನೇ ಜೂನ್ 14 ಭಾನುವಾರ ಬೆಳಗ್ಗೆ ಗಂಟೆ 9.00 ರಿಂದ
ಸ್ಥಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಅಸೋಸಿಯೇಷನ್ ಆಡಿಟೋರಿಯಂ ವಿಧಾನಸೌಧ ಬಳಿ, ಕಬ್ಬನ್ ಪಾರ್ಕ್ ಬೆಂಗಳೂರು

ಯುವವಾಹಿನಿ (ರಿ) ಬೆಂಗಳೂರು ಘಟಕ

ದಿನಾಂಕ : 2026ನೇ ಜೂನ್ 13 ಶನಿವಾರ ಸಂಜೆ ಗಂಟೆ 6.00 ರಿಂದ
ಸ್ಥಳ : ಮುಲ್ಕಿ , ಬಿಲ್ಲವ ಸಮಾಜ ಸೇವಾ ಸಂಘ(ರಿ)

ಯುವವಾಹಿನಿ (ರಿ) ಮುಲ್ಕಿ ಘಟಕ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!