ಸಮಾಜ ಸೇವೆ

ನುಡಿದಂತೆ ನಡೆದ ಸಂಘಟನೆ ಯುವವಾಹಿನಿ : ಭಗೀರಥ ಜಿ

ಬೆಳ್ತಂಗಡಿ : ಯುವ ಸಮುದಾಯವನ್ನು ಒಟ್ಟುಗೂಡಿಸಿಕೊಂಡು ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತ ಅಶಕ್ತರಿಗೆ ಸಂಜೀವಿನಿಯಾಗಿ.ಇಂತಹ ಕ್ರೀಡಾಕೂಟದ ಮೂಲಕ ನೊಂದವರಿಗೆ ನೆರವನ್ನು ನೀಡುತ್ತಾ ನುಡಿದಂತೆ ನಡೆಯುತ್ತಿರುವ ಸಂಘಟನೆ ಅದು ಯುವವಾಹಿನಿ ಬೆಳ್ತಂಗಡಿ ಘಟಕ ಎಂದು ಶ್ರೀ ಗುರುನಾರಯಣ ಸ್ವಾಮಿ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಭಗೀರಥ ಜಿ ಹೇಳಿದರು. ಅವರು ದಿನಾಂಕ 16.12.2018 ರಂದು  ಬೆಳ್ತಂಗಡಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಯುವವಾಹಿನಿ(ರಿ) ಬೆಳ್ತಂಗಡಿ ಘಟಕದಿಂದ ನಡೆದ ಸಾಂತ್ವನ ನಿಧಿಯ ಸಹಾಯಾರ್ಥ ನಡೆದ ಕ್ರಿಕೆಟ್ ಪಂದ್ಯಾಟದ ಸಮಾರೋಪ […]

Read More

ಯುವವಾಹಿನಿ(ರಿ) ಎಕ್ಕಾರು ಪೆರ್ಮುದೆ ಘಟಕದಿಂದ ಸಹಾಯ ಹಸ್ತ

ಎಕ್ಕಾರು ಪೆರ್ಮುದೆ : ಮನನೊಂದ ಅಶಕ್ತ ಸಮಾಜ ಬಾಂಧವರ ಸಹಾಯಕ್ಕೆ ಸದಾ ಸಿದ್ದ ಎನ್ನುವ ಯುವವಾಹಿನಿ(ರಿ) ಎಕ್ಕಾರು ಪೆರ್ಮುದೆ  ಘಟಕವು ತನ್ನ ಧ್ಯೇಯ ವಾಕ್ಯದಂತೆ ಮತ್ತೊಂದು ನೊಂದ ಬಡ ಮನಸ್ಸಿಗೆ ತನ್ನ ಸಹಾಯ ಹಸ್ತವನ್ನು ನೀಡಿರುತ್ತದೆ ಮೂಡಿಗೆರೆಯ ಸುರೇಶ್ ಇವರು ಕಳೆದ ಕೆಲ ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ನಗರದ ಎ.ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಮೂಲತಃ ಬಡ ಕುಟುಂಬದವರಾಗಿದ್ದು, ಅವಿವಾಹಿತರಾಗಿದ್ದು ತನ್ನ ತಂದೆಯನ್ನೂ ಕಳೆದುಕೊಂಡಿರುತ್ತಾರೆ. ಇವರ ಚಿಕಿತ್ಸೆಗೆ ಹಣ ಹೊಂದಿಸಲು ಇವರ ಸಹೋದರಿ ಸುಮ ಇವರು ಕಷ್ಟ […]

Read More

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಸ್ವಾಂತ್ವನ ನಿಧಿ

ಬೆಳ್ತಂಗಡಿ: ಯುವವಾಹಿನಿ(ರಿ) ಬೆಳ್ತಂಗಡಿ ಘಟಕ ಮತ್ತು ಯುವವಾಹಿನಿ ಸಂಚಾಲನ ಸಮಿತಿ ಓಡಿಲ್ನಾಳ ಇದರ ವತಿಯಿಂದ ಬೈನ್ ಹ್ಯಾಮರೇಜ್‍ಗೆ ತುತ್ತಾಗಿ ಕೋಮಾ ಸ್ಥಿತಿಯಲ್ಲಿ ಕೆಎಂಸಿ ಹಾಸ್ಪಿಟಲ್‍ನಲ್ಲಿ ಕಳೆದ 25 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತಿರುವ ಚಂದ್ರಶೇಖರ ಪೂಜಾರಿ ಸುದೆಬೈಲು ಓಡಿಲ್ನಾಳ ಇವರಿಗೆ ರೂಪಾಯಿ 15,750.00 ಸ್ವಾಂತ್ವನ ನಿಧಿಯನ್ನು ಚಂದ್ರಶೇಖರ್ ಪೂಜಾರಿ ಇವರ ಮನೆಯವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಪ್ರಶಾಂತ್ ಮಚ್ಚಿನ, ಸಂಚಾಲನ ಸಮಿತಿಯ ಕಾರ್ಯದರ್ಶಿ ನಾಗೇಶ್ ಓಡಿಲ್ನಾಳ, ಘಟಕದ ಸಲಹೆಗಾರರದ ರಮಾನಂದ ಸಾಲಿಯಾನ್ […]

Read More

ಯುವವಾಹಿನಿ(ರಿ) ಯಡ್ತಾಡಿ ಘಟಕದಿಂದ ವೈದ್ಯಕೀಯ ನೆರವು

ಯಡ್ತಾಡಿ : ಬದುಕು ಒಂದೊಮ್ಮೆ ತೀರಾ ಸಂಕಷ್ಟಕ್ಕೆ ತುತ್ತಾಗುತ್ತದೆ. ಕಷ್ಟ ಬಂದವರಿಗೆ ಮರಳಿ ಮರಳಿ ನೋವು ಬರುತ್ತೆ. ಯಡ್ತಾಡಿ ಗ್ರಾಮದಲ್ಲಿ ವಾಸವಾಗಿರುವ ಸ.ಹಿ.ಪ್ರಾ. ಶಾಲೆ ಯಡ್ತಾಡಿಯ 7ನೇ ತರಗತಿ ವಿದ್ಯಾರ್ಥಿ ರಾಜೇಂದ್ರ ಎಂಬ ಹುಡುಗನ ಕರುಣಾಜನಕ ಕಥೆ ಇದು. ಕಡು ಬಡತನದಲ್ಲಿ ಹುಟ್ಟಿದ ಈ ಹುಡುಗನಿಗೆ ಹುಟ್ಟಿನಿಂದಲೇ ಒಂದು ಕಿಡ್ನಿಯಲ್ಲಿ ಸಮಸ್ಯೆ ಇತ್ತು. ಆದರೂ ಚಿಕಿತ್ಸೆಯ ಮೂಲಕ ಒಂದೇ ಕಿಡ್ನಿಯಲ್ಲಿ ಲವ ಲವಿಕೆಯ ಜೀವನ ಸಾಗಿಸುತ್ತಿದ್ದ. ಆದರೆ ಇತ್ತೀಚಿಗೆ ಇನ್ನೊಂದು ಕಿಡ್ನಿಯಲ್ಲೂ ಸಮಸ್ಯೆ ಕಾಣಿಸಿ ಹಲವಾರು ದಿನಗಳಿಂದ […]

Read More

ಯುವವಾಹಿನಿ(ರಿ.) ವೇಣೂರು ಘಟಕದಿಂದ ಆಸರೆ

ವೇಣೂರು : ಯುವವಾಹಿನಿ(ರಿ.) ವೇಣೂರು ಘಟಕದ ಸೇವಾಯೋಜನೆ ‘ಆಸರೆ’ಯ 4ನೇ ಕಂತನ್ನು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಪೆರಾಡಿ ಗ್ರಾಮದ ಜಯ ಪೂಜಾರಿಯವರಿಗೆ ಘಟಕದ ಅಧ್ಯಕ್ಷರಾದ ನಿತೀಶ್. ಎಚ್ ಹಸ್ತಾಂತರಿಸಿದರು, ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಗಳಾದ ರಾಕೇಶ್ ಕುಮಾರ್ ಮೂಡುಕೋಡಿ, ಘಟಕದ ಉಪಾಧ್ಯಕ್ಷರಾದ ನವೀನ್ ಪೂಜಾರಿ ಪಚ್ಚೇರಿ, ಕಾರ್ಯದರ್ಶಿಗಳಾದ ಸತೀಶ್ ಪಿ.ಎನ್, ಪದಾಧಿಕಾರಿಗಲಾದ ಕರುಣಾಕರ ಪೂಜಾರಿ ಮರೋಡಿ, ಸದಾನಂದ ಪೂಜಾರಿ, ಹರೀಶ್ ಪಿ.ಎಸ್, ಶಿವಪ್ರಕಾಶ್ ಅಂಬಲ, ಸುದೀಪ್ ಕಾಶಿಪಟ್ಣ ಉಪಸ್ಥಿತರಿದ್ದರು

Read More

ಯುವವಾಹಿನಿ (ರಿ.) ಬೆಂಗಳೂರು ಘಟಕದಿಂದ ಮಕ್ಕಳ ದಿನಾಚರಣೆ

ಬೆಂಗಳೂರು : ಯುವವಾಹಿನಿ (ರಿ.) ಬೆಂಗಳೂರು ಘಟಕದ ಅಥಿತ್ಯದಲ್ಲಿ ತಾ: 02-12-2018 ರಂದು ಸ್ಪರ್ಶ ಟ್ರಸ್ಟ್ ನ ನಿಸರ್ಗ ಗ್ರಾಮದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಟ್ರಸ್ಟಿನ ಮಕ್ಕಳಿಗೆ ವಿವಿಧ ರೀತಿಯ ಸಾಂಸ್ಕೃತಿಕ ಸ್ಪರ್ಧೆ ಮತ್ತು ಆಟೋಟ ಸ್ಪರ್ಧೆಗಳನ್ನು ನಡೆಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಸುಧೀರ್ ಪೂಜಾರಿಯವರು ವಹಿಸಿಕೊಂಡಿದ್ದರು, ಸ್ಪರ್ಶ ಟ್ರಸ್ಟ್ ನ ಅಡ್ಮಿನ್ ಉಸ್ತುವಾರಿ ಆಗಿರುವ ರಾಜು ಹಾಗೂ ಶಶಧರ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಘಟಕದ ಸದಸ್ಯರಾದ ಕಿಶನ್ […]

Read More

ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ವತಿಯಿಂದ ಸಹಾಯ ಹಸ್ತ

ಪಡುಬಿದ್ರಿ : ಯುವವಾಹಿನಿ (ರಿ) ಪಡುಬಿದ್ರಿ ಘಟಕದ ವತಿಯಿಂದ 01.12.2018 ರಂದು ಮಾನಸಿಕ ಅಸಮರ್ಥತೆಯಿಂದ ಬಳಲುವ ಮಕ್ಕಳನ್ನು ಹೊಂದಿರುವ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಜಮಾಡಿ ಬಳಿಯ ನಿವಾಸಿ ಜಯಂತಿಯವರಿಗೆ ಘಟಕದಿಂದ ರೂ 6,000 (ಆರುಸಾವಿರ) ಧನಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ದೀಪಕ್ ಕೆ. ಬೀರ, ಉಪಾಧ್ಯಕ್ಷರಾದ ಯೋಗೀಶ್ ಪಾದೆಬೆಟ್ಟು, ಕಾರ್ಯದರ್ಶಿ ಶೈಲಜ, ಘಟಕದ ಸಮಾಜ ಸೇವಾ ನಿರ್ದೇಶಕರಾದ ಅಕ್ಷಯ್ ನಂದಿಕೂರು, ಸುಶಾಂತ್ ಕುಮಾರ್, ಸಾಮಾಜಿಕ ಕಾರ್ಯಕರ್ತರಾದ ಪ್ರತಾಪ್, ದಯಾನಂದ ,ಪ್ರಕಾಶ್ ಉಪಸ್ಥಿತರಿದ್ದರು.

Read More

ಅಂತರ್ಜಲ ಮಟ್ಟ ಏರಿಕೆಗೆ ಕಿಂಡಿ ಅಣೆಕಟ್ಟು ಮುಚ್ಚುವ ಕಾರ್ಯ

ಅಡ್ವೆ: ಯುವವಾಹಿನಿ (ರಿ) ಅಡ್ವೆ ಘಟಕದಿಂದ ಅಂತರ್ಜಲ ಮಟ್ಟ ಏರಿಕೆಗೆ ಕಿಂಡಿ ಅಣೆಕಟ್ಟು ಮುಚ್ಚುವ ಕಾರ್ಯಕ್ರಮ ದಿನಾಂಕ 18-11-2018 ಹಾಗೂ 25-11-2018 ರಂದು ಘಟಕದ ಸಂಘಟನಾ ಕಾರ್ಯದರ್ಶಿ ಅರುಣಾನಂದ ಕಿಶೋರ್ ಇವರ ನೇತೃತ್ವದಲ್ಲಿ ನಡೆಯಿತು. ಈ ಕಾರ್ಯದಲ್ಲಿ ಘಟಕದ ಅಧ್ಯಕ್ಷರಾದ ಜಿತೇಶ್ ಜೆ. ಕರ್ಕೇರ, ಉಪಾಧ್ಯಕ್ಷರಾದ ಶ್ರೀಧರ್ ಟಿ. ಪೂಜಾರಿ, ಕಾರ್ಯದರ್ಶಿ ಪ್ರಸನ್ನ ಕುಮಾರ್ ಸೇರಿದಂತೆ ಘಟಕದ ಮಾಜಿ ಅಧ್ಯಕ್ಷರುಗಳು, ಹೆಚ್ಚಿನ ಸದಸ್ಯರುಗಳು ಭಾಗವಹಿಸಿದ್ದರು. ಈ ಅಣೆಕಟ್ಟನ್ನು ಮುಚ್ಚಿದ ಪರಿಣಾಮ ಪರಿಸರದ ಸುಮಾರು 60 ಮನೆಗಳ ಬಾವಿಗಳ […]

Read More

ಯುವವಾಹಿನಿ (ರಿ) ಕಂಕನಾಡಿ ಘಟಕದಿಂದ ಶೈಕ್ಷಣಿಕ ನೆರವು

ಕಂಕನಾಡಿ : ಯುವವಾಹಿನಿ (ರಿ) ಕಂಕನಾಡಿ ಘಟಕವು ಮಕ್ಕಳ ದಿನಾಚರಣೆ ಪ್ರಯುಕ್ತ ದಿನಾಂಕ 16-11-2018ರಂದು ಮಂಗಳೂರಿನ ಗೋರಿಗುಡ್ಡ ಕಿಟ್ಟೆಲ್ ಮೆಮೋರಿಯಲ್ ಶಾಲಾ ಬಡ ವಿದ್ಯಾರ್ಥಿಗಳ ಸಮವಸ್ತ್ರಕ್ಕಾಗಿ ಕಂಕನಾಡಿ ಘಟಕದ ಸದಸ್ಯರು ಹಾಗೂ ಅದೇ ಶಾಲೆಯ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಹತ್ತು ಸಾವಿರ ರೂಪಾಯಿ ಶೈಕ್ಷಣಿಕ ನೆರವು ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಕಂಕನಾಡಿ ಘಟಕದ ಅಧ್ಯಕ್ಷ ಭವಿತ್ ರಾಜ್, ಕಾರ್ಯದರ್ಶಿ ಸುಮಾ ವಸಂತ್, ಸದಸ್ಯೆ ಚಂದ್ರಾವತಿ ಮತ್ತಿತರರು ಉಪಸ್ಥಿತರಿದ್ದರು.

Read More

ಯುವಾಹಿನಿ (ರಿ) ಕುಪ್ಪೆಪದವು ಘಟಕದ ವತಿಯಿಂದ ಅಶಕ್ತರಿಗೆ ನೆರವು

ಕುಪ್ಪೆಪದವು : ಕುಪ್ಪೆಪದವು ಗ್ರಾಮದ ದೊಡ್ಡಳಿಕೆ ಎಂಬ ಜನವಸತಿ ಪ್ರದೇಶದಲ್ಲಿ ವಾಸಿಸುತ್ತಿರುವ ತಮ್ಮೆರಡು ಕಣ್ಣುಗಳನ್ನು ಕಳೆದುಕೊಂಡು ದುಡಿಯಲು ಅಶಕ್ತರಾಗಿರುವ ಅಲ್ಲದೆ ಆರ್ಥಿಕವಾಗಿ ದುರ್ಬಲ ಪರಿಸ್ಥಿತಿಯಲ್ಲಿರುವ ಸೀತಾರಾಮ ಪೂಜಾರಿಯವರ ಮಗಳ ಮದುವೆಗಾಗಿ ಕುಪ್ಪೆಪದವು ಘಟಕದ ಮಹಿಳೆಯರ ವತಿಯಿಂದ ದಿನಾಂಕ 08-11-2018 ರಂದು 50 ಕೆ ಜಿ ಅಕ್ಕಿ, ಉಪಾದ್ಯಕ್ಯರು ಅಜಯ್ ಅಮೀನ್ ರವರು ವೈಯಕ್ತಿಕವಾಗಿ 50 ತೆಂಗಿನಕಾಯಿ ಹಾಗೂ ಇತರ ಪದಾಧಿಕಾರಿಗಳು ಸದಸ್ಯರ ವತಿಯಿಂದ ರೂಪಾಯಿ ಐದು ಸಾವಿರ ನಗದನ್ನು ಅಧ್ಯಕ್ಷರು, ಉಪಾದ್ಯಕ್ಯರು, ಕಾರ್ಯದರ್ಶಿ, ಎಲ್ಲಾ ಸದಸ್ಯರು ಪದಾಧಿಕಾರಿಗಳ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 16-11-2024
ಸ್ಥಳ : ಯುವವಾಹಿನಿ ಸಭಾಂಗಣ 3ನೇ ಮಹಡಿ, ರಘು ಬಿಲ್ಡಿಂಗ್ ಊರ್ವ ಸ್ಟೋರ್, ಮಂಗಳೂರು

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ

ದಿನಾಂಕ : 15-11-2024
ಸ್ಥಳ : ಸಿ. ಎಸ್. ಐ. ಬಾಲಿಕಾಶ್ರಮ, ಮೂಲ್ಕಿ

ಯುವವಾಹಿನಿ (ರಿ.) ಮೂಲ್ಕಿ ಘಟಕ

ದಿನಾಂಕ : 23-11-2024
ಸ್ಥಳ : ಸಂಪಿಗೆ ನಗರ, ಉದ್ಯಾವರ ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 24-11-2024
ಸ್ಥಳ : ನಾಗಪ್ಪ ಕಾಂಪ್ಲೆಕ್ಸ್ , ಎನ್ .ಹೆಚ್-66, ಬಲಾಯಿಪಾದೆ, ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 17-11-2024
ಸ್ಥಳ : ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಹೆಜಮಾಡಿ

ಯುವವಾಹಿನಿ (ರಿ) ಪಡುಬಿದ್ರಿ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
error: Content is protected !!