ರಜತ ರಶ್ಮಿ ; ದಾಮೋದರ ಕಲ್ಮಾಡಿ

ತುಳುನಾಡಿನ ಸಾಂಸ್ಕೃತಿಕ ಸಮುಚ್ಚಯ ಕೋಟಿ-ಚೆನ್ನಯ ಥೀಂ ಪಾರ್ಕ್

ತುಳುನಾಡಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಕೋಟಿ- ಚೆನ್ನಯರ ಹೆಸರು ಅಮರವಾದುದು. ವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವಾಭಿಮಾನಕ್ಕಾಗಿ ಹೋರಾಡಿದ ಅವರು ಇಂದು ಪೂಜ್ಯನೀಯರಾಗಿದ್ದಾರೆ. ಅವರ ನೆನಪನ್ನು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಸುವ ಯತ್ನವಾಗಿ ಕೋಟಿ-ಚೆನ್ನಯ ಥೀಂ ಪಾರ್ಕನ್ನು ನಿರ್ಮಿಸಲಾಗಿದೆ. ಕೋಟಿ- ಚೆನ್ನಯರ ಸಂಕ್ಷಿಪ್ತ ಬದುಕು ಮತ್ತು ಸಾಧನೆಗಳನ್ನು ಹೀಗೆ ಸಂಗ್ರಹಿಸಬಹುದು.

ಸುಮಾರು 450 ವರ್ಷಗಳ ಹಿಂದೆ ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ಪವಿತ್ರವಾದ ದೇಯಿಬೈದೆತಿಯ ಗರ್ಭದಲ್ಲಿ ಜನ್ಮ ತಳೆದ ಕೋಟಿ- ಚೆನ್ನಯರು ಎಳೆಯ ಪ್ರಾಯದಲ್ಲೇ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ತಾವು ಕೂಡಾ ಬಲಿಷ್ಠರಾಗಬೇಕು ಎನ್ನುವಂತಹ ಇರಾದೆಯನ್ನು ತನ್ನ ಮಾವ ಸಾಯನ ಬೈದನಲ್ಲಿ ವ್ಯಕ್ತಪಡಿಸುತ್ತಾರೆ. ಸಾಯನ ಬೈದನ ಸಲಹೆಯಂತೆ ದೂರದ ಉಡುಪಿಯಲ್ಲಿನ ಕಟಪಾಡಿ ನಾನಯರ ಗರೋಡಿಯಲ್ಲಿ 12 ವರ್ಷಗಳ ಕಾಲ ಅಂಗ ಸಾಧನೆಯನ್ನು ಗೈಯುತ್ತಾರೆ. ಬಲಿಪ ನಾನಯರು, ಪಿಲಿಪ ನಾನಯರು ಗುರುಗಳಾಗಿದ್ದರು. ಇಲ್ಲಿ ಅವರು ದೇಹಬಲ ಮತ್ತು ಮನೋಬಲ ಕರಗತ ಮಾಡಿಕೊಂಡರು. ಇದು ಅವರಿಗೆ ಮುಂದೆ ದಬ್ಬಾಳಿಕೆಯನ್ನು ಎದುರಿಸುವ ಶಕ್ತಿಯನ್ನು ನೀಡುತ್ತದೆ. ಅಜಾನುಬಾಹು, ಸುಂದರ ದೃಢಕಾಯ, ಚಿತ್ತದ ಆಳುಗಳಾಗಿದ್ದರಿಂದ ಸಹಜವಾಗಿಯೇ ಅಕರ್ಷಕವಾಗಿದ್ದರು. ಸ್ವಾಭಿಮಾನಿ ಸಮಾಜದ ಕೇಂದ್ರ ಬಿಂದುವಾದರು. ತಮ್ಮ ವಿದ್ಯಾಭ್ಯಾಸದ ಕಾಲದಲ್ಲೇ ಉಡುಪಿ ಪರಿಸರದ ಸಮಾಜ ಬಾಂಧವರ ಸ್ಥಿತಿಗತಿಗಳನ್ನು ಅರಿತು ಅದನ್ನು ಪರಿವರ್ತಿಸುವ ಬೌದ್ದಿಕ ನಿಲುವಿಗೆ ಬಂದವರಾಗಿದ್ದರು.

ಮುಂದೆ ಅವರು ತಮ್ಮ ಊರಾದ ಪಡುಮಲೆಗೆ ತೆರಳಿ ಕೃಷಿಕಾಯಕದಲ್ಲಿ ತೊಡಗಿದರು. ಉಡುಪಿ ಕ್ಷೇತ್ರದಲ್ಲಿ ಯಾವ ನಿಲುವಿಗೆ ಬದ್ದರಾಗಿದ್ದಾರೋ ಅದನ್ನು ಪಡುಮಲೆಯಲ್ಲಿ ಮಾಡಿ ತೋರಿಸಿದರು. ಅರ್ಥಾತ್ ದಬ್ಬಾಳಿಕೆಯನ್ನು ಎದುರಿಸಿದರು. ಎಲ್ಲಾ ಕೆಟ್ಟ ಗುಣಗಳನ್ನು ಮೈಗೂಡಿಸಿಕೊಂಡ ಬುದ್ಧಿವಂತನಿಗೆ ಸರಿಯಾದ ಗತಿಯನ್ನು ಕಾಣಿಸಿದರು. ಪಡುಮಲೆ ಬಿಟ್ಟು ಪಂಜದ ದಿಂಡುಮಲೆಯಿಂದ ಪಾರಾಗಿ, ತಾಯಿ ಹೇಳಿದ ಹರಕೆ ಪುಂಡಿಪಣವು (ಹಿಡಿ ಹಣ) ಕೆಮ್ಮಲಜೆಯಲ್ಲಿ ತೀರಿಸಿ, ಎಣ್ಮೂರು ಸೇರಿದರು. ಎಣ್ಮೂರಿನಲ್ಲಿ ಸ್ವಾಭಿಮಾನದಿಂದ ಜನರನ್ನು ಜಾಗ್ರತೆಗೊಳಿಸಿ ತಾವು ಕಲಿತ ಅಂಗಸಾಧನೆಯ ಮಹತ್ವವನ್ನು ಜನರಿಗೆ ತಿಳಿಸಿ ಎಣ್ಮೂರಿನ ನಿರ್ಣಾಯಕ ಯುದ್ಧದಲ್ಲಿ ವೀರ ಮರಣವನ್ನಪ್ಪಿ ಹುತಾತ್ಮರಾದರು.

ಅವಸಾನದ ಅನಂತರ 450 ವರ್ಷಗಳ ಕಾಲ ಅವರ ಸಂದೇಶದಂತೆ ನಮ್ಮ ಹಿರಿಯರು ಗರೋಡಿಗಳನ್ನು ಕಟ್ಟಿಸಿದರು. ನೇಮನೆರಿಗಳನ್ನು ಕೊಡುತ್ತಾ ಬಂದರು. ಆಯಬೀರವನ್ನು ಕರೆಯುತ್ತಾ ಬಂದಿದ್ದಾರೆ. ದ.ಕ. ಜಿಲ್ಲೆ, ಉಡುಪಿ ಜಿಲ್ಲೆ, ಕಾಸರಗೋಡು, ಮಡಿಕೇರಿ, ಮುಂಬೈ, ಹೀಗೆ ಒಟ್ಟು 230 ಗರೋಡಿಗಳು ಕಂಡು ಬರುತ್ತವೆ. ಪಡುಮಲೆ, ಪಂಜ, ಎಣ್ಮೂರಿನಲ್ಲಿ ಕೋಟಿ ಚೆನ್ನಯರು ಬದುಕಿ ಬಾಳಿದ, ಘಟನಾವಳಿ ನಡೆದ ಎಲ್ಲಾ ಪ್ರದೇಶಗಳು, ಕುರುಹುಗಳು ಈಗಲೂ ಜೀವಂತವಾಗಿ ಅವರ ಚರಿತ್ರೆಗೆ ಸಾಕ್ಷಿಯಾಗಿವೆ. ದ.ಕ. ಮತ್ತು ಉಡುಪಿ ಜಿಲ್ಲೆಯ ಬಿಲ್ಲವ ಸಮಾಜ ಬಾಂಧವರಿಗೆ ಕೂಡು ಕಟ್ಟಿಗೆ ಒಂದು ಗರೋಡಿಯಂತೆ ಗ್ರಾಮದೇಗುಲವಾಗಿ ಗರೋಡಿ ಮೆರೆಯಿತು. ಇತರ ಜಾತಿ ಜನಾಂಗದ ಜನರಿಗೂ ಗರೋಡಿಗಳು ಪವಿತ್ರವಾಗಿವೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಜಾತಿ ಸಾಮರಸ್ಯವನ್ನು ಬೆಸೆಯುವಲ್ಲಿ ಗರೋಡಿಗಳು ಮಹತ್ವದ ಪಾತ್ರ ವಹಿಸಿವೆ. ಮೌಕಿಕವಾಗಿ ಸಾಗುತ್ತಾ ಬಂದ ಕೋಟಿ-ಚೆನ್ನಯರ ಚರಿತ್ರೆ ಬದಲಾದ ಕಾಲದಲ್ಲಿ ಬದಲಾದ ಮಾಧ್ಯಮದಲ್ಲಿ ದಾಖಲಿಸುವುದು ಅನಿವಾರ್ಯ. ಅವರ ಸಂದೇಶವನ್ನು, ಅವರ ಇತಿಹಾಸವನ್ನು ಸದಾ ಕಾಪಾಡುವುದು ಅತೀ ಅವಶ್ಯ. 450 ವರ್ಷಗಳ ಈ ಕಾಲಘಟ್ಟದಲ್ಲಿ ಜನರು ತಾವು ಪೂಜಿಸುವ ಬ್ರಹ್ಮಬೈದೇರುಗಳ ಆರಾಧನೆ, ಆಚರಣೆಗಳ ಜೊತೆಗೆ ತಮ್ಮದೇ ಆದ ಸಾಂಸ್ಕೃತಿಕ ಕೊಡುಗೆಗಳನ್ನು ಕೊಟ್ಟಿದ್ದಾರೆ. ಇವೆಲ್ಲವುಗಳನ್ನು ಉಳಿಸಿ, ಬೆಳೆಸಿ, ಮುಂದಿನ ಜನಾಂಗಕ್ಕೆ ವರ್ಗಾಯಿಸುವುದು ಇಂದಿನ ಜನಾಂಗದ ಜವಾಬ್ದಾರಿ. ಈ ನಿಟ್ಟಿನಲ್ಲಿ 100 ಎಕ್ರೆ ಜಮೀನನ್ನು ಒಳಗೊಂಡ ಕೋಟಿ-ಚೆನ್ನಯ ಥೀಂ ಪಾರ್ಕ್ ಎನ್ನುವ ಯೋಜನೆ ಈ ಎಲ್ಲಾ ಯೋಚನೆಗಳನ್ನು ಅನುಷ್ಠಾನಗೊಳಿಸಲು ಸರಕಾರ ಕಾರ್ಯೋನ್ಮುಖವಾಗಿದೆ.

ತಾರೀಕು 31-12-2006 ರಂದು ಬೈದಶ್ರೀ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಸ್ತುವಾರಿ ಸಚಿವರಾಗಿದ್ದ ಡಾ| ವಿ. ಎಸ್. ಆಚಾರ್ಯರವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಟಿ-ಚೆನ್ನಯರ ಚರಿತ್ರೆಯು ಬಹಳ ವಿಸ್ತಾರವಾದದ್ದು. ಇವರ ಅಧ್ಯಯನಕ್ಕೆ ಹಾಗೂ ಸಂದೇಶದ ತಿರುಳುಗಳನ್ನು ಅರ್ಥೈಸಲು ’ಕೋಟಿ- ಚೆನ್ನಯ ಥೀಂ ಪಾರ್ಕ್’ ಯೋಜನೆ ಅತಿ ಅವಶ್ಯ. ಇದಕ್ಕೆ ವಿಸ್ತಾರವಾದ ಜಾಗ, ದೊಡ್ಡ ಮೊತ್ತದ ಅನುದಾನ ಬೇಕಾಗಿದ್ದು ಇದನ್ನು ಈಡೇರಿಸುವ ಆಶ್ವಾಸನೆಯನ್ನು ನೀಡಿದ್ದು ಅದರಂತೆ 2007-2008 ರ ಬಜೆಟಲ್ಲಿ ಒಂದು ಕೋಟಿ ರೂಪಾಯಿ ಮತ್ತು 100 ಎಕರೆ ಜಾಗವನ್ನು ಮಂಜೂರು ಮಾಡಲಾಯಿತು. ಶಾಸಕರಾಗಿದ್ದ ರಘುಪತಿ ಭಟ್, ಸುನಿಲ್ ಕುಮಾರ್ ಇವರ ಸಹಕಾರದಿಂದ ಇದು ಸಾಧ್ಯವಾಯಿತು.

ಉಡುಪಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲೆ ಆಯೋಜಿಸಿದ್ದ ಸಮಾರಂಭದಲ್ಲಿ ದಿನಾಂಕ 28-1-2012 ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಮಾನ್ಯ ಶ್ರೀ ಡಿ.ವಿ. ಸದಾನಂದ ಗೌಡರು ಕೋಟಿ-ಚೆನ್ನಯ ಥೀಂ ಪಾರ್ಕನ್ನು ಉದ್ಘಾಟಿಸಿ ಲೋಕಾರ್ಪಣೆ ಗೈದರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ| ವಿ.ಎಸ್. ಆಚಾರ್ಯ, ಕಾರ್ಕಳದ ಶಾಸಕರಾದ ಶ್ರೀ ಗೋಪಾಲ ಭಂಡಾರಿ, ಮಾಜಿ ಶಾಸಕರಾದ ಶ್ರೀ ವಿ. ಸುನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತು ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

ಕೋಟಿ- ಚೆನ್ನಯ ಥೀಂ ಪಾರ್ಕ್‌ನ ಉದ್ದೇಶ ಮತ್ತು ಯೋಜನೆ
ಈ ಯೋಜನೆಗೆ ಕರ್ನಾಟಕ ಸರಕಾರದಿಂದ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಂಡಿದೆ ಹಾಗೂ ಕಾರ್ಕಳ ತಾಲೂಕಿನ ಕಸಬಾದಲ್ಲಿ 100 ಎಕ್ರೆ ಜಮೀನು ಮಂಜೂರಾಗಿದೆ.

ತುಳುನಾಡಿನ ಸಾಂಸ್ಕೃತಿಕ ವೀರರಾದ ಕೋಟಿ-ಚೆನ್ನಯರ ಮೂಲಕ ಅನಾವರಣಗೊಂಡು ಇಡೀ ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ತಾಣವೇ ತುಳುನಾಡಿನ ಸಾಂಸ್ಕೃತಿಕ ಸಮುಚ್ಚಯ ಕೋಟಿ-ಚೆನ್ನಯ ಥೀಂ ಪಾರ್ಕ್ (Theme Park). ಇಡೀ ಯೋಜನೆಯನ್ನು ನಾಲ್ಕು ಹಂತಗಳಾಗಿ ವಿಭಾಗಿಸಿದೆ.

ಮೊದಲನೆ ಹಂತದಲ್ಲಿ ಮುಖದ್ವಾರ, ಅದನ್ನು ಅನುಸರಿಸಿ ಕೋಟಿ- ಚೆನ್ನಯರ ಕಲ್ಲಿನ ಮೂರ್ತಿಗಳು, ನಂತರ ಗರೋಡಿ ಮಾದರಿ (ಮೋಡೆಲ್), ಅದರ ಸುತ್ತ ಆವರಣ. ಆವರಣದಲ್ಲಿ ಕೋಟಿ- ಚೆನ್ನಯರ ಹುಟ್ಟಿನಿಂದ ಅವಸಾನದವರೆಗಿನ ಕಥೆ, ಸಂದೇಶ ಸಾರುವ 34 ತೈಲಚಿತ್ರಗಳ ರಚನೆ, ಕೋಟಿ-ಚೆನ್ನಯರ ಬದುಕಿನ ಘಟನಾವಳಿಯನ್ನು ಪುನರಪಿ ನೆನಪಿಸುವ ಪ್ರಾಕೃತಿಕ ಹಿನ್ನೆಲೆಯಲ್ಲಿ ಸಮೂಹ ಶಿಲ್ಪಗಳ ಮುಖಾಂತರ ಹೊರಾಂಗಣ ದಲ್ಲಿ ಪ್ರದರ್ಶನ, ಥೀಂ ಪಾರ್ಕನ್ನು ವೀಕ್ಷಿಸಿದಾಗ ಕೋಟಿ- ಚೆನ್ನಯರ ಕಥೆ, ಸಂದೇಶ, ಆಡಂಬೋಲದ ಪ್ರದೇಶಗಳ ವಿವರಣೆ ದೊರೆಯುತ್ತದೆ. ಜೊತೆಗೆ ಓಪನ್ ಥಿಯೇಟರ್. ತತ್ಸಂಬಂಧ ಜಾನಪದ ವೀರರನ್ನು ಕಲ್ಪಿಸುವ ಚಿತ್ರಣ, ಎಲ್ಲಾ ಜನಾಂಗದ ವೃತ್ತಿ ಕಸುಬನ್ನು ಬಿಂಬಿಸಿ, ಹಿಂದಿನ ಕಾಲದ ಹಳ್ಳಿಯ ಕಲ್ಪನೆ, ಸಂಶೋಧನಾ ಕೇಂದ್ರ, ಗ್ರಂಥಾಲಯ ನಿರ್ಮಾಣ, ಸಂಶೋಧನೆಗೆ ಫೆಲೋಶಿಪ್ ನೀಡುವುದರ ಮುಖಾಂತರ ಅಧ್ಯಯನಕ್ಕೆ ಅನುವು ಮಾಡುವುದು. ದೇಯಿ ಬೈದೆತಿ ಔಷಧೀಯ ಸಸ್ಯಕ್ಷೇತ್ರ ನಿರ್ಮಾಣ, ಕೋಟಿ-ಚೆನ್ನಯ ಜಾನಪದ ಮಹಾವಿಶ್ವವಿದ್ಯಾನಿಲಯ ಸ್ಥಾಪನೆ, ಇವು ಯೋಜನೆಗಳು.

ನಿರ್ಮಿತಿ ಕೇಂದ್ರದ ಮುತುವರ್ಜಿ
ಥೀಂ ಪಾರ್ಕಿನ ಕಟ್ಟಡ ಸಮುಚ್ಛಯದಲ್ಲಿ ತುಳುನಾಡಿನ ವೈಭವವನ್ನು ಪ್ರತಿಬಿಂಬಿಸುವ ವಿನ್ಯಾಸವನ್ನು ಹಾಗೂ ಆ ಕಾಲದ ಕಟ್ಟಡ ಸಾಮಾಗ್ರಿಗಳನ್ನು ಬಳಸಿಕೊಂಡು ಗತಕಾಲದ ವೈಭವವನ್ನು ಮರುಕಳಿಸುವಂತಹ ಕಾಷ್ಠ ಶಿಲ್ಪಗಳನ್ನು ಬಳಸಿಕೊಳ್ಳುವಲ್ಲಿ ಕಟ್ಟಡ ನಿರ್ಮಿಸಿದ ಉಡುಪಿ ನಿರ್ಮಿತಿ ಕೇಂದ್ರ ಮುತುವರ್ಜಿ ವಹಿಸಿದೆ. ಕೋಟಿ-ಚೆನ್ನಯರ ಕಥಾ ಆಧಾರಿತ 36 ಘಟನಾವಳಿಗಳನ್ನು ವಿಜಯ ನಗರದ ಸುರಪುರ ಶೈಲಿಯಲ್ಲಿ ರಚಿಸಲಾಗಿದೆ. ಗರಡಿಯಲ್ಲಿ ಸಂಬಂಧಿಸಿದ ವಸ್ತುಗಳನ್ನು ಜೋಡಿಸಲಾಗಿದೆ. ಥೀಂ ಪಾರ್ಕ್‌ನ ನಿರ್ಮಾಣದಲ್ಲಿ ತುಳುನಾಡಿನ ಕಲೆಯನ್ನು ನೆನಪಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಮುತುವರ್ಜಿಯನ್ನು ವಹಿಸಲಾಗಿದೆ.

ಕೋಟಿ ಚೆನ್ನಯರ ಬೃಹತ್ ಶಿಲಾ ಮೂರ್ತಿ
ಥೀಂ ಪಾರ್ಕ್‌ಗೆ ಪ್ರವೇಶ ಮಾಡುತ್ತಿದ್ದಂತೆ ಕೋಟಿ-ಚೆನ್ನಯರ ಬೃಹತ್ ಮೂರ್ತಿಗಳು ದರ್ಶನ ನೀಡುತ್ತವೆ. ಎರಡು ಅಡಿ ಪೀಠ ಸೇರಿದಂತೆ ಸುಮಾರು ೧೨ ಅಡಿ ಎತ್ತರದ ಈ ವಿಗ್ರಹಗಳನ್ನು ತುಮಕೂರು ಜಿಲ್ಲೆಯ ಸಿರಾದಿಂದ ತರಿಸಿದ ಗ್ರಾನೈಟ್ ಕಲ್ಲಿನಿಂದ ಕೆತ್ತಲಾಗಿದ್ದು ಎತ್ತರದ ಶಿಲಾ ವೇದಿಕೆಯ ಮೇಲೆ ಪ್ರತಿಷ್ಠಾಪಿಸಲಾಗಿದೆ. ಅಭಯ ಹಸ್ತದ ಕೆತ್ತನೆಯಿರುವ ಕೋಟಿಯ ಸೊಂಟದಲ್ಲಿ ಸುರಿಯ (ಧರ್ಮ ರಕ್ಷಣೆ ಹಾಗೂ ದುಷ್ಟರ ದಮನಕ್ಕೆ ಉಪಯೋಗಿಸುವ ಆಯುಧ), ಎಡಕೈಯಲ್ಲಿ ಬಿಲ್ಲು, ಬೆನ್ನಿನಲ್ಲಿ ಬಾಣಗಳ ಬತ್ತಳಿಕೆ, ಮೂರ್ತಿಯ ಬಲಬದಿಯಲ್ಲಿ ಪಾರಿವಾಳ (ಶಾಂತಿಯ ಸಂಕೇತ) ವನ್ನು ಆಕರ್ಷಕವಾಗಿ ಕೆತ್ತಲಾಗಿದೆ. ಚೆನ್ನಯನ ಬಲಗೈಯಲ್ಲಿ ಸುರಿಯ, ಎಡಗೈಯಲ್ಲಿ ಬಿಲ್ಲು, ಬೆನ್ನಿನಲ್ಲಿ ಬಾಣಗಳ ಬತ್ತಳಿಕೆ ಜೊತೆಗೆ ಬಲಬದಿಯಲ್ಲಿ ಗಿಳಿ (ಚುರುಕು ಬುದ್ಧಿಯ ಸಂಕೇತ) ಯನ್ನು ಕೆತ್ತಲಾಗಿದೆ. ಜೊತೆಗೆ ಈರ್ವರಿಗೂ ಕಿರೀಟ (ತಪ್ಪರಂಬು) ಹಾಗೂ ಕೈಕಾಲುಗಳಲ್ಲಿ ಆಭರಣಗಳನ್ನು ಸೂಕ್ಷ್ಮವಾಗಿ ಕೆತ್ತಲಾಗಿದೆ.

ದಾರಿ ಯಾವುದು..?
ಕಾರ್ಕಳ ನಗರದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ತಾಲೂಕು ಕ್ರೀಡಾಂಗಣದ ಸಮೀಪ ಸ್ವಲ್ಪ ಮುಂದಕ್ಕೆ ಈ ಥೀಂ ಪಾರ್ಕ್ ಸ್ಥಾಪನೆಗೊಂಡಿದೆ. ಕಾರ್ಕಳ ಬಸ್ಸು ನಿಲ್ದಾಣದಿಂದ ಅನಂತಶಯನ ದೇವಸ್ಥಾನ ಮಾರ್ಗವಾಗಿ ಮುಂದೆ ಶ್ರೀ ಭುವನೇಂದ್ರ ಕಾಲೇಜಿನ ಮಾರ್ಗವಾಗಿ, ಕಾಲೇಜು ಆವರಣವನ್ನು ಸುತ್ತು ಬಳಸಿ ಮುಂದೆ ಸಾಗಿದರೆ ಥೀಂ ಪಾರ್ಕ್ ತಲುಪಬಹುದು. ಸ್ವಂತ ವಾಹನ ಇಲ್ಲವೇ ಆಟೋ ರಿಕ್ಷಾದ ಮೂಲಕ ಸ್ಥಳಕ್ಕೆ ತಲುಪಬಹುದು.

ಕೋಟಿ- ಚೆನ್ನಯರ ಸಂದೇಶ
ವಿದ್ವಾಂಸರಾದ ಡಾ| ಬಿ.ಎ. ವಿವೇಕ ರೈ ’ಸಿರಿ’ ಹೆಣ್ಣುಗಳ ವಿಮೋಚನೆಯ ವಿವಿಧ ಮಜಲುಗಳನ್ನು ಪುರಾಣದ ರೂಪದಲ್ಲಿ ಕಟ್ಟಿಕೊಡುತ್ತದೆ. ಕೋಟಿ- ಚೆನ್ನಯ ಗಂಡುಗಳ ಬಿಡುಗಡೆಯ ಭಿನ್ನ ನೆಲೆಗಳನ್ನು ಪಾರ್ದನದ ರೂಪದಲ್ಲಿ ಅನಾವರಣ ಮಾಡುತ್ತದೆ ಎಂದಿದ್ದರು.

ಅಂದಿನ ದಬ್ಬಾಳಿಕೆಯ ಕಾಲ ಘಟ್ಟದಲ್ಲಿ ಕೃಷಿ ಪ್ರಧಾನವಾದ ಸಂಸ್ಕೃತಿಯಲ್ಲಿ ಕೋಟಿ- ಚೆನ್ನಯರು ನೀಡಿದ ಸಂದೇಶ ಇಂದಿಗೂ ಅತ್ಯಂತ ಪ್ರಸ್ತುತ. (ನಂಬಿನಕ್ಲೆಗ್ ಇಂಬು ಕೊರ್ಪೊ, ಸತ್ಯಗೆಂದಾದ್ ಕೊರ್ಪ) ನಂಬಿದವರಿಗೆ ಇಂಬು ಕೊಡುತ್ತೇವೆ. ಸತ್ಯಕ್ಕೆ ಗೆಲುವು ದೊರಕಿಸುತ್ತೇವೆ. ಬೆಳೆ ಭಾಗ್ಯಕ್ಕೆ ದಯಾ ರಕ್ಷಣೆ ನೀಡುತ್ತೇವೆ. ನೆನೆದಲ್ಲಿ ನಿಜವಾಗುತ್ತೇವೆ. ಹೇಳಿದ ಮಾತಿನ ಸಾರಥ್ಯ ವಹಿಸಿಕೊಳ್ಳುತ್ತೆವೆ ಎಂದು ಅವರು ನೀಡಿದ ಭರವಸೆ ಇಂದು ಜನರಿಗೆ ಆತ್ಮವಿಶ್ವಾಸವನ್ನು ತುಂಬಿದೆ.

ವಿದ್ಯೆಯ ಮಹತ್ವ: ಪ್ರಾಣ ಉಳಿಸಿದ ದೇಯಿಬೈದೆತಿಯನ್ನು ಉದ್ದೇಶಿಸಿ ಬಲ್ಲಾಳರು (ನಿನ್ನ ಜೋಕುಲು ದುಂಬುಗು ಬೆಂದುನ್ಪಿ ವಿದ್ಯೆ ಬುದ್ದಿ ಕಲ್ತ್‌ದ್ ಬತ್ತೆರ್‌ಡ ಬೆನೆರೆ ಕಂಬ್ಳ ಕೊರ್ಪ) ನಿನ್ನ ಮಕ್ಕಳು ಮುಂದೆ ದುಡಿದು ತಿನ್ನುವ ವಿದ್ಯಾಭ್ಯಾಸ ಕಲಿತು ಬಂದಲ್ಲಿ ಕೃಷಿಕಾರ್ಯ ಮಾಡಲು ಕಂಬಳ ಕೊಡುತ್ತೇನೆ ಎಂದರು. ಈ ನಿಟ್ಟಿನಲ್ಲಿ ಕೋಟಿ- ಚೆನ್ನಯರು ವಿದ್ಯೆಗೆ ಮಹತ್ವ ಕೊಟ್ಟಿರುತ್ತಾರೆ.

ಬೀಡಿಗೆ ದೇಯಿಬೈದೆತಿ ಪ್ರವೇಶ: ಪಡುಮಲೆ ಬಲ್ಲಾಳರು ಕಾಲು ನೋವಿನಿಂದಾಗಿ ಪ್ರಾಣಾಂತ್ಯ ಸ್ಥಿತಿಯಲ್ಲಿರುವಾಗ ನಾಟಿಬೈದ ಮಾಡುವುದಕ್ಕಾಗಿ ದೇಯಿಬೈದೆತಿಯ ಮನೆಗೆ ರಾಜದಂಡಿಗೆಯೇ ಹೋಗುತ್ತದೆ. ದೇಯಿಬೈದೆತಿ ಬೀಡಿಗೆ ಆಗಮಿಸಿ ಬಲ್ಲಾಳರ ಜೀವವನ್ನು ಬದುಕಿಸಿ ಉಳಿಸುತ್ತಾಳೆ. ನಾಟಿ ವಿದ್ಯೆ ಪ್ರವೀಣೆಯಾದುದರಿಂದ ಬೀಡಿಗೆ ಪ್ರವೇಶ ಸಿಕ್ಕಿತು. ಇದು ಸ್ವಾಭಿಮಾನದಿಂದ ಗೌರವಗಳಿಸಿಕೊಂಡ ಪ್ರತೀಕ.

ಬೈದರ್ಕಳ ಕಲ್ಟ್ : ಕೋಟಿ- ಚೆನ್ನಯರ ಬಗೆಗಿನ ಜೀವಂತ ಕುರುಹು, 230 ಗರೋಡಿ, ಗರೋಡಿಗೆ ಕೂಡುಕಟ್ಟು, ಸಾತ್ವಿಕ ಆರಾಧನ ಪದ್ಧತಿ, ಶುದ್ಧಾಚಾರ, ತುಳು- ಕನ್ನಡ ಭಾಷಾಪ್ರದೇಶಗಳಲ್ಲಿ ಗರೋಡಿಗಳ ವಿಸ್ತರಣೆ (ಬ್ರಹ್ಮಾವರ, ಕುಂದಾಪುರ) ಈ ರೀತಿಯಾಗಿ ಕೋಟಿ- ಚೆನ್ನಯರ ಅವಸಾನದ ನಂತರ ತುಳುನಾಡಿನಲ್ಲಿ ಬೈದೇರುಗಳಿಗೆ ಸಂಬಂಧಪಟ್ಟಂತೆ ಒಂದು ಕಲ್ಟ್ ಸೃಷ್ಟಿಯಾಗಿದೆ.

ತುಳುನಾಡಿನ ಗರೋಡಿಗಳು
ಉಡುಪಿ- 70, ಕುಂದಾಪುರ- 21, ಕಾರ್ಕಳ- 82೨, ಬೆಳ್ತಂಗಡಿ- 18, ಬಂಟ್ವಾಳ-8, ಪುತ್ತೂರು- 16, ಸುಳ್ಯ- 5, ಮಂಗಳೂರು- 4, ಕಾಸರಗೋಡು- 2, ಮಡಿಕೇರಿ- 1, ಮುಂಬೈ- 2. ಒಟ್ಟು 230 ಗರೋಡಿಗಳಿವೆ.

ಕೋಟಿ ಚೆನ್ನಯರು ಪಡುಮಲೆಯಿಂದ ಬಂಟ್ವಾಳ, ಮೂಡಬಿದಿರೆ, ಕಾರ್ಕಳ ಮಾರ್ಗವಾಗಿ ಉಡುಪಿಗೆ ಬಂದುದರಿಂದ ಈ ದಾರಿಯಲ್ಲಿಯೇ ಗರೋಡಿಗಳು ಜಾಸ್ತಿ ಕಂಡು ಬರುತ್ತದೆ.

ಕೋಟಿ ಚೆನ್ನಯರಿಗೆ ಸಂಬಂಧಿಸಿದ ಜೀವಂತ ಕುರುಹು ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ದೇಯಿಬೈದೆತಿಯ ಜನ್ಮ ವೃತ್ತಾಂತದ ಮನೆ ಕೂವೆತೋಟ, ಕಣ್ಣಿಗೆ ಬಟ್ಟೆ ಕಟ್ಟಿ ಬಿಟ್ಟ ಸ್ಥಳ – ಸಂಕಮಲೆ ಕಾಡು, ಕೋಟಿ- ಚೆನ್ನಯರ, ಬುದ್ಧಿವಂತನ ಕಂಬಳ ಗದ್ದೆಗಳು, ದೇಯಿಬೈದೆತಿ ಬಾಳಿ ಬೆಳಗಿದ ಮನೆ, ಗೆಜ್ಜೆಗಿರಿ ನಂದನವನ ಹಿತ್ತಿಲು, ಸಾರೋಳಿ ಸೈಮಂಜೆ ಕಟ್ಟೆ, ಪಡುಮಲೆ ಬೀಡಿನ ಚಾವಡಿ, ಕೋಟಿ- ಚೆನ್ನಯರು ಗಡುವಿಟ್ಟು ಇಳಿದುಹೋದ ಮೆಟ್ಟಿಲು, ಪಂಜದ ಅಕ್ಕ ಕಿನ್ನಿದಾರುವಿನ ಮನೆ ಕೆಲಂಬಿದೋಲ, ಎಣ್ಮೂರು ಕೋಟಿಯ ಮನೆಯಡಿ ಪಂಚಾಂಗ, ಕೋಟಿ- ಚೆನ್ನಯರ ಮೃತ ಶರೀರವಿಟ್ಟ ಮಂಜೋಲ್ ಪಾದೆ. ಎಣ್ಮೂರಿನಲ್ಲಿ ಕೋಟಿ- ಚೆನ್ನಯರ ಐತಿಹಾಸಿಕ ಸಮಾಧಿ.

ಆಯದ ಗರೋಡಿ ರಚನೆಯ ಸಂಕ್ಷಿಪ್ತ ವ್ಯಾಖ್ಯೆ
ಉದ್ದ- ಉತ್ತರ ದಕ್ಷಿಣಕ್ಕೆ 16 ಕೋಲು, ಅಗಲ- ಪೂರ್ವ ಪಶ್ಚಿಮಕ್ಕೆ 8 ಕೋಲು, ಎತ್ತರ – 4 ಕೋಲು. ಎತ್ತರ: ಅಗಲ: ಉದ್ದ: ನಿಷ್ಪತ್ತಿ 1:2:4 ಬ್ರಹ್ಮ ಗುಡಿ: ಪಂಚಾಂಗ ದಕ್ಷಿಣ ಭಾಗದಲ್ಲಿ 1/3 ಭಾಗವನ್ನು ವಿಂಗಡಿಸುವುದು.

ಬ್ರಹ್ಮಗುಂಡ: ಗರೋಡಿಯ ಮಧ್ಯೆ ಬ್ರಹ್ಮಗುಂಡವನ್ನು ರಚಿಸು ವುದು. ಷಢಾಧಾರ ಪ್ರತಿಷ್ಟಾನಿಯಮ ಅನುಸರಿಸಲಾಗುವುದು.
1 ಕೋಲು= 31 ಇಂಚು

ಯೋಜನಾ ವರದಿ: ಶ್ರೀ ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಪ್ರತಿಷ್ಠಾನ (ರಿ), ’ಬೈದಶ್ರೀ’, ಆದಿಉಡುಪಿ, ಉಡುಪಿ.

ಬೈದಶ್ರೀಯ ಹುಟ್ಟು
450 ವರ್ಷದ ಹಿಂದೆ ಪಂಜ, ಪಡುಮಲೆ, ಎಣ್ಮೂರು, ಕೋಟಿ-ಚೆನ್ನಯರ ಆಡಂಬೋಲದ ಜಾಗದ ಕುರುಹುಗಳು ಇನ್ನೂ ಜೀವಂತವಾಗಿದೆ. ಗರೋಡಿಗಳು ಜಾನಪದ ಮೌಲ್ಯಗಳ ಆಗರಗಳಾಗಿವೆ. ಗರೋಡಿಗಳು ಇತಿಹಾಸದ ಮೈಲಿಗಲ್ಲುಗಳಾಗಿವೆ. ಇದೆಲ್ಲವೂ ಅಧ್ಯಯನ ಯೋಗ್ಯವಾಗಿದೆ. ಈ ಉದ್ದೇಶದಿಂದ ೨೫ ವರ್ಷಗಳ ಹಿಂದೆ 15 ಮಂದಿ ಸಮಾನ ಮನಸ್ಕರ ತಂಡ ಉಡುಪಿಯ ಆದಿ ಉಡುಪಿಯಲ್ಲಿ ರಚಿಸಿದ ಪ್ರತಿಷ್ಠಾಪನವೆ ಶ್ರೀ ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಪ್ರತಿಷ್ಠಾನ (ರಿ). ’ಬೈದಶ್ರೀ’, ಆದಿಉಡುಪಿ, ಉಡುಪಿ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 16-11-2024
ಸ್ಥಳ : ಯುವವಾಹಿನಿ ಸಭಾಂಗಣ 3ನೇ ಮಹಡಿ, ರಘು ಬಿಲ್ಡಿಂಗ್ ಊರ್ವ ಸ್ಟೋರ್, ಮಂಗಳೂರು

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ

ದಿನಾಂಕ : 15-11-2024
ಸ್ಥಳ : ಸಿ. ಎಸ್. ಐ. ಬಾಲಿಕಾಶ್ರಮ, ಮೂಲ್ಕಿ

ಯುವವಾಹಿನಿ (ರಿ.) ಮೂಲ್ಕಿ ಘಟಕ

ದಿನಾಂಕ : 23-11-2024
ಸ್ಥಳ : ಸಂಪಿಗೆ ನಗರ, ಉದ್ಯಾವರ ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 24-11-2024
ಸ್ಥಳ : ನಾಗಪ್ಪ ಕಾಂಪ್ಲೆಕ್ಸ್ , ಎನ್ .ಹೆಚ್-66, ಬಲಾಯಿಪಾದೆ, ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 17-11-2024
ಸ್ಥಳ : ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಹೆಜಮಾಡಿ

ಯುವವಾಹಿನಿ (ರಿ) ಪಡುಬಿದ್ರಿ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
error: Content is protected !!