ಯುವವಾಹಿನಿಯ ಆರಂಭಿಕ ವರ್ಷಗಳಲ್ಲಿ ಸಕ್ರಿಯ ಸಂಘಟಕರಲ್ಲಿ ಓರ್ವರಾದ ಶ್ರೀ ಗಂಗಾಧರ ಪೂಜಾರಿಯವರು ಯುವವಾಹಿನಿ ಮಂಗಳೂರು ಘಟಕದ ಸದಸ್ಯರಾಗಿದ್ದು 1989 ರಲ್ಲಿ ಘಟಕದ ದ್ವಿತೀಯ ಅಧ್ಯಕ್ಷರಾಗಿದ್ದು 1991-1992 ರಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಇವರ ಅವಧಿಯಲ್ಲಿ ಯುವವಾಹಿನಿ ಪಣಂಬೂರು ಘಟಕವು ಪ್ರಾರಂಭವಾಯಿತು.
ಬಿ.ಕಾಂ. ಪದವೀದರರಾಗಿರುವ ಶ್ರೀ ಗಂಗಾಧರ ಪೂಜಾರಿಯವರು ಮಂಗಳೂರಿನ ಸರಕಾರಿ ಕಾಲೇಜಿನ ವಾಲಿಬಾಲ್ ತಂಡದ ಸದಸ್ಯರು. N.C.C. ಯ AIRWING ವಿಭಾಗದ ’B’ ಸರ್ಟಿಫಿಕೇಟ್ ಪಡೆದವರು. 1974-75 ರಲ್ಲಿ NCC, AIRWING ಯ ರಾಷ್ಟ್ರಮಟ್ಟದ ಶಿಬಿರ ಕಾಶ್ಮೀರದಲ್ಲಿ ನಡೆದಾಗ ಅವಿಭಜಿತ ದ.ಕ. ಜಿಲ್ಲೆಯಿಂದ ಭಾಗವಹಿಸಿದ ಏಕೈಕ ವಿದ್ಯಾರ್ಥಿ.
ಓರ್ವ ಸ್ವ ಉದ್ಯೋಗಿಯಾಗಿದ್ದು ಆರಂಭದಲ್ಲಿ ಟೆಲಿಫೋನ್ ಬೂತ್, ಮಿಲ್ಕ್ ಬೂತ್, ನಡೆಸುತ್ತಾ ಸಮಾಜ ಸೇವಕರಾಗಿ ಸಾರ್ವಜನಿಕ ಸೇವೆಗಳ ಪರ ದುಡಿಯುತ್ತಾ ಬಂದು ಪ್ರಸಕ್ತ ಕುಂಟಿಕಾನದಲ್ಲಿ ಒಂದು ಜನರಲ್ ಸ್ಟೋರನ್ನು ನಡೆಸುತ್ತಿದ್ದಾರೆ. ಸಮಾಜ ಸೇವಕರಾಗಿ ನಿರಂತರ ಜನರ ಸೇವೆಯನ್ನು ಮಾಡುತ್ತಾ ಬಂದಿರುವ ಶ್ರೀಯುತರು ತಮ್ಮ ಯುವವಾಹಿನಿ ಅಧ್ಯಕ್ಷತೆಯ ಸಾಲಿನಲ್ಲಿ ದೇರೆಬೈಲು ಕೊಂಚಾಡಿ ಪರಿಸರದ ಬಿಲ್ಲವ ಸಮಾಜದ ಜನಗಣತಿ ನಡೆಸಿ ಜನಾಂಗದ ಸ್ಥಿತಿಗತಿಗಳನ್ನು ಅರಿಯುವ ಪ್ರಯತ್ನ ನಡೆಸಿದರು ಮಾತ್ರವಲ್ಲದೆ ಸಮಾಜದ ಬಡಜನರಿಗೆ ಸರಕಾರದ ಮತ್ತು ಸಂಘ ಸಂಸ್ಥೆಗಳಿಂದ ಸಹಾಯವನ್ನು ದೊರಕಿಸಿಕೊಟ್ಟಿರುತ್ತಾರೆ.
1992 ರಿಂದ 1995 ರ ತನಕ ಮೂರ್ತೆದಾರರ ಸೇವಾ ಸಹಕಾರ ಸಂಘ(ರಿ) ದೇರೆಬೈಲು ಕೊಂಚಾಡಿ ಇದರ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಪ್ರಸಕ್ತ ದೇರೆಬೈಲು ಕೊಂಚಾಡಿ ಶ್ರೀ ಮಹಾಕಾಳಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಹಾಗೂ ಸುರತ್ಕಲ್ ಬ್ಲಾಕ್ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.
ಪತ್ನಿ ಶ್ರೀಮತಿ ಆಶಾ ಗಂಗಾಧರ್ ಪೂಜಾರಿ ಗೃಹಿಣಿ, ಮಗ ಧನುಷ್ ಇಂಜಿನಿಯರಿಂಗ್ ವಿದ್ಯಾರ್ಥಿ. 1999 ರಿಂದ 2012 ರ ತನಕ 6 ಬಾರಿ ಕಾಶ್ಮೀರ ಕಣಿವೆಯಲ್ಲಿರುವ ಶ್ರೀ ಅಮರನಾಥ ಗುಹಾದರ್ಶನ ಹಾಗೂ ಶ್ರೀ ಮಾತಾ ವೈಷ್ಣೋದೇವಿ ದರ್ಶನ ಮಾಡಿರುತ್ತಾರೆ.
ವಿಳಾಸ : ’ಶ್ರೀ ರಾಮಕೃಪ’ ದೇರೆಬೈಲು, ಕೊಂಚಾಡಿ ಅಂಚೆ, ಮಂಗಳೂರು-575008
ದೂರವಾಣಿ: 0824- 2246166, 9449334244