ಯುವವಾಹಿನಿ ರಿ ಕೊಲ್ಯ ಘಟಕ ಇದರ ವತಿಯಿಂದ ಅಭಯ ಆಶ್ರಮದ ಸದಸ್ಯರೊಂದಿಗೆ ಕುಟುಂಬ ಮಿಲನ ಕಾರ್ಯಕ್ರಮ ತಾ08-07-2018ನೇ ಆದಿತ್ಯವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಕೊಣಾಜೆ ಅಸೈಗೋಳಿಯಲ್ಲಿರುವ ಅಭಯ ಆಶ್ರಮದಲ್ಲಿ ಆಶ್ರಮದ ಮಕ್ಕಳಿಗೆ ಹಾಗೂ ಹಿರಿಯರಿಗೆ ವಿವಿಧ ಸ್ಪರ್ಧೆ ಹಾಗೂ ಅರೆಹೊಳೆ ಪ್ರತಿಷ್ಠಾನ ರಿ ಮಂಗಳೂರು ಇದರ ಕಲಾವಿದರಿಂದ ಸೊಗಸಾದ ಹಾಡಿನೊಂದಿಗೆ ಮನರಂಜನಾ ಕಾರ್ಯಕ್ರಮ,ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಘಟಕದ ಸದಸ್ಯ ದಂಪತಿಗಳಿಗೆ ಆಶ್ರಮದ ಹಿರಿಯರಿಂದ ಶುಭಹಾರೈಕೆ,ಆಶ್ರಮದ ಸದಸ್ಯರೊಂದಿಗೆ ಸಹಭೋಜನ ಹಾಗೂ ಕಾರ್ಯಕ್ರಮದ ಸವಿನೆನಪಿಗೆ ಆಶ್ರಮದ ವಠಾರದಲ್ಲಿ ಘಟಕದ ಸದಸ್ಯರು ಗಿಡ ನೀಡುವುದರೊಂದಿಗೆ ಮುಕ್ತಾಯಗೊಂಡಿತು,ಕಾರ್ಯಕ್ರಮದ ಅಂಗವಾಗಿ ಜರಗಿದ ಸಭಾಕಾರ್ಯಕ್ರಮವನ್ನು ಅಭಯ ಆಶ್ರಯದ ಸಂಚಾಲಕರಾದ ಶ್ರೀ ನಾಥ್ ಹೆಗ್ಡೆಯವರು ದೀಪ ಬೆಳಗಿಸಿ ಉಧ್ಘಾಟಿಸಿದರು ಅತಿಥಿಗಳಾಗಿ ಅರೆಹೊಳೆ ಪ್ರತಿಷ್ಠಾನ ದ ರಂಗಸಂಚಾಲಕರಾದ ಜಯದೇವ್ ಕೊಲ್ಯ,ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶ್ರೀಮತಿ ನಮಿತಾಶ್ಯಾಂ,ಬೆಂಗಳೂರು ಬಿಲ್ಲವ ಅಸೋಸಿಯೇಷನ್ ನ ಸ್ಥಾಪಕ ಸದಸ್ಯರಾದ ವೆಂಕಟೇಶ್. ಟಿ, ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ,ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ಬಂಟ್ವಾಳ,ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ರಾಜೀವ ಪೂಜಾರಿಯವರು ಭಾಗವಹಿಸಿದರು.ಘಟಕದ ಅಧ್ಯಕ್ಷರಾದ ಕುಸುಮಾಕರ ಕುಂಪಲರವರು ಅತಿಥಿಗಳನ್ನು ಸ್ವಾಗತಿಸಿದರು.ನಿಕಟಪೂರ್ವ ಅಧ್ಯಕ್ಷರಾದ ಸುರೇಶ್.ಬಿ.ಕೊಲ್ಯ ಹಾಗೂ ಸದಸ್ಯ ಭವಿಷ್ ಕಾರ್ಯಕ್ರಮ ನಿರೂಪಿಸಿದರು.ಒಂದು ದಿನದ ಕಾರ್ಯಕ್ರಮದಲ್ಲಿ ಘಟಕದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಒಂದೇ ಜಾತಿ,ಒಂದೇ ಮತ,ಒಂದೇ ದೇವರು ಎಂದು ಬ್ರಹ್ಮ ಶ್ರೀ ನಾರಾಯಣ ಗುರುವರ್ಯರು ಪ್ರತಿಪಾದಿಸಿದ ತತ್ವದಡಿಯಲ್ಲಿ ಆಶ್ರಮ ಸದಸ್ಯರೊಂದಿಗೆ ಬೆರೆತು ಅವರೊಂದಿಗೆ ನಾವಿದ್ದೇವೆ ನಾವೆಲ್ಲ ಒಂದೇ ಕುಟುಂಬ ಅನ್ನುವಂತಹ ಸಂದೇಶವನ್ನು ಸಾರುವುದಕ್ಕಾಗಿ ಆಶ್ರಮದ ಸದಸ್ಯರೊಂದಿಗೆ ಕುಟುಂಬ ಮಿಲನ ಕಾರ್ಯಕ್ರಮವನ್ನು ಕೊಲ್ಯ ಘಟಕವು ಮಹತ್ವಪೂರ್ಣವಾಗಿ ಆಯೋಜಿಸಿ ಸರ್ವ ಆಶ್ರಮ ವಾಸಿಗಳಿಗೆ ಮುದ ನೀಡಿದೆವು,ಘಟಕದ ವತಿಯಿಂದ ಆಶ್ರಮದಲ್ಲಿ ಈ ದಿನದ ಊಟದ ವ್ಯವಸ್ಥೆಗೆ ಪ್ರಾಯೋಜಕತ್ವವನ್ನು ನೆರವೇರಿಸಿ ಆಶ್ರಮದ ಹಿರಿಯರಿಗೆ ಹಾಗೂ ಮಕ್ಕಳಿಗೆ ದಿನಬಳಕೆಯ ಕೆಲವೊಂದು ಸಾಮಾಗ್ರಿಗಳನ್ನು ಉಚಿತವಾಗಿ ನೀಡಿ ಪುಣ್ಯದ ಕಾರ್ಯವನ್ನು ನಾವೆಲ್ಲ ಒಟ್ಟಾಗಿ ನೆರವೇರಿಸಿದೆವು.