Yuvavahini

ಸಮಾಜ ಸೇವೆ

ಕೂಳೂರು ಘಟಕದ ವತಿಯಿಂದ ಸ್ವಚ್ಛತಾ ಅಭಿಯಾನ

ಕೂಳೂರು : ಯುವ ವಾಹಿನಿ ಕೂಳೂರು ಘಟಕದ ವತಿಯಿಂದ ಸ್ವಚ್ಛತಾ ಅಭಿಯಾನವು ದಿನಾಂಕ 22/07/18ರಂದು ಬಂಗ್ರ ಕೂಳೂರಿನಲ್ಲಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ಸಂಘಟನಾ ಕಾರ್ಯದರ್ಶಿಯಾದ ಪವಿತ್ರ ಅಮೀನ್ ಇವರ ನೇತೃತ್ವದಲ್ಲಿ ನಡೆಯಿತು .ಉಪಾಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ಈ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು . ಸುಮಾರು 40ರಿಂದ 45 ಸದಸ್ಯರು ಹಾಗೂ ಕೆಲವೊಂದು ಊರಿನ ಜನರು ಕೂಡ ಈ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿದ್ದು ಬಂಗ್ರಕೂಳೂರಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು. ಈ ಸ್ವಚ್ಛತಾ ಅಭಿಯಾನದಲ್ಲಿ […]

Read More

ಸರಕಾರಿ ಶಾಲೆಗೆ ಸಹಾಯ ಹಸ್ತ

ಶಕ್ತಿನಗರ : ಯುವವಾಹಿನಿ(ರಿ.) ಶಕ್ತಿನಗರ ಘಟಕದ ವತಿಯಿಂದ ದಿನಾಂಕ 20/07/2018ನೇ ಶುಕ್ರವಾರ ನಾಲ್ಯಪದವು ಸರಕಾರಿ ಶಾಲಾ ಬಡ ಮಕ್ಕಳಿಗೆ ಉಚಿತವಾಗಿ ಊಟದ ಸ್ಟೀಲ್ ತಟ್ಟೆಯನ್ನು ವಿತರಿಸಲಾಯಿತು . ಮತ್ತು 10,000/-ರೂಪಾಯಿಗಳ ಧನಸಹಾಯವನ್ನು ಶಾಲೆಯ ಅಭಿವೃದ್ಧಿಗಾಗಿ ಶಕ್ತಿನಗರ ಘಟಕದ ಅಧ್ಯಕ್ಷರಾದ ಶ್ರೀನಿವಾಸ ಪೂಜಾರಿಯವರು ಶಾಲೆಯ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಿದರು. ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಪರವಾಗಿ ಯುವವಾಹಿನಿ(ರಿ.) ಶಕ್ತಿನಗರ ಘಟಕದ ಅಧ್ಯಕ್ಷರಾದ ಶ್ರೀನಿವಾಸ ಪೂಜಾರಿಯವರನ್ನು ಅಭಿನಂದಿಸಲಾಯಿತು. ಮತ್ತು ಶಾಲೆಯಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವವನ್ನುಆಚರಿಸಲಾಯಿತು. ಈ […]

Read More

ಸ್ವಚ್ಚತಾ ಆಂದೋಲನಾ

ಕುಪ್ಪೆಪದವು : ಯುವವಾಹಿನಿ (ರಿ) ಕುಪ್ಪೆಪದವು ಘಟಕದ ಆಶ್ರಯದಲ್ಲಿ ಕುಪ್ಪೆಪದವು ಪರಿಸರದ ಸಾರ್ವಜನಿಕ ಸ್ಥಳಗಳಲ್ಲಿ ಅದರ ಸ್ವಚ್ಚತಾ ಕಾರ್ಯವನ್ನು ನಡೆಸಲಾಯಿತು. ಕುಪ್ಪೆಪದವು ಘಟಕದ ಅಧ್ಯಕ್ಷ ಅರುಣ್ ಕುಮಾರ್ ನೇತ್ರತ್ವದಲ್ಲಿ ಈ ಕಾರ್ಯ ನಡೆಯಿತು

Read More

ನಮ್ಮ ನಡೆ ಬೇಸಾಯದ ಕಡೆ

ಕುಪ್ಪೆಪದವು : ಯುವವಾಹಿನಿ (ರಿ) ಕುಪ್ಪೆಪದವು ಘಟಕದ ಆಶ್ರಯದಲ್ಲಿ ನಮ್ಮ ನಡೆ ಬೇಸಾಯದ ಕಡೆ ಎಂಬ ಪರಿಕಲ್ಪನೆಯ ಅಡಿಯಲ್ಲಿ ದಿನಾಂಕ‌ 14.07.2018 ರಂದು ಘಟಕದ ಸದಸ್ಯರು ಹಲ ಉಳುಮೆ ನಡೆಸಿ ಕೃಷಿ ಬಿತ್ತನೆ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಯುವವಾಹಿನಿ ಕುಪ್ಪೆಪದವು ಘಟಕದ ಅಧ್ಯಕ್ಷ ಅರುಣ್ ಕುಮಾರ್ ಹಾಗೂ ಘಟಕದ ಸದಸ್ಯರು ಭಾಗವಹಿಸಿದ್ದರು

Read More

ಅಭಯ ಆಶ್ರಮದ ಸದಸ್ಯರೊಂದಿಗೆ ಕುಟುಂಬ ಮಿಲನ

ಯುವವಾಹಿನಿ ರಿ ಕೊಲ್ಯ ಘಟಕ ಇದರ ವತಿಯಿಂದ ಅಭಯ ಆಶ್ರಮದ ಸದಸ್ಯರೊಂದಿಗೆ ಕುಟುಂಬ ಮಿಲನ ಕಾರ್ಯಕ್ರಮ ತಾ08-07-2018ನೇ ಆದಿತ್ಯವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಕೊಣಾಜೆ ಅಸೈಗೋಳಿಯಲ್ಲಿರುವ ಅಭಯ ಆಶ್ರಮದಲ್ಲಿ ಆಶ್ರಮದ ಮಕ್ಕಳಿಗೆ ಹಾಗೂ ಹಿರಿಯರಿಗೆ ವಿವಿಧ ಸ್ಪರ್ಧೆ ಹಾಗೂ ಅರೆಹೊಳೆ ಪ್ರತಿಷ್ಠಾನ ರಿ ಮಂಗಳೂರು ಇದರ ಕಲಾವಿದರಿಂದ ಸೊಗಸಾದ ಹಾಡಿನೊಂದಿಗೆ ಮನರಂಜನಾ ಕಾರ್ಯಕ್ರಮ,ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಘಟಕದ ಸದಸ್ಯ ದಂಪತಿಗಳಿಗೆ ಆಶ್ರಮದ ಹಿರಿಯರಿಂದ ಶುಭಹಾರೈಕೆ,ಆಶ್ರಮದ ಸದಸ್ಯರೊಂದಿಗೆ ಸಹಭೋಜನ ಹಾಗೂ ಕಾರ್ಯಕ್ರಮದ ಸವಿನೆನಪಿಗೆ […]

Read More

ಸ್ವಚ್ಛತೆ ಹಾಗೂ ವನಮಹೋತ್ಸವ

ಕೆಂಜಾರು ಕರಂಬಾರು : ಯುವವಾಹಿನಿ (ರಿ.) ಕೆಂಜಾರು- ಕರಂಬಾರು ಘಟಕದ ವತಿಯಿಂದ ದಿನಾಂಕ .08/07/2018 ಆದಿತ್ಯ ವಾರ ಕರಂಬಾರು ಶ್ರೀ ಮಾರಿಯಮ್ಮ ಕೋಟೆ ಬಬ್ಬುಸ್ವಾಮಿ ದೈವಸ್ಥಾನದ ಪರಿಸರದಲ್ಲಿ ಸ್ವಚ್ಛತೆ ಹಾಗೂ ವನಮಹೋತ್ಸವ ಹಮ್ಮಿಕೊಳ್ಳಲಾಯಿತು. ಸದಸ್ಯರು ದೈವಸ್ಥಾನದ ಅಂಗಣವನ್ನು ಸ್ವಚ್ಚ ಗೊಳಿಸಿದರು. ದೈವಸ್ಥಾನದ ಸಮಿತಿಯ ಅಧ್ಯಕ್ಷರಾದ ಜಗನ್ನಾಥ್ ಸಾಲ್ಯಾನ್ ಗಿಡ ನೆಡುವುದರೊಂದಿಗೆ ವನಮಹೋತ್ಸಕ್ಕೆ ಚಾಲನೆ ನೀಡಿದರು. ಸುಮಾರು 50 ವಿವಿಧ ಗಿಡಗಳನ್ನು ನೆಡಲಾಯಿತು ಹಾಗೂ ಸದಸ್ಯರಿಗೆ ಗಿಡಗಳನ್ನು ವಿತರಿಸಲಾಯಿತು. ದೈವಸ್ಥಾನದ ಅರ್ಚಕ ರುಕ್ಕಯ್ಯ ಪಾತ್ರಿ, ಘಟಕದ ಅಧ್ಯಕ್ಷ ಗಣೇಶ್ ಅರ್ಬಿ, […]

Read More

ದ್ವನಿವರ್ದಕದ ಕೊಡುಗೆ

ಶಕ್ತಿನಗರ : ಯುವವಾಹಿನಿ (ರಿ) ಶಕ್ತಿನಗರ ಘಟಕದ ವತಿಯಿಂದ ದಿನಾಂಕ 24.06.2018 ರಂದು  ಶಕ್ತಿನಗರ ಶ್ರೀ ಮಹಮ್ಮಾಯಿ ಮಹಾಗಣಪತಿ ದೇವಸ್ಥಾನಕ್ಕೆ ದ್ವನಿವರ್ದಕದ ಸಲಕರಣೆಗಳನ್ನು ಕೊಡುಗೆಯಾಗಿ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ರವೀಂದ್ರ ಕಾಮತ್ , ಯುವವಾಹಿನಿ ಶಕ್ತಿನಗರ ಘಟಕದ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಕಾರ್ಯದರ್ಶಿ ವಿಶ್ವನಾಥ್ ಕಿರೋಡಿಯನ್ ಮತ್ತಿತರರು ಉಪಸ್ಥಿತರಿದ್ದರು

Read More

ಎಚ್ ಐ ವಿ ಜತೆ ಬದುಕುವ ಮಕ್ಕಳೊಂದಿಗೆ ಒಂದು ದಿನ

ಮಂಗಳೂರು : ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದ ಸದಸ್ಯೆಯರು ಎಚ್ ಐ ವಿ ಜತೆ ಬದುಕುವ ಮಕ್ಕಳ ಆಶ್ರಯ ತಾಣ ಸಂವೇದನಾಗೆ 17.06.2017 ರಂದು ಭೇಟಿ ನೀಡಿದರು ಆಶ್ರಯತಾಣದ ಮಕ್ಕಳೊಂದಿಗೆ ಬೆರೆತು ಅವರ ಯೋಗ ಕ್ಷೇಮ ವಿಚಾರಿಸಿದರು. ಮಕ್ಕಳಿಗೆ ಉಪಹಾರ,ಸಿಹಿತಿಂಡಿ, ದಿನಸಿ ಸಾಮಗ್ರಿ ಗಳನ್ನು ನೀಡಿ ನೊಂದ ಎಳೆ ಮನಸುಗಳಿಗೆ ಸಾಂತ್ವಾನ ನೀಡಿದರು ಯುವವಾಹಿನಿ ಮಂಗಳೂರು ಮ ಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಸಿ .ಕರ್ಕೇರ , ಕಾರ್ಯದರ್ಶಿ ರವಿಕಲಾ , ಉಪಾದ್ಯಕ್ಷೆ ಉಮಾ ಶ್ರೀಕಾಂತ್ ,ಕೋಶಾಧಿಕಾರಿ […]

Read More

ಯುವವಾಹಿನಿ ಉಡುಪಿ : ಹಸಿರು ಉಸಿರು ಚಾಲನೆ

. ಉಡುಪಿ‌ : ಯುವವಾಹಿನಿ ಉಡುಪಿ ಘಟಕದ ಆಶ್ರಯದಲ್ಲಿ ಹಸಿರು ಉಸಿರು ಕಾರ್ಯಕ್ರಮಕ್ಕೆ ಉಡುಪಿಯ ಬಲಾಯಿಪಾದೆ ಜಂಕ್ಷನ್ ಬಳಿ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಯುವವಾಹಿನಿ ಉಡುಪಿ ಘಟಕದ ಸ್ಥಾಪಕಾಧ್ಯಕ್ಷ ಚಂದ್ರಶೇಖರ್ ಉದ್ಯಾವರ ಮಾತನಾಡಿ ನಮ್ಮ ಪಕೃತಿಯ ಉಳಿವಿಗಾಗಿ ಶ್ರಮಿಸುವುದು ನಮ್ಮ ನಮ್ಮೆಲ್ಲರ ಕರ್ತವ್ಯವಾಗಿದೆ. ಪರಿಸರವೇ ನಮ್ಮ ಉಸಿರು, ನಮ್ಮ ಪರಿಸರ ಹಸಿರಾಗಿದ್ದಲ್ಲಿ ಉಸಿರು ಸ್ವಚ್ಚ ವಾಗಿರುತ್ತದೆ. ನಮ್ಮ ಪರಿಸರ ಸಮೃದ್ಧ ಗೊಳಿಸಿ ನಮ್ಮ ಮುಂದಿನ ಪೀಳಿಗೆಗೆ ನಾವೂ ಉತ್ತಮ ಕೊಡುಗೆ ನೀಡೋಣ ಎಂದು ಕರೆ […]

Read More

ಬಡ ಕುಟುಂಬಕ್ಕೆ ಯುವವಾಹಿನಿ ಆಸರೆ

ಮುಲ್ಕಿ : ಇತ್ತೀಚೆಗೆ ಸುರಿದ ಗಾಳಿ ಮಳೆಯಿಂದಾಗಿ ಮುಲ್ಕಿ ಸಮೀಪದ ಕೊಳಚಿಕಂಬ್ಳದ ಕೇಶವ ಪೂಜಾರಿ ಹಾಗೂ ಮೀನಾಕ್ಷಿ ದಂಪತಿಗಳ ಬಡ ಕುಟುಂಬದ ಮನೆಯ ಮೇಲ್ಚಾವಣಿ ಕುಸಿದು ಬಿದ್ದು ಈ ಮನೆಯಲ್ಲಿ ವಾಸಿಸಲು‌ ಸಾಧ್ಯವಾಗದೆ ಕೇಶವ ಪೂಜಾರಿ ಯವರ ಬಡ ಕುಟುಂಬಕ್ಕೆ ದಿಕ್ಕೇ ತೋಚದಂತಾಯಿತು. ಈ‌ ಸಂದರ್ಭದಲ್ಲಿ ‌ಯುವವಾಹಿನಿ‌ ಮುಲ್ಕಿ ಘಟಕವು ಸುಮಾರು ‌ರೂಪಾಯಿ‌ 60,000/- ವೆಚ್ಚದಲ್ಲಿ ಈ ಮನೆಯನ್ನು ರಿಪೇರಿಗೊಳಿಸಿ‌ ವಾಸಿಸಲು ಯೋಗ್ಯವಾಗುವಂತೆ ಮಾಡಿ ದಿನಾಂಕ‌ ‌15.06.2018 ರಂದು‌ ಮನೆಯನ್ನು ಹಸ್ತಾಂತರಿಸಲಾಯಿತು ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!