ವಿಶುಕುಮಾರ್ ಬಗ್ಗೆ

ವಿಶುಕುಮಾರ್ ಮತ್ತು ತುಕಾರಾಮ್ ಪೂಜಾರಿ

ನಮಗೆಲ್ಲರಿಗೂ ತಿಳಿದಿರುವಂತೆ ವಿಶುಕುಮಾರ್ ಓರ್ವ ಧೀಮಂತ ವ್ಯಕ್ತಿ. ಆಡು ಮುಟ್ಟದ ಸೊಪ್ಪಿಲ್ಲ. ವಿಶುಕುಮಾರ್ ಕೈಯಾಡಿಸದ ಕ್ಷೇತ್ರವಿಲ್ಲ. ಕಲೆ, ಸಾಹಿತ್ಯ, ಸಂಸ್ಕೃತಿ ಈ ಎಲ್ಲಾ ಕ್ಷೇತ್ರಗಳಲ್ಲಿ ಕೈಯಾಡಿಸಿ ಛಾಪನ್ನು ಒತ್ತಿದವರು. ಕೋಟಿ ಚೆನ್ನಯ, ಕರಾವಳಿ ಯಂತಹ ಅದ್ಭುತ ಸಿನೆಮಾ ನಿರ್ಮಾಣ ಮಾಡಿದವರು. ಒಂದರ್ಥದಲ್ಲಿ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟವರು. ಅವರ ನಾಟಕ ಡೊಂಕು ಬಾಲದ ನಾಯಕರು ಭ್ರಷ್ಟರಿಗೆ ನುಂಗಲಾರದ ತುತ್ತಾಗಿ ಮೈಪರಚಿಕೊಂಡದ್ದು ಇಂದು ಇತಿಹಾಸ. ನನ್ನ ಅಭಿಪ್ರಾಯದಂತೆ ನಮ್ಮ ಸಮಾಜದಲ್ಲಿ ಕತೆ, ಕವನ, ಕಾದಂಬರಿಗಳು ಮಾತ್ರ ಸಾಹಿತ್ಯದ ಪ್ರಕಾರಗಳು ಎನ್ನುವ ತಪ್ಪು […]

Read More

ವಿಶುಕುಮಾರ್ 4 ಕಾದಂಬರಿಗಳನ್ನು ಮರುಮುದ್ರಣಗೊಳಿಸಿದ ಯುವವಾಹಿನಿ

ಮಂಗಳೂರು : ಹಿರಿಯ ಸಾಹಿತಿ, ನಟ, ನಿರ್ದೇಶಕ ದಿ.ವಿಶುಕುಮಾರ್ ಅವರ 16 ಕಾದಂಬರಿಗಳು ಹಾಗೂ 12 ನಾಟಕಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಜನಮಾನಸದಿಂದ ದೂರವಾಗುತ್ತಿರುವ ಅವುಗಳನ್ನು ಮತ್ತೆ ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಯುವವಾಹಿನಿ ಸಂಸ್ಥೆಯು ಮೊದಲ ಹಂತದಲ್ಲಿ 4 ಕಾದಂಬರಿಗಳನ್ನು ಮರುಮುದ್ರಣ ಗೊಳಿಸಿ ದಿನಾಂಕ17.02.2019 ರಂದು ಮಂಗಳೂರು ಪುರಭವನದಲ್ಲಿ ಬಿಡುಗಡೆಗೊಳಿಸಿದೆ. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ (ರಿ) ಸಸಿಹಿತ್ಲು ಘಟಕದ ಆತಿಥ್ಯದಲ್ಲಿ, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದೊಂದಿಗೆ ಮಂಗಳೂರು ಪುರಭವನದಲ್ಲಿ ನಡೆದ ವಿಶುಕುಮಾರ್ […]

Read More

ವಿಶುಕುಮಾರ್ ಒಡನಾಡಿಗಳೊಂದಿಗೆ ಸಂವಾದ-ಆದಿನಗಳು

ಮಂಗಳೂರು : ಸಾಯೋದಕ್ಕಿಂತ ಸತ್ತು ಬದುಕಬೇನ್ನುವ ಮಾತಿದೆ. ಇದಕ್ಕೊಪ್ಪುವಂತೆ ನಮ್ಮನಗಲಿದ ವಿಶ್ವನಾಥ್ ಯಾನೆ ವಿಶುಕುಮಾರರು ಸತ್ತು ಬದುಕಿದವರು. ಅದೆಷ್ಟೋ ಸಾಧನೆಗಳನ್ನು ನೋಡಿದ್ದೇವೆ. ಕೇವಲ ಪ್ರಶಸ್ತಿ ಪತ್ರ, ಸ್ಮರಣಿಕೆ, ಪಾರಿತೋಷಕಗಳಿಂದ ಕೆಲವರನ್ನು ಗುರುತಿಸಬಹುದು. ಆದರೆ ಬದುಕಿದ ದಾರಿ, ಸವೆಸಿದ ಸಮಯ, ತೋರಿದ ತಾಳ್ಮೆ ಇನ್ನೊರ್ವರಿಗೆ ಆದರ್ಶವಾಗುತ್ತೆ ಎಂದಾದರೆ ಆ ಬದುಕು, ಆದರ್ಶ, ದೇವರಿಗೆ ಸಮ ಅನ್ನೋದು ಸತ್ಯ. ಪ್ರತಿಯೊಂದು ಕ್ಷೇತ್ರದಲ್ಲೂ ಸಮರ್ಥವಾಗಿ ತನ್ನನ್ನು ತೊಡಗಿಸಿಕೊಂಡು, ಸರಳತೆ, ತಾಳ್ಮೆ, ಸಹನೆ, ಶಿಸ್ತು, ಸಮಯಕ್ಕೆ ಉದಾಹರಣೆಯಾಗಿ ಸತ್ತು ಬದುಕಿದ ವಿಶುಕುಮಾರ್‌ರವರದ್ದು ಆದರ್ಶನೀಯ […]

Read More

ವಿಶುಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಮಂಗಳೂರು : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ಹಾಗೂ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದೊಂದಿಗೆ ದಿನಾಂಕ 17.02.2019 ರಂದು ಮಂಗಳೂರು ಪುರಭವನದಲ್ಲಿ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಸಚಿವರಾದ ಯು.ಟಿ.ಖಾದರ್ ವಿಶುಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದರು. ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಮೂಡಿಸಿ : ಖಾದರ್ ಮಾಲ್ ಸಂಸ್ಕೃತಿ, ಆಧುನಿಕ ಆಟಗಳಲ್ಲಿ ತೊಡಗುವ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಮೂಡಿಸಲು ಪೋಷಕರು ಪ್ರೇರಕರಾಗಬೇಕು, ಮಕ್ಕಳನ್ನು ಸಾಹಿತ್ಯ ಸಮ್ಮೇಳನ, ಪುಸ್ತಕ ಪ್ರದರ್ಶನಗಳಿಗೂ ಕರೆದೊಯ್ಯಬೇಕು […]

Read More

ಕಾವ್ಯ ಕುಂಚ ಗಾಯನದಲ್ಲರಳಿದ ವಿಶುಕುಮಾರ್ ವೇದಿಕೆ

ಮಂಗಳೂರು : ವೇದಿಕೆಯ ಮೇಲೆ ಮಾತು ಆರಂಭಿಸುತ್ತಿದ್ದಂತೆ ಸ್ವಲ್ಪ ಸಮಯದ ಕೂಡಲೇ ವಿಶುಕುಮಾರ್ ಬದುಕಿನ ಚಿತ್ರಣ ರೂಪುಗೊಳ್ಳುವಂತಿತ್ತು. ತಮ್ಮ ಕಾವ್ಯದ ಪದಗಳ ಜೋಡಣೆಯೊಡನೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಾಹಿತಿಯ ಜೀವನದ ಕಥೆಗೆ ಸಾಕ್ಷಿಯಾಗಿದ್ದರು..ಜೊತೆಗೆ ಮೇಳೈಸುವ ರಾಗಲಾಪದೊಡನೆ ಅಲ್ಲೇ ಬದಿಯಲ್ಲಿ ಶರವೇಗದಿ ಸಾಗುತ್ತಿದ್ದ ಚಿತ್ರ ಪಟಲ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿತ್ತು. ಹೌದು,,ಇದು 2019 ಫೆಬ್ರವರಿ 17ರಂದು ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ಮಂಗಳೂರು ಪುರಭವನದಲ್ಲಿ ನಡೆದ ವಿಶುಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನದ ಕಾವ್ಯ […]

Read More

ವಿಶುಕುಮಾರ್ ಸಾಹಿತ್ಯ ಸಮ್ಮೇಳನದಲ್ಲಿ..ಹಾಸ್ಯ-ಹರಟೆ….

“ನಾನು ಅದೆಷ್ಟೋ ವರ್ಷಗಳ ಕಾಲ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ಕೆಲಸ ಮಾಡಿರುತ್ತೇನೆ.  ಹಲವಾರು ಕಾನ್ಫೆರನ್ಸಗಳಲ್ಲಿ ಪ್ರಬಂಧ ಮಂಡಿಸಿ, ಹಲವಾರು ಕೃತಿಗಳನ್ನು ಬರೆದು ಸಾಹಿತ್ಯಾತ್ಮಕವಾಗಿ ಒಂದಷ್ಟು ಕೆಲಸ ಮಾಡಿದ್ದೇನೆ. ಆದರೂ…. ದೇಶದಲ್ಲಾಗಲಿ ವಿದೇಶದಲ್ಲಾಗಲೀ ನನ್ನನ್ನು ಕಂಡಾಗ ಗುರುತಿಸುವುದು ಎಕ್ಕಸಕ್ಕ ಬರೆತಿನಾರ್ ಮೇರ್ (ಎಕ್ಕಸಕ್ಕ ಬರೆದವರು ಇವರು) ಎಂದು. “೪೦ ದಶಕಗಳ ಹಿಂದೆ ಬರೆದ ಆ ಹಾಡು ನನ್ನನ್ನು ಇವತ್ತಿಗೂ ಸಾಹಿತ್ಯಲೋಕದಲ್ಲಿ ಜೀವಂತವಾಗಿರಿಸಿದೆ. ಇಂತಹ ಜನಪ್ರಿಯತೆಯನ್ನು ಪಡೆಯಲು ಕಾರಣ ಅಂದು ನನಗೆ ಅವಕಾಶ ನೀಡಿದ ವಿಶುಕುಮಾರ್‌ರವರು. ಈ ಎಲ್ಲಾ ಕೀರ್ತಿಸಲ್ಲಬೇಕಾದುದು ವಿಶುಕುಮಾರ್ […]

Read More

ಮರೆಯಲಾಗದ ಚೇತನ ವಿಶುಕುಮಾರ್ : ಪ್ರೊ.ಬಿ.ಎ ವಿವೇಕ್ ರೈ

ಮಂಗಳೂರು : ನಮ್ಮಿಂದ ಮರೆಯಾದ ವ್ಯಕ್ತಿ ಎಲ್ಲಿಯವರೆಗೆ ಜನರ ಮನಸಲ್ಲಿ ಜೀವಂತವಾಗಿರುತ್ತಾರೋ ಅಲ್ಲಿಯವರೆಗೆ ಅವರು ಬದುಕಿರುವ ಚೇತನ, ಅಂತಹ ಮಹಾನ್ ವ್ಯಕ್ತಿ, ತನ್ನ ಸಾವಿನ 33 ವರುಷದ ಬಳಿಕವೂ ಜೀವಂತವಾಗಿರುವವರು. ವಿಶುಕುಮಾರ್ ಅವರ ಸಾಧನೆ ಅವರನ್ನು ಜೀವಂತವಾಗಿರಿಸಿದೆ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ ವಿವೇಕ್ ರೈ ತಿಳಿಸಿದರು. ಅವರು ದಿನಾಂಕ 17.02.2019 ರಂದು ಮಂಗಳೂರು ಪುರಭವನದಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ (ರಿ) ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ವಿಶುಕುಮಾರ್ […]

Read More

ರಾಜ್ಯ ಮಟ್ಚದ ಭಾಷಣ ಸ್ಪರ್ಧೆ

ಮಂಗಳೂರು : ವಿಶುಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಯುವವಾಹಿನಿ (ರಿ) ಕೇಂದ್ರ ಸಮಿತಿ ಆಶ್ರಯದಲ್ಲಿ ಮತ್ತು ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ ರಾಜ್ಯ ಮಟ್ಚದ ಭಾಷಣ ಸ್ಪರ್ಧೆಯು ಯುವವಾಹಿನಿ ಸಭಾ಼ಂಗಣದಲ್ಲಿ ದಿನಾ಼ಂಕ 15.02.2019ರಂದುಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಲಕ್ಮಣ ಸಾಲ್ಯನ್ ರವರು ದೀಪ ಬೆಳಗಿಸುದರೊ಼ಂದಿಗೆ ಉದ್ಘಾಟಿಸಿದರು .ವಿವಿಧ ಶಾಲೆಗಳಿಂದ ಬಂದ ವಿದ್ಯಾರ್ಥಿಗಳು ವಿಶುಕುಮಾರ್ ಬಾಷಣ ಸ್ಪರ್ಧೆಯಲ್ಲಿ ಭಾಗವಾಹಿಸಿದರು. ಅನುಷಾ ಪ್ರಥಮ, ನಿಶಾ ದ್ವಿತೀಯ, ಪ್ರತೀಕ್ಷಾ ತೃತೀಯ ಬಹುಮಾನ ಪಡೆದರು. ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ […]

Read More

ವಿದ್ಯಾರ್ಥಿಗಳಿಗೆ ಸಾಹಿತ್ಯ ಲೋಕ ಪರಿಚಯಿಸುವ ಕಾರ್ಯ ಶ್ಲಾಘನೀಯ : ಶಸಿಕಲಾ ಕೆ.

ಬಂಟ್ವಾಳ : ಭಾಷಣ ಸ್ಪರ್ಧೆಯ ಮೂಲಕ ವಿದ್ಯಾರ್ಥಿಗಳಿಗೆ ಸಾಹಿತ್ಯಲೋಕವನ್ನು ಪರಿಚಯಿಸಿ ಅವರನ್ನು ಸಾಹಿತ್ಯಲೋಕಕ್ಕೆ ದುಮುಕಿಸಿಕೊಳ್ಳಲು ಅವಕಾಶ ಮಾಡಿ ಕೋಡುವ ಯುವವಾಹಿನಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಬಂಟ್ವಾಳ ಎಸ್.ವಿ.ಎಸ್ ಕಾಲೇಜಿನ ಪ್ರಾಂಶುಪಾಲರಾದ ಶಶಿಕಲಾ ಕೆ ತಿಳಿಸಿದರು. ಅವರು ದಿನಾಂಕ 11.02.2019 ರಂದು ಬಂಟ್ವಾಳ ಎಸ್.ವಿ.ಎಸ್ ಪದವಿಪೂರ್ವ ಕಾಲೇಜಿನಲ್ಲಿ ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ(ರಿ.) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಹಾಗೂ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದಲ್ಲಿ ವಿಶುಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಬಂಟ್ವಾಳ ವಲಯದ […]

Read More

ವಿಶುಕುಮಾರ್ ಪರಿಚಯ ಸರಣಿ ಕಾರ್ಯಕ್ರಮ ಮಾಲಿಕೆ – 27

ಅಡ್ವೆ : ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು, ವಿಶು ಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಆಶ್ರಯದಲ್ಲಿ ಯುವವಾಹಿನಿ (ರಿ.), ಅಡ್ವೆ ಘಟಕದ ಆತಿಥ್ಯದಲ್ಲಿ ವಿಶುಕುಮಾರ್ ಪರಿಚಯ ಸರಣಿ ಕಾರ್ಯಕ್ರಮ ಮಾಲಿಕೆ – 27 ನಡೆಯಿತು. ಯುವವಾಹಿನಿ (ರಿ‌.) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಮಾಜಿ ಸಂಚಾಲಕರಾದ  ಟಿ.ಶಂಕರ್ ಸುವರ್ಣರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಾಹಿತ್ಯ ಲೋಕದ ದಿಗ್ಗಜ ವಿಶುಕುಮಾರ್ ಅವರ ಸಾಹಿತ್ಯ ಕ್ಷೇತ್ರ, ರಾಜಕೀಯ ಕ್ಷೇತ್ರ, ಧಾರ್ಮಿಕ ಕ್ಷೇತ್ರ, ಸಾಂಸ್ಕ್ರತಿಕ […]

Read More

ಸಂಪರ್ಕಿಸಿ : +91 99644 75220
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 07-05-2024
ಸ್ಥಳ : ಕನ್ನಡ ಭವನ, ಮೂಡುಬಿದಿರೆ

ಯುವವಾಹಿನಿ(ರಿ.) ಮೂಡಬಿದಿರೆ ಘಟಕದ ಆಶ್ರಯದಲ್ಲಿ ನಾಟಕ ಪ್ರದರ್ಶನ

ದಿನಾಂಕ : 18-08-2024
ಸ್ಥಳ : ಕುದ್ರೋಳಿ ಗೋಕರ್ಣನಾಥ ಕ್ಷೇತ್ರ

ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
ಯುವವಾಹಿನಿ ಸಂಸ್ಥೆಯ ಮೂವತೈದು ವರುಷಗಳ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರದ ಗೌರವ

ಯುವವಾಹಿನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗರಿ

  ಮಂಗಳೂರು : ಯುವವಾಹಿನಿ ಸಂಸ್ಥೆಯ 35 ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನವೆಂಬರ್ ಒಂದರಂದು ನಡೆಯುವ...

Sunday, 30-10-2022
error: Content is protected !!