2013 : ಪ್ರಭಾಕರ ನೀರುಮಾರ್ಗ ಯುವವಾಹಿನಿ ಯುವಸಾಹಿತಿ ಪ್ರಶಸ್ತಿ ಪುರಸ್ಕೃತರು
01-11-2013, 7:09 AM
04-08-2013, 1:05 PM
ದೇವರು ಕೊಟ್ಟ ಪ್ರತಿಭೆಯನ್ನು ಆಧರಿಸಿ ಬರಮಾಡಿಕೊಳ್ಳದೇ ಅವಕಾಶ ಇಲ್ಲ ಎಂದು ಹಲುಬುವವರೇ ಅಧಿಕವಾಗಿರುವ ಇಂದಿನ ದಿನದಲ್ಲಿ ತನ್ನೊಳಗೆ ದೇವರಿತ್ತ ಸುಪ್ತ ಪ್ರತಿಭೆಯನ್ನು ಒರೆಗೆ ಹಚ್ಚಿಕೊಂಡು ಸೀಮಿತವಾದ ಅವಕಾಶಗಳನ್ನೆ ಬಳಸಿಕೊಂಡು ಬೆಳೆಯುವವರು ತೀರಾ ವಿರಳ ಎನ್ನಬಹುದು. ಅಂತಹ ಪ್ರತಿಭೆಗಳ ಸಾಲಿನಲ್ಲಿ ಬರುವವರೇ ಕಿರಣ್ ಕುಮಾರ್ ಕೊಕುಡೆ. ಗ್ರಾಮೀಣ ಪ್ರದೇಶವಾದ ಕಿನ್ನಿಗೋಳಿ ಸಮೀಪದ ಕೊಕುಡೆ ನಿವಾಸಿಯಾಗಿರುವ ಕಿರಣ್ಕುಮಾರ್ 21 ರ ಹರೆಯದ ಯುವಕ. ಆದರೆ ಅವರು ಮೆರೆದ ಸಾಧನೆ ಮಾತ್ರ ೫೦ರ ಹಿರಿಯರೂ ನಾಚಬೇಕು ಎನ್ನುವಂತಹ ಸಾಧನೆ. ಸಾಹಿತ್ಯ ರಂಗದಲ್ಲಿ ಉತ್ತಮ […]
04-08-2013, 12:06 PM
ಲೋಹಿಯಾ, ಜಯಪ್ರಕಾಶ ನಾರಾಯಣ್ ರಂತಹ ಪ್ರಬಲ ಸಮಾಜವಾದಿಗಳ ಚಿಂತನೆಯನ್ನು ದಟ್ಟವಾಗಿ ಮೈಗೂಡಿಸಿಕೊಂಡ – ಗಾಂಧಿ ಯುಗದ ಧೀಮಂತ ಪತ್ರಿಕೋದ್ಯಮಿ ‘ಸಂಗಾತಿ’ಯ ನವೀನ್ಚಂದ್ರಪಾಲ್ ತನ್ನ 86ರ ಹರೆಯದ – ಇಂದಿನ ದಿನಗಳ ಪರ್ಯಂತ ತನ್ನ ಸ್ವತಂತ್ರ ನಿಲುವನ್ನು ಅಚಲವಾಗಿ ಕಾಯ್ದುಕೊಂಡಿರುವ ಅಪರೂಪದ ವ್ಯಕ್ತಿತ್ವದವರು. ಮಹಾರಾಷ್ಟ್ರ, ಗುಜರಾತ್ ಮುಂತಾದೆಡೆ ರಾಷ್ಟ್ರಮಟ್ಟದ ಹಲವು ಆಂಗ್ಲ ಪತ್ರಿಕೆಗಳಲ್ಲಿ ದುಡಿದರೂ ‘ಸಂಗಾತಿ’ ಕನ್ನಡ ವಾರಪತ್ರಿಕೆಯನ್ನು ಅಪೂರ್ವ ರೀತಿಯಲ್ಲಿ ಸ್ವಾತಂತ್ರ್ಯೋತ್ತರ ದಿನಗಳಿಂದ ಎರಡು ದಶಕಗಳಿಗೂ ಹೆಚ್ಚು ಕಾಲ ಹೊರಡಿಸಿ ಜನತಂತ್ರವನ್ನು ಎತ್ತಿ ಹಿಡಿದ ಸಾಹಸಿಗರು. ಸಿರಿ […]
04-11-2012, 7:05 AM
ಹದಿನೆಂಟು, ಹತ್ತೊಂಭತ್ತನೇ ಶತಮಾನಗಳಲ್ಲಿ ಕೇರಳದ ಸಮಾಜ ಅಜ್ಞಾನ, ಅಂಧಶ್ರದ್ಧೆಗಳ ಅಂಧಕಾರದಲ್ಲಿ ಮುಳುಗಿತ್ತು. ಕೆಳವರ್ಗದವರಿಗೆ ಮೇಲ್ವರ್ಗದವರ ಹಿಂಸೆ, ಕಿರುಕುಳಗಳಿಂದಾಗಿ ಬದುಕುವುದೇ ಕಷ್ಟವಾಗಿತ್ತು. ಆ ಕಾಲದ ಜಾತಿ ವ್ಯವಸ್ಥೆಯ ಕ್ರೂರತೆಯಿಂದ ಪಾರಾಗಲು ದಲಿತರು ಮತಾಂತರಕ್ಕೆ ಮುಂದಾಗುತ್ತಿದ್ದರು. ಅಂತಹ ವಿಲಕ್ಷಣ ಕಾಲಘಟ್ಟದಲ್ಲಿ ಜನ್ಮತಾಳಿದ ನಾರಾಯಣ ಗುರು ಎಳವೆಯಲ್ಲೇ ಸಮಾಜದಲ್ಲಿ ಬೇರೂರಿರುವ ಅಸ್ಪೃಶ್ಯತೆ, ಅಜ್ಞಾನ, ಮೂಢನಂಬಿಕೆಗಳನ್ನು ಕಂಡು ಮರುಗುತ್ತಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಅವರು ದೀನದಲಿತರ ಸೇವೆ, ಶುಶ್ರೂಷೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ತಮ್ಮ ತಾಯಿ-ತಂದೆ ನಿಧನರಾದ ಮೇಲೆ ಹುಟ್ಟಿದೂರಿಗೆ ವಿದಾಯ ಹೇಳಿ ಪರಿವ್ರಾಜಕರಾಗಿ ಸಂಚಾರಕ್ಕೆ ತೊಡಗುವ ಗುರು, […]
04-11-2012, 6:28 AM
ಕರಾವಳಿ ಕಂಡ ಧೀಮಂತ ಪ್ರತಿಭಾಶಾಲಿಗಳ ಸಾಲಿನ ಮಿನುಗು ನಕ್ಷತ್ರವಾದ ವಿಶುಕುಮಾರ್ ದಂತಕತೆಯಾದ ವ್ಯಕ್ತಿ. ತುಳುವಿನ ಉಸಿರು, ಕನ್ನಡದ ಶಕ್ತಿ, ಸಮಾಜದ ಸ್ಫೂರ್ತಿ, ಚೆಲುವಿನ ಮೂರ್ತಿಯಾಗಿದ್ದ ವಿಶುಕುಮಾರ್ ಒಂದು ಕಾಲದ ಪ್ರತಿಭಾವಂತ ನಟ, ನಿರ್ದೇಶಕ, ಕಾದಂಬರಿಕಾರ, ಪತ್ರಕರ್ತ, ಸಂಘಟಕ, ಸಿನಿಮಾ ನಿರ್ದೇಶಕರಾಗಿ, ಶ್ರೇಷ್ಠ ಸಾಧನೆಗಳನ್ನು ಮಾಡಿದವರು, ಇನ್ನೆಷ್ಟೋ ಉಪಯುಕ್ತ ಕೊಡುಗೆಗಳನ್ನು ನೀಡಲಿರುವ ಭರವಸೆಯ ಅಕಾಲದಲ್ಲೇ ಅಗಲಿ ಹೋದವರು. 1797 ರಲ್ಲಿ ಟಿಪ್ಪುಸುಲ್ತಾನ್ ಸಮರ ಕಾಲದಲ್ಲಿ ಮಂಗಳೂರು ಬೋಳೂರಿನ ಕಡಲತೀರದಲ್ಲಿ ಕಟ್ಟಿಸಿದ ಕೋಟೆ ಸುಲ್ತಾನ್ ಬತ್ತೇರಿ, ಇಂದು ಪ್ರವಾಸಿಗರ ರಮ್ಯ ತಾಣ, […]
04-11-2012, 6:25 AM
ಅಧ್ಯಯನ ವಿಶುಕುಮಾರ್ ಕಾಲವಾಗಿ (1989) ಇದೀಗ 26 ವರ್ಷಗಳು ಪೂರ್ಣವಾಗುತ್ತಿದೆ. ಆದರೆ ಅವರು ಬಿಟ್ಟು ಹೋದ ಸಾಹಿತ್ಯ ಕೃತಿಗಳು, ನಾಟಕ, ಸಿನೆಮಾಗಳು ಇಂದಿಗೂ ನಮ್ಮನ್ನು ಕಾಡಿಸುತ್ತವೆ; ಯೋಚನೆಗೆ ಹಚ್ಚುತ್ತವೆ. ವಿಶುಕುಮಾರ್ ತಮ್ಮ ಕೃತಿಗಳಲ್ಲಿ ಆಯ್ದುಕೊಂಡ ವಸ್ತುಗಳು, ಸಾಮಾಜಿಕ ಸಮಸ್ಯೆಗಳು, ಸಂಘರ್ಷಗಳು, ಇವತ್ತಿಗೂ ಪ್ರಸ್ತುತವೆನಿಸುತ್ತವೆ. ವಿಶುಕುಮಾರ್ ಭಿನ್ನವಾಗಿ ಆಲೋಚಿಸುವ ಮನೋಧರ್ಮದವರು. ಹಾಗಾಗಿ ಕೆಲವೊಮ್ಮೆ ಅವರು ವಿವಾದಾತ್ಮಕ ವ್ಯಕ್ತಿಯೂ ಆದರು. ಒಬ್ಬ ವ್ಯಕ್ತಿ ಸಾಮಾನ್ಯವಾಗಿ ಒಂದು ಕ್ಷೇತ್ರದಲ್ಲಿ ಯಶಸ್ಸನ್ನು, ಪ್ರಸಿದ್ಧಿಯನ್ನು ಪಡೆಯುವುದನ್ನು ನಾವು ಕಾಣುತ್ತೇವೆ. ಆದರೆ ವಿಶುಕುಮಾರ್ ತಾವು ಪ್ರವೇಶಿಸಿದ ಎಲ್ಲಾ […]
04-11-2012, 6:23 AM
ಸ್ಥಿತಿ-ಗತಿ – ವಿಶುಕುಮಾರ್ (1979 ರಲ್ಲಿ ಬೆಳ್ತಂಗಡಿ ಬಿಲ್ಲವ ಸಂಘವು ಹೊರತಂದ ’ಕೋಟಿ- ಚೆನ್ನಯ’ ಎಂಬ ಸ್ಮರಣ ಸಂಚಿಕೆಯಲ್ಲಿ ಪ್ರಕಟಗೊಂಡ ಖ್ಯಾತ ಸಾಹಿತಿ ದಿ| ವಿಶುಕುಮಾರ್ ಅವರ ಇಂದಿಗೂ ಪ್ರಸ್ತುತವೆನಿಸುವ ಒಂದು ಲೇಖನ…) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಜನಾಂಗಕ್ಕೆ ಬಿಲ್ಲವ, ಪೂಜಾರಿ, ಬೈದ, ಹಳೇಪೈಕ ಇತ್ಯಾದಿ ಹೆಸರುಗಳು. ಉತ್ತರ ಕನ್ನಡದಲ್ಲಿ ನಾಮಧಾರಿಗಳು. ಶಿವಮೊಗ್ಗ, ಸಾಗರ ಕಡೆ ದೀವರು. ಹಳೇ ಮೈಸೂರು ಕಡೆ ಈಡಿಗರು. ಗುಲ್ಬರ್ಗ, ಬೀದರ್ ಕಡೆ ಈಳಿಗರು, ಕೇರಳದಲ್ಲಿ ತೀಯಾ, ತಮಿಳ್ನಾಡಿನಲ್ಲಿ ನಾಡಾರ್ ಹೀಗೆ ಬೇರೆ […]
04-11-2012, 6:08 AM
ಕನ್ನಡ ಸಾಹಿತ್ಯ ಲೋಕದಲ್ಲಿ ಶ್ರೇಷ್ಠ ಕತೆಗಾರರಾಗಿ, ಕಾದಂಬರಿಕಾರರಾಗಿ, ನಟರಾಗಿ, ನಾಟಕಕಾರರಾಗಿ, ನಿರ್ದೇಶಕರಾಗಿ, ಅಂಕಣ ಬರಹಗಾರರಾಗಿ, ಕನ್ನಡ, ತುಳು ಚಿತ್ರಗಳ ನಿರ್ದೇಶಕರಾಗಿ ಹೆಸರು ಮಾಡಿ ತಮ್ಮ ಅಲ್ಪ ಆಯುಷ್ಯದಲ್ಲಿಯೇ ಸಂದು ಹೋದ ನಮ್ಮ ನಾಡಿನ, ಬಿಲ್ಲವರ ಹೆಮ್ಮೆಯ ಕಣ್ಮಣಿ, ಧೀಮಂತ ಸಾಹಿತಿ ದಿ| ವಿಶುಕುಮಾರ್ರವರ ಸ್ಮರಣಾರ್ಥ ಯುವವಾಹಿನಿ (ರಿ) ಕೇಂದ್ರ ಸಮಿತಿಯು ‘ವಿಶುಕುಮಾರ್ ಪ್ರಶಸ್ತಿ’ ಯನ್ನು ಹುಟ್ಟುಹಾಕಿ ಕಳೆದ ಹತ್ತು ವರ್ಷಗಳಿಂದ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ನಮ್ಮ ಸಾಹಿತಿ ಮಿತ್ರರುಗಳ ಒತ್ತಾಸೆ, ಸಲಹೆಗಾರರ ಮಾರ್ಗದರ್ಶನದಲ್ಲಿ ’ವಿಶುಕುಮಾರ್ ದತ್ತಿನಿಧಿ’ಯನ್ನು ಸ್ಥಾಪಿಸಿ […]
04-11-2012, 6:05 AM
ಬಿಲ್ಲವರ ಚರಿತ್ರೆಯ ಗುತ್ತು, ಬರ್ಕೆ, ಗುರಿಕಾರ ಮನೆತನಗಳ ಕುರಿತ ಅಧ್ಯಯನವು ಕಳೆದ 2-3 ವರ್ಷಗಳಿಂದ ಮುಂಬಯಿ ’ಗುರುತು’ ಮಾಸಿಕ ಸಂಪಾದಕ, ಸಂಶೋಧಕ ಶ್ರೀ ಬಾಬು ಶಿವ ಪೂಜಾರಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಾ ಬಂದಿದೆ. ಬಿ.ಎಂ.ರೋಹಿಣಿ, ಮುದ್ದು ಮೂಡುಬೆಳ್ಳೆ ಹಾಗೂ ರಮಾನಾಥ್ ಕೋಟೆಕಾರ್ರ ತಂಡ ಕ್ಷೇತ್ರಾಧ್ಯಯನ ನಡೆಸುತ್ತಾ ಬಂದಿದೆ. ಅದರಲ್ಲಿ ಒಂದು ಗುತ್ತುಮನೆ ಅಧ್ಯಯನದ ಮಾದರಿ ಇಲ್ಲಿದೆ: ಸಾಂತ್ಯ ಗುತ್ತು ಸಾಂತ್ಯ ಬಂಟ್ವಾಳ ತಾಲೂಕಿನಲ್ಲಿದೆ. ಬಿ.ಸಿ.ರೋಡ್, ಪುತ್ತೂರು ಮಾರ್ಗದಲ್ಲಿ ಮಾಣಿ ಕಳೆದು, ಕರುವೇಲ್ಲ್ಲಿ ಶಾಲಾ ಬಳಿ ಉತ್ತರದ ಮಣ್ಣಿನ ರಸ್ತೆಯಲ್ಲಿ ಮುಂದುವರಿದು […]
04-11-2012, 5:45 AM
ಯುವವಾಹಿನಿ ಸಂಘಟನೆಯು ಅಮೃತವಾಹಿನಿಯಾಗಿ ಹರಿಯುತ್ತಾ ಬಂದು ಇದೀಗ ರಜತ ಮಹೋತ್ಸವಕ್ಕೆ ಕಾಲಿರಿಸಿದ ಈ ಶುಭ ಸಮಯದಲ್ಲಿ ನನ್ನ ಮನದಾಳದ ಮಾತನ್ನು ಅಕ್ಷರ ರೂಪದಲ್ಲಿ ಬರೆಯುವಾಗ ಮನತುಂಬಿ ನಿಲ್ಲುತ್ತದೆ. ಉಕ್ಕೇರುವ ಸಂತಸದಿಂದ ಲೇಖನಿ ಒಂದು ಕ್ಷಣ ನಿಂತು ಮತ್ತೆ ಮುನ್ನಡೆಯುತ್ತಿದೆ. ಅಂದರೆ ಸಂಘಟನೆ ಒಂದು ಸಾಮಾಜಿಕ ಶಕ್ತಿ ಹೌದು. ಆದರೆ ಒಂದು ಸಂಘಟನೆ ಇಪ್ಪತ್ತೈದು ವರ್ಷದ ಯೌವನಕ್ಕೆ ಕಾಲಿರಿಸುವುದೆಂದರೆ ಅದು ಅಷ್ಟು ಸುಲಭದ ಮಾತೇನೂ ಅಲ್ಲ. ಅಷ್ಟೊಂದು ಸಾಮಾಜಿಕ ಚಿಂತನೆಯ ಮನಸ್ಸು, ನಿಷ್ಠೆ, ಒಗ್ಗಟ್ಟು, ಆತ್ಮಬಲ, ಮಾನವೀಯ ಗುಣ […]