ಮಂಗಳೂರು ಅಶೋಕನಗರದ ನಿವಾಸಿಯಾಗಿರುವ ಅಶೋಕ್ ಕುಮಾರ್ ಎಂ.ಎ ಪದವಿಧರರು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇಲ್ಲಿ ಡೆಪ್ಯುಟಿ ಜನರಲ್ ಮೇನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಶೋಕ್ ಕುಮಾರ್ ರವರು ಸಮಾಜ ಸೇವಕರು. ಯುವವಾಹಿನಿಯ ಸ್ಥಾಪಕ ಸದಸ್ಯರಲ್ಲೋರ್ವರು. ದಿಟ್ಟ, ನೇರ ನಡೆನುಡಿಯ ಇವರು ಸದಾ ಚಟುವಟಿಕೆಯ ದಣಿವರಿಯದ ವ್ಯಕ್ತಿ. ಹಿಡಿದ ಕೆಲಸವನ್ನು ಮಾಡಿ ಮುಗಿಸುವ ಛಾತಿಯುಳ್ಳವರು. ಯುವವಾಹಿನಿಯ ಸದಸ್ಯರಾಗಿದ್ದುಕೊಂಡು, ಕುದ್ರೋಳಿ ಯುವಕ ಸಂಘ, ಕುದ್ರೋಳಿ, ಮಂಗಳೂರು ಇದರ ಅಧ್ಯಕ್ಷರಾಗಿ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೌಕರರ ಯೂನಿಯನ್, ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.
1994 ರಲ್ಲಿ ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಇವರು 1995-96 ನೇ ಸಾಲಿನಲ್ಲಿ ಕೇಂದ್ರ ಸಮಿತಿಯ ಅಧ್ಯಕರಾಗಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಯುವವಾಹಿನಿಗೆ ಎರಡು ಹೊಸ ಘಟಕಗಳು (ಕಟಪಾಡಿ ಮತ್ತು ಕೋಟ) ಸೇರ್ಪಡೆಗೊಳ್ಳಲು ಶ್ರಮಿಸಿದರು. ಹಾಸನದ ಕೋಣನೂರು ತಾಲೂಕಿನ ಈಡಿಗರ ಜೊತೆ ಸಂಪರ್ಕವಿರಿಸಿ ಅಲ್ಲಿ ಯುವವಾಹಿನಿಯ ಘಟಕ ಸ್ಥಾಪಿಸಲು ಪ್ರಯತ್ನಿಸಿದರು. I.A.S., I.P.S., I.F.S., ನಂತಹ ಆಡಳಿತಾತ್ಮಕ ಪರೀಕ್ಷೆಗೆ ಮಂಗಳೂರಿನಲ್ಲಿ ಉಚಿತ ತರಬೇತಿ ಶಿಬಿರವನ್ನು ಏರ್ಪಡಿಸಲು ಶ್ರಮಿಸಿದರು. ನಾರಾಯಣ ಗುರು ಜಯಂತಿಯ ಸಂದರ್ಭಕ್ಕಾಗಿ ಅವಿಭಜಿತ ದ.ಕ.ಜಿಲ್ಲೆಯ ಮೂರು ಕಡೆ [ಮಂಗಳೂರು, ಉಡುಪಿ ಮತ್ತು ಕಾರ್ಕಳ (ಮೂಡುಬಿದ್ರೆ)] ಗಳಿಂದ ಗುರು ಸಂದೇಶ ಯಾತ್ರೆಗಳು ಹೊರಟು ಮುಲ್ಕಿಯಲ್ಲಿ ಸಮಾವೇಶಗೊಂಡಿತು. ಬ್ಯಾಂಕಿಂಗ್ ಪರೀಕ್ಷಾ ತರಬೇತಿ ಶಿಬಿರ, ಆಯುರ್ವೇದ ಗಿಡಮೂಲಿಕೆಗಳ ಬಗ್ಗೆ ಮಾಹಿತಿ ಶಿಬಿರ, ಅಣಬೆ ಕೃಷಿ ತರಬೇತಿ ಶಿಬಿರ, ಪ್ರಥಮ ಚಿಕಿತ್ಸಾ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀಯುತರದ್ದು ಪತ್ನಿ ಪೂರ್ಣಿಮಾ ಹಾಗೂ ಇಬ್ಬರು (ಅಕ್ಷತಾ, ಅಂಕಿತ್) ಮಕ್ಕಳನ್ನೊಳಗೊಂಡ ಸಂತೃಪ್ತ ಸಂಸಾರ.
ವಿಳಾಸ : ಶಿವಗಿರಿ,
ಅಶೋಕನಗರ ಶಾಲೆಯ ಹಿಂಬದಿ,
ಅಶೋಕನಗರ, ಮಂಗಳೂರು – 575 006
ಮೊಬೈಲ್: 9945226889