19-05-2017, 12:28 PM
ಯುವವಾಹಿನಿ (ರಿ) ಕೊಲ್ಯಘಟಕದ ಸದಸ್ಯ ಸ್ವಸ್ತಿಕ್ ಅವರು ದಿನಾಂಕ 19.05.2017 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಜರುಗಿದ ಅತ್ಲೆಟಿಕ್ ಸ್ಪರ್ಧೆಯಲ್ಲಿ 100 ಮೀ ಓಟವನ್ನು 10.83 ಸೆಕೆಂಡುಗಳಲ್ಲಿ ಕ್ರಮಿಸಿ ಚಿನ್ನದ ಪದಕ ತನ್ನ ಮುಡಿಗೇರಿಸಿಕೊಂಡಿದ್ದಾರೆ ಸ್ವಸ್ತಿಕ್ ಅವರು ಚಿನ್ನದ ಪದಕ ಗಳಿಸುವುದರ ಮೂಲಕ ಉತ್ತರಪ್ರದೇಶದ ಲಕ್ನೊದಲ್ಲಿ 2017 ಜೂನ್ 11 ರಿಂದ 15 ರವರಗೆ ಜರುಗುವ ಫೆಡರೇಶನ್ ಕಪ್ ನಾಷನಲ್ ಜೂನಿಯರ್ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.ಕೊಲ್ಯ ಸೋಮೇಶ್ವರದ ಆನಂದಾಶ್ರಮ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಸಂದೀಪ್ ರಾಜ್ […]
Read More
05-05-2017, 6:44 AM
ಯುವವಾಹಿನಿ (ರಿ) ಹೆಜಮಾಡಿ ಘಟಕದ ಆಶ್ರಯದಲ್ಲಿ ತೀರಾ ಬಡ ಕುಟುಂಬ ಪೋಂಕ್ರ ಪೂಜಾರಿ ಇವರಿಗೆ ಸುಮಾರು ರೂಪಾಯಿ ಮೂರುವರೆ ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ಹಸ್ತಾಂತರಿಸಲಾಯಿತು. ಹೆಜಮಾಡಿ ಯುವವಾಹಿನಿಯ ಯಶಸ್ವೀ ಸಮಾಜಮುಖಿ ಕಾರ್ಯ ಮನೆ ನಿರ್ಮಾಣ ಯೋಜನೆ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಕೇವಲ ಮೂರು ತಿಂಗಳ ಅವಧಿಯಲ್ಲಿ ದಾನಿಗಳ ಸಹಾಯ ಹಾಗೂ ಹೆಜಮಾಡಿ ಯುವವಾಹಿನಿ ಸದಸ್ಯರ ಶ್ರಮದ ಫಲವಾಗಿ ನಮ್ಮ ಮನೆ ನಿರ್ಮಾಣ ಯೋಜನೆ ಯಶಸ್ವಿಯಾಗಿದೆ ಎಂದು ಹೆಜಮಾಡಿ ಯುವವಾಹಿನಿ ಅಧ್ಯಕ್ಷರಾದ ಲೋಕೇಶ್ ಅಮೀನ್ ತಿಳಿಸಿದರು. […]
Read More
23-04-2017, 6:11 AM
ತಲೆಗೊಂದು ಸೂರು – ಇದು ಯುವವಾಹಿನಿ (ರಿ) ಉಡುಪಿ ಘಟಕದ ಶಾಶ್ವತ ಯಶಸ್ವೀ ಯೋಜನೆ – ವರುಷಕ್ಕೊಂದು ತೀರಾ ಬಡ ಕುಟುಂಬವನ್ನು ಆಯ್ಕೆ ಮಾಡಿ ಅವರಿಗೆ ಮನೆ ನಿರ್ಮಾಣ ಮಾಡಿ ಕೊಡುವುದು ಉಡುಪಿ ಯುವವಾಹಿನಿಯ ಜನಪ್ರಿಯ ಸಮಾಜಮುಖಿ ಕಾರ್ಯಕ್ರಮ. ಈ ವರ್ಷದ ತಲೆಗೊಂದು ಸೂರು ಕಾರ್ಯಕ್ರಮದಲ್ಲಿ ದಿನಾಂಕ 23.04.2017ನೇ ಆದಿತ್ಯವಾರ ಶ್ರೀಮತಿ ಇಂದಿರಾ ಎಂಬ ಬಡ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿ ಹಸ್ತಾಂತರಿಸಲಾಗಿದೆ. ರಾಜ್ಯ ಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಸಾಂಕೇತಿಕವಾಗಿ ಶ್ರೀಮತಿ ಇಂದಿರಾ ಕುಟುಂಬಕ್ಕೆ ಮನೆ ಹಸ್ತಾಂತರಿಸಿದರು. ಮಾಜಿ ಸಚಿವ […]
Read More
20-03-2017, 5:42 AM
ಲೋಕ ಶಾಂತಿ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುವರ್ಯರ ತತ್ವಾದರ್ಶದ ನೆಲೆಯಲ್ಲಿ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ ಬಲಯುತರಾಗಿರಿ ಎಂಬ ಬೋಧನೆಯ ಅನುಸಾರ ವಿದ್ಯೆ-ಉದ್ಯೋಗ-ಸಂಪರ್ಕ ಎಂಬ ಮೂರು ಮುಖ್ಯ ಧ್ಯೇಯಗಳನ್ನಿಟ್ಟುಕೊಂಡು ಸಮಾಜ ಅಭ್ಯುದಯದ ಕೈಂಕರ್ಯಕ್ಕಾಗಿ 1987 ಅಕ್ಟೋಬರ್ 2 ರಂದು ಸುಂಕದಕಟ್ಟೆಯ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ಅಸ್ತಿತ್ವಕ್ಕೆ ಬಂದ ಬಿಲ್ಲವ ಸಮಾಜದ ನಿಸ್ವಾರ್ಥ ಸಮಾನ ಮನಸ್ಕ ಯುವಕರ ಸಂಘಟನೆ ಯುವವಾಹಿನಿ. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಔದ್ಯೋಗಿಕವಾಗಿ ಸಮಾಜದಲ್ಲಿ ಬಿಲ್ಲವರು ಬಲಿಷ್ಠರಾಗಬೇಕು ಎಂಬ ಸಂಕಲ್ಪದಲ್ಲಿ ಯುವವಾಹಿನಿ 1987 ರಿಂದಲೂ ಕೆಲಸ ನಿರ್ವಹಿಸುತ್ತಿದೆ. ದಕ್ಷಿಣ ಕನ್ನಡ […]
Read More
14-01-2017, 11:21 AM
ಯುವವಾಹಿನಿ (ರಿ) ಉಡುಪಿ ಘಟಕದ ನೇತೃತ್ವದಲ್ಲಿ ತಾ. 14-01-2017 ರಂದು ಉದ್ಯಾವರದ ಈಂದ್ ಬೈಲಿನ ಶ್ರೀಮತಿ ಗಿರಿಜಾ ಇವರಿಗೆ, ಯುವವಾಹಿನಿಯ ಮಹತ್ವಾಕಾಂಕ್ಷೆಯ ತಲೆಗೊಂದು ಸೂರು ಕಾರ್ಯಕ್ರಮದ ಅಂಗವಾಗಿ ಶಿಲಾನ್ಯಾಸ ಕಾರ್ಯಕ್ರಮ ಜರುಗಿತು. ಮಾನ್ಯ ಶಾಸಕರುಗಳಾದ ವಿನಯ ಕುಮಾರ್ ಸೊರಕೆ ಹಾಗೂ ಕೋಟ ಶ್ರೀನಿವಾಸ್ ಪೂಜಾರಿಯವರು ಶಿಲಾನ್ಯಾಸದ ಕಾರ್ಯವನ್ನು ನೆರವೇರಿಸಿದರು. ಯುವವಾಹಿನಿಯ ಸದಸ್ಯರು, ಊರ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಸಾಂಗವಾಗಿ ನೆರೆವೇರಿತು. ಸುಮಾರು 3 ರಿಂದ 5 ಲಕ್ಷದ ಖರ್ಚಿನಲ್ಲಿ ಈ ಮನೆಯ ನಿರ್ಮಾಣ ಮಾಡಲಾಗುವುದು ಎಂದು ಉಡುಪಿ ಘಟಕದ ಅಧ್ಯಕ್ಷ […]
Read More
21-06-2015, 11:27 AM
ಬಂಟ್ವಾಳ: ಸಂಘಟನೆಯ ಬೆಳವಣಿಗೆಯಿಂದ ಸಾಮಾಜಿಕ ಜಾಗೃತಿ ಉಂಟಾಗುತ್ತದೆ. ನಿಸ್ವಾರ್ಥ ಮನೋಭಾವದ ಸಮಾಜ ಸೇವಕರು ಸಂಘಟಿತರಾದಾಗ ಸಾಮಾಜಿಕ, ಧಾರ್ಮಿಕ, ರಾಜಕೀಯ ಮಾತ್ರವಲ್ಲ ಆಧ್ಯಾತ್ಮಿಕ ಭಾವನೆಗಳು ಜಾಗೃತಗೊಳ್ಳುತ್ತದೆ. ಬಂಟ್ವಾಳ ತಾಲೂಕಿನ ಕೇಂದ್ರಸ್ಥಾನ ಬಿ.ಸಿ.ರೋಡಿನಲ್ಲಿ ಯುವವಾಹಿನಿಯ ಕಛೇರಿ ಯುವವಾಹಿನಿ ಭವನ ನಿರ್ಮಾಣವಾಗಿ ಸಂಘಟನೆಯು ಇನ್ನಷ್ಟು ಬಲಿಷ್ಠಗೊಂಡಿರುವುದು ಶ್ಲಾಘನೀಯ ಎಂದು ದ.ಕ.ಜಿಲ್ಲಾ ಮೂರ್ತೆದಾರರ ಮಹಾ ಮಂಡಲದ ಅಧ್ಯಕ್ಷರಾದ ಕೆ. ಸಂಜೀವ ಪೂಜಾರಿ ತಿಳಿಸಿದರು. ಅವರು ದಿನಾಂಕ 21-6-2015 ರಂದು ಬಿ.ಸಿ.ರೋಡಿನಲ್ಲಿ ನೂತನವಾಗಿ ನಿರ್ಮಾಣವಾದ ಯುವವಾಹಿನಿಯು ಬಂಟ್ವಾಳ ತಾಲೂಕು ಘಟಕದ ಕಛೇರಿ ಯುವವಾಹಿನಿ ಭವನದ ಉದ್ಘಾಟನಾ ಸಮಾರಂಭದಲ್ಲಿ […]
Read More
19-01-2014, 11:57 AM
ಸಾಮಾಜಿಕ ಸ್ಥಾನಮಾನ ಇಲ್ಲದ ವರ್ಗದವರಿಗೆ ಶಕ್ತಿ ತುಂಬುವ ಕಾರ್ಯವನ್ನು ಬ್ರಹ್ಮಶ್ರೀ ನಾರಾಯಣಗುರು ಮಾಡಿದ್ದಾರೆ. ಅವರ ತತ್ವ ಸಂದೇಶವನ್ನು ಯುವಕರು ಪಾಲಿಸಬೇಕು ಹಾಗೂ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಕಳೆದ 25 ವರ್ಷಗಳ ಸಾಧನೆ ಶ್ಲಾಘನೀಯವಾದುದು ಎಂದು ಕೇಂದ್ರ ಸರಕಾರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿ ತಿಳಿಸಿದರು. ಅವರು ದಿನಾಂಕ 19.01.2014ನೇ ಆದಿತ್ಯವಾರ ಬಿ.ಸಿ.ರೋಡ್ ಗಾಣದಪಡ್ಪು ನಾರಾಯಣಗುರು ನಗರದ ಕಾಂತಬಾರೆ ಬೂದಬಾರೆ ಸಭಾಂಗಣದ ಕೋಟಿ ಚೆನ್ನಯ ವೇದಿಕೆಯಲ್ಲಿ ಜರುಗಿದ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ರಜತ ಸಂಭ್ರಮ […]
Read More
19-01-2014, 4:03 AM
ತಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಕಿರಿಯರು ಮುಂದೆ ಬರಲು ಅವಕಾಶ ಕಲ್ಪಿಸಬೇಕು, ಇದ್ದಷ್ಟು ಸಮಯ ತಾನೇ ಇರಬೇಕು ಎಂಬ ನಿಯಮ ಸರಿಯಲ್ಲ, ಹಾಗೂ ಯುವಕರು ಯುವ ಬಿಲ್ಲವ ಸಮಾವೇಶ ಅತ್ಯಂತ ಯಶಸ್ವಿಯಾಗಿ ಸಂಘಟಿಸಿರುವುದು ಬಂಟ್ವಾಳ ಯುವವಾಹಿನಿಯ ಶಕ್ತಿಯನ್ನು ಅನಾವರಣಗೊಳಿಸಿದೆ ಎಂದು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ತಿಳಿಸಿದರು. ಅವರು ದಿನಾಂಕ 19.01.2014ನೇ ಆದಿತ್ಯವಾರ ಬಿ.ಸಿ.ರೋಡ್ ಗಾಣದಪಡ್ಪು ನಾರಾಯಣಗುರು ನಗರದ ಕಾಂತಬಾರೆ ಬೂದಬಾರೆ ಸಭಾಂಗಣದ ಕೋಟಿ ಚೆನ್ನಯ ವೇದಿಕೆಯಲ್ಲಿ ಜರುಗಿದ ಯುವವಾಹಿನಿ ಬಂಟ್ವಾಳ ತಾಲೂಕು […]
Read More
04-11-2012, 6:54 AM
1987-88 ವಿಜಯದಶಮಿಯ ಶುಭದಿನದಂದು ಸಂಘಟನೆಯ ಉದಯ (02-10-1987) 1988-89 ಸಂಘಟನೆಯ ಮುಖವಾಣಿಯಾಗಿ ‘ಯುವವಾಹಿನಿ’ ಪತ್ರಿಕೆ ಆರಂಭ 1989ರಲ್ಲಿ ಕರ್ನಾಟಕ ಸಂಘಗಳ ನೋಂದಾವಣೆ ಅಧಿನಿಯಮ 1960ರಂತೆ ‘ಯುವವಾಹಿನಿ’ ನೋಂದಾವಣೆ (26-4-1989) 1990-91 ಯುವವಾಹಿನಿ ಮಾಸಿಕ ಪತ್ರಿಕೆಯಾಗಿ ನಿರಂತರ ಪ್ರಕಟನೆ ಆರಂಭ. 1991-92 ಬಿಲ್ಲವ ಸಮಾಜದ ಜನಾಂಗೀಯ ಅಧ್ಯಯನ ಆರಂಭ. 1992-93 ಯುವವಾಹಿನಿ ‘ವಿದ್ಯಾನಿಧಿ’ ಸ್ಥಾಪನೆ, ಬ್ಯಾಂಕಿಂಗ್ ಪರೀಕ್ಷಾ ತರಬೇತಿ ಶಿಬಿರ ಆಯೋಜನೆ. 1993-94 ಅಂತರ್ ಘಟಕ ಕ್ರಿಕೆಟ್ ಪಂದ್ಯಾಟ, ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟ 1994-95 ಮಂಗಳೂರಿನ ಕುದ್ರೋಳಿಯಿಂದ ಉಡುಪಿಯ ಬನ್ನಂಜೆಯವರೆಗೆ […]
Read More
07-10-2011, 4:42 AM
ಪ್ರಕೃತಿಯು ಯಾರ ಸೊತ್ತೂ ಅಲ್ಲ. ಮನುಷ್ಯನ ನಿಜವಾದ ನೋವು ಪ್ರಕೃತಿಗೆ ತಿಳಿದಿರುತ್ತದೆ. ಇಂತಹ ಸಂದರ್ಭದಲ್ಲಿ ದೇವರು ಮಹಾ ಗುರು ಒಬ್ಬನನ್ನು ಅವತಾರ ಪುರುಷನನ್ನಾಗಿಯೋ, ಮಹಾತ್ನನನ್ನಾಗಿಯೋ ಭೂಮಿಗೆ ಕಳುಹಿಸುತ್ತಾನೆ. ಇಂತಹವರು ಧರ್ಮದ ಪರಿಪಾಲನೆಗಾಗಿ ಬಹಳ ಶ್ರಮಿಸುತ್ತಿರುವುದರಿಂದ ಮನುಷ್ಯನು ಸುಖವನ್ನು ಕಾಣುತ್ತಾನೆ. ತನ್ನಂತೆ ಎಲ್ಲಾ ಮಾನವ ಜೀವಿಗಳಲ್ಲಿ ಭಗವಂತನನ್ನು ಕಂಡು ಎಲ್ಲರಿಗೂ ಬದುಕುವ ದಾರಿಯನ್ನು ತೋರಿಸುತ್ತಾನೆ. ನೂರ ಐವತ್ತೇಳು ವರ್ಷಗಳ ಹಿಂದೆ ಅಸ್ಪೃಶ್ಯತೆಯ ಕರಿ ನೆರಳು ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರಿದಾಗ ದೇವರು ನಾರಾಯಣ ಗುರುಗಳನ್ನು ಅವತಾರ ಪುರುಷರನ್ನಾಗಿ […]
Read More