1993-94 ರ ಸಾಲಿನಲ್ಲಿ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷರು. ಇವರ ಪತ್ನಿ ಲೀಲಾ ಎಂ. ಕೋಟ್ಯಾನ್, ಮಕ್ಕಳು ಶ್ರೀಮತಿ ಸವಿತ, ಶ್ರೀಮತಿ ಕವಿತ ಹಾಗೂ ಸುಬ್ರಹ್ಮಣ್ಯ ಮೂರು ಮಕ್ಕಳು. ಇವರ ಅವಧಿಯಲ್ಲಿ ನಡೆದಂತಹ ಕಾರ್ಯಕ್ರಮಗಳು ವಧುವರರ ಸಮಾವೇಶ ನಡೆಸಲು ತಯಾರಿ ನಡೆಸಿ 3 ಜೋಡಿ ವಧುವರರನ್ನು ಹೊಂದಿಸಿಕೊಟ್ಟಿದ್ದಾರೆ.
ಶ್ರೀಯುತ ಶಂಕರ ಪೂಜಾರಿ ಫಲಿಮಾರು ಇವರೊಬ್ಬ ಅಂಗವಿಕಲ ವ್ಯಕ್ತಿಯಾಗಿದ್ದು, ತನ್ನ ಜೀವನದ ನಿರ್ವಹಣೆಗೋಸ್ಕರ ಒಂದು ಸಾರ್ವಜನಿಕ ದೂರವಾಣಿ ಕೇಂದ್ರವನ್ನು ಆರಂಭಿಸಲು ಆರ್ಥಿಕ ಸಹಾಯ ನೀಡಲಾಗಿತ್ತು.
ಸರಕಾರದಿಂದ ಹಿಂದುಳಿದ ವರ್ಗಗಳಿಗೆ ಸಿಗುವ ವಿವಿಧ ಸೌಲಭ್ಯಗಳೂ ಬ್ಯಾಂಕಿಂಗ್ ಪರೀಕ್ಷೆ, ಐಟಿಐ ಮುಂತಾದ ಕೈಗಾರಿಕಾ ತರಬೇತಿ, ಉಚಿತ ವಿದ್ಯಾರ್ಥಿನಿಲಯದ ಸೌಕರ್ಯ, ಜನನ ಮರಣ ನೋಂದಾವಣಿ ಇತ್ಯಾದಿ ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಸಲಾಗಿತ್ತು. ಸ್ವಜಾತಿ ಬಂಧುಗಳ ಮನೆ ನಿರ್ಮಾಣಕ್ಕಾಗಿ ಆರ್ಥಿಕ ಸಹಾಯ ನೀಡಲಾಗಿತ್ತು. ಸ್ವಜಾತಿಯ 4 ಮಂದಿ ಮಹಿಳೆಯವರಿಗೆ ಅಂಗನವಾಡಿ ಕಾರ್ಯಕರ್ತೆಯಾಗಿ ನಿಯುಕ್ತಿಗೊಳಿಸುವಲ್ಲಿ ಸಹಕರಿಸಿರುತ್ತಾರೆ. ಇವರ ಅವಧಿಯಲ್ಲಿ ವಿದ್ಯಾನಿಧಿಗೆ 50,000/- ಸಂಗ್ರಹಿಸ ಲಾಗಿತ್ತು. ಕಡುಬಡ ಸ್ವಜಾತಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಲಾಗಿತ್ತು. ಕುಳಾಯಿ ಮಹಿಳಾ ಮಂಡಳದಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ಮಾಡಲಾಗಿತ್ತು. ಪ್ರಥಮ ಇಯತ್ತೆಯಲ್ಲಿ ಕಲಿಯಲು ಪ್ರವೇಶ ನಿರಾಕರಿಸ್ಪಟ್ಟ ವಿದ್ಯಾರ್ಥಿಗೆ ಪಣಂಬೂರು ಶಾಲೆಯಲ್ಲಿ ಪ್ರವೇಶ ದೊರಕಿಸಿ ಕೊಟ್ಟು ಸಹಕರಿಸಲಾಗಿತ್ತು.
ವಿಳಾಸ: 1ನೇ ಅಡ್ಡರಸ್ತೆ, ಎನ್.ಎಮ್.ಪಿ.ಟಿ. ಎಂಪ್ಲಾಯಿಸ್, ಹೌಸಿಂಗ್ ಕಾಲೋನಿ, ಹೊಸಬೆಟ್ಟು, ಮಂಗಳೂರು.