31-07-2016, 5:42 AM
ಆಶಯ ಕೆ. ರಾಜೀವ ಪೂಜಾರಿ ಈ ಸೃಷ್ಟಿಯ ಸೌಂದರ್ಯವೇ ಬದುಕಿನ ಆಂತರ್ಯ. ತೇಲುವ ಮೋಡಗಳಲ್ಲಿ, ಹರಿಯುವ ನದಿಯ ಜಲದಲ್ಲಿ. ಹಸುರಿನ ಸಿರಿಯಲ್ಲಿ, ಹೂಗಳ ವರ್ಣದಲ್ಲಿ…ಮಂದಹಾಸದಲ್ಲಿರುವುದು ಅನಂತ ಚೈತನ್ಯದ ಒಂದು ರೂಪವೇ ಎನ್ನುವುದು ಸನಾತನೀಯ ಸಚ್ಚಿಂತನೆ. ನಮ್ಮದು ಸನಾತನ ಚಿಂತನೆಯನ್ನು ಗೌರವಿಸುವ ದೇಶ. ಮಾನವೀಯ ಮೌಲ್ಯಗಳನ್ನು ಮಾನ್ಯ ಮಾಡುವ ಮಹನೀಯರುಗಳು ಈಗಲೂ ಈ ನೆಲದಲ್ಲಿರುವರು. ಇಲ್ಲಿನ ಮಣ್ಣಿನ ಗುಣವೇ ದೈವಿಕ ಭಾವದಿಂದ ಕೂಡಿರುವುದು. ಅನೇಕ ಸಂತ ಮಹಂತರುಗಳು ಈ ನೆಲದಲ್ಲಿ ಬಾಳಿ ಹೋಗಿದ್ದಾರೆ. ಅವರ ನುಡಿಗಳು ಮನುಕುಲಕ್ಕೆ ದಾರಿದೀಪಗಳಾಗಿವೆ. […]
Read More
19-10-2015, 12:54 PM
ಬಂಟ್ವಾಳ : ತುಳು ಭಾಷೆ ಮತ್ತು ಲಿಪಿಯನ್ನು ಪ್ರಚಾರ ಮಾಡುವ ಕೆಲಸ ಬಹಳ ಮುಖ್ಯ. ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಲು ಇಂತಹಾ ರಚನಾತ್ಮಕ ಕೆಲಸದ ಅಗತ್ಯ ಇದೆ ಎಂದು ತುಳು ಒಕ್ಕೂಟದ ಅಧ್ಯಕ್ಷ ಮಾಜಿ ಜಿ.ಪಂ.ಸದಸ್ಯ ಎ.ಸಿ.ಭಂಡಾರಿ ನುಡಿದರು. ಅವರು ಬಿ.ಸಿ.ರೊಡ್ ಯುವವಾಹಿನಿ ಭವನದಲ್ಲಿ ಜರಗಿದ ತುಳು ಸಾಹಿತ್ಯ ಅಕಾಡಮಿ ಮತ್ತು ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ತುಳು ಲಿಪಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಬಿ.ತಮ್ಮಯ್ಯನವರ 6ನೇ ತುಳು ಸಂಚಿಕೆ ’ತುಳುವೆರ್’ […]
Read More
09-08-2015, 4:56 AM
ಸ್ಮರಣೆ ವಿಶುಕುಮಾರ್ ಕನ್ನಡ ಸಾಹಿತ್ಯ ಲೋಕದ ಮಹತ್ವದ ಲೇಖಕರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಶ್ರೇಷ್ಠ ಸಾಹಿತಿಗಳು ಆಗಿಹೋಗಿದ್ದಾರೆ. ಅಂಥವರಲ್ಲಿ ಡಾ. ಶಿವರಾಮ ಕಾರಂತರು ಒಬ್ಬರು. ಅವರ ನಂತರದ ಸ್ಥಾನ ಮಂಗಳೂರಿನವರೇ ಆದ ವಿಶುಕುಮಾರ್‌ರಿಗೆ ಸಲ್ಲುತ್ತದೆ ಎಂಬುದು ಅನೇಕರ ಅಭಿಪ್ರಾಯ. ಇವರು ಸಾಹಿತ್ಯಲೋಕದ ಬಹುಮುಖ ಪ್ರತಿಭಾವಂತ, ನೇರನಡೆ-ನುಡಿಯ ನಿರ್ಭೀತ ವ್ಯಕ್ತಿತ್ವದವರು. ಇವರದು ಹೋರಾಟದ ಬದುಕು. ಇವರಿಗೂ ಸಾಹಿತ್ಯಕ್ಕೂ ಬಾಲ್ಯದಿಂದಲೇ ನಂಟು. ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರವಾಗಿದೆ. ಇವರ ಸಾಹಿತ್ಯ ಶೈಲಿಯ ವೈಶಿಷ್ಟ್ಯವೆಂದರೆ ತುಳು ಮತ್ತು ಕನ್ನಡ […]
Read More
10-08-2014, 11:12 AM
1968 ರಲ್ಲಿ ತನ್ನ ಪ್ರಥಮ ಕಥೆ ಮತ್ತು ಕವನವನ್ನು ಪ್ರಕಟಿಸಿದ್ದ ಬಹುಭಾಷಾ ಕಥೆಗಾರ, ಕವಿ, ಗಾಯಕ, ನಟ, ನಿರ್ದೇಶಕ ಜಾನಪದ ಇತಿಹಾಸಕಾರ, ಅಧ್ಯಯನಕಾರ, ವಿಮರ್ಶಕ ಮುದ್ದು ಮೂಡುಬೆಳ್ಳೆ ಕಳೆದ 45 ವರುಷದಿಂದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿ ರಚನೆಯನ್ನು ಮಾಡುತ್ತಾ ಬರುತ್ತಿದ್ದಾರೆ. ನಾಡು ನುಡಿಯಿದೊಂದು ಬಗೆ, ಕಾಂತಬಾರೆ-ಬುಧಬಾರೆ, ತುಳುನಾಡಿನ ಜಾನಪದ ವಾದ್ಯಗಳು, ತುಳು ರಂಗಭೂಮಿ ಮುಂತಾದವುಗಳು ಮುದ್ದು ಮೂಡುಬೆಳ್ಳೆ ಅವರ ಪ್ರಮುಖ ಅಧ್ಯಯನ ಕೃತಿಗಳು. ಕನ್ನಡ ಮಾತ್ರವಲ್ಲದೆ ತುಳು, ಕೊಂಕಣಿ ಮತ್ತು ಇಂಗ್ಲೀಷ್ ಭಾಷೆಯಲ್ಲೂ ಕೃತಿ ರಚನೆಯನ್ನು […]
Read More
08-08-2014, 10:41 AM
ಬಂಟ್ವಾಳ ತಾಲೂಕು ಕಳ್ಳಿಗೆÀ ಗ್ರಾಮದ ಮುಂಡಾಜೆ ನಿವಾಸಿಯಾಗಿರುವ ಚೇತನ್ ಮುಂಡಾಜೆ ಇವರು ವೃತ್ತಿಯಲ್ಲಿ ಶಿಕ್ಷಕರಾದರೂ ಪ್ರವೃತ್ತಿಯಲ್ಲಿ ಉದಯೋನ್ಮಖ ಸಾಹಿತಿಯೂ ಹೌದು, ಕಲಿಕೆ, ಅಧ್ಯಯನ, ಭಾಗವಹಿಸುವಿಕೆ ಇವು ಇವರ ಆಸಕ್ತಿಯ ಕ್ಷೇತ್ರವೂ ಹೌದು. 2009ರಲ್ಲಿ ‘ಪಿಂಗಾರ’ ಎಂಬ ಕವನ ಸಂಕಲನವನ್ನು ಪ್ರಕಟಿಸಿರುವ ಶ್ರೀಯುತರು 2008-09ರಲ್ಲಿ ‘ಮಂಗಳಗಂಗೆ’ ಎಂಬ ಸಂಪಾದಿತ ಕೃತಿಯನ್ನು ಅನಾವರಣಗೊಳಿಸಿದ್ದಾರೆ. ಆಧುನಿಕ ಕನ್ನಡ ಕಾವ್ಯದಲ್ಲಿ ಬೆಂದ್ರೆಯವರ ಅನನ್ಯತೆ, ಮಂಗಳೂರ ಕ್ರಾಂತಿ ಕೆಲವು ಟಿಪ್ಪಣಿಗಳು, ಬೂತಾರಾಧನೆಯಲ್ಲಿ ನುಡಿಗಟ್ಟು, ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಸೀರೆಯಂಗಡಿಯಲ್ಲಿ ಮಾದರಿಗೆ ಪ್ರತಿಮೆ ಕವನ ವಿಶ್ಲೇಷಣೆ, […]
Read More