ನಡುಪೊರೊಟ್ಟು ಮನೆ ಪಿಲಿ ಮೊಗರು ಗ್ರಾಮದ ವಾಮದ ಪದವಿನ ದಿ| ಶ್ರೀನಾರ್ಣ ಪೂಜಾರಿ ಮತ್ತು ಶ್ರೀಮತಿ ಅಪ್ಪಿ ಪೂಜಾರಿ ಇವರ ಸುಪುತ್ರನಾಗಿ 1954 ರಲ್ಲಿ ಜನಿಸಿದ ಇವರು ವಾಮದ ಪದವಿನ ಚೆನೈತ್ತೋಡಿ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದು ವೇಣೂರಿನಲ್ಲಿ ಪ್ರೌಢ ಶಿಕ್ಷಣವನ್ನೂ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿ.ಕಾಂ ಪದವಿ ಹಾಗೂ1995 ರಲ್ಲಿ ಕೋ ಆಪರೇಟಿವ್ ಡಿಪ್ಲೋಮಾ ಪದವಿ ಪಡೆದಿದ್ದಾರೆ. 1973 ರಲ್ಲಿ ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಇದರ ಮುಖಾಂತರ ಪ್ರಾಥಮಿಕ ಸಹಕಾರಿ ಸಂಘಗಳ ಕಾರ್ಯದರ್ಶಿಯಾಗಿ ನೇಮಕಗೊಂಡು ಕಾವಳ ಪಡೂರು ಸರ್ವಿಸ್ ಕೋ ಆಪರೇಟಿವ್ ಬ್ಯಾಂಕ್, ಬಂಗಾಡಿ ಸರ್ವಿಸ್ ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 1975 ರಿಂದ ದ.ಕ ಜಿಲ್ಲಾ ಕೃಷಿ ಅಭಿವೃದ್ದಿ ಸಹಕಾರಿ ಸಂಘ (ಸ್ಕ್ಯಾಡ್ಸ್)ದಲ್ಲಿ 19 ವರ್ಷಗಳ ಸೇವೆ ಸಲ್ಲಿಸಿದ್ದಾರೆ 1993 ರಿಂದ ಶ್ರೀ ಗೋಕರ್ಣನಾಥ ಕೋ. ಆಪರೇಟಿವ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಾಮದ ಪದವು ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀ ಸೇವಾ ಸಂಘದ ಸ್ಥಾಪಕ ಸದಸ್ಯರಾಗಿ, ಸಂಚಾಲಕರಾಗಿ, ಕಾರ್ಯದರ್ಶಿಯಾಗಿ, ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವಾಮದಪದವು ಪದವಿ ಪೂರ್ವ ಕಾಲೇಜಿನ ವಿದ್ಯಾವರ್ಧಕಸಂಘದ ಕಾರ್ಯದರ್ಶಿಯಾಗಿ ಮಂಗಳೂರು ಜೇಸೀಸ್‌ನ ವಿವಿಧ ಕಾರ್ಯಕ್ರಮಗಳ ನಿರ್ದೇಶಕನಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1987ರಲ್ಲಿ ಸ್ಥಾಪನೆಗೊಂಡ ಯುವವಾಹಿನಿ ಸಂಘಟನೆಯ ಸ್ಥಾಪಕ ಸದಸ್ಯರಲ್ಲಿ ಒರ್ವರಾಗಿ, ಸಂಘಟನಾ ಕಾರ್ಯದರ್ಶಿಯಾಗಿ, ಕೇಂದ್ರ ಸಮಿತಿಯ ಕಾರ್ಯದರ್ಶಿಯಾಗಿ ಹಾಗೂ 1990-91 ನೇ ಸಾಲಿನಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಪತ್ನಿ ಶ್ರೀಮತಿ ತಾರಾ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಅಸೋಸಿಯೇಟ್ ಪ್ರೊಫೆಸರರಾಗಿದ್ದಾರೆ. ಮಗ ಅಭಿನಂದನ್ ಇಂಜಿನಿರ್‌ರಾಗಿದ್ದು, ಮಹೀಂದ್ರಾ ಎಂಡ್ ಮಹೀಂದ್ರಾ ಕಂಪೆನಿ ಚೆನ್ನೈಯಲ್ಲಿ ಅಸಿಸ್ಟೆಂಟ್ ಮೆನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಗಳು ಕುಮಾರಿ ಸುಧೀಕ್ಷಾ ಬಿ.ಎಸ್ಸಿ ಪದವೀಧರೆ.
ಯುವವಾಹಿನಿಯಲ್ಲಿ ಘಟಕಗಳ ಮೂಲಕ ಅರ್ಹ ಯುವಕ ಯುವತಿಯರಿಗೆ ಬ್ಯಾಂಕಿಂಗ್ ಹುದ್ದೆಗಳಿಗೆ ಜರಗುವ ಆಯ್ಕೆ ಪರೀಕ್ಷೆಯ ಬಗ್ಗೆ ಉಚಿತ ತರಬೇತಿ ಶಿಬಿರ, ಕೇಂದ್ರ ಸಮಿತಿಯ ಆಶ್ರಯದಲ್ಲಿ ಎಲ್ಲಾ ಘಟಕಗಳ ಸದಸ್ಯರ ದಕ್ಷಿಣ ಭಾರತ ಪ್ರವಾಸ, ಶ್ರೀ ವೀರೇಂದ್ರ ಪಾಟೀಲ್ ನೇತೃತ್ವದ ಕರ್ನಾಟಕ ಸರಕಾರದ ಶೇಂದಿ ನಿಷೇಧ ಕಾನೂನಿನ ವಿರುದ್ಧ ಯುವವಾಹಿನಿ ಸದಸ್ಯರಿಂದ ಪ್ರತಿಭಟನಾ ಸಭೆ, ಮೆರವಣಿಗೆ ಜರುಗಿಸಿ ಸಮಾಜದ ಮುರ್ತೆದಾರರ ಪರ ಹೋರಾಟ, ಸಾಹಿತ್ಯ ಕ್ಷೇತ್ರವನ್ನು ಸಮಾಜದ ಯುವಕರಿಗೆ ಪರಿಚಯಿಸುವ ಉದ್ದೇಶದಿಂದ ಉದಯೋನ್ಮುಖ ಬರಹಗಾರರಿಗೆ, ಲೇಖಕರಿಗೆ ಕಥೆ, ಕವನ, ಲೇಖನ ಬರೆಯಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶ್ರೀ ಗೋಕರ್ಣ ನಾಥೇಶ್ವರ ಕಾಲೇಜಿನಲ್ಲಿ 60 ಯುವ ಬರಹಗಾರರಿಗೆ ಬರಹಗಾರರ ಕಮ್ಮಟ ಹಾಗೂ ಅನುಭವಿ ಬರಹಗಾರರಿಂದ ಕಾರ್ಯಾಗಾರ, ಯುವವಾಹಿನಿಯ ಯುವಕರ ಸಂಪರ್ಕದ ಕೊಂಡಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಪಣಂಬೂರಿನ ಕ್ರೀಡಾಂಗಣದಲ್ಲಿ ಅಂತರ್ ಘಟಕ ಸದಸ್ಯರಿಗೆ ನಿಗದಿತ ಓವರ್‌ಗಳ ಕ್ರಿಕೆಟ್ ಪಂದ್ಯಾಟ ಮೊದಲಾದವುಗಳು ಇವರ ಅಧ್ಯಕ್ಷೀಯ ಅವಧಿಯಲ್ಲಿ ಮೂಡಿ ಬಂದ ಕೆಲಸಕಾರ್ಯಗಳು.
ವಿಳಾಸ: ನೇಸರ 8ನೇ ಅಡ್ಡರಸ್ತೆ, ಆಲಗುಡ್ಡೆ, ಅಶೋಕನಗರ ಅಂಚೆ, ಮಂಗಳೂರು – 575006
ಮೊಬೈಲ್: 9481269769